Sign In

By signing in or creating an account, you agree with Associated Broadcasting Company's Terms & Conditions and Privacy Policy.

Kalaratri Devi Avatar: ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿಗಾಗಿ ನವರಾತ್ರಿಯ 7ನೇ ದಿನ ದೇವಿ ಕಾಲರಾತ್ರಿ ಪೂಜೆ ಮಾಡಿ

ಮೂರು ಕಣ್ಣುಗಳಿರುವ ತಾಯಿ ಕಾಲರಾತ್ರಿಯ ಆಭರಣಗಳು ಮಿಂಚಿನಷ್ಟು ಹೊಳಪು ಹೊಂದಿವೆ. ಆಕೆಯು ಉಛ್ವಾಸ ಹಾಗೂ ನಿಶ್ವಾಸಗಳಿಂದ ಮೂಗಿನ ಹೊಳ್ಳೆಗಳಿಂದ ಬೆಂಕಿಯುಂಡೆಗಳು ಹೊಮ್ಮಿದಷ್ಟು ಭೀಕರವಾಗಿರುತ್ತದೆ.

Kalaratri Devi Avatar: ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿಗಾಗಿ ನವರಾತ್ರಿಯ 7ನೇ ದಿನ ದೇವಿ ಕಾಲರಾತ್ರಿ ಪೂಜೆ ಮಾಡಿ
ಕಾಲರಾತ್ರಿ
Follow us
TV9 Web
| Updated By: ಆಯೇಷಾ ಬಾನು

Updated on: Oct 02, 2022 | 6:30 AM

ಕಾಲರಾತ್ರಿ ದೇವಿಯು ದುರ್ಗಾಮಾತೆಯ ಏಳನೇ ಅವತಾರವಾಗಿದ್ದಾಳೆ(Kalaratri Devi Avatar). ಕಾಲ ಎಂದರೆ ಸಮಯ ಹಾಗೂ ಸಾವು ಎಂಬುದರ ಸೂಚಕ. ಕಾಲರಾತ್ರಿಯು ಕಾಲದ ಸಾವು ಎಂಬುದನ್ನು ಹೇಳುತ್ತದೆ. ತಾಯಿ ಕಾಲರಾತ್ರಿ ದೇವಿಯು ಅಂಧಕಾರವನ್ನು ಹೊಡೆದೋಡಿಸಿ ಬೆಳಕೆಂಬ ಧನಾತ್ಮಕ ಶಕ್ತಿಯನ್ನು ಪ್ರಾಪ್ತಿ ಮಾಡುತ್ತಾಳೆ. ತಾಯಿಯು ಕತ್ತಲೆಯನ್ನು ಪ್ರತಿನಿಧಿಸುತ್ತಾಳೆ. ಆಕೆಯು ತನ್ನ ಶಕ್ತಿಯಿಂದ ಅಂಧಕಾರವನ್ನು ಹೇಗೆ ದೂರ ಮಾಡುತ್ತಾಳೋ, ಅದೇ ರೀತಿ ಮನುಷ್ಯನ ಬದುಕಿನಲ್ಲಿ ಅನಾರೋಗ್ಯ, ಕೆಟ್ಟ ಆಲೋಚನೆಯನ್ನು ತೆಗೆದುಹಾಕಿ ಶಾಂತಿ, ಧೈರ್ಯವನ್ನು ತುಂಬುತ್ತಾಳೆ.

ಮಾತೆ ಕಾಲರಾತ್ರಿಯು ಕಪ್ಪು ಮೈ ಬಣ್ಣವನ್ನು ಹೊಂದಿರುತ್ತಾಳೆ. ಕತ್ತೆಯ ಮೇಲೆ ಕುಳಿತಿರುತ್ತಾಳೆ. ಬಿಚ್ಚು ಮುಡಿಯ ಕೇಶರಾಶಿಗಳು ಆಕೆಯ ಸುತ್ತಲೂ ಹರಡಿಕೊಂಡಿರುತ್ತದೆ. ಆಕೆಗೆ ನಾಲ್ಕು ಕೈಗಳಿವೆ. ಎಡ ಬದಿಯ ಎರಡು ಕೈಗಳ ಪೈಕಿ ಒಂದರಲ್ಲಿ ಕುಡುಗೋಲು ಹಾಗೂ ಮತ್ತೊಂದರಲ್ಲಿ ಕಬ್ಬಿಣದ ಮುಳ್ಳು ಹಿಡಿದಿದ್ದಾಳೆ. ಬಲಗಡೆಯ ಎರಡು ಕೈಗಳಲ್ಲಿ ವರ ಮುದ್ರೆ ಹಾಗೂ ಅಭಯ ಮುದ್ರೆಯನ್ನು ಹೊಂದಿದ್ದಾಳೆ.

ಮೂರು ಕಣ್ಣುಗಳಿರುವ ತಾಯಿ ಕಾಲರಾತ್ರಿಯ ಆಭರಣಗಳು ಮಿಂಚಿನಷ್ಟು ಹೊಳಪು ಹೊಂದಿವೆ. ಆಕೆಯು ಉಛ್ವಾಸ ಹಾಗೂ ನಿಶ್ವಾಸಗಳಿಂದ ಮೂಗಿನ ಹೊಳ್ಳೆಗಳಿಂದ ಬೆಂಕಿಯುಂಡೆಗಳು ಹೊಮ್ಮಿದಷ್ಟು ಭೀಕರವಾಗಿರುತ್ತದೆ. ನವರಾತ್ರಿಯ ಏಳನೇ ದಿನದಂದು ತಾಯಿ ಕಾಲರಾತ್ರಿಯನ್ನು ಒಲಿಸಿಕೊಳ್ಳಲು ನವರಾತ್ರಿಯ 7, 8, 9 ದಿನಗಳಂದು ಕ್ರಮವಾಗಿ ನೀಲಿ, ಕೆಂಪು ಹಾಗೂ ಬಿಳಿ ಬಣ್ಣದ ವಸ್ತ್ರಗಳನ್ನು ಧರಿಸಬೇಕು. ಇದನ್ನೂ ಓದಿ: ನವರಾತ್ರಿ: 135 ವರ್ಷ ಹಳೆಯ ದೇವಾಲಯದಲ್ಲಿ ವಿಗ್ರಹ, ಗೋಡೆ, ನೆಲದ ಮೇಲೆ 8 ಕೋಟಿ ಕರೆನ್ಸಿ ನೋಟು, ಚಿನ್ನದಿಂದ ಅಲಂಕಾರ!

ನವರಾತ್ರಿಯ ಏಳನೇ ದಿನದ ರಾತ್ರಿ ತಂತ್ರಸಾಧಕರು ಮತ್ತು ಯೋಗಿಗಳಿಗೆ ಅತ್ಯಂತ ಶುಭವಾಗಿರುತ್ತದೆ. ಧ್ಯಾನದಲ್ಲಿ ಮಗ್ನರಾಗುವ ಅವರು ಎಲ್ಲಾ ಚಕ್ರಗಳಿಗೆ ಅಗ್ರಗಣ್ಯವಾದ ಸಹಸ್ರ ಚಕ್ರವನ್ನು ಸಾಧಿಸುತ್ತಾರೆ. ಈ ಚಕ್ರವು ಮಾನವ ಜಾಗೃತಿಯ ವಿಕಾಸದ ಕೊನೆಯ ಮೈಲಿಗಲ್ಲು ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದೊಳಗೆ ಒಬ್ಬರು ಸಂಪೂರ್ಣ ಪರಿಪೂರ್ಣತೆಯನ್ನು ಕಂಡುಕೊಂಡ ನಂತರ ಇದನ್ನು ಸ್ಥಿತಿ ಎಂದು ಪರಿಗಣಿಸಲಾಗುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ, ರಾತ್ರಿಯು ಪೂರ್ಣ ಏಕಾಗ್ರತೆಯಿಂದ ಧ್ಯಾನ ಮಾಡಲು ಶಾಂತಿಯುತವಾದ ಸಮಯವಾಗಿದೆ.

ಎಲ್ಲಾ ಆಚರಣೆಗಳನ್ನು ನಿರ್ವಹಿಸಲು ಮತ್ತು ಪೂರ್ಣ ಏಕಾಗ್ರತೆಯಿಂದ ಧ್ಯಾನ ಮಾಡಲು ಶಾಂತಿಯುತವಾದ ಅತ್ಯುತ್ತಮ ಸಮಯವೆಂದರೆ ನವರಾತ್ರಿಯ ಏಳನೇ ದಿನದ ರಾತ್ರಿ. ಅಲೌಕಿಕ ಮತ್ತು ಲೌಕಿಕ ಶಕ್ತಿಗಳನ್ನು ಅರಿತುಕೊಳ್ಳಲು ರಾತ್ರಿಯ ಕೆಲಸಗಳು ಹೆಚ್ಚು ಪರಿಣಾಮಕಾರಿ. ಮನುಷ್ಯನಿಗೆ ಜ್ಞಾನೋದಯವಾಗಲು ರಾತ್ರಿಯ ಸಮಯವೇ ಉತ್ತಮವಾಗಿದೆ. ಇದು ಪರಿಣಾಮಕಾರಿ ಸಮಯ ಎಂದೂ ಹೇಳಲಾಗುತ್ತದೆ.

ಕಾಲರಾತ್ರಿಯ ಪೂಜಾವಿಧಾನ

ನವರಾತ್ರಿಯ ಏಳನೇ ದಿನವು ವ್ಯಕ್ತಿಯು ತಾಯಿ ಕಾಲರಾತ್ರಿಯ ಪೂಜೆ ನೆರವೇರಿಸಿದರೆ ಬದುಕಿನಲ್ಲಿ ಪೂರ್ಣಪ್ರಮಾಣದ ಅಭಿವೃದ್ಧಿ ಕಾಣುತ್ತಾನೆ ಎಂದು ಹೇಳಲಾಗುತ್ತದೆ. ತಾಯಿಯ ವಿಗ್ರಹವನ್ನು ಚೆನ್ನಾಗಿ ತೊಳೆದು ಹಾಲು, ಮೊಸರು, ಸಕ್ಕರೆ, ಜೇನುತುಪ್ಪ ಹಚ್ಚಿ ಕೊನೆಯಲ್ಲಿ ಎಲೆ ಅಡಿಕೆಯನ್ನು ಅರ್ಪಿಸಬೇಕು. ತಾಯಿಗೆ ಪುಷ್ಪಾರ್ಚನೆ ಮಾಡಿ, ಕುಂಕುಮ, ಅಕ್ಷತೆ ಮತ್ತು ಗಂಧವನ್ನು ಅರ್ಪಿಸಿ. ಕಳಶ ಪೂಜೆ ಮಾಡುವ ಮೂಲಕ ತಾಯಿ ದುರ್ಗೆಯ ಒಂಭತ್ತು ಅವತಾರಗಳನ್ನು ನೆನೆದು ಪೂಜೆ ಮಾಡಿ. ತಾಯಿಗೆ ಅರ್ಪಿಸುವ ಪ್ರಸಾದವು ಹಾಲು, ಜೇನುತುಪ್ಪವನ್ನು ಒಳಗೊಂಡಿರಲಿ. ಪಾಯಸವೂ ಶ್ರೇಷ್ಠ. ತಾಯಿಯ ಹಣೆಗೆ ಕುಂಕುಮ ಇಟ್ಟು ಮನಃಸ್ಫೂರ್ವಕವಾಗಿ ಪೂಜಿಸಿ. ತಾಯಿ ಕಾಲರಾತ್ರಿಯನ್ನು ಪೂಜಿಸಲು ಓಂ ದೇವಿ ಕಾಲರಾತ್ರಿಯೇ ನಮಃ ಎಂದು ಮಂತ್ರ ಪಠಿಸಿ. ಇದನ್ನೂ ಓದಿ: Navratri: ನವರಾತ್ರಿಯ 8 ಮತ್ತು 9ನೇಯ ದಿನ ಯಾವ ರೂಪದಲ್ಲಿ ಪೂಜಿಸಬೇಕು ಮತ್ತು ಯಾವ ಭಕ್ಷ್ಯ ದೇವಿಗೆ ಪ್ರಿಯ?

ದುಃಖ, ನೋವು, ವಿನಾಶ ಮತ್ತು ಸಾವನ್ನು ಎಂದಿಗೂ ತಪ್ಪಿಸಲಾಗದು. ಇವು ಜೀವನದ ಕಹಿ ಸತ್ಯಗಳು ಮತ್ತು ಅವುಗಳನ್ನು ನಿರಾಕರಿಸುವುದು ಅಸಾಧ್ಯ ಎಂಬುದನ್ನು ತಾಯಿ ಅರ್ಥ ಮಾಡಿಸುತ್ತಾಳೆ. ತಾಯಿ ಕಾಲರಾತ್ರಿಯ ಮಂತ್ರವನ್ನು ಪಠಿಸುವುದರಿಂದ ನಮ್ಮ ಮನಸ್ಸಿನಲ್ಲಿರುವ ಭಯವು ದೂರವಾಗಿ ಧೈರ್ಯ ತುಂಬಿಕೊಳ್ಳುತ್ತದೆ. ಕಾಲರಾತ್ರಿಯ ಪೂಜಾ ಮಂತ್ರಗಳು ಭಕ್ತರನ್ನು ಕಷ್ಟ ಕಾಲದಲ್ಲಿ ಕಾಪಾಡುತ್ತದೆ. ಮತ್ತು ಯಾವತ್ತೂ ಸೋಲದಂತೆ ಕಾಯುತ್ತದೆ. ಶನಿ ಅಥವಾ ನಿಮಗೆ ಯಾವುದೇ ಗ್ರಹ ಪೀಡೆಗಳಿದ್ದರೆ ತಾಯಿ ಕಾಲರಾತ್ರಿಯ ಪೂಜೆಯಿಂದ ನಿವಾರಣೆಯಾಗುತ್ತದೆ.

ನವರಾತ್ರಿಯ ಏಳನೇ ದಿನದಂದು ನೀಲಿ ಬಣ್ಣದ ವಸ್ತ್ರ ಧರಿಸುವುದರಿಂದ ತಾಯಿಗೆ ಸಂತೋಷವಾಗುತ್ತದೆ. ಈ ಬಣ್ಣವು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.

ಕಾಲರಾತ್ರಿಯ ಮಂತ್ರ:

ಓಂ ದೇವೀ ಕಾಲರಾತ್ರೈ ನಮಃ ಓಂ ದೇವಿ ಕಾಲರಾತ್ರೈ ನಮಃ ಎಕ್ವೇಣಿ ಜಪಕಾರ್ಣಪೂರ ನಗ್ನಾ ಖರಾಸ್ಥಿತಾ ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ ಶರೀರಿಣೀ ವಂ ಪಾದೋಲ್ಲಸಲ್ಲೋಹ್ಲತಾ ಕಂಟಕ್ಬುಷಾನಾ ಭರ್ಧನ್‌ ಮೂರ್ಧಂ ಧ್ವಜಾ ಕೃಷ್ಣ ಕಾಲರಾತ್ರಿ ಭಯಂಕರಿ

ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ನಟನ ಆರತಕ್ಷತೆಯಲ್ಲೂ ಅಭಿಮಾನಿಗಳಿಂದ ಜೊತೆ ಸೆಲ್ಫೀ ತೆಗೆದುಕೊಳ್ಳುವ ಪ್ರಯತ್ನ
ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಡಾಲಿ-ಧನ್ಯತಾ ಮದುವೆಗೆ ಪರೋಕ್ಷ ಕಾರಣ ಸತೀಶ್ ನೀನಾಸಂ, ಗೆಳೆಯನ ಹಾರೈಕೆ ಹೀಗಿತ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
ಜಯಲಲಿತಾಗೆ ಸೇರಿದ 1526 ಎಕರೆ ಜಮೀನನ್ನೂ ವಶಪಡಿಸಿಕೊಳ್ಳಲಾಗಿದೆ: ಎಸ್​ಪಿಪಿ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
LIVE: ಡಾಲಿ ಧನಂಜಯ್-ಧನ್ಯತಾ ವಿವಾಹ ಆರತಕ್ಷತೆ: ನೇರ ಪ್ರಸಾರ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಮದುವೆ ಆರತಕ್ಷತೆ ಸೆಟ್​ ಕಲಾ ನಿರ್ದೇಶಕ ಅರುಣ್ ಸಾಗರ್ ವಿನ್ಯಾಸಗೊಳಿಸಿದ್ದಾರೆ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಸುದ್ದಿಗೋಷ್ಠಿಯಲ್ಲೂ ರಾಜ್ಯದ ನೀರಿನ ಬವಣೆಯನ್ನು ಹೇಳಿದ ದೇವೇಗೌಡ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
ಡಾಲಿ ಧನಂಜಯ್ ಮದುವೆ; ವಿಐಪಿ ಊಟದ ಮೆನುವಿನಲ್ಲಿ ಏನೇನಿರಲಿದೆ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
2007ರಿಂದ ಮೊದಲ ಬಾರಿ ಲಾಭ ಗಳಿಸಿದ ಬಿಎಸ್​ಎನ್​ಎಲ್;ಜ್ಯೋತಿರಾದಿತ್ಯ ಸಿಂಧಿಯಾ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಬಡ್ಡಿಯಾಡಲು ಹೋಗಿ ಬಿದ್ದ ಉಪ ಸಭಾಪತಿ ರುದ್ರಪ್ಪ ಲಮಾಣಿ: ವಿಡಿಯೋ ಇಲ್ಲಿದೆ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ
ಕಾಂಗ್ರೆಸ್​ಗೆ ಸಿದ್ದರಾಮಯ್ಯ ಅನಿವಾರ್ಯ ಅಂತ ಬೇರೆ ರೀತಿ ಹೇಳಿದ ರಾಜಣ್ಣ