Navratri: ದುರ್ಗಾದೇವಿಯ ಈ ಮಂತ್ರಗಳನ್ನು ಪಠಿಸಿದರೆ ನಿಮ್ಮ ಬಾಳಲ್ಲಿ ಭಾರಿ ಬದಲಾವಣೆಯಾಗುತ್ತೆ

| Updated By: shruti hegde

Updated on: Oct 07, 2021 | 8:21 AM

ಈ ವರ್ಷ ನವರಾತ್ರಿ ಹಬ್ಬ ಅಕ್ಟೋಬರ್ 07ರಿಂದ ಆರಂಭವಾಗಲಿದೆ. ಹೀಗಾಗಿ ನಾವು ದುರ್ಗಾ ದೇವಿಯ ಕೆಲವು ಶಕ್ತಿಯುತ ಮಂತ್ರಗಳನ್ನು ಇಲ್ಲಿ ಕೊಟ್ಟಿದ್ದೇವೆ, ಈ ಪವಿತ್ರ ಸ್ತೋತ್ರಗಳನ್ನು ಪಠಿಸುವ ಮೂಲಕ ನೀವು ದುರ್ಗಾ ದೇವಿಯ ಆಶೀರ್ವಾದಕ್ಕೆ ಪಾತ್ರರಾಗುವಿರಿ. ಈ ಶಕ್ತಿ ಮಾತೆ ನಿಮಗೆ ಸಮೃದ್ಧಿ ನೀಡಲಿ.

Navratri: ದುರ್ಗಾದೇವಿಯ ಈ ಮಂತ್ರಗಳನ್ನು ಪಠಿಸಿದರೆ ನಿಮ್ಮ ಬಾಳಲ್ಲಿ ಭಾರಿ ಬದಲಾವಣೆಯಾಗುತ್ತೆ
ದುರ್ಗಾದೇವಿ
Follow us on

ದುರ್ಗಾದೇವಿಯ ಭಕ್ತರಿಗೆ ನವರಾತ್ರಿಯು ಬಹಳ ಮಹತ್ವದ್ದಾಗಿದೆ ಏಕೆಂದರೆ ಇದು ಮಹಿಷಾಸುರನೆಂಬ ರಾಕ್ಷಸನ ಮೇಲೆ ಆಕೆಯ ವಿಜಯವನ್ನು ಸಾಧಿಸಿದ ದಿನ. ಅದಕ್ಕಾಗಿಯೇ ಆಕೆಯನ್ನು ಮಹಿಷಾಸುರಮರ್ದಿನಿ ಎಂದು ಕರೆಯಲಾಗುತ್ತೆ. ಆದ್ದರಿಂದ, ನವರಾತ್ರಿಯು ಕೆಟ್ಟದ್ದರ ವಿರುದ್ಧ ಒಳ್ಳೆಯದ ವಿಜಯವನ್ನು ಸೂಚಿಸುತ್ತದೆ. ಈ ಒಂಬತ್ತು ದಿನಗಳಲ್ಲಿ, ದುರ್ಗಾ ದೇವಿಯು ಬ್ರಹ್ಮ, ವಿಷ್ಣು ಮತ್ತು ಶಿವನ ಶಕ್ತಿಯನ್ನು ಹೊಂದಿರುತ್ತಾಳೆ ಎಂದು ನಂಬಲಾಗಿದೆ, ಈ ಶಕ್ತಿಗಳ ಮೂಲಕ ಕೊನೆಗೆ 10ನೇ ದಿನ ಮಹಿಷಾಸುರನೆಂಬ ರಾಕ್ಷಸ ವಿರುದ್ಧ ಹೋರಾಡಿ ರಾಕ್ಷಸನನ್ನು ಸೋಲಿಸಿದಳು.

ಈ ವರ್ಷ ನವರಾತ್ರಿ ಹಬ್ಬ ಅಕ್ಟೋಬರ್ 07ರಿಂದ ಆರಂಭವಾಗಲಿದೆ. ಹೀಗಾಗಿ ನಾವು ದುರ್ಗಾ ದೇವಿಯ ಕೆಲವು ಶಕ್ತಿಯುತ ಮಂತ್ರಗಳನ್ನು ಇಲ್ಲಿ ಕೊಟ್ಟಿದ್ದೇವೆ, ಈ ಪವಿತ್ರ ಸ್ತೋತ್ರಗಳನ್ನು ಪಠಿಸುವ ಮೂಲಕ ನೀವು ದುರ್ಗಾ ದೇವಿಯ ಆಶೀರ್ವಾದಕ್ಕೆ ಪಾತ್ರರಾಗುವಿರಿ. ಈ ಶಕ್ತಿ ಮಾತೆ ನಿಮಗೆ ಸಮೃದ್ಧಿ ನೀಡಲಿ.

ದುರ್ಗಾ ಮಂತ್ರಗಳು
ಸರ್ವ ಮಂಗಳ ಮಾಂಗಲ್ಯೇ, ಶಿವೇ ಸರ್ವಾರ್ಥ ಸಾಧಿಕೇ|
ಶರಣ್ಯೇ ತ್ರಯಂಬಕೇ ಗೌರೀ, ನಾರಾಯಣಿ ನಮೋಸ್ತುತೇ||

ಸಿದ್ಧ ದುರ್ಗಾ ಮಂತ್ರ / ಭಯ ನಾಶ ಮಂತ್ರ
ಸರ್ವ ಸ್ವರೂಪೇ ಸರ್ವೇಷೇ, ಸರ್ವ ಶಕ್ತಿ ಸಮನ್ವಿತೇ|
ಭಯೇ ಭ್ಯಾಸ್ತ್ರಾಹಿ ನೋ ದೇವಿ, ದುರ್ಗೇ ದೇವಿ ನಮೋಸ್ತುತೇ||

ಸರ್ವ ಬದ್ಧ ಮುಕ್ತಿ ಮಂತ್ರ
ಸರ್ವ ಬಾಧವಿನಿರ್ಮುಕ್ತೋ ಧನ್ ಧನ್ಯ ಸುತನ್ವಿತಾಃ|
ಮನುಷ್ಯೋ ಮತ್ಪ್ರಸಾದೇನ್ ಭವಿಷ್ಯತಿನ ಸಂಶಯಮ್||

ಯಾ ದೇವಿ ಸರ್ವ ಭೂತೇಷು ಮಂತ್ರ
ಯಾ ದೇವಿ ಸರ್ವ ಭೂತೇಷು ಶಕ್ತಿ ರೂಪೇಣ ಸಂಸ್ಥಿತಾಃ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||

ನವಾರ್ಣ ಮಂತ್ರ
ಓಂ ಏಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೈ

ಇದನ್ನೂ ಓದಿ: Navratri 2021: ನವರಾತ್ರಿಯ ಮಹತ್ವವೇನು? ದುರ್ಗಾದೇವಿಗೆ ಅರ್ಪಿತವಾದ ಈ ಹಬ್ಬವನ್ನು ಏಕೆ ಆಚರಿಸಲಾಗುತ್ತೆ?