Mysore Dasara: ಯುವದಸರಾ ಕಾರ್ಯಕ್ರಮದಲ್ಲಿ ಸಂಜಿತ್ ಹೆಗ್ಡೆ ಹಾಡುಗಾರಿಕೆಗೆ ಪ್ರೇಕ್ಷಕರು ಮಂತ್ರಮುಗ್ಧ!
Mysore Dasara: ಯುವದಸರಾ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ ಮತ್ತು ಇದು ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಡುಗಾರಿಕೆ, ನೃತ್ಯ, ನಾಟಕ ಮತ್ತು ಜಾನಪದ ಕಲೆಗಳಲ್ಲಿ ತಮ್ಮ ಪ್ರತಿಭೆ ಶೋಕೇಸ್ ಮಾಡುವ ಅವಕಾಶ ಕಲ್ಪಿಸುವ ವೇದಿಕೆಯಾಗಿದೆ. ಸಂಜಿತ್ ಹೆಗ್ಡೆ ಅವರಂಥ ಸೆಲಿಬ್ರಿಟಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದಯೋನ್ಮುಖ ಪ್ರತಿಭೆಗಳಿಗೆ ಉತ್ತೇಜನ ನೀಡಿ ಅವರ ಹುಮ್ಮಸ್ಸು ಹೆಚ್ಚಿಸುತ್ತಾರೆ.
ಮೈಸೂರು: ಸಿನಿಮಾ ಹಿನ್ನೆಲೆಗಾಯನಕ್ಕೆ ಸಂಬಂಧಿಸಿದಂತೆ ಹೇಳೋದಾದರೆ, ಕೇವಲ ಕರ್ನಾಟಕ, ದಕ್ಷಿಣ ಭಾರತ ಮಾತ್ರವಲ್ಲ, ದೇಶದ ಎಲ್ಲ ಭಾಗಗಳಲ್ಲಿ ಹೆಮ್ಮೆಯ ಕನ್ನಡಿಗ ಸಂಜಿತ್ ಹೆಗ್ಡೆ (Sanjith Hegde) ದೊಡ್ಡ ಹೆಸರು. ದಕ್ಷಿಣ ಭಾರತದ (South India) ಎಲ್ಲ ಭಾಷೆಗಳ ಚಿತ್ರಗಳಲ್ಲದೆ ಬಾಲಿವುಡ್ ಸಿನಿಮಾ ಹಾಡುಗಳನ್ನೂ ಹೆಗ್ಡೆ ಹಾಡಿದ್ದಾರೆ. ನಿನ್ನೆ ಸಾಯಂಕಾಲ, ಸಂಜಿತ್ ಹೆಗ್ಡೆ ಮೈಸೂರಲ್ಲಿ ದಸರಾ ಉತ್ವವದ ಅಂಗವಾಗಿ ನಡೆಯುತ್ತಿರುವ ಯುವದಸರಾದಲ್ಲಿ (Yuva Dasara) ಕಾರ್ಯಕ್ರಮದಲ್ಲಿ ಶಾಕುಂತ್ಲೆ ಸುಂಸಮ್ನೆ ಶಾಕಾಯ್ತು,..ದುಷ್ಯಂತ.. ಮನಸೇ ನೀ ಹಾಡು ಹೇಳಿ ನೆರೆದಿದ್ದ ಸಾವಿರಾರು ಪ್ರೇಕ್ಷಕರನ್ನು ರಂಜಿಸಿದರು. ಯುವದಸರಾ ಕಾರ್ಯಕ್ರಮವನ್ನು ಪ್ರತಿವರ್ಷ ಆಯೋಜಿಸಲಾಗುತ್ತದೆ ಮತ್ತು ಇದು ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಹಾಡುಗಾರಿಕೆ, ನೃತ್ಯ, ನಾಟಕ ಮತ್ತು ಜಾನಪದ ಕಲೆಗಳಲ್ಲಿ ತಮ್ಮ ಪ್ರತಿಭೆ ಶೋಕೇಸ್ ಮಾಡುವ ಅವಕಾಶ ಕಲ್ಪಿಸುವ ವೇದಿಕೆಯಾಗಿದೆ. ಸಂಜಿತ್ ಹೆಗ್ಡೆ ಅವರಂಥ ಸೆಲಿಬ್ರಿಟಿಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಉದಯೋನ್ಮುಖ ಪ್ರತಿಭೆಗಳಿಗೆ ಉತ್ತೇಜನ ನೀಡಿ ಅವರ ಹುಮ್ಮಸ್ಸು ಹೆಚ್ಚಿಸುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಮೈಸೂರು ದಸರಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ