Ratanpur’s Female Hanuman: ವಿಶ್ವದ ಏಕೈಕ ಸ್ತ್ರೀ ರೂಪದ ಹನುಮಂತನ ದೇವಾಲಯ; ಇಲ್ಲಿನ ವಿಗ್ರಹದ ರಹಸ್ಯವೇನು ಗೊತ್ತೇ?

ಛತ್ತೀಸ್‌ಗಢದ ರತನ್‌ಪುರದಲ್ಲಿರುವ ಗಿರ್ಜಬಂದ್ ಹನುಮಾನ್ ದೇವಾಲಯವು ಹನುಮಂತನನ್ನು ಸ್ತ್ರೀ ರೂಪದಲ್ಲಿ ಪೂಜಿಸುವ ವಿಶ್ವದ ಏಕೈಕ ತಾಣವಾಗಿದೆ. ಈ ದೇವಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿನ ಹನುಮಂತನ ದರ್ಶನ ಪಡೆದರೆ ಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಮನದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಇದು ಭಾರತದ ವಿಶಿಷ್ಟ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ.

Ratanpurs Female Hanuman: ವಿಶ್ವದ ಏಕೈಕ ಸ್ತ್ರೀ ರೂಪದ ಹನುಮಂತನ ದೇವಾಲಯ; ಇಲ್ಲಿನ ವಿಗ್ರಹದ ರಹಸ್ಯವೇನು ಗೊತ್ತೇ?
ಸ್ತ್ರೀ ರೂಪದ ಹನುಮಂತ

Updated on: Mar 31, 2026 | 5:33 PM

ಭಾರತವು ವೈವಿಧ್ಯಮಯ ಸಂಸ್ಕೃತಿ ಮತ್ತು ವಿಶಿಷ್ಟ ದೇವಾಲಯಗಳ ತವರೂರು. ಸಾಮಾನ್ಯವಾಗಿ ನಾವು ಆಂಜನೇಯನನ್ನು ಬ್ರಹ್ಮಚಾರಿ, ಶಕ್ತಿಶಾಲಿ ಪುರುಷ ರೂಪದಲ್ಲಿ ಪೂಜಿಸುವುದನ್ನು ಕಂಡಿದ್ದೇವೆ. ಆದರೆ, ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ರತನ್‌ಪುರ ಎಂಬಲ್ಲಿ ಹನುಮಂತನನ್ನು ‘ಸ್ತ್ರೀ’ ಅವತಾರದಲ್ಲಿ ಆರಾಧಿಸಲಾಗುತ್ತದೆ. ‘ಗಿರ್ಜಬಂದ್ ಹನುಮಾನ್ ದೇವಾಲಯ’ ಎಂದು ಕರೆಯಲ್ಪಡುವ ಈ ಪುಣ್ಯಕ್ಷೇತ್ರವು ಹನುಮನನ್ನು ಸ್ತ್ರೀ ರೂಪದಲ್ಲಿ ಪೂಜಿಸುವ ವಿಶ್ವದ ಏಕೈಕ ಸ್ಥಳ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿರುವ ವಿಗ್ರಹವು ಅತ್ಯಂತ ವಿಶಿಷ್ಟವಾಗಿದ್ದು, ಸ್ತ್ರೀ ಮುಖ ಮತ್ತು ದೇಹವನ್ನು ಹೊಂದಿದೆ. ಪೂರ್ವಕ್ಕೆ ಮುಖ ಮಾಡಿರುವ ಈ ವಿಗ್ರಹವು ಶ್ರೀರಾಮ ಮತ್ತು ಲಕ್ಷ್ಮಣರನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡಿರುವಂತೆ ಕೆತ್ತಲಾಗಿದೆ. ಅಷ್ಟೇ ಅಲ್ಲದೆ, ಹನುಮಂತನ ಪಾದಗಳ ಕೆಳಗೆ ಇಬ್ಬರು ರಾಕ್ಷಸರನ್ನು ನಿಗ್ರಹಿಸಿರುವ ದೃಶ್ಯವೂ ಇಲ್ಲಿದೆ. ಈ ಅಪರೂಪದ ವಿಗ್ರಹದ ಹಿಂದೆ ನೂರಾರು ವರ್ಷಗಳ ಇತಿಹಾಸವಿದ್ದು, ರತನ್‌ಪುರದ ರಾಜ ಪೃಥ್ವಿ ದೇವ್ಜು ಈ ದೇವಾಲಯವನ್ನು ನಿರ್ಮಿಸಿದನೆಂದು ಇತಿಹಾಸ ಹೇಳುತ್ತದೆ.

ದೇವಾಲಯದ ಉಗಮದ ಹಿಂದಿದೆ ಒಂದು ರೋಚಕ ದಂತಕಥೆ:

ಸ್ಥಳೀಯ ನಂಬಿಕೆಗಳ ಪ್ರಕಾರ, ರಾಜ ಪೃಥ್ವಿ ದೇವ್ಜು ತೀವ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾಗ, ಹನುಮಂತನು ಅವನ ಕನಸಿನಲ್ಲಿ ಕಾಣಿಸಿಕೊಂಡು ತನ್ನ ಈ ವಿಶಿಷ್ಟ ರೂಪವನ್ನು ದರ್ಶನ ನೀಡಿದನಂತೆ. ಅಲ್ಲದೆ, ಹತ್ತಿರದ ಕೊಳದ ಕೆಳಭಾಗದಲ್ಲಿ ತನ್ನ ವಿಗ್ರಹವು ಲಭ್ಯವಿದ್ದು, ಅದನ್ನು ತಂದು ದೇವಾಲಯ ನಿರ್ಮಿಸುವಂತೆ ಸೂಚಿಸಿದನಂತೆ. ರಾಜನು ಕೊಳವನ್ನು ಅಗೆಸಿದಾಗ ಅದರಲ್ಲಿ ಸ್ತ್ರೀ ರೂಪದ ಈ ಅದ್ಭುತ ವಿಗ್ರಹವು ದೊರೆಯಿತು. ಈ ವಿಗ್ರಹವನ್ನು ಪ್ರತಿಷ್ಠಾಪಿಸಿ ಪೂಜೆ ಆರಂಭಿಸಿದ ನಂತರ ರಾಜನು ಪೂರ್ಣವಾಗಿ ಗುಣಮುಖನಾದನು ಎಂಬುದು ಭಕ್ತರ ಅಚಲ ನಂಬಿಕೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಇಂದಿಗೂ ಈ ದೇವಾಲಯಕ್ಕೆ ದೇಶದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿನ ಹನುಮಂತನ ದರ್ಶನ ಪಡೆದರೆ ಸಂತಾನ ಪ್ರಾಪ್ತಿಯಾಗುತ್ತದೆ ಮತ್ತು ಮನದ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ. ಆಧ್ಯಾತ್ಮಿಕ ಶಕ್ತಿಯ ಜೊತೆಗೆ, ಈ ವಿಗ್ರಹದ ಕಲಾತ್ಮಕತೆ ಮತ್ತು ಐತಿಹಾಸಿಕ ಹಿನ್ನೆಲೆಯು ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ. ಭಕ್ತಿ ಮತ್ತು ಕುತೂಹಲದ ಸಂಗಮವಾಗಿರುವ ಈ ಗಿರ್ಜಬಂದ್ ಹನುಮಾನ್ ದೇವಾಲಯವು ಭಾರತದ ಅಪರೂಪದ ಧಾರ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us