Ganesh Utsav: ರುದ್ರಾಕ್ಷಿ ಮಣಿಗಳಿಂದಲೇ ಸಿದ್ಧವಾಯ್ತು 20 ಅಡಿ ಎತ್ತರದ ಗಣೇಶನ ವಿಗ್ರಹ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಈ ಬಾರಿಯ ವಿಶೇಷವಾದ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುವುದು. ರುದ್ರಾಕ್ಷಿ ಮಣಿಗಳಿಂದ ನಿರ್ಮಿಸಲಾದ ಬೃಹತ್ ಉಗ್ರನರಸಿಂಹದ ಅವತಾರದ ಈ ಗಣೇಶ ವಿಗ್ರಹ ಎಲ್ಲರ ಗಮನ ಸೆಳೆಯುತ್ತಿದೆ. ಈ ಗಣೇಶನ ವಿಗ್ರಹವನ್ನು ಶನಿವಾರ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.
ದೇಶಾದ್ಯಂತ ದೆಹಲಿಯಿಂದ ಗಲ್ಲಿಯವರೆಗೆ ಗಣಪತಿಯನ್ನು ಪ್ರತಿಷ್ಠಾಪಿಸಲು ಮಂಟಪಗಳನ್ನು ಸುಂದರವಾಗಿ ಅಲಂಕರಿಸಲಾಗುತ್ತಿದೆ. ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಎಮ್ಮಿಗನೂರಿನಲ್ಲಿ ಈ ಬಾರಿಯ ಗಣಪತಿ ಉಗ್ರ ನರಸಿಂಹನ ರೂಪದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಾನೆ. ಕೊಂಡವೀಟಿ ಪರಿಸರದಲ್ಲಿ ಶ್ರೀ ಬಾಲವಿನಾಯಕ ಯುವಕ ಮಂಡಳಿಯ ಆಶ್ರಯದಲ್ಲಿ ಕಳೆದ 33 ವರ್ಷಗಳಿಂದ ವಿನಾಯಕ ಚೌತಿ ಉತ್ಸವ ನಡೆಯುತ್ತಿದೆ. ಪ್ರತಿವರ್ಷವೂ ಪರಿಸರ ಸ್ನೇಹಿಯಾಗಿ ಇಲ್ಲಿ ಗಣೇಶ ಉತ್ಸವ ಆಚರಿಸಲಾಗುತ್ತದೆ. ಮಣ್ಣಿನ ವಿಗ್ರಹಗಳನ್ನೇ ಪ್ರತಿಷ್ಠಾಪಿಸಲಾಗುತ್ತದೆ. ಈ ವರ್ಷವೂ ಶ್ರೀಶೈಲಂ, ಅರುಣಾಚಲಂ, ಕಾಶಿಯಿಂದ 70 ಕೆಜಿ ರುದ್ರಾಕ್ಷಗಳನ್ನು ಸಂಗ್ರಹಿಸಿ ಸುಮಾರು 41 ದಿನಗಳ ಕಾಲ ಶ್ರಮ ವಹಿಸಿ 20 ಅಡಿ ಎತ್ತರದ ಶ್ರೀ ಉಗ್ರನರಸಿಂಹ ಸ್ವಾಮಿಯ ಅವತಾರವನ್ನು ನಿರ್ಮಿಸಲಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

