
ಗಣೇಶನ ಆರಾಧನೆಗೆ ಇರುವ ವಿಶೇಷ ದಿನ ಸಂಕಷ್ಟ ಚತುರ್ಥಿ. ತಿಂಗಳಿಗೆ ಎರಡು ಚತುರ್ಥಿಗಳು ಬರುತ್ತವೆ. ಅವುಗಳಲ್ಲಿ ಹುಣ್ಣಿಮೆಯ ನಂತರ ಬರುವುದನ್ನು ‘ಸಂಕಷ್ಟಹರ ಚತುರ್ಥಿ’ ಎಂತಲೂ ಹಾಗೂ ಅಮಾವಾಸ್ಯೆ ಬಳಿಕ ಬರುವುದನ್ನು ‘ವಿನಾಯಕ ಚತುರ್ಥಿ’ ಎಂದೂ ಕರೆಯಲಾಗುತ್ತದೆ. ಈ ವರ್ಷದ ಕೊನೆಯ ಸಂಕಷ್ಟ ಚತುರ್ಥಿ ಇಂದು(ಡಿಸೆಂಬರ್ 07ರಂದು)ಬಂದಿದೆ. ಈ ಸಂಕಷ್ಟ ಚತುರ್ಥಿಯನ್ನು ಅಖುರಥ ಸಂಕಷ್ಟ ಚತುರ್ಥಿ ಎಂದು ಕರೆಯುತ್ತಾರೆ.
ಸಂಕಷ್ಟ ಚತುರ್ಥಿಯು ಗಣೇಶನಿಗೆ ಅರ್ಪಿತವಾದ ಮಂಗಳಕರ ದಿನವಾಗಿದ್ದು, ಜೀವನದ ಎಲ್ಲಾ ತೊಂದರೆಗಳು, ಅಡೆತಡೆಗಳನ್ನು ನಿವಾರಿಸಿ, ಜ್ಞಾನ, ಸಂಪತ್ತು, ಯಶಸ್ಸು ಮತ್ತು ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಗಣೇಶನಿಗೆ ಉಪವಾಸ ಮಾಡಿ ಪೂಜಿಸುವುದರಿಂದ ಎಲ್ಲಾ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂದು ನಂಬಲಾಗಿದೆ.
ಇದನ್ನೂ ಓದಿ: ವಾಸ್ತು ಪ್ರಕಾರ ಫ್ರಿಡ್ಜ್ ಮೇಲೆ ಈ ವಸ್ತುಗಳನ್ನು ಇಡಲೇಬಾರದು; ಸಮಸ್ಯೆ ತಪ್ಪಿದ್ದಲ್ಲ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ