ಈ ಗಣಪನಿಗೆ ಬಯಲೇ ಆಲಯ, ಅರ್ಚಕರು ಹೆಲಿಕಾಪ್ಟರಿನಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ! ವಿಡಿಯೋ ನೋಡಿ

dholkal ganesh idol, Dantewada chhattisgarh: ವಿನಾಯಕ ಅದಾಗಲೇ ಎಲ್ಲರ ಮನೆ-ಮನಗಳಲ್ಲಿ ಬಂದು ವಿರಾಜಮಾನನಾಗಿದ್ದಾನೆ. ಆದರೆ ಅಲ್ಲೊಬ್ಬ ಡೊಳ್ಳು ಹೊಟ್ಟೆಯ ವಿಶಾಲ ಗಣಪ ಸಾವಿರಾರು ವರ್ಷಗಳಿಂದ ನಿಸರ್ಗದ ಮಡಿಲಲ್ಲಿ ಬೆಟ್ಟ ಗುಡ್ಡಗಳ ನಡುವಣ ಪ್ರಶಾಂತ ವಾತಾವರಣದಲ್ಲಿ ಎದೆಯೊಡ್ಡಿ ಬಟಾಬಯಲಿನಲ್ಲಿ ಏಕಾಂಗಿಯಾಗಿ ವಿರಾಜಮಾನನಾಗಿದ್ದಾನೆ. ನಾಳೆ ವಿನಾಯಕನ ಜನ್ಮದಿನದಂದು ಮಂಡಪಾಲದಲ್ಲಿ ಪೂಜಿಸಲ್ಪಡುವ ದನಗಾಹಿ ಗಣಪತಿಯ ಬಗ್ಗೆ ಎಷ್ಟು ಹೇಳಿದೂ ಸಾಲದು. ಸ್ಥಳ - ಛತ್ತೀಸ್‌ಗಢದ ದಾಂತೇವಾಡದ ಬೈಲಾಡಿಲಾದ ಢೋಲ್ಕಲ್ ಬೆಟ್ಟ

ಈ ಗಣಪನಿಗೆ ಬಯಲೇ ಆಲಯ, ಅರ್ಚಕರು ಹೆಲಿಕಾಪ್ಟರಿನಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ! ವಿಡಿಯೋ ನೋಡಿ
ಈ ಗಣಪನಿಗೆ ಬಯಲೇ ಆಲಯ
Follow us
|

Updated on:Sep 06, 2024 | 10:06 AM

ವಿನಾಯಕ ಅದಾಗಲೇ ಎಲ್ಲರ ಮನೆ-ಮನಗಳಲ್ಲಿ ಬಂದು ವಿರಾಜಮಾನನಾಗಿದ್ದಾನೆ. ಆದರೆ ಅಲ್ಲೊಬ್ಬ ಡೊಳ್ಳು ಹೊಟ್ಟೆಯ ವಿಶಾಲ ಗಣಪ ಸಾವಿರಾರು ವರ್ಷಗಳಿಂದ ನಿಸರ್ಗದ ಮಡಿಲಲ್ಲಿ ಬೆಟ್ಟ ಗುಡ್ಡಗಳ ನಡುವಣ ಪ್ರಶಾಂತ ವಾತಾವರಣದಲ್ಲಿ ಎದೆಯೊಡ್ಡಿ ಬಟಾಬಯಲಿನಲ್ಲಿ ಏಕಾಂಗಿಯಾಗಿ ವಿರಾಜಮಾನನಾಗಿದ್ದಾನೆ. ನಾಳೆ ವಿನಾಯಕನ ಜನ್ಮದಿನದಂದು ಮಂಡಪಾಲದಲ್ಲಿ ಪೂಜಿಸಲ್ಪಡುವ ದನಗಾಹಿ ಗಣಪತಿಯ ಬಗ್ಗೆ ಎಷ್ಟು ಹೇಳಿದೂ ಸಾಲದು. ಹೌದು, ಬೆಟ್ಟಗಳ ಸಾಲಿನಲ್ಲಿ 3 ಸಾವಿರ ಅಡಿ ಎತ್ತರದಲ್ಲಿ ಏಕಶಿಲೆಯ ಮೇಲೆ ಪುಟ್ಟ ಜಾಗದಲ್ಲಿ ನೆಲೆಸಿರುವ ಆ ಗಣೇಶ ಮೂರ್ತಿಯ ಬಗ್ಗೆ ನಿಮಗೆ ಗೊತ್ತೇ!

ಈ ಗಣೇಶನ ವಿಗ್ರಹವು ಛತ್ತೀಸ್‌ಗಢದ ದಾಂತೇವಾಡದ ಬೈಲಾಡಿಲಾದ ಢೋಲ್ಕಲ್ ಬೆಟ್ಟದ ಮೇಲೆ ನೆಲೆಗೊಂಡಿದೆ. ಪುರಾಣಗಳ ಪ್ರಕಾರ, ಈ ಬೆಟ್ಟದಲ್ಲಿ ಗಣೇಶ ಮತ್ತು ಪರಶುರಾಮ ನಡುವೆ ಯುದ್ಧ ನಡೆಯಿತು ಎಂದು ಹೇಳಲಾಗುತ್ತದೆ. ಅಲ್ಲದೆ ಈ ಯುದ್ಧದಲ್ಲಿ ಪರಶುರಾಮನ ಕೊಡಲಿಯು ವಿನಾಯಕನ ಮುಖಕ್ಕೆ ಡಿಚ್ಚಿ ಹೊಡೆದಾಗ, ಆತನ ಒಂದು ಹಲ್ಲು ಮುರಿಯಿತು. ಅದಕ್ಕಾಗಿಯೇ ಬೆಟ್ಟದ ಕೆಳಗಿನ ಗ್ರಾಮಕ್ಕೆ ಫರಸ್ಪಾಲ್ ಎಂದು ಹೆಸರಿಸಲಾಯಿತು.

Also Read: Roofless Shikari Devi Temple – ಆ ದೇವಸ್ಥಾನ ಬಟಾಬಯಲಿನಲ್ಲಿದೆ, ಶಿಕಾರಿ ದೇವಿಗೆ ಆಕಾಶವೇ ಶ್ರೀರಕ್ಷೆ! ಎಲ್ಲಿದೆ ಈ ಮಂದಿರ?

ತದನಂತರ, ನಾಗವಂಶದ ರಾಜರು ಗಣೇಶನ ವಿಗ್ರಹವನ್ನು ಬೆಟ್ಟದ ಮೇಲೆ ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತದೆ, ಈ ಘಟನೆಯು ಈ ಪ್ರಪಂಚ ಇರುವವರೆಗೂ ಶಾಸ್ವತವಾಗಿ ನೆನಪಿನಲ್ಲುಳಿಯುತ್ತದೆ. ಈ ವಿಗ್ರಹವು 11 ನೇ ಶತಮಾನಕ್ಕೆ ಸೇರಿದೆ. ಈ ಗಣಪನಿಗೆ ಬಯಲೇ ಆಹ್ಲಾದಕರ ಪ್ರಶಾಂತ ಆಲಯವಾಗಿದ್ದು, ಅರ್ಚಕರು ಹೆಲಿಕಾಪ್ಟರಿನಲ್ಲಿ ಬಂದು ಇಲ್ಲಿನ ಗಣಪನಿಗೆ ಪೂಜೆ ಸಲ್ಲಿಸುತ್ತಾರೆ! ಕೆಳಗಿನ ವಿಡಿಯೋದಲ್ಲಿ ಇದನ್ನು ನೋಡಬಹುದು.

ಗ್ರಾನೈಟ್ ಕಲ್ಲಿನಿಂದ 6 ಅಡಿ ಉದ್ದ ಮತ್ತು 2.5 ಅಡಿ ಅಗಲದ ಈ ಮೂರ್ತಿಯು ತುಂಬಾ ಕಲಾತ್ಮಕವಾಗಿದೆ. ಈ ಗಣೇಶನ ವಿಗ್ರಹದ ಬಲ ಹಣೆಯ ಮೇಲೆ ಕೊಡಲಿ, ಮೇಲಿನ ಎಡ ಹಣೆಯ ಮೇಲೆ ಮುರಿದ ಹಲ್ಲು, ಕೆಳಗಿನ ಬಲ ಹಣೆಯ ಮೇಲೆ ಅಭಯ ಮುದ್ರೆಯಿರುವ ಹಾರ ಮತ್ತು ಕೆಳಗಿನ ಎಡಗೈಯಲ್ಲಿ ಮೋದಕವಿಟ್ಟು ಪ್ರತಿಷ್ಠಾಪಿಸಲಾಗಿದೆ.

ಇದನ್ನೂ ಓದಿ: ಸ್ವಯಂಭು ಪಾದರಸದಿಂದ ಮಾಡಿದ ಶಿವಲಿಂಗಕ್ಕೆ ಪೂಜೆ ಮಾಡುವುದು ಶ್ರೇಷ್ಠ, ಇದರಿಂದ ಸಿಗುತ್ತೆ ಸಾವಿರ ಪಟ್ಟು ಪುಣ್ಯ – ಪೂಜಿಸುವುದು ಹೇಗೆ?

ಸ್ಥಳೀಯ ಗ್ರಾಮಸ್ಥರು ಈ ಏಕದಂತನನ್ನು ತಮ್ಮ ರಕ್ಷಕ ಎಂದು ಪೂಜಿಸುತ್ತಾರೆ. ಧೋಲ್ಕಲ್ ಶಿಖರದ ಬಳಿಯ ಎರಡನೇ ಶಿಖರದಲ್ಲಿ ಪಾರ್ವತಿ ದೇವಿ ಮತ್ತು ಸೂರ್ಯ ದೇವರ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಸುಮಾರು 15 ವರ್ಷಗಳ ಹಿಂದೆ ಇದು ಕಳ್ಳತನವಾಗಿದೆ. ಇದುವರೆಗೂ ಕಳ್ಳತನವಾಗಿರುವ ವಿಗ್ರಹಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬೆಟ್ಟದ ತುದಿಗೆ ಹೋಗುವ ದಾರಿಯಲ್ಲಿ ಕಾಡುಪ್ರಾಣಿಗಳ ಭಯವಿದೆ. ಆದರೆ ದೇವರ ದರ್ಶನಕ್ಕೆ ತೆರಳುವ ಭಕ್ತರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂಬುದು ಆದಿವಾಸಿಗಳ ನಂಬಿಕೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:01 am, Fri, 6 September 24

Duleep Trophy 2024: ಭರ್ಜರಿ ಸೆಂಚುರಿ ಸಿಡಿಸಿದ ಪ್ರಥಮ್ ಸಿಂಗ್
Duleep Trophy 2024: ಭರ್ಜರಿ ಸೆಂಚುರಿ ಸಿಡಿಸಿದ ಪ್ರಥಮ್ ಸಿಂಗ್
ಹೆಬ್ಬಾವಿನ ಮರಿಯೆಂದು ವಿಷಕಾರಿ ಕೊಳಕು ಮಂಡಲ ಹಿಡಿದ ವ್ಯಕ್ತಿ! ವಿಡಿಯೋ ನೋಡಿ
ಹೆಬ್ಬಾವಿನ ಮರಿಯೆಂದು ವಿಷಕಾರಿ ಕೊಳಕು ಮಂಡಲ ಹಿಡಿದ ವ್ಯಕ್ತಿ! ವಿಡಿಯೋ ನೋಡಿ
ನಾಗಮಂಗಲ ಗಲಭೆ ಕುಮಾರಸ್ವಾಮಿ ನಿರ್ದೇಶನದಂತೆ ನಡೆದಿರಬಹುದು: ಡಿಕೆ ಸುರೇಶ್
ನಾಗಮಂಗಲ ಗಲಭೆ ಕುಮಾರಸ್ವಾಮಿ ನಿರ್ದೇಶನದಂತೆ ನಡೆದಿರಬಹುದು: ಡಿಕೆ ಸುರೇಶ್
ತಾಯಂದಿರನ್ನೇ ಮಂಚಕ್ಕೆ ಕರೆಯುತ್ತಿದ್ದಾರೆ: ಡಿಕೆ ಸುರೇಶ್ ವಾಗ್ದಾಳಿ
ತಾಯಂದಿರನ್ನೇ ಮಂಚಕ್ಕೆ ಕರೆಯುತ್ತಿದ್ದಾರೆ: ಡಿಕೆ ಸುರೇಶ್ ವಾಗ್ದಾಳಿ
ರ‍್ಯಾಪ್ ಸಾಂಗ್ ಬಗ್ಗೆ ಸಿರಿ ಮಾತು; ನಕ್ಕು ಖುಷಿಪಟ್ಟ ತನಿಷಾ
ರ‍್ಯಾಪ್ ಸಾಂಗ್ ಬಗ್ಗೆ ಸಿರಿ ಮಾತು; ನಕ್ಕು ಖುಷಿಪಟ್ಟ ತನಿಷಾ
Nithya Bhavishya: ಶನಿವಾರದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ರಾಶಿ ಭವಿಷ್ಯ ತಿಳಿಯಿರಿ
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಕೆಟ್ಟ ಕಮೆಂಟ್ ಮಾಡ್ತೀರಾ? ರಕ್ಷಕ್ ಬುಲೆಟ್​ ಏನ್ ಹೇಳ್ತಾರೆ ಸ್ವಲ್ಪ ಕೇಳಿ..
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಬಂದ್​​ ಗತಿ ಕಾಣಿಸುತ್ತೇವೆ: ಗೃಹ ಸಚಿವ ಜಿ ಪರಮೇಶ್ವರ್​ ಹೀಗೆ ಹೇಳಿದ್ದೇಕೆ?
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಜೈಲಿಂದ ಹೊರಬಂದ ಅರವಿಂದ್ ಕೇಜ್ರಿವಾಲ್​ಗೆ ಹೂಮಳೆ ಸುರಿಸಿ ಅದ್ದೂರಿ ಸ್ವಾಗತ
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್
ಮಹಿಳಾ ಅಧಿಕಾರಿಯ ಕೂದಲು ಹಿಡಿದು ಎಳೆದಾಡಿದ ಹೆಂಗಸು; ವಿಡಿಯೋ ವೈರಲ್