Sri Guru Raghavendra Swamiji: ಗುರುವಾರದಂದು ಗುರುರಾಯರ ಪೂಜೆ ಹೇಗೆ ಮಾಡಬೇಕು?

ಹಲವೆಡೆ ಗುರುವಾರದಂದು ಗುರು ರಾಯರನ್ನು ಪೂಜಿಸುತ್ತಾರೆ. ಅದರಲ್ಲೂ 6 ಗುರುವಾರಗಳು ಗುರುರಾಯರನ್ನ ಪೂಜಿಸಿ ಕೊನೆಗೆ 7ನೇ ಗುರುವಾರ ರಾಯರಿಗೆ ಅಂತಿಮ ಪೂಜೆಯನ್ನು ಮಾಡುತ್ತಾರೆ.

Sri Guru Raghavendra Swamiji: ಗುರುವಾರದಂದು ಗುರುರಾಯರ ಪೂಜೆ ಹೇಗೆ ಮಾಡಬೇಕು?
ಗುರುವಾರದಂದು ಗುರುರಾಯರ ಪೂಜೆ ಹೇಗೆ ಮಾಡಬೇಕು?
Follow us
TV9 Web
| Updated By: ಆಯೇಷಾ ಬಾನು

Updated on: Sep 23, 2021 | 7:21 AM

ಗುರುವಾರ ಬಂತಮ್ಮ ಗುರುರಾಯರ ನೆನೆಯಮ್ಮ||ಗುರುವಾರ|| ಸ್ಮರಣೆ ಮಾತ್ರದಲಿ ಕ್ಲೇಶ ಕಳೆದು ಸದ್ಗತಿಯ ಕೊಡುವನಮ್ಮ ವಾರ ಬಂತಮ್ಮ ಗುರುವಾರ ಬಂತಮ್ಮ ರಾಯರ ನೆನೆಯಮ್ಮ ಗುರುರಾಯರ ನೆನೆಯಮ್ಮ ಎಂದು ಡಾ. ರಾಜ್ ಕುಮಾರ್ ರಾಯರ ಬಗ್ಗೆ ಹಾಡಿ ಹೊಗಳಿದ್ದಾರೆ. ಗುರುರಾಯರ ಪೂಜೆಗೆ ಗುರುವಾರವೇ ಶ್ರೇಷ್ಠ ದಿನವೆಂದು ಹೇಳಲಾಗುತ್ತೆ. ಗುರುವಾರದಂದು ಭಗವಾನ್ ವಿಷ್ಣು(Lord Vishnu) ಮತ್ತು ಶ್ರೀ ಗುರು ರಾಘವೇಂದ್ರರನ್ನು(Sri Guru Raghavendra Swamiji) ಪೂಜಿಸಲಾಗುತ್ತೆ. ನಾವು ನಿಮಗೆ ಇವತ್ತು ಶ್ರೀ ಗುರು ರಾಘವೇಂದ್ರರನ್ನು ಗುರುವಾರದಂದು ಪೂಜಿಸುವುದೇಗೆ ಎಂಬ ಬಗ್ಗೆ ತಿಳಿಸಿಕೊಡುತ್ತೇವೆ.

ಹಲವೆಡೆ ಗುರುವಾರದಂದು ಗುರು ರಾಯರನ್ನು ಪೂಜಿಸುತ್ತಾರೆ. ಅದರಲ್ಲೂ 6 ಗುರುವಾರಗಳು ಗುರುರಾಯರನ್ನ ಪೂಜಿಸಿ ಕೊನೆಗೆ 7ನೇ ಗುರುವಾರ ರಾಯರಿಗೆ ಅಂತಿಮ ಪೂಜೆಯನ್ನು ಮಾಡುತ್ತಾರೆ. ಇನ್ನು ಗುರುವಾರದ ಶುಭ ದಿನದಂದು ಗುರುರಾಯರನ್ನು ಪೂಜಿಸುವುದರಿಂದ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ, ಆರೋಗ್ಯ ಲಭಿಸುತ್ತದೆ ಎಂದು ನಂಬಲಾಗಿದೆ.

ಗುರುವಾರ ಗುರುರಾಯರನ್ನು ಪೂಜಿಸುವುದು ಹೇಗೆ? ಮೊದಲಿಗೆ ಬೆಳಗ್ಗೆ ಎದ್ದು ಸ್ನಾನ ಮಾಡಿ ಪೂಜಾ ಸ್ಥಳವನ್ನು ಸ್ವಚ್ಛಗೊಳಿಸಿ ರಂಗೋಲಿ ಹಾಕಬೇಕು. ಬಳಿಕ ರಂಗೋಲಿಯ ಮೇಲೆ ಮಣೆಯನ್ನು ಅಥವಾ ಟೇಬಲ್ ಇಟ್ಟು ಅದರ ಮೇಲೆ ರಾಘವೇಂದ್ರ ಸ್ವಾಮಿಯ ಫೋಟೋ ಅಥವಾ ವಿಗ್ರಹವನ್ನಿಡಬೇಕು. ನಂತರ ಗುರುರಾಯರ ವಿಗ್ರಹವನ್ನು ಸ್ವಚ್ಛಗೊಳಿಸಿ ಶ್ರೀಗಂಧ ಮತ್ತು ಕುಂಕುಮವನ್ನು ಇಡಬೇಕು.

ರಾಯರ ವಿಗ್ರಹಕ್ಕೆ ತುಳಸಿ, ಹೂವಿನ ಹಾರವನ್ನು ಹಾಕಬೇಕು. ರಾಯರ ಪೂಜೆಯಲ್ಲಿ ತುಳಸಿ ಬಳಸುವುದು ಶ್ರೇಷ್ಠ ಎನ್ನಲಾಗುತ್ತೆ. ರಾಯರ ಪೂಜೆಗೆ ಹಣ್ಣುಗಳು, ತೆಂಗಿನಕಾಯಿ, ವೀಳ್ಯದೆಲೆ ಅರ್ಪಿಸಬೇಕು. ರಾಯರನ್ನು ಪೂಜಿಸುವ ಮೊದಲು ಗಣೇಶನನ್ನು ಪೂಜಿಸಬೇಕು. ಬಳಿಕ ರಾಯರಿಗೆ ಧೂಪ-ದೀಪ ಬೆಳಗಿ ನೈವೇದ್ಯವಿಟ್ಟು 11 ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆ ಹಾಕುತ್ತ ಈ ಮಂತ್ರವನ್ನು ಜಪಿಸಬೇಕು. “ಪೂಜ್ಯಾಯಾ ಶ್ರೀ ರಾಘವೇಂದ್ರಾಯ ಸತ್ಯಧರ್ಮ ರಥಾಯಚ ಭಜತಾಂ ಕಲ್ಪವೃಕ್ಷಯಾ ನಮತಾಂ ಶ್ರೀ ಕಾಮಧೇನುವೇ”

ಇದನ್ನೂ ಓದಿ: Lord Ganesha: ಬುಧವಾರದಂದು ಗಣೇಶನನ್ನು ಪೂಜಿಸಿದರೆ ನಿಮಗೆ ಈ ಫಲ ಸಿಗುತ್ತೆ, ಗಣಪನ ಈ ಕೃಪೆಗೆ ಪಾತ್ರರಾಗ್ತೀರಿ

Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್