ವಿನಾಯಕ ವಾಹನ ಮೂಷಿಕ: ಗಣೇಶ ಉತ್ಸವವು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನಾಂಕದಂದು (ಅಂದರೆ ನಾಳೆ ಶನಿವಾರ ಸೆ. 7) ಪ್ರಾರಂಭವಾಗುತ್ತದೆ. ಈ ಹಬ್ಬದಲ್ಲಿ ಶಿವನ ಮಗ ಗಣೇಶನ ವಿಗ್ರಹವನ್ನು ಮನೆಗೆ ತರಲಾಗುತ್ತದೆ. ಹಬ್ಬದ ಸಮಯದಲ್ಲಿ, ಜನರು ಗಣೇಶನಿಗೆ ವಿಧಿವಿಧಾನಗಳ ಪ್ರಕಾರ ಪೂಜಿಸುತ್ತಾರೆ ಮತ್ತು ಮೋದಕವನ್ನು ಅರ್ಪಿಸುತ್ತಾರೆ. ಈ ಹಬ್ಬದಲ್ಲಿ ಗಣೇಶನ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ, ಜೊತೆಗೆ ಇಲಿ ಸವಾರಿ ಮಾಡುತ್ತಿರುವ ಗಣೇಶನನ್ನು ಮನೆಗೆ ತಂದರೆ ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಆದರೆ ಗಮನಿಸಿ ಕೆಲವು ಋಷಿಗಳ ಶಾಪದಿಂದ ಇಲಿ ಮೂಷಿಕವಾಗಿ ಗಣಪನ ವಾಹನವಾದರು.
ಮೂಷಿಕ ರಾಜ ಯಾರು?
ಗಣೇಶ ಪುರಾಣದ ಕಥೆಯ ಪ್ರಕಾರ, ಗಣೇಶನ ನೆಚ್ಚಿನ ವಾಹನವಾದ ಇಲಿಯು ತನ್ನ ಹಿಂದಿನ ಜನ್ಮದಲ್ಲಿ ಗಂಧರ್ವನಾಗಿದ್ದನು (gandharva). ಮೂಷಿಕ ರಾಜನ (Mushakraj) ನಿಜವಾದ ಹೆಸರು ಕ್ರೌಂಚ (Krauncha). ಒಮ್ಮೆ ಅವನು ದೇವರಾಜ ಇಂದ್ರನ ಸಭೆಗೆ ಹೋಗಿದ್ದನು. ಅಲ್ಲಿ ಅಚಾತುರ್ಯದಿಂದ, ತಪ್ಪಾಗಿ ಅವನ ಕಾಲು ಋಷಿ ವಾಮದೇವನಿಗೆ ತಾಕಿತು. ಕ್ರೌಂಚನ ಚಂಚಲ ಮತ್ತು ತಮಾಷೆಯ ಸ್ವಭಾವ ಋಷಿ ವಾಮದೇವನಿಗೆ ಹಿಡಿಸಲಿಲ್ಲ. ಕ್ರೌಂಚನು ತನ್ನ ಮೇಲೆ ಚೇಷ್ಟೆ ಮಾಡಿದನೆಂದು ಮುನಿಯು ಭಾವಿಸಿದನು. ಅದರಿಂದ ಕೋಪಗೊಂಡನು ಮತ್ತು ಕ್ರೌಂಚನನ್ನು ಇಲಿಯಾಗುವಂತೆ ಶಪಿಸಿದನು. ಋಷಿಯ ಶಾಪದಿಂದಾಗಿ ಕ್ರೌಂಚನು ಆ ಕ್ಷಣವೇ ಇಲಿಯಾದನು.
ಇದನ್ನೂ ಓದಿ: ಈ ಗಣಪನಿಗೆ ಬಯಲೇ ಆಲಯ, ಅರ್ಚಕರು ಹೆಲಿಕಾಪ್ಟರಿನಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ! ವಿಡಿಯೋ ನೋಡಿ
ವಿನಾಶಕನಾದ ಇಲಿ ರೂಪದ ಕ್ರೌಂಚ ರಾಜ:
ಕ್ರೌಂಚ ರಾಜ ಇಲಿಯಾದ ನಂತರವೂ ಅವನ ದೇಹದ ಗಾತ್ರ ಕಡಿಮೆಯಾಗಲಿಲ್ಲ ಮತ್ತು ಅವನು ದೈತ್ಯ ಇಲಿವಾಗಿ ಮಾರ್ಪಟ್ಟು ಅಲ್ಲಿ ಇಲ್ಲಿ ತಿರುಗಾಡಲು ಪ್ರಾರಂಭಿಸಿದನು. ಅವನ ದೇಹವು ತುಂಬಾ ದೊಡ್ಡದಾಗಿದೆ, ಅವನು ತನ್ನ ದಾರಿಯಲ್ಲಿ ಬಂದ ಎಲ್ಲರ ಬಗ್ಗೆ ಕುಹಕ/ ವ್ಯಂಗ್ಯವಾಡಲು ಮತ್ತು ಎಲ್ಲವನ್ನೂ ನಾಶಮಾಡಲು ಪ್ರಾರಂಭಿಸಿದನು. ಒಂದು ದಿನ ಹೀಗೆ ತಿರುಗಾಡುತ್ತಾ ಪರಾಶರ ಋಷಿಗಳ (Sage Parashar) ಆಶ್ರಮವನ್ನು ತಲುಪಿ ಇಡೀ ಆಶ್ರಮವನ್ನೇ ಕಿತ್ತು ನಾಶಪಡಿಸಿದನು.
ಇಲಿಯು ಗಣಪ್ಪನ ವಾಹನವಾಗಿದ್ದು ಹೇಗೆ? (How dii Mushak become Bappa’s Vahan):
ದುಃಖಿತರಾದ ಆಶ್ರಮದ ಋಷಿಗಳೆಲ್ಲರೂ ಇಲಿಯ ಭಯವನ್ನು ಕೊನೆಗಾಣಿಸಲು ಗಣೇಶನನ್ನು ಪ್ರಾರ್ಥಿಸಿದರು. ಆಗ ಅಲ್ಲಿ ಪ್ರತ್ಯಕ್ಷನಾದ ಗಣೇಶನು ಇಲಿಯನ್ನು ನಿಯಂತ್ರಿಸಲು ಅನೇಕ ಪ್ರಯತ್ನಗಳನ್ನು ಮಾಡಿದನು. ಆದರೆ ಆತನ ಎಲ್ಲಾ ಪ್ರಯತ್ನಗಳು ವಿಫಲವಾದವು. ಕೊನೆಗೆ ಗಣೇಶ ಕುಣಿಕೆ ಎಸೆದು ಇಲಿಯನ್ನು ಸೆರೆ ಹಿಡಿದ. ಬಳಿಕ, ದೈತ್ಯಕಾರದ ಗಣೇಶನು ಇಲಿಯ ಮೇಲೆ ಸವಾರಿ ಮಾಡಲಾರಂಭಿಸಿದ. ಮೂಷಿಕ ಭಗವಂತನ ಭಾರವನ್ನು ಹೊರಲು ಆಗದೆ ಚಡಪಡಿಸಿದ. ತಕ್ಷಣ, ಇಲಿಯು ಗಣೇಶನ ಕಾಲುಹಿಡಿದು ಪ್ರಾರ್ಥಿಸಲಾರಂಭಿಸಿತು. ತನ್ನ ದೇಹದ ಗಾತ್ರವನ್ನು ಕಡಿಮೆ ಮಾಡಿ ತನ್ನ ಮೇಲೆ ಕರುಣೆ ತೋರಿಸಬೇಕೆಂದು ಭಗವಂತನನ್ನು ಬೇಡಿಕೊಂಡನು. ಕರುಣೆ ತೋರಿದ ಗಣೇಶ ಮೂಷಿಕನ ಮೊರೆಗೆ ಸಮ್ಮತಿಸಿದನು ಮತ್ತು ತನ್ನ ಗಾತ್ರವನ್ನು ಕಡಿಮೆ ಮಾಡಿಕೊಂಡನು. ಗಣೇಶ ತನ್ನ ತೂಕವನ್ನು ಇಲಿಯ ತೂಕಕ್ಕೆ ತಕ್ಕಂತೆ ತೂಗಿದ. ತನ್ನನ್ನು ವಾಹನವಾಗಿ ನೇಮಿಸುವಂತೆ ಗಣೇಶನನ್ನು ಮೂಷಿಕ ವಿನಂತಿಸಿದನು. ಅದಕ್ಕೆ ಗಣೇಶನು ಮೂಷಿಕನಿಗೆ ವರ ನೀಡಿದನು. ಅದರಂತೆ ಮೂಷಿಕ ಗಣೇಶನ ಶಾಶ್ವತ ಸಂಗಾತಿ ಮತ್ತು ವಾಹನವಾದನು.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)