ಯಶಸ್ಸಿಗೆ ಬೀಜ ಮಂತ್ರ: ನಿಮ್ಮ ಆಲೋಚನೆ ಸಕಾರಾತ್ಮಕವಾಗಿದ್ದರೆ ಯಶಸ್ಸು ಖಚಿತ, ಜೊತೆಗೆ ಈ 5 ಮಂತ್ರಗಳನ್ನು ನೆನಪಿಡಿ

| Updated By: ಸಾಧು ಶ್ರೀನಾಥ್​

Updated on: Aug 30, 2022 | 6:06 AM

Success Mantra: ವಾಸ್ತವವಾಗಿ, ಜೀವನದಲ್ಲಿ ನಿಮ್ಮ ಆಲೋಚನೆ ದೊಡ್ಡದಾಗಿದ್ದರೆ, ನಿಮ್ಮ ಯಶಸ್ಸೂ ದೊಡ್ಡದಾಗಿರುತ್ತದೆ. ನಿಮ್ಮ ಆಲೋಚನೆ ಸಕಾರಾತ್ಮಕವಾಗಿದ್ದರೆ ಯಶಸ್ಸು ಖಚಿತ, ಈ 5 ಮಂತ್ರಗಳನ್ನು ನೆನಪಿಡಿ

ಯಶಸ್ಸಿಗೆ ಬೀಜ ಮಂತ್ರ: ನಿಮ್ಮ ಆಲೋಚನೆ ಸಕಾರಾತ್ಮಕವಾಗಿದ್ದರೆ ಯಶಸ್ಸು ಖಚಿತ, ಜೊತೆಗೆ ಈ 5 ಮಂತ್ರಗಳನ್ನು ನೆನಪಿಡಿ
ಯಶಸ್ಸಿಗೆ ಬೀಜ ಮಂತ್ರ: ನಿಮ್ಮ ಆಲೋಚನೆ ಸಕಾರಾತ್ಮಕವಾಗಿದ್ದರೆ ಯಶಸ್ಸು ಖಚಿತ, ಈ 5 ಮಂತ್ರಗಳನ್ನು ನೆನಪಿಡಿ
Follow us on

ಯಶಸ್ಸಿನ ಮಂತ್ರ: ಜೀವನದಲ್ಲಿ ಆಲೋಚನೆಗಳಿಗೆ ಬಹಳ ಪ್ರಾಮುಖ್ಯತೆ ಇದೆ. ಒಂದು ಆಯಾಮದಲ್ಲಿ ಧನಾತ್ಮಕವಾಗಿ ಯೋಚಿಸಿದರೆ.. ಆ ವ್ಯಕ್ತಿ ಯಶಸ್ವಿಯಾಗುವುದು ಖಚಿತ. ಅದೇ ತಪ್ಪಾಗಿ ಯೋಚಿಸಿದರೆ.. ಸೋಲನ್ನು ಎದುರಿಸಬೇಕಾಗುತ್ತದೆ. ಜೀವನದ ಏರಿಳಿತಗಳು ಸಾಮಾನ್ಯವಾಗಿ ಜನರಿಗೆ ದುಃಖ ಮತ್ತು ಸಂತೋಷವನ್ನು ತರುತ್ತವೆ. ಆದರೆ ಇವೆರಡರ ನಡುವೆ ಮನುಷ್ಯನ ಆಲೋಚನೆ ನಕಾರಾತ್ಮಕವಾಗಿರಬಾರದು. ವಾಸ್ತವವಾಗಿ, ಜೀವನದಲ್ಲಿ ನಿಮ್ಮ ಆಲೋಚನೆ ದೊಡ್ಡದಾಗಿದ್ದರೆ, ನಿಮ್ಮ ಯಶಸ್ಸೂ ದೊಡ್ಡದಾಗಿರುತ್ತದೆ. ನಿಮ್ಮ ಆಲೋಚನೆ ಸಕಾರಾತ್ಮಕವಾಗಿದ್ದರೆ ಯಶಸ್ಸು ಖಚಿತ, ಈ 5 ಮಂತ್ರಗಳನ್ನು ನೆನಪಿಡಿ.

  1. * ಜೀವನದಲ್ಲಿ ಸಕಾರಾತ್ಮಕ ಚಿಂತನೆಯುಳ್ಳ ಜನರು ಪ್ರತಿ ವಿಪತ್ತಿನಲ್ಲೂ ಅವಕಾಶವನ್ನು ಸೃಷ್ಟಿಸುತ್ತಾರೆ. ಋಣಾತ್ಮಕ ಚಿಂತಕರು ಸಾಮಾನ್ಯವಾಗಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳದೆ, ಅದರಿಂದ ಅದರಿಂದಲೇ ವಿಪತ್ತು ತಂದಿಟ್ಟುಕೊಳ್ಳುತ್ತಾರೆ.
  2. * ನಿಮ್ಮ ಯಶಸ್ಸು ಅಥವಾ ವೈಫಲ್ಯಕ್ಕೆ ನಿಮ್ಮ ಆಲೋಚನೆಯೇ ಕಾರಣ. ಇಂತಹ ಪರಿಸ್ಥಿತಿಯಲ್ಲಿ.. ನೀವು ಕೈಹಾಕಿದ ಕೆಲಸವನ್ನು ಬಿಡಬೇಕೆಂದು ಅನಿಸಿದ ತಕ್ಷಣ ಅದರ ಹಿಂದಿನ ಕಾರಣವನ್ನು ಅರ್ಥೈಸಿಕೊಳ್ಳಿ.
  3. * ಜೀವನದಲ್ಲಿ ಸುಖ-ದುಃಖಗಳೆರಡೂ ನಮ್ಮ ನಮ್ಮ ಆಲೋಚನೆಯಿಂದಲೇ ಸೃಷ್ಟಿಯಾಗುತ್ತವೆ. ನಿಮ್ಮ ಆಲೋಚನೆ ಸಕಾರಾತ್ಮಕವಾಗಿದ್ದರೆ, ಖಂಡಿತವಾಗಿಯೂ ನಿಮ್ಮ ಕಾರ್ಯಗಳು ಸಹ ಸಕಾರಾತ್ಮಕವಾಗಿರುತ್ತವೆ. ಅದು ಸಂತೋಷದ ಮಾಧ್ಯಮವಾಗುತ್ತದೆ. ಆದರೆ ನಿಮ್ಮ ಆಲೋಚನೆಗಳು ನಕಾರಾತ್ಮಕವಾಗಿದ್ದರೆ, ನಿಮ್ಮ ಕ್ರಿಯೆಗಳು ಸಹ ನಕಾರಾತ್ಮಕವಾಗಿರುತ್ತವೆ. ಅದು ದುಃಖವನ್ನು ಉಂಟುಮಾಡುತ್ತದೆ.
  4. * ಮೌಲ್ಯವನ್ನು ಅವಲಂಬಿಸಿ ವ್ಯಕ್ತಿಯ ಆಲೋಚನೆಗಳು ಮತ್ತು ಉದ್ದೇಶಗಳು ಕಾಲಕಾಲಕ್ಕೆ ಬದಲಾಗುತ್ತವೆ. ಅಂದರೆ ಟೀಯಲ್ಲಿ ನೊಣ ಬಿದ್ದರೆ ಆ ಚಹಾವನ್ನೇ ಚೆಲ್ಲುತ್ತಾರೆ. ಅದೇ ತುಪ್ಪದಲ್ಲಿ ನೊಣ ಬಿದ್ದರೆ ನೊಣವನ್ನು ಹೊರಹಾಕುವುದು ತಪ್ಪಲ್ಲ!
  5. * ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ಯಾವಾಗಲೂ ಮೂರು ಪ್ರಶ್ನೆಗಳನ್ನು ಕೇಳಿಕೊಳ್ಳಿ. ನಾನು ಈ ಕೆಲಸವನ್ನು ಏಕೆ ಮಾಡುತ್ತಿದ್ದೇನೆ ಮತ್ತು ಅದರ ಫಲಿತಾಂಶಗಳೇನು? ನಾನು ಯಶಸ್ವಿಯಾಗುತ್ತೇನೆಯೇ? ಆಳವಾದ ಚಿಂತನೆಯ ನಂತರ ಈ ಪ್ರಶ್ನೆಗಳಿಗೆ ತೃಪ್ತಿಕರವಾಗಿ ಉತ್ತರಿಸಿದಾಗ ಮಾತ್ರ ಮುಂದುವರಿಯಬೇಕು.
    To read more in Telugu click here