ನರಕ ಚತುರ್ದಶಿ ದಿನ ಹನುಮ ಜಯಂತಿ: ಭಕ್ತರು ವಿಶೇಷವಾಗಿ ವಾಯುಪುತ್ರನನ್ನು ಆರಾಧಿಸಿದರೆ ಸಂಕಷ್ಟಗಳೆಲ್ಲ ದೂರ

| Updated By: ಸಾಧು ಶ್ರೀನಾಥ್​

Updated on: Oct 29, 2021 | 7:22 AM

Hanuma Jayanti: ನರಕ ಚತುರ್ದಶಿಯಂದು ಆಂಜನೇಯ ಸ್ವಾಮಿಯ ಜನ್ಮ ದಿನ. ಆದರೆ ಚೈತ್ರ ಹುಣ್ಣಿಮೆಯ ದಿನವನ್ನೂ ಸಹ ಆಂಜನೇಯನ ಜನ್ಮದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ದೀಪಾವಳಿ ಸಂದರ್ಭದಲ್ಲಿ ನರಕ ಚತುರ್ದಶಿಯಂದು ಆಂಜನೇಯ ಸ್ವಾಮಿಯನ್ನು ಭಕ್ತಭಾವದಿಂದ ಆರಾಧಿಸಲಾಗುತ್ತದೆ.

ನರಕ ಚತುರ್ದಶಿ ದಿನ ಹನುಮ ಜಯಂತಿ: ಭಕ್ತರು ವಿಶೇಷವಾಗಿ ವಾಯುಪುತ್ರನನ್ನು ಆರಾಧಿಸಿದರೆ ಸಂಕಷ್ಟಗಳೆಲ್ಲ ದೂರ
ನರಕ ಚತುರ್ದಶಿ ದಿನ ಹನುಮ ಜಯಂತಿ: ಭಕ್ತರು ವಿಶೇಷವಾಗಿ ವಾಯುಪುತ್ರನನ್ನು ಆರಾಧಿಸಿದರೆ ಸಂಕಷ್ಟಗಳೆಲ್ಲ ದೂರ
Follow us on

Naraka Chaturdashi 2021: ನರಕ ಚತುರ್ದಶಿಯ ದಿನ ಈ ಉಪಾಯ ಮಾಡಿದರೆ ಆಂಜನೇಯ ಸ್ವಾಮಿ ಎಲ್ಲ ಸಂಕಟಗಳನ್ನೂ ದೂರ ಮಾಡುತ್ತಾನೆ. ನರಕ ಚತುರ್ದಶಿ ಎಂದರೆ ಪದ್ಮ ಪುರಾಣದ ಪ್ರಕಾರ ಕೃಷ್ಣ ಪರಮಾತ್ಮ ನರಕಾಸುರನನ್ನು ಸಾಯಿಸಿದ ದಿನ. ವಾಲ್ಮೀಕಿ ರಾಮಾಯಣ ಅನುಸಾರ ವಾಯುಪುತ್ರನ ಜನ್ಮ ದಿನವನ್ನು (Hanuma Jayanti) ಕಾರ್ತಿಕ ಮಾಸದಲ್ಲಿ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಅಂದರೆ ನರಕ ಚತುರ್ದಶಿಯಂದು ಆಂಜನೇಯ ಸ್ವಾಮಿಯ ಜನ್ಮ ದಿನ. ಆದರೆ ಚೈತ್ರ ಹುಣ್ಣಿಮೆಯ ದಿನವನ್ನೂ ಸಹ ಆಂಜನೇಯನ ಜನ್ಮದಿನ ಎಂದು ಆಚರಿಸಲಾಗುತ್ತದೆ. ಹಾಗಾಗಿ ದೀಪಾವಳಿ ಸಂದರ್ಭದಲ್ಲಿ ನರಕ ಚತುರ್ದಶಿಯಂದು ಆಂಜನೇಯ ಸ್ವಾಮಿಯನ್ನು ಭಕ್ತಭಾವದಿಂದ ಆರಾಧಿಸಲಾಗುತ್ತದೆ. ಹನುಮಂತ ಅಂದರೆ ತನ್ನ ಭಕ್ತರ ಸಂಕಟವನ್ನು ದೂರ ಮಾಡುವ ದೇವ. ನರಕ ಚತುರ್ದಶಿಯ ದಿನ ಆಂಜನೇಯ ಸ್ವಾಮಿyನ್ನು ವಿಶೇಷವಾಗಿ ಭಜಿಸಿದರೆ ಸಂಕಟಗಳೆಲ್ಲವೂ ದೂರವಾಗುವುದು.

1. ನಿಮ್ಮ ಜೀವನದಲ್ಲಿ ಸಂಕಷ್ಟಗಳು ದೂರವಾಗಿಲ್ಲವಾದರೆ, ಸೋತು ಸುಣ್ಣವಾಗಿದ್ದರೆ, ಆಂಜನೇಯ ಸ್ವಾಮಿಗೆ ಒಂದು ಬಟ್ಟೆಯನ್ನು ತೊಡಿಸಬೇಕು. ಆಂಜನೇಯನಿಗೆ ಕೆಂಪು ಬಟ್ಟೆ ತುಂಬಾ ಇಷ್ಟ. ಆಂಜನೇಯನಿಗೆ ಈ ಕೆಂಪು ಬಟ್ಟೆ ಹಾಕುವಾಗ ಶ್ರೀರಾಮಚಂದ್ರನ ನಾಮ ಜಪ ಮಾಡಬೇಕು. ಜೊತೆಗೆ ಸಿಹಿ ಲಡ್ಡುವನ್ನುನೈವೇದ್ಯಕ್ಕೆ ಸಮರ್ಪಿಸಬೇಕು. ತೆಂಗಿನ ಕಾಯಿಯನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ನಿಮಗೆ ಬಲ ಬರುತ್ತದೆ. ನಿಮಗೆ ಸಂಕಟಗಳಿಂದ ಮುಕ್ತಿ ಸಿಗತೊಡಗುತ್ತದೆ.

2. ನಿಮಗೆ ಹಣದ ಸಂಕಷ್ಟ ದೂರವಾಗಿಲ್ಲವೆಂದರೆ ಅಶ್ವತ್ಥ ವೃಕ್ಷದ 11 ಎಲೆಗಳ ಮೇಲೆ ಶ್ರೀರಾಮ ಎಂದು ಹೆಸರು ಬರೆದು, ಅದರ ಹಾರ ಮಾಡಿ, ಆಂಜನೇಯನ ಕೊರಳಿಗೆ ಹಾಕಬೇಕು. ಆ ಸಂದರ್ಭದಲ್ಲಿ ನಿಮ್ಮ ಸಂಕಷ್ಟ ಏನು ಎಂಬುದನ್ನು ಪ್ರಾರ್ಥನೆಯೊಂದಿಗೆ ಹೇಳಬೇಕು. ಹೀಗೆ ಮಾಡುವುದರಿಂದ ನಿಮ್ಮ ಸಂಕಷ್ಟ ದೂರವಾಗುತ್ತದೆ. ಇದರ ಜೊತೆಗೆ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ್ದರೆ ಅದರಿಂದ ಹೊರಬರಲು ಕೆಂಪು ಬಣ್ಣದ ಲಂಗೋಟಿಯನ್ನು ಆಂಜನೇಯ ಸ್ವಾಮಿಗೆ ಅರ್ಪಿಸಬೇಕು.

3. ನಿಮಗೆ ಕೆಟ್ಟ ದಿನಗಳು ಎದುರಾಗಿದ್ದು, ಶತ್ರು ಬಾಧೆ ಹೆಚ್ಚಾಗಿದೆಯೆಂದರೆ ಗುಲಾಬಿ ಮಾಲೆಯನ್ನು ಆಂಜನೇಯ ಸ್ವಾಮಿಗೆ ಹಾಕಬೇಕು. ಎಳೆ ನೀರಿನ ಮೇಲೆ ಕೆಂಪು ಬಣ್ಣದಲ್ಲಿ ಸ್ವಸ್ತಿಕ್​ ಬರೆದು ಅದನ್ನು ವಾಯುಪುತ್ರನಿಗೆ ಅರ್ಪಿಸಬೇಕು. ಹಸುವಿನ ತುಪ್ಪದಲ್ಲಿ ಮಾಡಿದ ಕಜ್ಜಾಯಗಳನ್ನು ಅರ್ಪಿಸಬೇಕು. ಇದರಿಂದ ನಿಮ್ಮ ದುರ್ದಿನಗಳು ದೂರವಾಗುತ್ತವೆ.

4. ಆಂಜನೇಯ ಸ್ವಾಮಿಗೆ ವಿಶೇಷ ವೀಳ್ಯದೆಲೆ ತುಂಬಾ ಇಷ್ಟ. ಹಾಗಾಗಿ ವೀಳ್ಯದೆಲೆ ಹಾರವನ್ನು ಆಂಜನೇಯ ಸ್ವಾಮಿ ಕೊರಳಿಗೆ ಹಾಕಬೇಕು. ಕೊಬ್ಬರಿ, ಗುಲ್ಕನ್, ಬಾದಾಮಿ ಮುಂತಾದವುಗಳಿಂದ ತಯಾರಿಸಿ ಪಾನ್​ ಬೀಡಾ ನೈವೇದ್ಯ ಮಾಡಬಹುದು. ಈ ಭಕ್ತ ಭಾವದಿಂದ ಆಂಜನೇಯ ಸ್ವಾಮಿಯ ಹನುಮಾನ್​ ಚಾಲೀಸ್​ ಪಠಿಸುವುದರಿಂದ ಎಲ್ಲ ಕಷ್ಟಗಳು ದೂರವಾಗುತ್ತವೆ.

(Naraka Chaturdashi kiru Deepawali puja vidhi hanuma jayanti blessings)