Navratri Kanya Puja: ನವರಾತ್ರಿಯ ಸಮಯದಲ್ಲಿ ಮಾಡಲೇಬೇಕಾದ ಪೂಜೆಯಿದು,ಜ್ಯೋತಿಷ್ಯ ಸಲಹೆ ಇಲ್ಲಿದೆ
ನವರಾತ್ರಿಯ ಸಮಯದಲ್ಲಿ ಕನ್ಯಾ ಪೂಜೆ ಮಾಡುವುದರಿಂದ ಶುಕ್ರ ಗ್ರಹ ಬಲಗೊಳ್ಳುತ್ತದೆ ಎಂದು ಜ್ಯೋತಿಷಿ ಶರ್ಮಿಷ್ಠಾ ಹೇಳುತ್ತಾರೆ. ಇದು ದಾಂಪತ್ಯ ಜೀವನ, ಸಮೃದ್ಧಿ ಮತ್ತು ಸುಖಕ್ಕೆ ಒಳ್ಳೆಯದು. ಒಂದು ವರ್ಷದಿಂದ ಹನ್ನೆರಡು ವರ್ಷದ ಕನ್ಯೆಯರನ್ನು ಪೂಜಿಸುವುದು ಇದರಲ್ಲಿ ಒಳಗೊಂಡಿದೆ. ಪೂಜೆಯಲ್ಲಿ ಅಭಯದಾನ, ಆಸನದಾನ, ಪಾದಪೂಜೆ, ಶೃಂಗಾರದಾನ ಮತ್ತು ಅನ್ನದಾನ ಮುಖ್ಯ. ಈ ಪೂಜೆಯಿಂದ ದೇವಿಯ ಆಶೀರ್ವಾದವೂ ದೊರೆಯುತ್ತದೆ.

ನವರಾತ್ರಿ ಹಿಂದೂ ಧರ್ಮದ ಒಂದು ಪ್ರಮುಖ ಹಬ್ಬವಾಗಿದೆ. ಒಂಬತ್ತು ದಿನಗಳವರೆಗೆ ನಡೆಯುವ ಈ ಪರ್ವದಲ್ಲಿ ದೇವಿ ದುರ್ಗೆಯ ಒಂಬತ್ತು ರೂಪಗಳನ್ನು ಆರಾಧಿಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ರೀತಿಯ ಅನಿಷ್ಠಾನಗಳು ಹಾಗೂ ಪೂಜೆ-ಪಾಠಗಳನ್ನು ಮಾಡಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು ಕನ್ಯಾ ಪೂಜೆ . ಇದನ್ನು ಕುಮಾರಿ ಪೂಜೆ ಎಂದೂ ಕರೆಯುತ್ತಾರೆ. ಶುಕ್ರಗ್ರಹವನ್ನು ಶಾಂತಗೊಳಿಸಲು ಮತ್ತು ಜೀವನದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲು ಈ ಪೂಜೆಯನ್ನು ಮಾಡಲಾಗುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಶರ್ಮಿಷ್ಠಾ ನೀಡಿರುವ ಮಾಹಿತಿ ಇಲ್ಲಿದೆ.
ಜ್ಯೋತಿಷಿ ಶರ್ಮಿಷ್ಠಾ ಹೇಳುವಂತೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಶುಕ್ರಗ್ರಹವನ್ನು ದಾಂಪತ್ಯ ಜೀವನ, ಪ್ರೀತಿ, ಸುಖ, ಸಮೃದ್ಧಿ ಮತ್ತು ಸೌಂದರ್ಯದ ಕಾರಕ ಎಂದು ಪರಿಗಣಿಸಲಾಗಿದೆ. ಶುಕ್ರಗ್ರಹ ದುರ್ಬಲವಾದರೆ ದಾಂಪತ್ಯ ಜೀವನದಲ್ಲಿ ಕಲಹ, ಗೃಹಸ್ಥ ಸಮಸ್ಯೆಗಳು ಮತ್ತು ಆರೋಗ್ಯದ ತೊಂದರೆಗಳು ಎದುರಾಗಬಹುದು. ಅದಕ್ಕಾಗಿ ನವರಾತ್ರಿಯ ಸಂದರ್ಭದಲ್ಲಿ ಶುಕ್ರಗ್ರಹವನ್ನು ಬಲಪಡಿಸಲು ಕನ್ಯಾ ಪೂಜೆ ಮಾಡಲಾಗುತ್ತದೆ.
ವಿಡಿಯೋ ಇಲ್ಲಿದೆ ನೋಡಿ:
ಕನ್ಯಾ ಪೂಜೆಯಲ್ಲಿ ಒಂದು ವರ್ಷದಿಂದ ಹನ್ನೆರಡು ವರ್ಷ ವಯಸ್ಸಿನ ಕನ್ಯೆಯರನ್ನು ಪೂಜಿಸಲಾಗುತ್ತದೆ. ಇವರನ್ನು ದೇವಿಯ ಸ್ವರೂಪವೆಂದು ಪರಿಗಣಿಸಲಾಗುತ್ತದೆ. ಪೂಜೆಯ ವಿಧಾನದಲ್ಲಿ ಹಂತಗಳು ಇವೆ:
- ಅಭಯದಾನ: ಕನ್ಯೆಯರಿಗೆ ಆರಾಮದಾಯಕ ಹಾಗೂ ಸುರಕ್ಷಿತ ವಾತಾವರಣ ಒದಗಿಸುವುದು.
- ಆಸನದಾನ: ಕನ್ಯೆಯರನ್ನು ಸ್ವಚ್ಛ ಮತ್ತು ಸುಂದರ ಆಸನದಲ್ಲಿ ಕೂರಿಸುವುದು. ಪ್ರಾಚೀನ ಕಾಲದಲ್ಲಿ, ರಾಜರು “ಆಸನ್ ದಾನ್” ಎಂದು ಭೂಮಿಯನ್ನು ದಾನ ಮಾಡುತ್ತಿದ್ದರು. ಇಂದು, ಅವರನ್ನು ಗೌರವದಿಂದ ಕೂರಿಸುವುದು ಮತ್ತು ದೈವಿಕ ಅತಿಥಿಗಳಂತೆ ನಡೆಸಿಕೊಳ್ಳುವುದು ಸಾಂಕೇತಿಕ ಸೂಚಕವಾಗಿದೆ.
- ಪಾದ ಪೂಜೆ: ಪೂಜ್ಯಭಾವನೆಯ ಸಂಕೇತವಾಗಿ ಕನ್ಯೆಯರ ಕೈಕಾಲುಗಳನ್ನು ಶುದ್ಧ ನೀರಿನಿಂದ ನಿಧಾನವಾಗಿ ತೊಳೆಯುವುದು.
- ಶೃಂಗಾರದಾನ: ನವರಾತ್ರಿಯ ಸಮಯದಲ್ಲಿ, ನೀವು ದೇವಾಲಯಗಳಿಗೆ ಭೇಟಿ ನೀಡಿ ದೇವಿಗೆ ಸೀರೆ, ಆಭರಣಗಳನ್ನು ಅರ್ಪಿಸಬಹುದು. ನಂತರ ಅದೇ ಆಶೀರ್ವಾದ ವಸ್ತುಗಳನ್ನು ಕನ್ಯಾ ಪೂಜೆಯ ಸಮಯದಲ್ಲಿ ಯುವತಿಯರಿಗೆ ಅರ್ಪಿಸಬಹುದು. ಬಳೆಗಳು, ಬಿಂದಿಗಳು,ವರ್ಣರಂಜಿತ ಸ್ಕಾರ್ಫ್‌ಗಳಂತಹ ಸರಳ ಉಡುಗೊರೆಗಳನ್ನು ನೀಡಬಹುದು. ಹಣಕಾಸಿನ ಮೌಲ್ಯಕ್ಕಿಂತ ಉದ್ದೇಶವು ಮುಖ್ಯವಾಗಿದೆ.
- ಅನ್ನದಾನ: ಕನ್ಯೆಯರಿಗೆ ಸ್ವಹಸ್ತದಿಂದ ತಯಾರಿಸಿದ ಸಾತ್ವಿಕ ಆಹಾರವನ್ನು ನೀಡುವುದು.
ಇದನ್ನೂ ಓದಿ: ಸೆ. 7 ರಾಹುಗ್ರಸ್ತ ಚಂದ್ರಗ್ರಹಣ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?
ಕನ್ಯಾ ಪೂಜೆಯನ್ನು ಸಾಮಾನ್ಯವಾಗಿ ಅಷ್ಟಮಿ ಅಥವಾ ನವಮಿ ತಿಥಿಯಲ್ಲಿ ಮಾಡಲಾಗುತ್ತದೆ. ಒಂಬತ್ತು ಕನ್ಯೆಯರ ಪೂಜೆ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಆದರೆ ಒಂಬತ್ತು ಕನ್ಯೆಯರನ್ನು ಕರೆಯಲು ಸಾಧ್ಯವಾಗದಿದ್ದರೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಕಡಿಮೆ ಕನ್ಯೆಯರಿಗೂ ಪೂಜೆ ಮಾಡಬಹುದು. ಪೂಜೆಯ ಸಮಯದಲ್ಲಿ ಕನ್ಯೆಯರನ್ನು ಗೌರವಿಸುವುದು ಮತ್ತು ಅವರನ್ನು ಸಂತೋಷಪಡಿಸುವುದು ಬಹಳ ಮುಖ್ಯ.
ಕನ್ಯಾ ಪೂಜೆಯಿಂದ ಶುಕ್ರಗ್ರಹ ಪ್ರಸನ್ನಗೊಳ್ಳುವುದರ ಜೊತೆಗೆ ದೇವಿಯ ಆಶೀರ್ವಾದವೂ ದೊರೆಯುತ್ತದೆ. ಈ ಪೂಜೆಯಿಂದ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಸೌಹಾರ್ದ ಬರುತ್ತವೆ. ನವರಾತ್ರಿಯಲ್ಲಿ ಈ ಪೂಜೆಯನ್ನು ಮಾಡಿದರೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ ಎಂದು ಜ್ಯೋತಿಷಿ ಹೇಳುತ್ತಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




