Astrological Remedie: ಸಾಲವಾಗಿ ನೀಡಿದ ಹಣ ವಾಪಸ್ ಸಿಗುತ್ತಿಲ್ಲವೇ? ಈ ಜ್ಯೋತಿಷ್ಯ ಸಲಹೆ ಅನುಸರಿಸಿ

ನೀವು ಸಾಲವಾಗಿ ನೀಡಿದ ಹಣ ಮರಳಿ ಸಿಗದೆ ಚಿಂತೆಯಲ್ಲಿದ್ದೀರಾ? ಮಾನಸಿಕ ಒತ್ತಡ ಕಡಿಮೆ ಮಾಡಲು ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸಬಹುದು. ಬುಧವಾರ ಗಣೇಶ ಪೂಜೆ, ಶನಿವಾರ ಶನಿ ಪರಿಹಾರಗಳು, ಅರಿಶಿನ-ಕುಂಕುಮ ಉಪಾಯ ಹಾಗೂ ಲಕ್ಷ್ಮೀ ಆರಾಧನೆಯ ಮೂಲಕ ನಿಮ್ಮ ಧನಪ್ರವಾಹವನ್ನು ಸುಗಮಗೊಳಿಸಬಹುದು. ಶುದ್ಧ ಮನಸ್ಸು ಹಾಗೂ ನಂಬಿಕೆಯಿಂದ ಈ ಸನಾತನ ಪರಿಹಾರಗಳನ್ನು ಅನುಸರಿಸಿ ಹಣ ಮರಳಿ ಪಡೆಯಿರಿ.

Astrological Remedie: ಸಾಲವಾಗಿ ನೀಡಿದ ಹಣ ವಾಪಸ್ ಸಿಗುತ್ತಿಲ್ಲವೇ? ಈ ಜ್ಯೋತಿಷ್ಯ ಸಲಹೆ ಅನುಸರಿಸಿ
ಸಾಲ ಕೊಟ್ಟ ಹಣ

Updated on: Feb 24, 2026 | 11:32 AM

ಸ್ನೇಹಿತರು, ಸಂಬಂಧಿಕರು ಅಥವಾ ಪರಿಚಿತರವರಿಗೆ ಸಹಾಯದ ಮನಸ್ಸಿನಿಂದ ನೀಡಿದ ಹಣ ಸಮಯಕ್ಕೆ ಸರಿಯಾಗಿ ವಾಪಸ್ ಸಿಗದಿದ್ದರೆ ಮಾನಸಿಕ ಒತ್ತಡ ಉಂಟಾಗುವುದು ಸಹಜ. ಇಂತಹ ಸಂದರ್ಭಗಳಲ್ಲಿ ಕೆಲವರು ಜ್ಯೋತಿಷ್ಯ ಪರಿಹಾರಗಳನ್ನು ಅನುಸರಿಸುವ ಮೂಲಕ ಧನಪ್ರವಾಹ ಸುಗಮವಾಗುತ್ತದೆ ಎಂದು ನಂಬುತ್ತಾರೆ. ಇವು ನಂಬಿಕೆ ಆಧಾರಿತ ಪರಿಹಾರಗಳಾಗಿದ್ದು, ನಿಮ್ಮ ವಿಶ್ವಾಸಕ್ಕೆ ಅನುಗುಣವಾಗಿ ಅನುಸರಿಸಬಹುದು. ಸಾಲವಾಗಿ ನೀಡಿದ ಹಣ ವಾಪಸ್ ಸಿಗುತ್ತಿಲ್ಲವೆಂದಾದರೆ ಜ್ಯೋತಿಷ್ಯ ಶಾಸ್ತಜ್ಞರು ಹೇಳುವ ಈ ಪರಿಹಾರವನ್ನು ಒಮ್ಮೆ ಪ್ರಯತ್ನಿಸಿ.

ಬುಧವಾರದ ಪರಿಹಾರ:

ಬುಧವಾರ ಗಣೇಶನ ದಿನವೆಂದು ಪರಿಗಣಿಸಲಾಗುತ್ತದೆ. ಆ ದಿನ ಬೆಳಿಗ್ಗೆ ಸ್ನಾನ ಮಾಡಿ ಗಣೇಶನಿಗೆ ದುರ್ವಾ (ಗರಿಕೆ ಹುಲ್ಲು) ಮತ್ತು ಮೋದಕ ಅರ್ಪಿಸಿ “ಓಂ ಗಣ ಗಣಪತಯೇ ನಮಃ” ಮಂತ್ರವನ್ನು 108 ಬಾರಿ ಜಪಿಸುವುದು ಅಡಚಣೆಗಳು ದೂರವಾಗಲು ಸಹಾಯಕವೆಂದು ಹೇಳಲಾಗುತ್ತದೆ. ಹಣ ವಾಪಸ್ ಸಿಗದಿರುವ ಸಮಸ್ಯೆಗೂ ಇದು ಒಳ್ಳೆಯದು ಎಂದು ನಂಬಿಕೆ ಇದೆ.

ಶನಿವಾರ ಶನಿ ಪರಿಹಾರ:

ಹಣದ ಸಮಸ್ಯೆಗೆ ಶನಿ ದೋಷವೂ ಕೂಡ ಕಾರಣವಾಗಿರಬಹುದು ಎಂದು ಕೆಲವರು ನಂಬುತ್ತಾರೆ. ಶನಿವಾರ ಕಪ್ಪು ಎಳ್ಳು ಅಥವಾ ಎಣ್ಣೆಯನ್ನು ದಾನ ಮಾಡುವುದು, ಅಥವಾ ಶನಿ ದೇವಾಲಯದಲ್ಲಿ ದೀಪ ಹಚ್ಚುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. “ಓಂ ಶಂ ಶನೈಶ್ಚರಾಯ ನಮಃ” ಮಂತ್ರ ಜಪ ಸಹ ಉಪಕಾರಿ ಎನ್ನಲಾಗುತ್ತದೆ.

ಅರಿಶಿನದಿಂದ ಪರಿಹಾರ:

ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯಲು ಬಯಸುವ ವ್ಯಕ್ತಿಯ ಹೆಸರನ್ನು ಅರಿಶಿನದ ತುಂಡಿನ ಮೇಲೆ ಬರೆಯಿಸಿ, ಅದನ್ನು ಪೂಜಾಸ್ಥಳದಲ್ಲಿ ಇಟ್ಟು ಪ್ರಾರ್ಥನೆ ಮಾಡುವುದರಿಂದ ಹಣ ವಾಪಸ್ ಸಿಗುತ್ತದೆ ಎಂದು ಹಲವರು ನಂಬುತ್ತಾರೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಲಕ್ಷ್ಮೀ ದೇವಿಯ ಆರಾಧನೆ:

ಪ್ರತಿ ಶುಕ್ರವಾರ ಲಕ್ಷ್ಮೀ ದೇವಿಗೆ ಕಮಲ ಹೂವಿನೊಂದಿಗೆ ಪೂಜೆ ಸಲ್ಲಿಸಿ, ಶ್ರೀಸೂಕ್ತ ಪಠಣ ಮಾಡುವುದರಿಂದ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗುತ್ತದೆ. ಮನೆಯ ಉತ್ತರ ದಿಕ್ಕನ್ನು ಸ್ವಚ್ಛವಾಗಿಟ್ಟುಕೊಳ್ಳುವುದೂ ಧನಪ್ರವಾಹಕ್ಕೆ ಸಹಾಯಕವೆಂದು ವಾಸ್ತು ಶಾಸ್ತ್ರ ಸೂಚಿಸುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us