Shiva and standing Nandhi: ಶಿವನ ಮುಂದೆ ನಂದಿ ನಿಂತಿರುವ ರೂಪದಲ್ಲಿ ಇರುವ ಏಕೈಕ ದೇವಾಲಯ ಅಲ್ಲಿದೆ

Shiva, standing Nandi Located in Mahakal Nagar, Ujjain: ಈ ಶಿವ ದೇವಾಲಯವನ್ನು ದ್ವಾಪರ ಯುಗದಲ್ಲಿ ಸ್ಥಾಪಿಸಲಾಯಿತು. ಇಂತಹ ಶಿವನ ದೇವಾಲಯವು ಉಜ್ಜಯಿನಿಯಲ್ಲಿದೆ. ಇದನ್ನು ಮಹಾಕಾಲ್ ನಗರ ಎಂದು ಕರೆಯಲಾಗುತ್ತದೆ. ಮಹರ್ಷಿ ಸಾಂದೀಪನಿಯ ಆಶ್ರಮವು ಇದೇ ಉಜ್ಜಯಿನಿಯಲ್ಲಿದ್ದು, ಈ ಶಿವ ಮಂದಿರದ ಸ್ಥಳ ಮಹಾತ್ಮೆ ಇಲ್ಲಿಂದಲೇ ಉದ್ಭವಿಸಿದೆ.

Shiva and standing Nandhi: ಶಿವನ ಮುಂದೆ ನಂದಿ ನಿಂತಿರುವ ರೂಪದಲ್ಲಿ ಇರುವ ಏಕೈಕ ದೇವಾಲಯ ಅಲ್ಲಿದೆ
Shiva and standing Nandhi: ನಂದಿ ವಿಗ್ರಹದ ಮಹತ್ವ
Follow us
ಸಾಧು ಶ್ರೀನಾಥ್​
|

Updated on: Jul 04, 2024 | 6:18 AM

ಶಿವ ಮಂದಿರ: ಪ್ರಪಂಚದಲ್ಲಿ ಶಿವನ ನಾನಾ ದೇವಾಲಯಗಳಿವೆ. ಆದರೆ ಶಿವನ ಮುಂದೆ ಎಲ್ಲ ಕಡೆಯೂ ನಂದಿ ಮಹಾರಾಜನಾಗಿ ವಿರಾಜಮಾನವಾಗಿರುವುದು ಸಾಮಾನ್ಯ. ಆದರೆ ಭಗವಂತನ ಮುಂದೆ ನಂದಿ ಕುಳಿತುಕೊಳ್ಳದೆ, ನಿಂತಿರುವ ಭಂಗಿಯಲ್ಲಿರುವುದು ಆ ದೇವಾಲಯದಲ್ಲಿ ಮಾತ್ರ. ಅದು ಭಾರತದಲ್ಲಿದೆ.

ಶ್ರಾವಣ ಮಾಸ (Shraavana Masa) ಇನ್ನೇನು ಈ ಮಾಸಾಂತ್ಯ ಪ್ರಾರಂಭವಾಗಲಿದೆ, ಜುಲೈ 22 ರಂದು ಪ್ರಾರಂಭವಾಗಿ ಆಗಸ್ಟ್ 19 ರಂದು ಕೊನೆಗೊಳ್ಳುತ್ತದೆ. ಹಿಂದೂ ಪಂಚಾಗದಲ್ಲಿ ಇದು 5ನೆಯ ತಿಂಗಳು. ಶ್ರಾವಣದಲ್ಲಿ ಭಗವಾನ್ ಶಿವನನ್ನು ಪೂಜಿಸುವುದರಿಂದ ಅವನ ವಿಶೇಷ ಆಶೀರ್ವಾದವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಜನರು ಶಿವನ ದೇವಾಲಯಗಳಿಗೆ ಭೇಟಿ ನೀಡಲು ಹೋಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ನಂದಿ ನಿಂತಿರುವ ರೂಪದಲ್ಲಿ ಇರುವ ದೇವಾಲಯದ ಬಗ್ಗೆ ಮಾಹಿತಿ ಇಲ್ಲಿದೆ. ನಂದಿ ಮಹಾರಾಜ ಭಗವಾನ್ ಶಂಕರನ ಮಹಾನ್ ಭಕ್ತ. ನಂದಿಯು ಶಿವನ ವಾಹನವೂ ಹೌದು. ಪ್ರತಿ ದೇವಸ್ಥಾನದಲ್ಲಿ, ನಂದಿ ಸದಾ ಕಾಲ ಶಿವನ ಎದುರು ಇರುತ್ತಾನೆ. ಆದರೆ ಈ ಶಿವನ ದೇವಾಲಯದಲ್ಲಿರುವ ನಿಂತಿರುವ ನಂದಿ ಪ್ರತಿಮೆಯ (Shiva and standing Nandi) ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ.

ಇದನ್ನೂ ಓದಿ: July 2024 Festivals Calendar: ಜುಲೈ 2024 – ಭಾರತದ ಪ್ರಸಿದ್ಧ ಹಬ್ಬಗಳ ಸಂಕ್ಷಿಪ್ತ ವಿವರ ಇಲ್ಲಿದೆ

Shiva and standing Nandhi: ಈ ದೇವಾಲಯ ಎಲ್ಲಿದೆ?

ಇಂತಹ ಶಿವನ ದೇವಾಲಯವು ಉಜ್ಜಯಿನಿಯಲ್ಲಿದೆ. ಇದನ್ನು ಮಹಾಕಾಲ್ ನಗರ ಎಂದು (Mahakal Nagar, Ujjain) ಕರೆಯಲಾಗುತ್ತದೆ. ಮಹರ್ಷಿ ಸಾಂದೀಪನಿಯ ಆಶ್ರಮವು ಉಜ್ಜಯಿನಿಯಲ್ಲಿದೆ. ಇದೇ ಆಶ್ರಮದಲ್ಲಿ ಶ್ರೀಕೃಷ್ಣ, ಅವನ ಸ್ನೇಹಿತ ಸುದಾಮ ಮತ್ತು ಸಹೋದರ ಬಲರಾಮ ಕೂಡ ಶಿಕ್ಷಣ ಪಡೆದರು. ಇಲ್ಲಿ ಅವರು 64 ದಿನಗಳಲ್ಲಿ 16 ಕಲೆಗಳು ಮತ್ತು 64 ವಿಜ್ಞಾನಗಳ ಜ್ಞಾನವನ್ನು ಪಡೆದರು. ಇಲ್ಲಿರುವ ಶಿವನ ದೇವಾಲಯವನ್ನು ಪಿಂಡೇಶ್ವರ ಮಹಾದೇವ ಎಂದು ಕರೆಯಲಾಗುತ್ತದೆ.

Shiva and standing Nandhi: ನಂದಿ ಇಲ್ಲಿ ಏಕೆ ನಿಂತಿದ್ದಾರೆ?

ಪೌರಾಣಿಕ ನಂಬಿಕೆಗಳ ಪ್ರಕಾರ, ಭಗವಾನ್ ಶಿವನು ಮಹರ್ಷಿಗಳ ಆಶ್ರಮಕ್ಕೆ ಕೃಷ್ಣನ ಬಾಲ್ಯದ ವಿನೋದವನ್ನು ನೋಡಲು ಬಂದಿದ್ದನು. ನಂದಿಯು ಶಿವ ಮತ್ತು ಬಾಲಗೋಪಾಲರನ್ನು ಅಂದರೆ ಶ್ರೀಕೃಷ್ಣನನ್ನು ಒಟ್ಟಿಗೆ ನೋಡಿದಾಗ, ಅವರು ಇಬ್ಬರನ್ನೂ ಗೌರವಿಸಿ ಎದ್ದುನಿಂತರು. ಈ ಕಾರಣದಿಂದಲೇ ಈ ದೇವಾಲಯದಲ್ಲಿ ನಂದಿಯ ಮೂರ್ತಿ ನಿಂತಿರುವುದು ಕಂಡುಬರುತ್ತದೆ. ನಂಬಿಕೆಯ ಪ್ರಕಾರ, ಈ ಶಿವ ದೇವಾಲಯವನ್ನು ದ್ವಾಪರ ಯುಗದಲ್ಲಿ ಸ್ಥಾಪಿಸಲಾಯಿತು.

Shiva and standing Nandhi: ನಂದಿ ವಿಗ್ರಹದ ಮಹತ್ವ

ಶಿವನ ದೇವಾಲಯದಲ್ಲಿ ನಂದಿಯ ವಿಗ್ರಹವಿದೆ. ನಂದಿಯ ಭಕ್ತಿ ಮತ್ತು ಶಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ. ನಂದಿಯನ್ನು ಭಗವಾನ್ ಶಿವನ ದೂತ ಎಂದೂ ಕರೆಯುತ್ತಾರೆ. ಆದ್ದರಿಂದ ಇಲ್ಲಿ ಜನರು ತಮ್ಮ ಇಚ್ಛೆಯನ್ನು ಶಿವನಿಗೆ ತಿಳಿಸಲು ನಂದಿಯ ಕಿವಿಯಲ್ಲಿ ಪಿಸುಗುಟ್ಟುತ್ತಾರೆ ಜೊತೆಗೆ, ನಂದಿಯನ್ನು ಇಲ್ಲಿ ಶಿವನ ವಾಹನವಾಗಿ ಪೂಜಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)