Mysore Dasara: ಬೆಂಗಳೂರನ್ನು ರಾಜಧಾನಿಯಾಗಿಸಿದ್ದು ಮಾರ್ಕ್ ಕಬ್ಬನ್, ಬೆಂಗಳೂರು ಅರಮನೆಗೆ ಹೊಂದಿಕೊಂಡಂತೆ ಆಗಿನ ಒಂದು ಆಂಗ್ಲ ಪ್ರೇಮಕತೆ ಇಲ್ಲಿದೆ!

| Updated By: Digi Tech Desk

Updated on: Oct 13, 2023 | 12:47 PM

ಬೆಂಗಳೂರಿನಲ್ಲಿಯೂ ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರು ಮತ್ತು ಬೆಂಗಳೂರು ಅರಮನೆಗೆ ಐತಿಹಾಸಿಕ ಸಂಪರ್ಕ ಕೊಂಡಿ ಇದೆ. ಬೆಂಗಳೂರಿನ ಕಮಿಷನರ್ ಆಗಿದ್ದ ಸರ್ ಮಾರ್ಕ್ ಕಬ್ಬನ್ ಅವರು ಮೊದಲು ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿದರು. ಬೆಂಗಳೂರು ಅರಮನೆ ಅಸ್ತಿತ್ವಕ್ಕೆ ಬಂದಿದ್ದು ಹೇಗೆ? ಅದರ ನಿರ್ಮಾಣಕ್ಕೆ ಜಾಗ ಮಾರಿದ ರೆವರೆಂಡ್​ ಜಾನ್ ಗ್ಯಾರೆಟ್‌ ಯಾರು, ಅವರ ಪುತ್ರ ಅಂದೊಂದು ಪ್ರೇಮಪಾಷದಲ್ಲಿ ಸಿಲಕಿದ್ದು ಹೇಗೆ!?

Mysore Dasara: ಬೆಂಗಳೂರನ್ನು ರಾಜಧಾನಿಯಾಗಿಸಿದ್ದು ಮಾರ್ಕ್ ಕಬ್ಬನ್, ಬೆಂಗಳೂರು ಅರಮನೆಗೆ ಹೊಂದಿಕೊಂಡಂತೆ ಆಗಿನ ಒಂದು ಆಂಗ್ಲ ಪ್ರೇಮಕತೆ ಇಲ್ಲಿದೆ!
ಬೆಂಗಳೂರು ಅರಮನೆಗೆ ಹೊಂದಿಕೊಂಡಂತೆ ಆಗಿನ ಒಂದು ಆಂಗ್ಲ ಪ್ರೇಮಕತೆ ಇಲ್ಲಿದೆ!
Follow us on

ಬೆಂಗಳೂರಿನಲ್ಲಿಯೂ ದಸರಾ ಸಂಭ್ರಮ ಮನೆ ಮಾಡಿದೆ. ಮೈಸೂರು ಮತ್ತು ಬೆಂಗಳೂರು ಅರಮನೆಗೆ ಐತಿಹಾಸಿಕ ಸಂಪರ್ಕ ಕೊಂಡಿ ಇದೆ. ದಸರಾ ಬಹುತೇಕ (Mysuru Dasara) ನಮ್ಮ ಮನೆ ಮನದ ಅಂಗಳದಲ್ಲಿ ಹೆಜ್ಜೆಯಿಟ್ಟಿದೆ. ಪ್ರತಿ ವರ್ಷದ ನಾಡಹಬ್ಬ ಆಗಮನದೊಂದಿಗೆ ಪರಿಚಿತ ಸಂಭ್ರಮ ಎಲ್ಲೆಡೆ ಕಾಣುತ್ತಿದೆ. ವಿಜಯದಶಮಿ ದಿನ ಮೈಸೂರಿನಲ್ಲಿ ನಡೆಯುವ ಜಂಬೂ ಸವಾರಿಯನ್ನು ಸಮೀಪದಿಂದ ವೀಕ್ಷಿಸುವುದಕ್ಕಾಗಿ ಪ್ರತಿ ವರ್ಷ ‘ಚಿನ್ನದ ಪಾಸ್’ ಪಡೆಯಲು ದಸರಾ ಪ್ರಿಯರು ಸದಾ ಹಾತೊರೆಯುತ್ತಾರೆ. ಮೈಸೂರಿನ ಔಪಚಾರಿಕ ಮಹಾರಾಜರಾದ ಯದುವೀರ್ ಒಡೆಯರ್ ಅವರು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸುವುದರ ಮೂಲಕ ಕರ್ನಾಟಕದ ಹಿಂದಿನ ರಾಜಧಾನಿಯ ಆಡಂಬರ ಮತ್ತು ಗತವೈಭವ ಕಣ್ಣಿಗೆ ಕಟ್ಟುತ್ತದೆ.

ಇನ್ನು ವಾಪಸ್​​ ಬೆಂಗಳೂರಿಗೆ ಬರುವುದಾದರೆ… ಇಲ್ಲಿ 1834 ರಿಂದ 1861 ರವರೆಗೆ ಬೆಂಗಳೂರಿನ ಕಮಿಷನರ್ ಆಗಿ ಸೇವೆ ಸಲ್ಲಿಸಿದ ಅತ್ಯಂತ ಪ್ರೀತಿಯ ಸರ್ ಮಾರ್ಕ್ ಕಬ್ಬನ್ ಅವರು ಮೊದಲು ರಾಜಧಾನಿಯನ್ನು ಮೈಸೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿದರು. ಇದರೊಂದಿಗೆ ಎರಡು ಪ್ರತ್ಯೇಕ ಘಟಕಗಳನ್ನು ರಚಿಸಿದರು – ಒಂದು, ರಾಜಮನೆತನದ ರಾಜಧಾನಿ ಮತ್ತೊಂದು, ಆಡಳಿತಾತ್ಮಕ ರಾಜಧಾನಿ. ಇದು 1831 ರಿಂದ 1881 ರವರೆಗಿನ 50 ವರ್ಷಗಳ ಅವಧಿಯಲ್ಲಿ ಮೈಸೂರು ಬ್ರಿಟಿಷರಿಂದ ನೇರವಾಗಿ ಆಡಳಿತ ನಡೆಸಲ್ಪಟ್ಟಿತು. 1881 ಸಮಯದಲ್ಲಿ, ಮೈಸೂರು ಒಡೆಯರುಗಳ ಆಳ್ವಿಕೆಗೆ ಹಿಂದಿರುಗಿದಾಗ ಮತ್ತು 18 ವರ್ಷದ ಚಾಮರಾಜೇಂದ್ರ 10ನೇ ರಾಜಪಟ್ಟ ಅಲಂಕರಿಸಿದಾಗ, ರಾಜಮನೆತನದವರೂ ನಿರಾಕರಿಸಲಾಗದ ರಾಜಧಾನಿ ನಗರವಾಗಿ ಬೆಂಗಳೂರು ತನ್ನನ್ನು ತಾನು ಸ್ಥಾಪಿಸಿಕೊಂಡಿತು.

ಬೆಂಗಳೂರು ಅರಮನೆ ನಿರ್ಮಾಣಕ್ಕೆ ಜಾಗ ಮಾರಿದ ರೆವರೆಂಡ್​ ಜಾನ್ ಗ್ಯಾರೆಟ್‌ ಯಾರು, ಅವರ ಪುತ್ರ ಅಂದೊಂದು ಪ್ರೇಮಪಾಷದಲ್ಲಿ ಸಿಲಕಿದ್ದು ಹೇಗೆ!?

ವಾಸ್ತವವಾಗಿ, ವಿಕ್ಟೋರಿಯಾ ರಾಣಿ 1866 ರಲ್ಲಿ ಚಾಮರಾಜೇಂದ್ರರನ್ನು ಮೈಸೂರಿನ ಮುಂದಿನ ರಾಜನನ್ನಾಗಿ ಅನುಮೋದಿಸಿದ ನಂತರ, ಅಂದಿನ ಬ್ರಿಟಿಷ್ ಪಾಲಕರು ತಕ್ಷಣವೇ ಬೆಂಗಳೂರಿನಲ್ಲಿ ಒಂದು ಸ್ಥಳವನ್ನು ಹುಡುಕಲು ಪ್ರಾರಂಭಿಸಿದರು. ಅದು ಆ ರಾಜ ಹುಡುಗ ಭೇಟಿ ನೀಡಿದಾಗ, ಬ್ರಿಟಿಷ್ ಬೋಧಕರೊಂದಿಗೆ ಅವರ ಪಾಠಕ್ಕಾಗಿ ರಾಜಮನೆತನದ ನಿವಾಸವಾಗಿ ಕಾರ್ಯನಿರ್ವಹಿಸುವುದಕ್ಕಾಗಿ ಸ್ಥಾಪಿಸಲ್ಪಟ್ಟಿತು. 1873 ರಲ್ಲಿ ಅವರು ರೆವರೆಂಡ್​ ಜಾನ್ ಗ್ಯಾರೆಟ್‌ಗೆ ಸೇರಿದ 454-ಎಕರೆ ಭೂಮಿಯನ್ನು ಗುರುತಿಸಿದರು. ಮರು ವರ್ಷವೇ ಅಲ್ಲಿ ನಿರ್ಮಾಣ ಪ್ರಾರಂಭವಾಯಿತು, ಮತ್ತು 1878 ರ ಹೊತ್ತಿಗೆ ಬಹುಮಟ್ಟಿಗೆ ಜಾರ್ಜಿಯನ್ ಮತ್ತು ವಿಕ್ಟೋರಿಯನ್ ಶೈಲಿಯಲ್ಲಿ ನಿರ್ಮಿಸಲಾದ ಭವ್ಯವಾದ ಬೆಂಗಳೂರು ಅರಮನೆಯು ವಾಸಕ್ಕೆ ಸಿದ್ಧವಾಯಿತು. ಅಲ್ಲಿಗೆ ಅದು ಕಿರಿಯ ರಾಜ ಚಾಮರಾಜೇಂದ್ರ ಬೆಂಗಳೂರಿನ ವಾಸಕ್ಕೆ ಅವರ ಖಾಸಗಿ ಮನೆಯಾಗಿ ಪರಿವರ್ತನೆಯಾಯಿತು ಎಂದು hindustantimes ವರದಿ ಮಾಡಿದೆ.

ಹಾಗಾದರೆ ಈ ರೆವ್ ಜಾನ್ ಗ್ಯಾರೆಟ್ ಯಾರು? ಆತ ತನ್ನ ಭೂಮಿಯನ್ನು ಮಹಾರಾಜರಿಗೆ ಮಾರಿದಾಗ, ಗ್ಯಾರೆಟ್ ಆಗಲೇ ಹಳೆಯ ಬೆಂಗಳೂರಿಗನಾಗಿದ್ದ. 33 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದ. 1840 ರಲ್ಲಿ ವೆಸ್ಲಿಯನ್ ಮಿಷನ್‌ನಲ್ಲಿ ಕೆನರೀಸ್ ಮಿಷನರಿಯಾಗಿ ಸೇವೆ ಸಲ್ಲಿಸಲು ಆಗಮಿಸಿದರು. ಅವರು ಬೆಂಗಳೂರು ಪೇಟೆಯಲ್ಲಿ ಮೊದಲ ಕನ್ನಡ ಮುದ್ರಣಾಲಯವನ್ನು ಸ್ಥಾಪಿಸಬೇಕಾಯಿತು. ಗ್ಯಾರೆಟ್‌ಗೆ ಭಾಷೆಯ ಬಗ್ಗೆ ಉತ್ತಮವಾದ ಆಸಕ್ತಿ ಇತ್ತು. ಅವರು ರಾಪಿಡ್​ ಆಗಿ ಕನ್ನಡವನ್ನು ಮಾತ್ರವಲ್ಲದೆ ಸಂಸ್ಕೃತ, ತಮಿಳು ಮತ್ತು ಪರ್ಷಿಯನ್ ಭಾಷೆಗಳನ್ನು ಕರಗತ ಮಾಡಿಕೊಂಡರು. 1849 ರಲ್ಲಿಯೇ, ಅವರು ಸರ್ ಮಾರ್ಕ್ ಕಬ್ಬನ್ ಅವರಿಂದ ನಿಯೋಜಿಸಲ್ಪಟ್ಟ ಭಗವದ್ಗೀತೆಯ ಮೊಟ್ಟಮೊದಲ ಕನ್ನಡ ಆವೃತ್ತಿಯನ್ನು ಅನುವಾದಿಸಿ ಪ್ರಕಟಿಸಿದರು. ಇದು ಏಷಿಯಾಟಿಕ್ ಸೊಸೈಟಿಯ ಸ್ಥಾಪಕ ಸದಸ್ಯರಾದ ಇಂಗ್ಲಿಷ್ ಪ್ರಾಚ್ಯವಸ್ತು ಮತ್ತು ಮುದ್ರಣಕಾರ ಚಾರ್ಲ್ಸ್ ವಿಲ್ಕಿನ್ಸ್ ಅವರ ಪಠ್ಯದ ಮೊದಲ ಇಂಗ್ಲಿಷ್ ಅನುವಾದವನ್ನು ಆಧರಿಸಿದೆ – ‘ದಿ ಭಗವತ್ ಗೀತಾ, ಅಥವಾ ಡೈಲಾಗ್ಸ್ ಆಫ್ ಕೃಷ್ಣ ಅಂಡ್​ ಅರ್ಜುನ್’ (1785).

ಒಳ್ಳೆಯ ರೆವರೆಂಡ್ ಆಗಿದ್ದ ಗ್ಯಾರೆಟ್ ಅವರು ಕನ್ನಡ ಬೋಧನೆಯನ್ನೂ ಆನಂದಿಸಿದರು. 1858 ರಲ್ಲಿ, ಅವರು ಬೆಂಗಳೂರು ಪೇಟೆಯ ಶೆಡ್‌ನಲ್ಲಿ ಬೆಂಗಳೂರು ಹೈಸ್ಕೂಲ್ ಎಂದು ಕರೆಯಲ್ಪಡುವ ಆಂಗ್ಲೋ-ಕನ್ನಡ ಶಾಲೆಯನ್ನು ಪ್ರಾರಂಭಿಸಿದರು. ಅದರ ಮೊದಲ ಪ್ರಾಂಶುಪಾಲರೂ ಅವರೇ ಆಗಿದ್ದರು. ಆ ಪುಟ್ಟ ಶಾಲೆಯು ನಗರದ ಶ್ರೇಷ್ಠ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸೆಂಟ್ರಲ್ ಕಾಲೇಜು ಆಗಿ ಬೆಳೆಯುತ್ತದೆ.

ಬೆಂಗಳೂರು ಹೈಸ್ಕೂಲ್‌ನ ಎರಡನೇ ಪ್ರಾಂಶುಪಾಲರು 23 ವರ್ಷದ ಬೆಂಜಮಿನ್ ಲೂಯಿಸ್ (BL) ರೈಸ್, ಅವರು ರೆವರೆಂಡ್ ಗ್ಯಾರೆಟ್‌ ಅವರ ಮಗಳು ಮೇರಿ ಸೋಫಿಯಾಳನ್ನು ಓಲೈಸಿ ಮದುವೆಯಾದರು. BL ರೈಸ್ ಸ್ವತಃ ಸಾವಿರಾರು ಪ್ರಾಚೀನ ಕನ್ನಡ ಶಾಸನಗಳನ್ನು ಸಂಶೋಧನೆ ಮತ್ತು ಅನುವಾದಿಸಿದರು. ಕನ್ನಡ ಎಪಿಗ್ರಫಿಯ ಪಿತಾಮಹ ಮತ್ತು ಮೈಸೂರಿನ ಮೊದಲ ಪುರಾತತ್ವಶಾಸ್ತ್ರಜ್ಞ ಎಂದು ಅವರನ್ನು ಶ್ಲಾಘಿಸಲಾಗಿದೆ. ಪ್ರಾಸಂಗಿಕವಾಗಿ, ಬಿಎಲ್ ರೈಸ್ ಅವರು ಲಂಡನ್ ಮಿಷನರಿ ಸೊಸೈಟಿ ಎಂದು ಕರೆಯಲ್ಪಡುವ ಗ್ಯಾರೆಟ್‌ ಅವರ ಪ್ರತಿಸ್ಪರ್ಧಿ ಮಿಷನ್‌ನಲ್ಲಿ ಸೇವೆ ಸಲ್ಲಿಸಿದ ರೆವ್ ರೈಸ್ ಅವರ ಮಗ. ಬೆಂಗಳೂರು ಪೇಟೆಯ ಹೃದಯಭಾಗದಲ್ಲಿ ಆಗಲೇ ಪ್ರೇಮಕತೆಯೊಂದು ಹೀಗೆ ರೂಪತಾಳಿತ್ತು!

ಮೈಸೂರು ದಸರಾ ಕುರಿತಾದ ವಿಶೇಷ ಲೇಖನಗಳನ್ನು ಓದಲು – Click Here

Published On - 12:56 pm, Wed, 11 October 23