ರಕ್ಷಾ ಬಂಧನ ದಿನದಿಂದ 40 ದಿನವರೆಗೂ ಈ ಅಷ್ಟ ಲಕ್ಷ್ಮೀ ಮಂತ್ರ ಜಪಿಸಿ, ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ!

Shravan Purnima 2021: ಈ ಲಕ್ಷ್ಮೀ ಮಾಲಾ ಶ್ಲೋಕ ಜಪ- ಪೂಜೆ 40 ದಿನಗಳಿಗೇ ಸೀಮಿತಗೊಳಿಸಬೇಡಿ. ಜೀವನಪೂರ್ತಿ ಲಕ್ಷ್ಮೀ ಆರಾಧನೆ ಮಾಡುತ್ತಿರಿ. ಇದರಿಂದ ದೇವಿ ಸಂತುಷ್ಟಗೊಂಡು,ನಿಮ್ಮ ಜೀವನವನ್ನು ಸುಖಮಯವಾಗಿಟ್ಟಿರುತ್ತಾಳೆ.

ರಕ್ಷಾ ಬಂಧನ ದಿನದಿಂದ 40  ದಿನವರೆಗೂ ಈ ಅಷ್ಟ ಲಕ್ಷ್ಮೀ ಮಂತ್ರ ಜಪಿಸಿ, ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ!
ರಕ್ಷಾಬಂಧನ ದಿನದಿಂದ 40 ದಿನಗಳವರೆಗೂ ಈ ಅಷ್ಟ ಲಕ್ಷ್ಮೀ ಮಂತ್ರವನ್ನು ಜಪಿಸಿ, ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ!
Follow us
TV9 Web
| Updated By: ಆಯೇಷಾ ಬಾನು

Updated on: Aug 22, 2021 | 7:12 AM

ಶ್ರಾವಣ ಪೂರ್ಣಿಮೆ 2021: ರಕ್ಷಾಬಂಧನ ದಿನದಿಂದ 40 ದಿನಗಳವರೆಗೂ ಈ ಅಷ್ಟ ಲಕ್ಷ್ಮೀ ಮಂತ್ರವನ್ನು ಜಪಿಸಿ, ನಿಮ್ಮ ಭಾಗ್ಯದ ಬಾಗಿಲು ತೆರೆಯುತ್ತದೆ! ಶ್ರಾವಣ ಮಾಸದ ಹುಣ್ಣಿಮೆ ದಿನದಿಂದ ಮುಂದಿನ 40 ದಿನಗಳರೆಗೂ ಅಷ್ಟ ಲಕ್ಷ್ಮೀ ಮಂತ್ರ ಜಪಿಸುವ ಮೂಲಕ ಲಕ್ಷ್ಮೀ ದೇವಿಯನ್ನು ಸುಪ್ರಸನ್ನಗೊಳಿಸಬಹುದು. ಇದರಿಂದ ನಿಮ್ಮ ಧನ-ಕನದ ಸಮಸ್ಯೆ ನಿವಾರಣೆಯಾಗಿ ಶಾಂತಿ ನೆಮ್ಮದಿ ನೆಲೆಸುತ್ತದೆ.

ಶ್ರಾವಣ ಮಾಸದ ಕೊನೆಯ ದಿನ ಅಂದ್ರೆ ಆಗಸ್ಟ್​ 22 ಭಾನುವಾರ. ಇಂದು ಶ್ರಾವಣ ಹುಣ್ಣಿಮೆಯ ದಿನ. ಜೊತೆಗೆ ರಕ್ಷಾ ಬಂಧನದಂತಹ ಪವಿತ್ರ ಹಬ್ಬವೂ ಇದೆ. ಹುಣ್ಣಿಮೆ ಮುಹೂರ್ತ ಆಗಸ್ಟ್ 21 ಸಾಯಂಕಾಲ 07.02 ನಿಮಿಷದಿಂದ ಆಗಸ್ಟ್​ 22 ಸಂಜೆ 05.33 ವರೆಗೂ ಇರುತ್ತದೆ. ಮಹಾದೇವ ಈಶ್ವರನ ಜೊತೆಗೆ ಭಗವಂತ ವಿಷ್ಣು ಮತ್ತು ಮಹಾಲಕ್ಷ್ಮೀಯ ಪೂಜೆ ಮಾಡುವುದರಿಂದ ತುಂಬಾ ಶುಭದಾಯಕವಾಗಿರುತ್ತದೆ.

ಈಶ್ವರನ ಜೊತೆಗೆ ಭಗವಂತ ವಿಷ್ಣು ಮತ್ತು ಮಹಾಲಕ್ಷ್ಮೀಯ ಕೃಪೆ ಕುಟುಂಬದ ಮೇಲಿರಬೇಕು. ಹಾಗಾಗಿ ಈ ತ್ರಿಮೂರ್ತಿಗಳನ್ನು ಒಟ್ಟಿಗೇ ಪೂಜಿಸುವುದರಿಂದ ಜಿವನ ಪರ್ಯಂತ ಮನೆಯಲ್ಲಿ ಧನ-ಧಾನ್ಯ, ಸಂಪತ್ತು ಧಾರಾಳವಾಗಿ ಇರುತ್ತದೆ. ಒಂದುವೇಳೆ ನಿಮ್ಮಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂದಾದರೆ ಈ ಹುಣ್ಣಿಮೆಯ ದಿನ ಅಷ್ಟ ಲಕ್ಷ್ಮೀಪೂಜೆಯಲ್ಲಿ ತೊಡಗಿ, ದೇವಿಯನ್ನು ಒಲಿಸಿಕೊಳ್ಳಿ. 40 ದಿನಗಳವರೆಗೂ ಈ ಪೂಜೆಯನ್ನು ಇಟ್ಟುಕೊಳ್ಳಿ. ಮುಂದೆಂದೂ ಆರ್ಥಿಕ ಸಂಕಷ್ಟ ಎದುರಾಗದ ಹಾಗೆ ನಿಮ್ಮ ಜೀವನ ಸುಧಾರಿಸುತ್ತದೆ.

ಅಷ್ಟ ಲಕ್ಷ್ಮೀ ಪೂಜಾ ವಿಧಾನ ಹೀಗಿರಲಿ:

ಅಷ್ಟ ಲಕ್ಷ್ಮೀ ಪೂಜೆ ಮಾಡುವ ಮುನ್ನ ಲಕ್ಷ್ಮೀ ದೇವಿಯ ಫೋಟೋ ಖರೀದಿಸಬೇಕು. ಅದು ಹೇಗಿರಬೇಕು ಅಂದ್ರೆ ಲಕ್ಷ್ಮೀದೇವಿ ಸುಪ್ರಸನ್ನಳಾಗಿ ಕಮಲದ ಹೂವಿನ ಮೇಲೆ ಆಸೀನಳಾಗಿರಬೇಕು. ದೇವಿಯ ಎರಡೂ ಬದಿಯಲ್ಲಿ ಆನೆಗಳು ದೇವಿಯ ಸೇವಾನಿರತವಾಗಿರಬೇಕು. ಇಂತಹ ಲಕ್ಷ್ಮಿಯನ್ನು ಜ್ಯೇಷ್ಠಾ ಲಕ್ಷ್ಮೀ ಎಂದು ಕರೆಯುತ್ತಾರೆ. ಈ ಮಾದರಿಯ ಲಕ್ಷ್ಮೀ ದೇವಿ ಫೋಟೋ ಖರೀದಿಸಿ ತಂದು ಪೂಜೆಗೆ ಸಜ್ಜುಗೊಳಿಸಬೇಕು. ಕಮಲದ ಹಾರ ಮಾಡಿಕೊಂಡು ದೇವಿಯ ಫೋಟೋಗೆ ಹಾಕಬೇಕು. ಮುಂದಿನ 40 ದಿನಗಳ ಕಾಲ ದೇವಿಯನ್ನು ಹೀಗೆ ಪೂಜೆ ಮಾಡುತ್ತಿರಬೇಕು.

ಈ ಲಕ್ಷ್ಮೀ ಮಾಲಾ ಶ್ಲೋಕ ಜಪಿಸಿ: ಓಂ ಶ್ರೀಂ ಹ್ರೀಂ ಶ್ರೀಂ ಕಮಲೆ ಕಮಲಾಲಯೆ ಪ್ರಸೀದ್ ಪ್ರಸೀದ್ ಶ್ರೀಂ ಹ್ರೀಂ ಶ್ರೀಂ ಓಂ ಮಹಾಲಕ್ಷ್ಮೈ ನಮಃ ಹೀಗೆ ಉಚ್ಛರಿಸುತ್ತಾ, ದೇವಿಯ ಆರಾಧನೆಯಲ್ಲಿ ತೊಡಗಿ. ಪ್ರತಿ ದಿನ ಕನಿಷ್ಠ 29 ಬಾರಿ ಶ್ಲೋಕ ಹೇಳಿಕೊಳ್ಳಿ. ಇದನ್ನು 40 ದಿನ ಕಾಲ ಮಾಡಿ.

40 ಕನ್ಯಾಮಣಿಗಳಿಗೆ ಪಾದ ಪೂಜೆ ಮಾಡಿ, ಊಟ ಹಾಕಿ

ಲಕ್ಷ್ಮೀ ಮಾಲಾ ಶ್ಲೋಕ ಜಪಿಸುತ್ತಾ ಕಮಲ ಪತ್ರೆ, ಬಿಲ್ವ ಪತ್ರೆ, ಶ್ರೀಗಂಧದೊಂದಿಗೆ ಸಿಹಿ ಪಾಯಸ ಮಾಡಿ 108 ಆಹುತಿಗಳನ್ನು ನೀಡಿ, ಹೋಮ ಹವನ ಮಾಡಬೇಕು. ಹವನ ಆದ ಮೇಲೆ 5 ಅಥವಾ 7 ಕನ್ಯಾಮಣಿಗಳ ಕಾಲು ತೊಳೆದು ಪೂಜೆ ಮಾಡಿ. ಬಳಿಕ ಆಮಂತ್ರಿತ ಕನ್ಯಾಮಣಿಗಳಿಗೆ ಊಟ ಬಡಿಸಿ. ಇದರಿಂದ ಲಕ್ಷ್ಮೀ ದೇವಿ ಸುಪ್ರಸನ್ನಗೊಳ್ಳುವಳು. ಇದರಿಂದ ನಿಮ್ಮನ್ನು ಕಾಡುತ್ತಿರುವ ಎಲ್ಲ ದಾರಿದ್ಯ್ರಗಳು ನಿವಾರಣೆಯಾಗುತ್ತವೆ. ವ್ಯಾಪಾರದಲ್ಲಿದ್ದರೆ ಅಪಾರ ಅಭಿವೃದ್ಧಿ ಕಾಣುತ್ತೀರಿ. ಉದ್ಯೋಗದಲ್ಲಿ ಪ್ರಮೋಶನ್​ ಸಿಗುತ್ತದೆ. ಜೀವನದಲ್ಲಿ ಬೇಗಬೇಗನೇ ಮುನ್ನಡೆ ಸಾಧಿಸುತ್ತೀರಿ.

ಈ ಲಕ್ಷ್ಮೀ ಮಾಲಾ ಶ್ಲೋಕ ಜಪ- ಪೂಜೆ 40 ದಿನಗಳಿಗೇ ಸೀಮಿತಗೊಳಿಸಬೇಡಿ. ಜೀವನಪೂರ್ತಿ ಲಕ್ಷ್ಮೀ ಆರಾಧನೆ ಮಾಡುತ್ತಿರಿ. ಇದರಿಂದ ದೇವಿ ಸಂತುಷ್ಟಗೊಂಡು,ನಿಮ್ಮ ಜೀವನವನ್ನು ಸುಖಮಯವಾಗಿಟ್ಟಿರುತ್ತಾಳೆ.

ಶ್ರಾವಣ ಮಾಸದ ಹಬ್ಬಗಳು; 2021ರಲ್ಲಿ ರಕ್ಷಾ ಬಂಧನ, ಕೃಷ್ಣ ಜನ್ಮಾಷ್ಠಮಿ ಯಾವಾಗ?

(Shravan Purnima 2021 chant this-mantra for next 40 days from rakshabandhan money problem will solve)