Pitru Paksha 2021: ಪಿತೃ ಪಕ್ಷದ ಅವಧಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದು?

| Updated By: ಆಯೇಷಾ ಬಾನು

Updated on: Sep 22, 2021 | 7:46 AM

ಪಿತೃ ಪಕ್ಷ 2021: ಪುರಾಣಗಳ ಪ್ರಕಾರ ಪಿತೃ ಪಕ್ಷದಲ್ಲಿ ವಿಧಿ-ವಿಧಾನದಿಂದ ತರ್ಪಣ ನೀಡಿದರೆ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ಸಮಯದಲ್ಲಿ ಅವರಿಗೆ ಇಷ್ಟವಾದ ಏನನ್ನು ಅರ್ಪಿಸಿದರೂ ಪೂರ್ವಜರು ಅದನ್ನು ಸ್ವೀಕರಿಸುತ್ತಾರೆ ಎಂದು ನಂಬಲಾಗಿದೆ. ಇನ್ನು ಪಿತೃ ಪಕ್ಷದ ವೇಳೆ ಯಾವುದೇ ಸಂತೋಷ ಕೊಡುವ ಶುಭ ಕಾರ್ಯಕ್ರಮಗಳನ್ನು ಮಾಡುವುದಿಲ್ಲ.

Pitru Paksha 2021: ಪಿತೃ ಪಕ್ಷದ ಅವಧಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದು?
ಸಾಂದರ್ಭಿಕ ಚಿತ್ರ
Follow us on

ಪಿತೃ ಪಕ್ಷ ಆರಂಭವಾಗಿದೆ. ಭಾದ್ರಪದ ಮಾಸದ ಹುಣ್ಣಿಮೆಯಿಂದ ಶುರುವಾಗಿ 15 ದಿನಗಳ ಕಾಲ ಪಿತೃ ಪಕ್ಷವನ್ನು ಮಾಡಲಾಗುತ್ತೆ. ಪಿತೃ ಪಕ್ಷದ ಅವಧಿಯಲ್ಲಿ ಪಿತೃ ದಾನವನ್ನು ಸ್ವೀಕರಿಸಲು ನಮ್ಮ ಪೂರ್ವಜರನ್ನು ಯಮರಾಜನು ತನ್ನ ಸೆರೆಯಿಂದ ಮುಕ್ತಗೊಳಿಸಿರುತ್ತಾನಂತೆ. ಹೀಗಾಗಿ ಪೂರ್ವಜರ ಆತ್ಮ ಶಾಂತಿಗಾಗಿ ಹಾಗೂ ಅವರಿಂದ ಆಶೀರ್ವಾದಕ್ಕಾಗಿ ಪಿತೃ ಪಕ್ಷದಲ್ಲಿ ಕೆವು ಆಚರಣೆಗಳನ್ನು ಮಾಡಿಕೊಂಡು ಬರಲಾಗುತ್ತಿದೆ.

ಪುರಾಣಗಳ ಪ್ರಕಾರ ಪಿತೃ ಪಕ್ಷದಲ್ಲಿ ವಿಧಿ-ವಿಧಾನದಿಂದ ತರ್ಪಣ ನೀಡಿದರೆ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ. ಈ ಸಮಯದಲ್ಲಿ ಅವರಿಗೆ ಇಷ್ಟವಾದ ಏನನ್ನು ಅರ್ಪಿಸಿದರೂ ಪೂರ್ವಜರು ಅದನ್ನು ಸ್ವೀಕರಿಸುತ್ತಾರೆ ಎಂದು ನಂಬಲಾಗಿದೆ. ಇನ್ನು ಪಿತೃ ಪಕ್ಷದ ವೇಳೆ ಯಾವುದೇ ಸಂತೋಷ ಕೊಡುವ ಶುಭ ಕಾರ್ಯಕ್ರಮಗಳನ್ನು ಮಾಡುವುದಿಲ್ಲ. ನಿಶ್ಚಿತಾರ್ಥ, ಮದುವೆ, ಸಮಾರಂಭಗಳು, ಗೃಹಪ್ರವೇಶ ಇತ್ಯಾದಿ ಕಾರ್ಯಗಳನ್ನು ಮಾಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಪಿತೃ ಪಕ್ಷದಲ್ಲಿ ಕೇವಲ ಮೃತ ಸಂಬಂಧಿಕರಿಗೆ ಶ್ರದ್ಧಾಂಜಲಿ ಸಲ್ಲಿಸುವುದು, ಅವರನ್ನು ಸಂತೋಷಪಡಿಸುವುದು, ಕ್ಷಮೆ ಕೇಳುವುದು ಮತ್ತು ಪಿತೃ ದೋಷ (ಪೂರ್ವಜರ ಶಾಪ) ದಿಂದ ಮುಕ್ತರಾಗುವುದಕ್ಕೆ ಮಾಡಬೇಕಾದ ಕಾರ್ಯಕ್ರಮಗಳನ್ನು ಮಾತ್ರ ಮಾಡಲಾಗುತ್ತೆ. ಹಾಗಾದ್ರೆ ಪಿತೃ ಪಕ್ಷದ ಸಮಯದಲ್ಲಿ ಏನು ಮಾಡಬೇಕು? ಏನು ಮಾಡಬಾರದು ಎಂಬುದನ್ನು ಇಲ್ಲಿ ತಿಳಿಯಿರಿ.

ಪಿತೃ ಪಕ್ಷದ ವೇಳೆ ಏನು ಮಾಡಬೇಕು?
– ಬ್ರಹ್ಮಚರ್ಯವನ್ನು ಅನುಸರಿಸಬೇಕು. ಪಿಂಡ ದಾನ, ತರ್ಪಣ ಇತ್ಯಾದಿಗಳನ್ನು ಮಾಡುತ್ತಿರುವ ವ್ಯಕ್ತಿಯು ಕೂದಲು ಮತ್ತು ಉಗುರುಗಳನ್ನು ಕತ್ತರಿಸಬಾರದು.
-ಊಟದ ಸಮಯದಲ್ಲಿ ಕೇವಲ ಒಂದು ಬಾರಿ ಮಾತ್ರ ಆಹಾರ ಸೇವಿಸಿ.
-ಅಗತ್ಯವಿರುವವರಿಗೆ, ಬಡವರಿಗೆ ಆಹಾರವನ್ನು ನೀಡಿ. ಪ್ರತಿಯೊಂದು ಜೀವಿಯನ್ನೂ ಗೌರವಿಸಬೇಕು. ಆದ್ದರಿಂದ, ಹಸುಗಳು, ನಾಯಿಗಳು, ಇರುವೆಗಳು ಮತ್ತು ಇತರ ಜೀವಿಗಳಿಗೆ ಆಹಾರವನ್ನು ಒದಗಿಸಿ.
-ಪೂರ್ವಿಕರು ನಿಮ್ಮನ್ನು ಯಾವುದೇ ರೂಪದಲ್ಲಿ ಭೇಟಿ ಮಾಡಬಹುದು. ಆದ್ದರಿಂದ ಪ್ರತಿಯೊಂದು ಜೀವಿಯನ್ನೂ ಗೌರವದಿಂದ ಮತ್ತು ಪ್ರೀತಿಯಿಂದ ನೋಡಿಕೊಳ್ಳಿ.
-ಧಾರ್ಮಿಕ ಕ್ರಿಯೆಗಳನ್ನು ಮಾಡುವಾಗ ಪುರುಷರು ಧೋತಿ ಧರಿಸಬೇಕು ಮತ್ತು ಬರಿ ಮೈಯಲ್ಲಿರಬೇಕು.
-ನಮ್ಮಲ್ಲಿ ಶಾಂತತೆ ಕಾಪಾಡಿಕೊಳ್ಳಬೇಕು. ಇದು ಪಶ್ಚಾತ್ತಾಪದ ಅವಧಿ
-ಈ ಸಮಯದಲ್ಲಿ, ನಿಮ್ಮ ಪೂರ್ವಜರಿಗೆ ಗೌರವವನ್ನು ತೋರಿಸುವ ಸರಳ ಜೀವನವನ್ನು ನಡೆಸಿ. ಯಾವುದೇ ಶುಭ ಕಾರ್ಯವನ್ನು ಮಾಡಬೇಡಿ.
-ಪಿಂಡ ದಾನ ಮಾಡಬೇಕು. ಇದು ಅಕ್ಕಿ ಮತ್ತು ಎಳ್ಳನ್ನು ಒಳಗೊಂಡಿರುತ್ತದೆ. ಇವುಗಳನ್ನು ಕಾಗೆಗಳಿಗೆ ಅರ್ಪಿಸಬೇಕು, ಏಕೆಂದರೆ ಅವುಗಳು ಯಮನ ವಾಹನ. ಅವುಗಳು ಸತ್ತ ಪೂರ್ವಜರ ಸಂದೇಶವಾಹಕರನ್ನು ಪ್ರತಿನಿಧಿಸುತ್ತವೆ.
– ಈ ಸಮಯದಲ್ಲಿ, ಬ್ರಾಹ್ಮಣರಿಗೆ ಎಲೆಯಲ್ಲಿ ಭೋಜನ ಮಾಡಿಸಿ ಮತ್ತು ನೀವೂ ಕೂಡ ಎಲೆಯಲ್ಲಿಯೇ ಭೋಜನ ತಿನ್ನಿರಿ.

ಪಿತೃ ಪಕ್ಷದ ವೇಳೆ ಏನು ಮಾಡಬಾರದು?
– ಈ ಸಮಯದಲ್ಲಿ, ಕೆಟ್ಟ ಅಭ್ಯಾಸಗಳು, ಅಮಲು ಪದಾರ್ಥಗಳು, ಪ್ರತೀಕಾರದ ಆಹಾರಗಳಿಂದ ದೂರವಿರ ಬೇಕು. ಮದ್ಯ-ಮಾಂಸಾಹಾರಿ, ಬೆಳ್ಳುಳ್ಳಿ-ಈರುಳ್ಳಿಯನ್ನು ಪಿತೃ ಪಕ್ಷದಲ್ಲಿ ಎಂದಿಗೂ ಸೇವಿಸಬಾರದು. ಸೋರೆಕಾಯಿ, ಸೌತೆಕಾಯಿ, ಸಾಸಿವೆ ಸೊಪ್ಪು ಮತ್ತು ಜೀರಿಗೆಯನ್ನು ತಿನ್ನಬಾರದು.
-ಮಾಂಸಾಹಾರಿ ಆಹಾರ ಸೇವನೆ ಮಾಡಬಾರದು.
-ಈ ಅವಧಿಯಲ್ಲಿ ಶುಭ ಕಾರ್ಯಗಳನ್ನು ಮಾಡಬಾರದು.
-ಯಾವುದೇ ಹೊಸ ವಾಹನ/ಮನೆ ಅಥವಾ ಐಷಾರಾಮಿ ವಸ್ತುಗಳನ್ನು ಖರೀದಿಸಬಾರದು.
– ಪಿತೃ ಪಕ್ಷ ಆರಂಭವಾದ ಮೇಲೆ ಕೂದಲನ್ನು ಕತ್ತರಿಸುವುದು, ಗಡ್ಡವನ್ನು ಬೋಳಿಸಿಕೊಳ್ಳುವುದು ಅಥವಾ ನಿಮ್ಮ ಉಗುರುಗಳನ್ನು ಕತ್ತರಿಸ ಬಾರದು. ಪಿತೃ ಪಕ್ಷಕ್ಕೆ ಒಂದು ದಿನ ಮೊದಲೇ ಇವುಗಳನ್ನು ಮಾಡಬೇಕು.
-ಕಬ್ಬಿಣದ ಪಾತ್ರೆಗಳನ್ನು ಅಥವಾ ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುವನ್ನು ಬಳಸಬಾರದು. ಬದಲಾಗಿ, ಬೆಳ್ಳಿ, ಹಿತ್ತಾಳೆ ಅಥವಾ ತಾಮ್ರದ ಪಾತ್ರೆಗಳನ್ನು ಬಳಸಬಹುದು.

ಇದನ್ನೂ ಓದಿ: Pitru Paksha 2021: ಪಿತೃ ಪಕ್ಷದ ವೇಳೆ ಪೂರ್ವಜರಿಗೆ ಗೌರವ ಸಲ್ಲಿಸುವುದೇಕೆ?