Somvati Amavasya 2024 Pind Daan: ಸೋಮವತಿ ಅಮವಾಸ್ಯೆ 2024 ಪಿಂಡದಾನ- ಹಿಂದೂ ಧರ್ಮದಲ್ಲಿ ಸೋಮವತಿ ಅಮಾವಾಸ್ಯೆಯನ್ನು ವಿಶೇಷ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಪೂರ್ವಜರ ಶ್ರಾದ್ಧ ಮಾಡುವುದು ಮತ್ತು ಪಿಂಡ ದಾನ ಮಾಡುವುದು ವಿಶೇಷ ಮಹತ್ವ ಹೊಂದಿದೆ. ಈ ದಿನದಂದು ಪಿಂಡ ದಾನ ಮಾಡುವುದರಿಂದ ಪೂರ್ವಜರಿಂದ ಮೋಕ್ಷ ಸಿಗುತ್ತದೆ ಮತ್ತು ಆ ಹಿರಿಯರ ಆಶೀರ್ವಾದವನ್ನು ಪಡೆಯಬಹುದು ಎಂಬುದು ನಂಬಿಕೆ. ಸೋಮವತಿ ಅಮಾವಾಸ್ಯೆಯ ದಿನದಂದು ಪಿಂಡ ದಾನ ಮಾಡುವುದರಿಂದ, ಪೂರ್ವಜರು ಮೋಕ್ಷವನ್ನು ಪಡೆಯುತ್ತಾರೆ ಮತ್ತು ಅವರ ಸಂತತಿ ಪಿತೃ ದೋಷದಿಂದ ಮುಕ್ತರಾಗುತ್ತಾರೆ, ಕಿರಿಯರಿಗೆ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸುತ್ತಾರೆ. ಇದಲ್ಲದೇ ಜೀವನದಲ್ಲಿ ಬರುವ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ.
ಪಂಚಾಂಗದ ಪ್ರಕಾರ ಶ್ರಾವಣ ಮಾಸದ ಅಮಾವಾಸ್ಯೆ ತಿಥಿ ಸೆಪ್ಟೆಂಬರ್ 2 ರಂದು ಬೆಳಿಗ್ಗೆ 5.21 ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 3 ರಂದು ಬೆಳಿಗ್ಗೆ 7.24 ಕ್ಕೆ ಕೊನೆಗೊಳ್ಳುತ್ತದೆ. ಸೋಮವತಿ ಅಮವಾಸ್ಯೆಯನ್ನು ಸೆಪ್ಟೆಂಬರ್ 2 ರಂದು ಸೋಮವಾರ ಆಚರಿಸಲಾಗುತ್ತದೆ. ಇದು ಶ್ರಾವಣ ಮಾಸದ ಕೊನೆಯ ಅಮಾವಾಸ್ಯೆ. ಈ ದಿನಾಂಕದಂದು ಪೂರ್ವಜರ ಶ್ರಾದ್ಧ, ತರ್ಪಣ ಮತ್ತು ಪಿಂಡದಾನವನ್ನು ಮಾಡುವುದರಿಂದ ಜೀವನದ ಎಲ್ಲಾ ದುಃಖಗಳು ಮತ್ತು ತೊಂದರೆಗಳು ದೂರವಾಗುತ್ತವೆ.
Somvati Amavasya 2024 – ಸೋಮವತಿ ಅಮಾವಾಸ್ಯೆ – ಪಿಂಡ ದಾನದ ಸರಿಯಾದ ನಿಯಮ:
Somvati Amavasya 2024 – ಸೋಮವತಿ ಅಮಾವಾಸ್ಯೆ: ಈ ವಿಷಯಗಳಿಗೆ ವಿಶೇಷ ಗಮನ ಕೊಡಿ
ಯಾರೊಬ್ಬರ ಕುಟುಂಬದಲ್ಲಿ ಪುರುಷ ಸದಸ್ಯರಿಲ್ಲದಿದ್ದರೆ ಅವರ ಸಂಬಂಧಿಕರು ಸಹ ಪಿಂಡ ದಾನವನ್ನು ಮಾಡಬಹುದು. ಧಾರ್ಮಿಕ ಸ್ಥಳಕ್ಕೆ ಅಥವಾ ನದಿಯ ದಡಕ್ಕೆ ಹೋಗಿ ಪಿಂಡ ದಾನವನ್ನು ಮಾಡಬಹುದು. ವರ್ಷಕ್ಕೊಮ್ಮೆ ಸೋಮವತಿ ಅಮವಾಸ್ಯೆಯಂದು ಪಿಂಡದಾನ ಮಾಡುವುದು ಅಗತ್ಯ.
ಪಿತೃ ದೋಷವು ತುಂಬಾ ತೀವ್ರವಾಗಿದ್ದರೆ ಜ್ಯೋತಿಷಿಯ ಸಲಹೆಯೊಂದಿಗೆ ಒಂದೆದರಡು ಬಾರಿ ಪಿಂಡ ದಾನವನ್ನು ಮಾಡಬಹುದು. ಪಿಂಡ ದಾನ ಮಾಡುವಾಗ, ನಿಮ್ಮ ಪೂರ್ವಜರನ್ನು ಶುದ್ಧ ಮನಸ್ಸಿನಿಂದ ಸ್ಮರಿಸಿ. ಪಿಂಡದಾನದ ನಂತರ, ಬ್ರಾಹ್ಮಣರಿಗೆ ಅನ್ನದಾನ ಮಾಡಿ ಮತ್ತು ಪಿಂಡದಾನದ ನಂತರ ಕೆಲವು ವಸ್ತುಗಳ ದಾನ ಮಾಡಿ.
Also Read: ಸ್ಥಳ ಮಹಾತ್ಮೆ – ನವ ವಿವಾಹಿತರು ಶಿವ-ಪಾರ್ವತಿ ಸಪ್ತಪದಿ ತುಳಿದ ಸ್ಥಳಕ್ಕೆ ಇಂದಿಗೂ ಭೇಟಿ ನೀಡುತ್ತಾರೆ! ಯಾಕೆ ಗೊತ್ತಾ?
ಪಿಂಡ ದಾನ ಮಾಡುವ ಮೊದಲು ಜ್ಯೋತಿಷಿಗಳಿಂದ ಸಲಹೆ ಪಡೆಯುವುದು ಸೂಕ್ತ. ಪಿಂಡದಾನದ ಸಮಯದಲ್ಲಿ ಎಲ್ಲಾ ನಿಯಮಗಳನ್ನು ಅನುಸರಿಸುವುದು ಮುಖ್ಯವಾಗಿದೆ, ಏಕೆಂದರೆ ಪಿಂಡದಾನವು ಪೂರ್ವಜರನ್ನು ವಿಮೋಚನೆಗೊಳಿಸುವ ಪವಿತ್ರ ಆಚರಣೆಯಾಗಿದೆ. ಈ ದಿನ ನಮ್ಮ ಪೂರ್ವಜರನ್ನು ಸ್ಮರಿಸಿ ಅವರಿಗೆ ನಮನ ಸಲ್ಲಿಸುವ ಮೂಲಕ ಅವರ ಆಶೀರ್ವಾದವನ್ನು ಪಡೆದು ಪಿತೃ ದೋಷದಿಂದ ಮುಕ್ತಿ ಪಡೆಯಬಹುದು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)