Pradosh vrat: ಮದುವೆ ವಿಳಂಬವಾಗುತ್ತಿದೆಯೇ? ಈ ವ್ರತ ಮಾಡಿ!
ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಶಿವ ಮತ್ತು ತಾಯಿ ಪಾರ್ವತಿ ದೇವಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಜೊತೆಗೆ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಈ ರೀತಿ ಮಾಡುವುದರಿಂದ ಮದುವೆ ವಿಳಂಬವಾಗುತ್ತಿದ್ದಲ್ಲಿ ಅಥವಾ ಇನ್ನಿತರ ಸಮಸ್ಯೆಗಳಿದ್ದಲ್ಲಿ ನಿವಾರಣೆಯಾಗಿ ಪರಿಹಾರ ಸಿಗುತ್ತದೆ.
ಭಗವಾನ್ ಮಹಾದೇವನ ಆಶೀರ್ವಾದ ಪಡೆಯಲು ಪ್ರದೋಷ ವ್ರತ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಪೌರಾಣಿಕ ನಂಬಿಕೆಯ ಪ್ರಕಾರ, ಈ ಉಪವಾಸ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸಿದಲ್ಲಿ ಮನೆಯಲ್ಲಿನ ಹಲವು ರೀತಿಯ ತೊಡಕುಗಳು ನಿವಾರಣೆಯಾಗುತ್ತದೆ. ಈ ತಿಂಗಳಲ್ಲಿ ಬರುವ ಪ್ರದೋಷ ವ್ರತವನ್ನು ಎ. 6 ರಂದು ಆಚರಣೆ ಮಾಡಲಾಗುತ್ತದೆ. ಈ ದಿನವು ಶನಿವಾರವಾಗಿರುವುದರಿಂದ, ಇದನ್ನು ಶನಿ ಪ್ರದೋಷ ವ್ರತ ಎಂದು ಕರೆಯಲಾಗುತ್ತದೆ. ಮದುವೆಯಲ್ಲಿ ಹಲವಾರು ರೀತಿಯ ಅಡತಡೆಗಳು ಎದುರಿಸುತ್ತಿರುವವರು ಶಿವನನ್ನು ಭಕ್ತಿಯಿಂದ ಪೂಜಿಸಿ, ಈ ವ್ರತವನ್ನು ಮಾಡಿದಲ್ಲಿ ಯಾವುದೇ ರೀತಿಯ ಅಡೆತಡೆಗಳಿದ್ದರೂ ಕೂಡ ನಿವಾರಣೆಯಾಗುತ್ತವೆ.
ಹಿಂದೂ ಧರ್ಮದಲ್ಲಿ ಪ್ರದೋಷ ವ್ರತಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನ ಶಿವ ಮತ್ತು ತಾಯಿ ಪಾರ್ವತಿ ದೇವಿಯನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ. ಜೊತೆಗೆ ಕಟ್ಟುನಿಟ್ಟಾದ ಉಪವಾಸವನ್ನು ಆಚರಿಸುತ್ತಾರೆ. ಈ ರೀತಿ ಮಾಡುವುದರಿಂದ ಮದುವೆ ವಿಳಂಬವಾಗುತ್ತಿದ್ದಲ್ಲಿ ಅಥವಾ ಇನ್ನಿತರ ಸಮಸ್ಯೆಗಳಿದ್ದಲ್ಲಿ ನಿವಾರಣೆಯಾಗಿ ಪರಿಹಾರ ಸಿಗುತ್ತದೆ. ಇದಲ್ಲದೆ, ಶನಿ ಪ್ರದೋಷದ ದಿನದಂದು ಜಾನಕಿಕೃತಂ ಪಾರ್ವತಿ ಸ್ತೋತ್ರದ ಪಠಣವು ಸಹ ಬಹಳ ಫಲಪ್ರದವೆಂದು ಹೇಳಲಾಗುತ್ತದೆ.
ಇದನ್ನೂ ಓದಿ: ದೇವಾಲಯದಿಂದ ಹೊರಬರುವಾಗ ಗಂಟೆ ಬಾರಿಸಬಾರದು ಏಕೆ ಗೊತ್ತಾ?
ಶನಿ ಪ್ರದೋಷ ವ್ರತ ಪೂಜೆಗೆ ಶುಭ ಸಮಯ;
ಚೈತ್ರ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ತಿಥಿಯು ಎ. 6 ರಂದು ಬೆಳಿಗ್ಗೆ 10:19 ಕ್ಕೆ ಪ್ರಾರಂಭವಾಗುತ್ತದೆ. ಈ ತಿಥಿ ಎ. 7 ರಂದು ಬೆಳಿಗ್ಗೆ 6.53 ಕ್ಕೆ ಕೊನೆಗೊಳ್ಳುತ್ತದೆ. ಪ್ರದೋಷ ವ್ರತ ಪೂಜೆಗೆ ಸಂಜೆ ಉತ್ತಮ ಸಮಯ. ಏಕೆಂದರೆ ಸಾಮಾನ್ಯವಾಗಿ ಪ್ರದೋಷ ಪೂಜೆಯನ್ನು ಸಂಜೆ ಮಾತ್ರ ಮಾಡಲಾಗುತ್ತದೆ.
ಶನಿ ಪ್ರದೋಷದ ಉಪವಾಸದ ಸಮಯದಲ್ಲಿ ಏನನ್ನು ತಿನ್ನಬೇಕು ಮತ್ತು ತಿನ್ನಬಾರದು? ಪ್ರದೋಷ ಕಾಲದ ಉಪವಾಸ ಸಮಯದಲ್ಲಿ ಹೆಸರು ಕಾಳುಗಳನ್ನು ಮಾತ್ರ ಸೇವಿಸಬೇಕು. ಇಲ್ಲವಾದಲ್ಲಿ ಪೂರ್ತಿ ದಿನ ಉಪವಾಸವನ್ನು ಮಾಡಬಹುದು ಅಥವಾ ಹಣ್ಣುಗಳನ್ನು ಮಾತ್ರ ತಿನ್ನಬಹುದು. ಇನ್ನು ಕೆಂಪು ಮೆಣಸಿನಕಾಯಿ, ಧಾನ್ಯಗಳು, ಅಕ್ಕಿ ಮತ್ತು ಉಪ್ಪನ್ನು ತಿನ್ನಬಾರದು. ಉಪವಾಸದ ಸಮಯದಲ್ಲಿ ಮಸಾಲೆಯುಕ್ತ ಪದಾರ್ಥಗಳನ್ನು ಸೇವನೆ ಮಾಡುವುದನ್ನು ತಪ್ಪಿಸಿ. ಈ ದಿನ ತಾಮಸ ಆಹಾರವನ್ನು ಸೇವಿಸಬಾರದು ಮತ್ತು ಯಾರ ಮೇಲೂ ಕೋಪಗೊಳ್ಳಬಾರದು ಜೊತೆಗೆ ಯಾರನ್ನೂ ಅವಮಾನಿಸಬಾರದು. ಈ ದಿನ ಕಪ್ಪು ಬಟ್ಟೆಗಳನ್ನು ಧರಿಸಬೇಡಿ. ಹಳದಿ ಮತ್ತು ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಶುಭವೆಂದು ಹೇಳಲಾಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ