ChatGPT’ಯನ್ನೇ ಹಿಂದಿಕ್ಕಿದ ಸದ್ಗುರು ಅವರ ‘Miracle of Mind’; 15 ಗಂಟೆಗಳಲ್ಲಿ 1 ಮಿಲಿಯನ್ ಡೌನ್‌ಲೋಡ್
ಸದ್ಗುರು ಜಗ್ಗಿ ವಾಸುದೇವ್ ಅವರು ಪ್ರಾರಂಭಿಸಿದ ಉಚಿತ ಧ್ಯಾನ ಅಪ್ಲಿಕೇಶನ್ "ಮಿರಾಕಲ್ ಆಫ್ ಮೈಂಡ್" 'ChatGPT'ಯನ್ನೇ ಹಿಂದಿಕ್ಕಿ ಮುನ್ನುಗುತ್ತಿದೆ. ಮಹಾ ಶಿವರಾತ್ರಿಯಂದು ಬಿಡುಗಡೆಯಾದ ಈ ಅಪ್ಲಿಕೇಶನ್ ಕೇವಲ 15 ಗಂಟೆಗಳಲ್ಲಿ 1 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಖಲಿಸಿದೆ. AI-ಚಾಲಿತ ವೈಶಿಷ್ಟ್ಯಗಳೊಂದಿಗೆ, 7 ನಿಮಿಷಗಳ ಧ್ಯಾನದ ಅವಧಿಯನ್ನು ಒಳಗೊಂಡ ಈ ಅಪ್ಲಿಕೇಶನ್ 20 ದೇಶಗಳಲ್ಲಿ ಹಲವು ಭಾಷೆಗಳಲ್ಲಿ ಟ್ರೆಂಡಿಂಗ್ನಲ್ಲಿದೆ.

ಇಶಾ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ನಾಯಕ ಸದ್ಗುರು ಜಗ್ಗಿ ವಾಸುದೇವ್ ಅವರು ಹೊಸದಾಗಿ ಪ್ರಾರಂಭಿಸಿದ ಉಚಿತ ಧ್ಯಾನ ಅಪ್ಲಿಕೇಶನ್ ‘ಮಿರಾಕಲ್ ಆಫ್ ಮೈಂಡ್'(Miracle of Mind) ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಶಿವರಾತ್ರಿಯಂದು ಬಿಡುಗಡೆಗೊಂಡಿದ್ದ ಈ ಮೊಬೈಲ್ ಅಪ್ಲಿಕೇಶನನ್ನು ಕೇವಲ 15 ಗಂಟೆಗಳಲ್ಲಿ 1 ಮಿಲಿಯನ್ ಜನರು ಡೌನ್‌ಲೋಡ್ ಮಾಡಿದ್ದಾರೆ. ಈ ಮೂಲಕ ‘ಮಿರಾಕಲ್ ಆಫ್ ಮೈಂಡ್’ ಆ್ಯಪ್ ChatGPT’ಯನ್ನೇ ಹಿಂದಿಕ್ಕಿದೆ.
ಮಹಾಶಿವರಾತ್ರಿಯಂದು (ಫೆಬ್ರವರಿ 26) ಬಿಡುಗಡೆಯಾದ ಈ ಅಪ್ಲಿಕೇಶನ್ ಈಗ ಭಾರತ, ಅಮೆರಿಕ, ಕೆನಡಾ, ಯುಕೆ, ಆಸ್ಟ್ರೇಲಿಯಾ ಮತ್ತು ಜರ್ಮನಿ ಸೇರಿದಂತೆ 20 ದೇಶಗಳಲ್ಲಿ ಟ್ರೆಂಡಿಂಗ್ ಆಗಿದೆ. ಇಂಗ್ಲಿಷ್, ಹಿಂದಿ, ತಮಿಳು, ರಷ್ಯನ್ ಮತ್ತು ಸ್ಪ್ಯಾನಿಷ್ ಭಾಷೆಗಳಲ್ಲಿ ಲಭ್ಯವಿರುವ ಮಿರಾಕಲ್ ಆಫ್ ಮೈಂಡ್ ಅಪ್ಲಿಕೇಶನನ್ನು AI- ಚಾಲಿತ ವೈಶಿಷ್ಟ್ಯದಲ್ಲಿ ಪರಿಚಯಿಸಲಾಗಿದ್ದು, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ: ಮಹಾಕುಂಭ ಮೇಳಕ್ಕೆ ಇಂದು ತೆರೆ ಬೀಳಬಹುದು, ಆದ್ರೆ ಶಾಹಿ ಸ್ನಾನಕ್ಕೆ ಇನ್ನೂ ಇದೆ ಸಮಯ ಆತುರ ಬೇಡ
ಒತ್ತಡದ ಜೀವನದಿಂದ ಹೊರಬರಲು ಧ್ಯಾನಕ್ಕಾಗಿ ನೀವು ಗಂಟೆ ಗಟ್ಟಲೆ ಕುಳಿತುಕೊಳ್ಳುವ ಅವಶ್ಯಕತೆಯಿಲ್ಲ. ಈ ಆ್ಯಪ್ ಕೇವಲ ಏಳು ನಿಮಿಷಗಳಲ್ಲಿ ನಿಮ್ಮ ಮನಸ್ಸನ್ನು ಶಾಂತಗೊಳಿಸುತ್ತದೆ. ಸದ್ಗುರು ಅವರ ವಿಚಾರಗಳನೊಳಗೊಂಡ ಬೋಧನೆಯ ಜೊತೆಗೆ ಪರಿಪೂರ್ಣ ಧ್ಯಾನದ ಮಾಹಿತಿಯನ್ನು ನೀಡುವ ಈ ಆ್ಯಪ್ AI-ಚಾಲಿತ ಬುದ್ಧಿವಂತಿಕೆಯ ಸಾಧನವನ್ನು ಸಹ ಒಳಗೊಂಡಿದೆ ಎನ್ನಲಾಗಿದೆ.
ಮತ್ತಷ್ಟು ಅಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Sat, 1 March 25








