AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ratha Saptami: ರಥಸಪ್ತಮಿ ಹಬ್ಬದಂದು ಈ ಮಂತ್ರವನ್ನು ತಪ್ಪದೇ ಪಠಿಸಿ; ಪ್ರಯೋಜನ ಸಾಕಷ್ಟಿವೆ

ಹಿಂದೂ ಧರ್ಮದಲ್ಲಿ ರಥಸಪ್ತಮಿಯನ್ನು ಸೂರ್ಯ ಭಗವಾನರ ಜನ್ಮದಿನವಾಗಿ ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿಯಂದು ಆಚರಿಸಲಾಗುವ ಈ ಹಬ್ಬದಲ್ಲಿ ಸೂರ್ಯ ಪೂಜೆ, ಹೋಮ, ಅರ್ಘ್ಯ ಪ್ರದಾನ ಮತ್ತು ಮಂತ್ರ ಜಪಕ್ಕೆ ವಿಶೇಷ ಮಹತ್ವವಿದೆ. ಆರೋಗ್ಯ ವೃದ್ಧಿ, ಆಯುಷ್ಯ ಲಾಭ ಹಾಗೂ ಸಮೃದ್ಧಿಗಾಗಿ ಈ ದಿನ ದಾನ ಧರ್ಮಗಳನ್ನು ಆಚರಿಸುವುದು ಶ್ರೇಷ್ಠ. ಇದರ ಐತಿಹಾಸಿಕ ಮಹತ್ವವನ್ನು ಕೃಷ್ಣ ಪರಮಾತ್ಮ ಧರ್ಮರಾಜನಿಗೆ ವಿವರಿಸಿದ್ದಾರೆ.

Ratha Saptami: ರಥಸಪ್ತಮಿ ಹಬ್ಬದಂದು ಈ ಮಂತ್ರವನ್ನು ತಪ್ಪದೇ ಪಠಿಸಿ; ಪ್ರಯೋಜನ ಸಾಕಷ್ಟಿವೆ
ರಥಸಪ್ತಮಿ
ಅಕ್ಷತಾ ವರ್ಕಾಡಿ
|

Updated on: Jan 25, 2026 | 10:14 AM

Share

ಹಿಂದೂ ಧರ್ಮದಲ್ಲಿ ರಥಸಪ್ತಮಿಯ ಹಬ್ಬವನ್ನು ಸೂರ್ಯ ಭಗವಾನರ ಜನ್ಮದಿನವೆಂದು ಆಚರಿಸಲಾಗುತ್ತದೆ. ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ದಿನದಂದು ರಥಸಪ್ತಮಿ ಆಚರಣೆ ನಡೆಯುತ್ತದೆ. ಈ ಪುಣ್ಯ ದಿನದಂದು ನವಗ್ರಹ ಹೋಮ, ಸೂರ್ಯ ಶಾಂತಿ, ಸೂರ್ಯ ಹೋಮ ಅಥವಾ ಸರಳವಾದ ಅಗ್ನಿಹೋತ್ರವನ್ನು ಮಾಡಿಕೊಳ್ಳುವುದು ಆರೋಗ್ಯದಲ್ಲಿ ಚೇತರಿಕೆ ಮತ್ತು ಆಯುಷ್ಯ ವೃದ್ಧಿಗೆ ಸಹಕಾರಿ ಎಂದು ನಂಬಲಾಗಿದೆ.

ತಾಮ್ರದ ಪಾತ್ರೆಯಲ್ಲಿ ನೀರು ತೆಗೆದುಕೊಂಡು, ಬೆಳಗಿನ ಸೂರ್ಯನಿಗೆ ಅರ್ಘ್ಯವನ್ನು ಸಮರ್ಪಿಸುವುದು ಮತ್ತು ಮಂತ್ರಗಳನ್ನು ಜಪಿಸುವುದು ಶುಭ ಫಲಗಳನ್ನು ತರುತ್ತದೆ. “ಓಂ ಸೂರ್ಯನಾರಾಯಣಾಯ ನಮಃ”, “ಓಂ ಸೂರ್ಯಾಯ ಶಾಂತಾಯ ಸರ್ವರೋಗ ನಿವಾರಿಣೆ ಆಯುರಾರೋಗ್ಯ ಐಶ್ವರ್ಯಂ ದೇಹಿ ದೇವ ಜಗತ್ಪತಯೇ”, “ಜಪಾ ಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ” ಅಥವಾ “ಓಂ ಗೃಣಿ ಸೂರ್ಯಾಯ” ಮುಂತಾದ ಮಂತ್ರಗಳನ್ನು ಜಪಿಸುವುದರ ಜೊತೆಗೆ ದ್ವಾದಶ ನಾಮಗಳನ್ನು ಪಠಿಸುವುದು ಶ್ರೇಷ್ಠ. ಆದಿತ್ಯ ಹೃದಯಂ ಸ್ತೋತ್ರ ಪಠನೆಯೂ ಕೂಡ ಈ ದಿನದ ಪ್ರಮುಖ ಆಚರಣೆಯಾಗಿದೆ.

ದಾನ ಮತ್ತು ಐತಿಹಾಸಿಕ ಮಹತ್ವ:

ರಥಸಪ್ತಮಿಯಂದು ಬಡವರಿಗೆ ಮತ್ತು ಅಶಕ್ತರಿಗೆ ಸಹಾಯ ಮಾಡುವುದು, ವಿಶೇಷವಾಗಿ ಔಷಧಿಗಳನ್ನು ದಾನ ಮಾಡುವುದರಿಂದ ಮಹಾ ಯೋಗಗಳು ಪ್ರಾಪ್ತವಾಗುತ್ತವೆ. ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಭಗವಾನರು ಧರ್ಮರಾಜನಿಗೆ ರಥಸಪ್ತಮಿಯ ಮಹತ್ವದ ಬಗ್ಗೆ ವಿವರಿಸಿದ್ದರು ಎಂದು ಪುರಾಣಗಳಲ್ಲಿ ಉಲ್ಲೇಖವಿದೆ. ಅಲ್ಲದೆ, ಪಾಂಡವರು ವನವಾಸದಲ್ಲಿದ್ದಾಗಲೂ ರಥಸಪ್ತಮಿಯನ್ನು ಆಚರಿಸಿದ್ದರು.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಸೂರ್ಯ ಭಗವಾನರು ಏಳು ಕುದುರೆಗಳ ರಥವನ್ನು ಏರಿ ಬರುವಂತೆ, ಈ ದಿನ ಸೂರ್ಯ ನಮಸ್ಕಾರ, ಸೂರ್ಯ ಪ್ರಾರ್ಥನೆ ಮತ್ತು ಸೂರ್ಯ ಜಪಕ್ಕೆ ವಿಶೇಷ ಮಹತ್ವವಿದೆ. “ಸಪ್ತಸಪ್ತ ಮಹಾಸಪ್ತ ಸಪ್ತದ್ವೀಪ ವಸುಂಧರಾ ಸಪ್ತಾರ್ಕ ಪರ್ಣ ಮಾದಾಯ ಸಪ್ತಮಿ ರಥ ಸಪ್ತಮಿ” ಎಂಬ ಶ್ಲೋಕವನ್ನು ಪಠಿಸುವುದರಿಂದ ಸೂರ್ಯನ ಕೃಪೆಗೆ ಪಾತ್ರರಾಗಬಹುದು. ರಥಸಪ್ತಮಿಯ ಆಚರಣೆಯ ಮೂಲಕ ಸೂರ್ಯ ಭಗವಾನರ ಅನುಗ್ರಹದಿಂದ ಸರ್ವರಿಗೂ ಆಯುರಾರೋಗ್ಯ, ಸುಖ-ಸಮೃದ್ಧಿ ಪ್ರಾಪ್ತಿಯಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ