Mahashivratri: 10 ನಿಮಿಷದಲ್ಲಿ 11.71 ಲಕ್ಷ ದೀಪಗಳನ್ನು ಬೆಳಗಿಸಿ ಗಿನ್ನಿಸ್ ದಾಖಲೆ ಬರೆದ ಉಜ್ಜಯಿನಿ

| Updated By: ಆಯೇಷಾ ಬಾನು

Updated on: Mar 02, 2022 | 6:01 PM

ಮಾರ್ಚ್ 01ರ ಮಹಾಶಿವರಾತ್ರಿ(Mahashivratri) ಹಬ್ಬದ ಪ್ರಯುಕ್ತ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ 11.71 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸುವ ಮೂಲಕ ಹೊಸ ದಾಖಲೆ ಬರೆಯಲಾಗಿದೆ. ಶಿವಜ್ಯೋತಿ ಅರ್ಪಣಂ ಮಹೋತ್ಸವದಲ್ಲಿ ದೀಪ ಬೆಳಗಿಸಿ ಗಿನ್ನಿಸ್ ವಿಶ್ವ ದಾಖಲೆ ಬರೆಯಲಾಗಿದೆ. ಗಿನ್ನಿಸ್ ವರ್ಡ್ ರೆಕಾರ್ಡ್ಸ್ ಐದು ಸದಸ್ಯರ ತಂಡ ಉಜ್ಜಯಿನಿಗೆ ಭೇಟಿ ನೀಡಿ ಮಂಗಳವಾರ ಸಂಜೆ 6:42 ಕ್ಕೆ ನಡೆದ ಅಮೋಘ ದೀಪೋತ್ಸವವನ್ನು ಕಣ್ತುಂಬಿಕೊಂಡು ದಾಖಲೆಯ ಪಟ್ಟಿಗೆ ಶಿವಜ್ಯೋತಿ ಅರ್ಪಣಂ ಮಹೋತ್ಸವವನ್ನು ಸೇರಿಸಿದ್ದಾರೆ.

1 / 7
ಕ್ಷಿಪ್ರಾ ನದಿ ಮತ್ತು ರಾಮಘಾಟ್-ದತ್ತಾಖರಾ-ಸುನ್ಹರಿ ಘಾಟ್‌ನ ದಡದಲ್ಲಿ ದೀಪಗಳನ್ನು ಸಾಲುಗಳಲ್ಲಿ ಜೋಡಿಸಿದ ನಂತರ 13 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೇವಲ 10 ನಿಮಿಷಗಳ ಅವಧಿಯಲ್ಲಿ 11 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿದ ಕ್ಷಣ.

2 / 7
ಸೈರನ್ ಕೂಗುತ್ತಿದ್ದಂತೆ 10 ನಿಮಿಷದಲ್ಲೇ 11. 71 ಲಕ್ಷ ಮಣ್ಣಿನ ಹಣತೆ ಬೆಳಗಿಸಿ ದಾಖಲೆ ನಿರ್ಮಿಸಲಾಗಿದೆ. ಈ ಶಿವರಾತ್ರಿ ಕಾರ್ಯಕ್ರಮ ಗಿನ್ನೆಸ್ ದಾಖಲೆ ಸೇರಿದ ಹಿನ್ನಲೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗಿನ್ನೆಸ್ ದಾಖಲೆಯ ಪ್ರಮಾಣಪತ್ರವನ್ನು ಸ್ವೀಕರಿಸಿದ ಕ್ಷಣ.

3 / 7
ರಾಜ್ಯ ಸಂಸ್ಕೃತಿ ಇಲಾಖೆ ಸಹಾಯದಿಂದ ದೀಪೋತ್ಸವ ನಡೆಸಲಾಗಿದೆ. ಮಹಾಕಾಳೇಶ್ವರನ ದೇವರ ಆಶೀರ್ವಾದ ಮತ್ತು ಜನರ ಭಕ್ತಿಯಿಂದ, ಈ ವಿಶಿಷ್ಟ ದಾಖಲೆಯನ್ನು ಸೃಷ್ಟಿಸಲು ಸಾಧ್ಯವಾಯಿತು. ಇದು ಒಂದು ಸೌಭಾಗ್ಯ ಎಂದು ಚೌಹಾಣ್ ತಿಳಿಸಿದ್ದಾರೆ.

4 / 7
ಶಿವಜ್ಯೋತಿ ಅರ್ಪಣಂ ಮಹೋತ್ಸವ ಕಾರ್ಯಕ್ರಮದಲ್ಲಿ 17,000 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಅಲ್ಲದೇ ಈ ಕಾರ್ಯಕ್ರಮ ಸಂಪೂರ್ಣವಾಗಿ ಪರಿಸರ ಸ್ನೇಹಿ ಮತ್ತು ಶೂನ್ಯ ತ್ಯಾಜ್ಯ ಗುರಿಯನ್ನು ಸಾಧಿಸಲು ವಿಶೇಷ ಕಾಳಜಿ ವಹಿಸಿತ್ತು.

5 / 7
ಇಡೀ ನಗರವೇ ದೀಪಗಳ ಬೆಳಕಿನಿಂದ ಕಂಗೊಳಿಸಿದ ದೃಶ್ಯ.

6 / 7
ಮಹಾಕಾಳೇಶ್ವರ ದೇವಸ್ಥಾನದಲ್ಲಿ 51,000, ಮಂಗಳನಾಥ ದೇವಸ್ಥಾನದಲ್ಲಿ 11,000, ಕಾಲಭೈರವ ದೇವಸ್ಥಾನ ಮತ್ತು ಘಾಟ್‌ನಲ್ಲಿ 10,000, ಗಡ್ಕಲಿಕಾ ದೇವಸ್ಥಾನದಲ್ಲಿ 1100, ಸಿದ್ಧವತ್ ದೇವಸ್ಥಾನ ಮತ್ತು ಘಾಟ್‌ನಲ್ಲಿ 6,000 ಮತ್ತು ಹರಸಿದ್ಧಿ ದೇವಸ್ಥಾನದಲ್ಲಿ 5,000 ದೀಪಗಳನ್ನು ಬೆಳಗಿಸಲಾಗಿದೆ.

7 / 7
2021 ರಲ್ಲಿ ಅಯೋಧ್ಯೆಯ ಸರಯೂ ನದಿಯ ದಡದಲ್ಲಿ 9.41 ಲಕ್ಷ ದೀಪಗಳನ್ನು ಬೆಳಗಿಸಿ ದಾಖಲೆ ಬರೆಯಲಾಗಿತ್ತು. ಆದರೆ, ಇದೀಗ ಉಜ್ಜಯಿನಿಯಲ್ಲಿ ದತ್ತ್ ಅಖಾರಾ, ಗುರುನಾನಕ್ ಘಾಟ್, ನರಸಿಂಗ್ ಘಾಟ್, ರಾಮಘಾಟ್ ಮತ್ತು ಸುನ್ಹಾರಿ ಘಾಟ್‌ನಲ್ಲಿ ಏಕಕಾಲದಲ್ಲಿ 11.71 ಲಕ್ಷ ಮಣ್ಣಿನ ದೀಪಗಳನ್ನು ಬೆಳಗಿಸಿ ಹಳೆ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಲಾಗಿದೆ.

Published On - 5:59 pm, Wed, 2 March 22