Puri Janannath Rath Yathra 2024: ಪುರಿ ಜಗನ್ನಾಥನ ರಥಯಾತ್ರೆ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಈ ಶುಭ ಸಂದೇಶ ಕಳುಹಿಸಿ
ಒಡಿಶಾ ರಾಜ್ಯ ಮಾತ್ರವಲ್ಲ ಇಡೀ ದೇಶವೇ ಕಾತುರದಿಂದ ಎದುರು ನೋಡುತ್ತಿರುವ ಪುರಿ ಜಗನ್ನಾಥ ರಥಯಾತ್ರೆ ಇಂದು (ಜುಲೈ 07) ಆರಂಭವಾಗಿದ್ದು, ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತಾದಿಗಳು ಪುರಿಗೆ ಆಗಮಿಸುತ್ತಿದ್ದಾರೆ. ಈ ಶುಭ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಶುಭ ಸಂದೇಶಗಳು ಇಲ್ಲಿವೆ.
ಪುರಿ ಜಗನ್ನಾಥ ಯಾತ್ರೆ ಜಗತ್ಪ್ರಸಿದ್ಧವಾದ ಆಚರಣೆಯಾಗಿದೆ. ಹಿಂದೂ ಧರ್ಮದಲ್ಲಿ ಜಗನ್ನಾಥ ಯಾತ್ರೆಯನ್ನು ಅತ್ಯಂತ ಮಂಗಳಕರ ಮತ್ತು ಪುಣ್ಯ ಕಾರ್ಯವೆಂದು ಪರಿಗಣಿಸಲಾಗಿದ್ದು, ಪ್ರತಿವರ್ಷ ನಡೆಯುವ 9 ದಿನಗಳ ಈ ಧಾರ್ಮಿಕ ಕಾರ್ಯದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಳ್ಳುತ್ತಾರೆ. ಪಂಚಾಂಗದ ಪ್ರಕಾರ ಜಗನ್ನಾಥ ಯಾತ್ರೆಯನ್ನು ಪ್ರತಿ ವರ್ಷ ಆಷಾಢ ಮಾಸದ ಶುಕ್ಲ ಪಕ್ಷದ ಎರಡನೇ ದಿನದಂದು ಆಚರಿಸಲಾಗುತ್ತದೆ. ಈ ಬಾರಿ ಜಗನ್ನಾಥ ರಥ ಯಾತ್ರೆ ಇಂದಿನಿಂದ (ಜುಲೈ 07) ಆರಂಭವಾಗಿದ್ದು, ಈ ಶುಭ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿ ಪಾತ್ರರಿಗೆ ಹಬ್ಬದ ಶುಭಾಶಯಗಳನ್ನು ತಿಳಿಸಿ.
ಈ ಶುಭ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭಾಶಯ ತಿಳಿಸಿ:
ಪುರಿಯ ರಥಯಾತ್ರೆಯಲ್ಲಿ ಭಗವಾನ್ ಜಗನ್ನಾಥನು ತನ್ನ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೊಂದಿಗೆ ಮೂರು ಬೃಹತ್ ರಥಗಳ ಮೇಲೆ ಮೆರವಣಿಗೆ ಹೋಗುವುದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅಲ್ಲದೆ ಜಗನ್ನಾಥ ರಥ ಯಾತ್ರೆಯಲ್ಲಿ ಪಾಲ್ಗೊಂಡ ವ್ಯಕ್ತಿಯೂ ಎಲ್ಲಾ ತೀರ್ಥ ಯಾತ್ರೆಗಳ ಫಲವನ್ನೂ ಪಡೆಯುತ್ತಾನೆ ಎಂಬ ನಂಬಿಕೆಯೂ ಇದೆ. ಈ ಶುಭ ಸಂದರ್ಭದಲ್ಲಿ ನೀವು ನಿಮ್ಮ ಪ್ರೀತಿಪಾತ್ರರಿಗೆ ಕಳುಹಿಸಲು ಶುಭ ಸಂದೇಶಗಳು ಇಲ್ಲಿವೆ.
- ಭಕ್ತಿ, ಪ್ರೀತಿ ಮತ್ತು ಒಗ್ಗಟ್ಟಿನ ಪ್ರತೀಕವಾದ ಜಗನ್ನಾಥ ರಥಯಾತ್ರೆಯ ಪ್ರೀತಿಯ ಶುಭಾಶಯಗಳು
- ಜಗನ್ನಾಥನು ನಿಮ್ಮ ಜೀವನದ ಪ್ರತಿಯೊಂದು ಸಮಸ್ಯೆಗಳನ್ನು ದೂರಾಗಿಸಿ… ಸಂಕಷ್ಟದಲ್ಲಿ ಬೆಳಕಾಗಿ ಬಂದು ನಿಮ್ಮನ್ನು ಕಾಯುವಂತಾಗಲಿ. ಪುರಿ ಜಗನ್ನಾಥ ರಥಯಾತ್ರೆಯ ಶುಭಾಶಯಗಳು.
- ಜಗನ್ನಾಥನು ನಿಮ್ಮೊಂದಿಗೆ ಮತ್ತು ನಿಮ್ಮ ಕುಟುಂಬದೊಂದಿಗೆ ಯಾವಾಗಲೂ ಇರಲಿ. ಆರೋಗ್ಯ ಸಂಪತ್ತು ಮತ್ತು ಸಂತೋಷದ ಆಶಿರ್ವಾದವನ್ನು ನೀಡಲಿ. ರಥಯಾತ್ರೆಯ ಶುಭಾಶಯಗಳು.
- ಜಗನ್ನಾಥನು ನಿಮಗೆ ಯಶಸ್ಸು, ಸಮೃದ್ಧಿ ಮತ್ತು ಸಂತೋಷವನ್ನು ಕರುಣಿಸಲಿ, ನಿಮಗೂ ನಿಮ್ಮ ಕುಟುಂಬಕ್ಕೂ ರಥಯಾತ್ರೆಯ ಪ್ರೀತಿಯ ಶುಭಾಶಯಗಳು.
- ಈ ಮಂಗಳಕರ ಹಬ್ಬವು ನಿಮ್ಮ ಜೀವನದಲ್ಲಿ ಪ್ರೀತಿ, ಸಂತೋಷ ಮತ್ತು ಸಮೃದ್ಧಿಯನ್ನು ತರಲಿ. ರಥಯಾತ್ರೆಯ ಶುಭಾಶಯಗಳು.
- ರಥಯಾತ್ರೆಯ ದಿವ್ಯ ಪ್ರಯಾಣವು ನಿಮ್ಮೊಳನ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸಲಿ ಮತ್ತು ನಿಮಗೆ ಸುಖ, ಶಾಂತಿಯನ್ನು ಕರುಣಿಸಲಿ. ರಥಯಾತ್ರೆಯ ಶುಭಾಶಯಗಳು.
- ರಥಗಳ ಸುಂದರ ಬಣ್ಣಗಳಂತೆ ನಿಮ್ಮ ಜೀವನವೂ ಸದಾಕಾಲ ಸುಂದರಮಯವಾಗಿರಲಿ, ಪುರಿ ರಥಯಾತ್ರೆಯ ಶುಭಾಶಯಗಳು.
- ಜಗನ್ನಾಥ ರಥಯಾತ್ರೆಯ ಶುಭಾಶಯಗಳು. ಜಗನ್ನಾಥ, ಬಲಭದ್ರ ಮತ್ತು ಸುಭದ್ರೆಯ ದೈವಿಕ ಆಶಿರ್ವಾದವು ಸದಾ ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿರಲಿ.
- ರಥಯಾತ್ರೆಯ ಶುಭಾಶಯಗಳು. ಪುರಿಯ ಜಗನ್ನಾಥನು ನಿಮ್ಮ ಜೀವನದಲ್ಲಿ ಯಶಸ್ಸು ಮತ್ತು ಅದೃಷ್ಟವನ್ನು ತರಲಿ.
- ಧರ್ಮೋ ರಕ್ಷತಿ ರಕ್ಷಿತಃ ಅಂದರೆ ಧರ್ಮದಿಂದ ನಡೆಯುವವರನ್ನು ಧರ್ಮವೇ ರಕ್ಷಿಸುತ್ತದೆ. ಯಾವಾಗಲೂ ಧರ್ಮದ ಮಾಗರ್ದಲ್ಲಿ ನಡೆಯಿರಿ. ರಥಯಾತ್ರೆಯ ಪ್ರೀತಿಯ ಶುಭಾಶಯಗಳು.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ