Ratna Bhandar: 4 ದಶಕಗಳ ಬಳಿಕ ನಾಳೆ ಬಯಲಾಗುತ್ತಾ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ

Puri Jagannath Temple: ತಿರುವನಂತಪುರಂನಲ್ಲಿರುವ ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನವಾದ ಅನಂತ ಪದ್ಮನಾಭಸ್ವಾಮಿ ದೇವಾಲಯದ ಹಾವಿನ ಕಥೆಗಳನ್ನು ನಾವು ಕೇಳಿರುತ್ತೇವೆ. ಇದೇ ರೀತಿ ಇನ್ನೂ ಕೆಲವು ದೇವಾಲಯಗಳ ನಿಧಿಯನ್ನು ಹಾವು ಕಾಯುತ್ತಿದೆ ಎಂಬ ನಂಬಿಕೆಯಿದೆ. ಅಂತಹ ಕೆಲವು ದೇವಸ್ಥಾನಗಳಲ್ಲಿ ಒಡಿಶಾದ ಪುರಿ ಜಗನ್ನಾಥ ದೇವಾಲಯವೂ ಒಂದು. ನಾಳೆ (ಭಾನುವಾರ) ಜಗನ್ನಾಥ ದೇವಾಲಯದ ರತ್ನ ಭಂಡಾರದ ಕೋಣೆಯನ್ನು ತೆರೆಯಲಾಗುತ್ತಿದೆ. ಈ ಕ್ಷಣಕ್ಕೆ ಎಲ್ಲರೂ ಕಾತುರದಿಂದ, ಅಚ್ಚರಿಯಿಂದ ಕಾಯುತ್ತಿದ್ದಾರೆ.

Ratna Bhandar: 4 ದಶಕಗಳ ಬಳಿಕ ನಾಳೆ ಬಯಲಾಗುತ್ತಾ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ
ಜಗನ್ನಾಥ ದೇವಾಲಯ
Follow us
ಸುಷ್ಮಾ ಚಕ್ರೆ
|

Updated on: Jul 13, 2024 | 5:31 PM

ಪುರಿ: ದೇಗುಲಗಳ ಗುಪ್ತ ಸಂಪತ್ತಿನ ಸುತ್ತ ಸುತ್ತಿಕೊಂಡಿರುವ ಹಾವುಗಳ ಚರ್ಚೆ ಹಿಂದೂ ಮತ್ತು ಬೌದ್ಧ ಸಂಪ್ರದಾಯಗಳಲ್ಲಿ ಬಹಳ ಹಿಂದಿನಿಂದಲೂ ಸಾಮಾನ್ಯವಾಗಿದೆ. ಪೌರಾಣಿಕ ಕಥೆಗಳು ಮತ್ತು ನಾಗ್ ನಾಗಿನ್ (1989) ನಂತಹ ಚಲನಚಿತ್ರಗಳು ಕೂಡ ಅಂತಹ ನಿದರ್ಶನಗಳಿಂದ ತುಂಬಿವೆ. ಅದಕ್ಕೆ ಒಡಿಶಾದ ಪುರಿ ಜಗನ್ನಾಥ ದೇವಾಲಯ ಕೂಡ ಹೊರತಾಗಿಲ್ಲ. ಜಗನ್ನಾಥ ದೇವಾಲಯದ ರತ್ನ ಭಂಡಾರದ ಬಗ್ಗೆ ಹಲವು ಕತೆಗಳಿವೆ.

ಭಗವಾನ್ ಜಗನ್ನಾಥ ಮತ್ತು ಪುರಿಯಲ್ಲಿರುವ ದೇವಾಲಯದ ಇತರ ದೇವತೆಗಳ ಬೆಲೆಬಾಳುವ ವಸ್ತುಗಳನ್ನು ಸರ್ಪಗಳ ಗುಂಪು ಬಹಳ ನಿಷ್ಠೆಯಿಂದ ಕಾಪಾಡುತ್ತವೆ ಎಂಬ ದಂತಕಥೆಗಳಿವೆ. 6 ವರ್ಷಗಳ ಹಿಂದೆ, 2018ರಲ್ಲಿ ಒಡಿಶಾ ಹೈಕೋರ್ಟ್‌ನ ಆದೇಶದ ನಂತರ ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ಎಎಸ್‌ಐ) ಜಂಟಿ ತಂಡ ಮತ್ತು ಪುರಿಯ ಜಗನ್ನಾಥ ದೇವಾಲಯದ ಅಧಿಕಾರಿಗಳು ಅದರ ರಚನಾತ್ಮಕ ಸ್ಥಿತಿಯನ್ನು ಪರಿಶೀಲಿಸಲು ರತ್ನ ಭಂಡಾರಕ್ಕೆ ತೆರಳಿದರು.

ಆ ದೇಗುಲದ ಹೊರಗೆ ಭಕ್ತರು ಮತ್ತು ರಕ್ಷಣಾ ಸಿಬ್ಬಂದಿಗಳ ಗುಂಪಿನೊಂದಿಗೆ ಭುವನೇಶ್ವರದಿಂದ ವಿಶೇಷವಾಗಿ ಕರೆಸಲ್ಪಟ್ಟ ಇಬ್ಬರು ಪರಿಣಿತ ಹಾವು ಹಿಡಿಯುವವರು ಕೂಡ ಸಹಾಯ ಮಾಡಲು ಸಿದ್ಧರಾಗಿ ನಿಂತರು. ಈಗ ನಾಳೆ (ಜುಲೈ 14) ಜಗನ್ನಾಥ ದೇವಾಲಯದ ರತ್ನ ಭಂಡಾರದ ಒಳಗಿನ ಕೋಣೆಯನ್ನು ತೆರೆಯಲಾಗುವುದು. ಈ ದೇವಾಲಯದ ಸಮಿತಿಯು ಎಲ್ಲಾ ಗಾತ್ರದ ಸರೀಸೃಪಗಳಿಂದ ಬೆದರಿಕೆಗೆ ಹೆದರುತ್ತಿದೆ. ಹಾವಿನ ಭೀತಿಯ ಜೊತೆಗೆ ಶಾಪದ ಭೀತಿಯೂ ಅವರನ್ನು ಕಾಡುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದನ್ನೂ ಓದಿ: ರಥಯಾತ್ರೆಗೂ 15 ದಿನ ಮೊದಲು ಪುರಿ ಜಗನ್ನಾಥ ಸ್ವಾಮಿಯ ಆರೋಗ್ಯ ಕೆಡಲು ಕಾರಣವೇನು?

1985ರ ನಂತರ ಮೊದಲ ಬಾರಿಗೆ ಭಾನುವಾರ (ಜುಲೈ 14) ಭೀತರ ಭಂಡಾರ ಅಥವಾ ಆಂತರಿಕ ರಹಸ್ಯ ಕೋಣೆಯನ್ನು ತೆರೆಯಲಾಗುತ್ತಿದೆ. ಹೀಗಾಗಿ ಹಾವು ಹಿಡಯುವವರನ್ನು ರತ್ನ ಭಂಡಾರದಲ್ಲಿ ನಿಯೋಜಿಸಲಾಗುವುದು. ವೈದ್ಯರ ತಂಡವು ಔಷಧಿ ಕಿಟ್‌ನೊಂದಿಗೆ ಸಿದ್ಧವಾಗಿ ಇರುತ್ತದೆ.

ರತ್ನ ಭಂಡಾರದಲ್ಲಿ ಏನಿದೆ?:

ರತ್ನ ಭಂಡಾರದಲ್ಲಿರುವ ಪುರಾತನ ಬೆಲೆಬಾಳುವ ವಸ್ತುಗಳ ವಿಧಗಳನ್ನು ತಿಳಿದುಕೊಳ್ಳುವ ಕುತೂಹಲವಿದ್ದರೂ, ಹಾವುಗಳಿರುವ ಸಾಧ್ಯತೆಯ ಬಗ್ಗೆ ನಮಗೆ ಭಯವಿದೆ ಎಂದು ರತ್ನ ಭಂಡಾರವನ್ನು ತೆರೆಯಲು ಬಿಜೆಪಿ ಸರ್ಕಾರಕ್ಕೆ ಪ್ರಸ್ತಾಪಿಸಿದ ಸಮಿತಿಯ ಸೇವಕರೊಬ್ಬರು ಹೇಳಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಇದು ಪುರಾತನವಾದ ದೇವಾಲಯವಾಗಿರುವುದರಿಂದ ಹಲವೆಡೆ ಸಣ್ಣ ರಂಧ್ರಗಳು ಮತ್ತು ಬಿರುಕುಗಳಿದ್ದು, ರಂಧ್ರಗಳ ಮೂಲಕ ಹಾವುಗಳು ರತ್ನ ಭಂಡಾರಕ್ಕೆ ನುಗ್ಗುವ ಸಾಧ್ಯತೆಯಿದೆ ಎಂದು ಮತ್ತೊಬ್ಬ ಸೇವಕ ಹರೇಕೃಷ್ಣ ಮಹಾಪಾತ್ರ ಹೇಳಿದ್ದಾರೆ. ಈ ಕೋಣೆಯಿಂದ ಆಗಾಗ ಹಾವು ಭುಸುಗುಟ್ಟುವ ಶಬ್ದವೂ ಕೇಳುತ್ತಿರುತ್ತದೆ. ಇತ್ತೀಚಿನ ಜಗನ್ನಾಥ ಹೆರಿಟೇಜ್ ಕಾರಿಡಾರ್ ಪ್ರಾಜೆಕ್ಟ್ ಕೆಲಸದ ಸಮಯದಲ್ಲಿ ಜಗನ್ನಾಥ ದೇವಾಲಯದ ಪರಿಧಿಯಲ್ಲಿ ಹಾವುಗಳ ದರ್ಶನವನ್ನು ಆಧರಿಸಿ ಅವರ ಹೇಳಿಕೆಗಳು ಮಹತ್ವ ಪಡೆದಿವೆ.

ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನದಲ್ಲಿ ತಪ್ಪಿಯೂ ಈ ಮೆಟ್ಟಿಲ ಮೇಲೆ ಕಾಲಿಡಬೇಡಿ!

“ಇವು ಕೇವಲ ವದಂತಿಗಳು ಮತ್ತು ರತ್ನ ಭಂಡಾರದಲ್ಲಿ ಈ ರೀತಿಯ ಏನೂ ಇಲ್ಲ” ಎಂದು ದೇವಸ್ಥಾನದ ಮಾಜಿ ಆಡಳಿತಾಧಿಕಾರಿ ಭಾಸ್ಕರ್ ಮಿಶ್ರಾ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ರಾಜರ ಕಿರೀಟಗಳು ಮತ್ತು ಸಿಂಹಾಸನಗಳು ಸೇರಿದಂತೆ ಬೆಲೆಬಾಳುವ ವಸ್ತುಗಳಿಂದ ತುಂಬಿರುವ ಕೋಣೆಯನ್ನು ಕಾಪಾಡಲು ಈ ರೀತಿಯ ದಂತಕತೆಗಳನ್ನು ಸೃಷ್ಟಿಸಲಾಗಿದೆ ಎಂದು ಅವರು ಹೇಳಿದ್ದಾರೆ.

1985ರಲ್ಲಿ ಈ ರಹಸ್ಯ ಒಳಕೋಣೆಗೆ ಪ್ರವೇಶಿಸಿದ 6 ಜನರಲ್ಲಿ ಒಬ್ಬರಾದ ರವೀಂದ್ರ ನಾರಾಯಣ ಮಿಶ್ರಾ ಕೂಡ ಇದೇ ಮಾತನ್ನು ಹೇಳಿದ್ದರು. ಆ ಕತ್ತಲೆಯ ಕೋಣೆಗಳಲ್ಲಿ ಯಾವುದೇ ಹಾವುಗಳು, ಸರೀಸೃಪಗಳು ಅಥವಾ ಜೇಡರ ಬಲೆಗಳನ್ನು ನಾನು ನೋಡಲಿಲ್ಲ ಎಂದು ಅವರು ಹೇಳಿದ್ದರು.

2018ರಲ್ಲಿ 16 ಜನರ ಗುಂಪು ರತ್ನ ಭಂಡಾರವನ್ನು ಪರಿಶೀಲಿಸಲು ಪ್ರಯತ್ನಿಸಿತು. ಆದರೆ ಭಿತರ ಭಂಡಾರದ ಕೀಗಳ ಕೊರತೆಯಿಂದಾಗಿ ಆ ಪ್ರಯತ್ನ ವಿಫಲವಾಯಿತು. ಈ ವೈಫಲ್ಯವು ಒಳಗಿನ ಕೋಣೆಯಲ್ಲಿ ಇರಿಸಲಾಗಿದೆ ಎಂದು ನಂಬಲಾದ ನಿಧಿಗಳ ಸುತ್ತಲಿನ ನಿಗೂಢತೆಯನ್ನು ಹೆಚ್ಚಿಸಿತು. ಹೀಗಾಗಿ, ನಾಳೆಯ ಪ್ರಯತ್ನವು ಇನ್ನಷ್ಟು ಮಹತ್ವ ಪಡೆದುಕೊಂಡಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ