ಈ 3 ರಾಶಿಯವರು ಲವ್​ ಅಂದ್ರೆ ಗಾಬರಿ ಬೀಳ್ತಾರೆ, ಅರೇಂಜ್ಡ್​​ ಮ್ಯಾರೇಜ್​ಗೆ ಜೋತುಬೀಳುತ್ತಾರೆ! ನೀವೂ ಹಾಗೇನಾ!?

ಮದುವೆ ಎಂಬುದು ಜೀವಮಾನದ ಲಾಟರಿ! ಗೆಲುವು ಕಟ್ಟಿಟ್ಟಬುತ್ತಿ ಅನ್ನುವ ಹಾಗಿಲ್ಲ. ಅದೃಷ್ಟ ಕೈಹಿಡಿಯುತ್ತದೆ ಅನ್ನುವ ಖಾತ್ರಿ ಇರುವುದಿಲ್ಲ. ವಿರೋಧಾಭಾಸಗಳೂ ಸಹ ಸಂಭವಿಸುತ್ತದೆ. ಆಯ್ಕೆ ಭಿನ್ನವಾಗುತ್ತದೆ. ಅಂತಹುದರಲ್ಲಿ ಯಾವ ಧೈರ್ಯದ ಮೇಲೆ ಅರೇಂಜ್ಡ್​​ ಮ್ಯಾರೇಜ್​ಗೆ ಜೋತುಬೀಳುವುದು ಅಲ್ಲವಾ? ಆದರೂ ಈ ಮೂರು ರಾಶಿಯ ಜನ ಖಚಿತವಾಗಿಯೂ ನಮಗೆ ಅರೇಂಜ್ಡ್​​ ಮ್ಯಾರೇಜ್ ಅಂಟಿಕೊಂಡುಬಿಡುತ್ತಾರೆ!

ಈ 3 ರಾಶಿಯವರು ಲವ್​ ಅಂದ್ರೆ ಗಾಬರಿ ಬೀಳ್ತಾರೆ, ಅರೇಂಜ್ಡ್​​ ಮ್ಯಾರೇಜ್​ಗೆ ಜೋತುಬೀಳುತ್ತಾರೆ! ನೀವೂ ಹಾಗೇನಾ!?
ಈ 3 ರಾಶಿಯವರು ಲವ್​ ಅಂದ್ರೆ ಗಾಬರಿ ಬೀಳ್ತಾರೆ! ಅರೇಂಜ್ಡ್​​ ಮ್ಯಾರೇಜ್​ಗೆ ಜೋತುಬೀಳುತ್ತಾರೆ! ನೀವೂ ಹಾಗೇನಾ!?
Follow us
TV9 Web
| Updated By: preethi shettigar

Updated on: Aug 21, 2021 | 7:17 AM

ಜ್ಯೋತಿಷ್ಯದಲ್ಲಿ ಬರುವ ಹನ್ನೆರಡು ರಶಿಗಳ ಪೈಕಿ ನಿರ್ದಿಷ್ಟವಾಗಿ ಮೂರು ರಾಶಿಯ ಜನ ತಾವು ಪ್ರೀತಿ-ಪ್ರೇಮದ ವಿಷಯದಲ್ಲಿ ಮಂದಗಾಮಿಗಳು! ಅಪ್ಪಿತಪ್ಪಿಯೂ ಪ್ರೇಮಕೋಟೆಯೊಳಕ್ಕೆ ಸುಳಿಯುವುದಿಲ್ಲ. ನಮಗೆ ಅರೇಂಜ್ಡ್​​ ಮ್ಯಾರೇಜ್ ಪಸಂದಾಗಿರುತ್ತದೆ ಎನ್ನುತ್ತಾರೆ. ನೀವೂ ಹಾಗೇನಾ!?

ಮದುವೆ ಎಂಬುದು ಜೀವಮಾನದ ಲಾಟರಿ! ಗೆಲುವು ಕಟ್ಟಿಟ್ಟಬುತ್ತಿ ಅನ್ನುವ ಹಾಗಿಲ್ಲ. ಅದೃಷ್ಟ ಕೈಹಿಡಿಯುತ್ತದೆ ಅನ್ನುವ ಖಾತ್ರಿ ಇರುವುದಿಲ್ಲ. ವಿರೋಧಾಭಾಸಗಳೂ ಸಹ ಸಂಭವಿಸುತ್ತದೆ. ಆಯ್ಕೆ ಭಿನ್ನವಾಗುತ್ತದೆ. ಅಂತಹುದರಲ್ಲಿ ಯಾವ ಧೈರ್ಯದ ಮೇಲೆ ಅರೇಂಜ್ಡ್​​ ಮ್ಯಾರೇಜ್​ಗೆ ಜೋತುಬೀಳುವುದು ಅಲ್ಲವಾ? ಆದರೂ ಈ ಮೂರು ರಾಶಿಯ ಜನ ಖಚಿತವಾಗಿಯೂ ನಮಗೆ ಅರೇಂಜ್ಡ್​​ ಮ್ಯಾರೇಜ್ ಅಂಟಿಕೊಂಡುಬಿಡುತ್ತಾರೆ!

ವಾಸ್ತವವಾಗಿ ಲವ್​ ಮ್ಯಾರೇಜ್​ ಅಥವಾ ಅರೇಂಜ್ಡ್​​ ಮ್ಯಾರೇಜ್ ಎಂಬುದು ನಿಮ್ಮ ಜೀವಮಾನದ ಅದೃಷ್ಟವನ್ನು ನಿರ್ಧರಿಸಿಬಿಡುತ್ತದೆ. ಅದು ಅದೃಷ್ಟವೋ,ದುರಾದೃಷ್ಟವೋ ಎಂಬುದು ವಿವಾಹವಾದ ಬಳಿಕವಷ್ಟೇ ಅರಿವಿಗೆ ಬರುತ್ತದೆ. ಆದರೂ ಬಹುತೇಕ ಮಂದಿ ಅರೇಂಜ್ಡ್​​ ಮ್ಯಾರೇಜ್​ಗೆ ಅಂಕಿತವಾಗುತ್ತಾರೆ. ಸರಿಯಾದ ಕಾಲದಲ್ಲಿ ತಮ್ಮ ಪ್ರೀತಿ-ಪ್ರೇಮವನ್ನು ಜಗಜ್ಜಾಹೀರು ಗೊಳಿಸದೆ ಅರೇಂಜ್ಡ್​​ ಮ್ಯಾರೇಜ್​ಗೆ ಜೈ ಜೈ ಅಂದುಬಿಡುತ್ತಾರೆ. ಏಕೆಂದರೆ ಪ್ರೀತಿ-ಪ್ರೇಮ ಅಂದರೆ ಅವರಲ್ಲಿ ಅವ್ಯಕ್ತ ಭಯ ಮನೆಮಾಡಿರುತ್ತದೆ. ಲವ್​ ಅಂದರೆ ಹಿಂಜರಿಯುತ್ತಾರೆ. ಬನ್ನೀ ಹಾಗಾದರೆ ಆ ಮೂರು ರಾಶಿಯ ಜನ ಯಾರು ಅಂತಾ ತಿಳಿದುಕೊಳ್ಳೋಣ.

1. ಸಿಂಹ ರಾಶಿ Aries: ಜಾತಕದ ಪ್ರಕಾರ ಈ ರಾಶಿ ಹೊಂದಿರುವ ಜನ ಸಿಂಹದಂತಹ ಸ್ವಭಾವ ಹೊಂದಿರುತ್ತಾರೆ. ಅತ್ಯಂತ ಪ್ರಭಾವಶಾಲಿಗಳಾಗಿರುತ್ತಾರೆ. ಮುಕ್ತ ಮುಕ್ತವಾಗಿ ಜೀವನ ನಡೆಸಲು ಇಚ್ಛಿಸುತ್ತಾರೆ. ಇವರಿಗೆ ಯಾವುದೇ/ ಯಾರದೇ ಬಂಧನದಲ್ಲಿ ಇರಲು ಇಷ್ಟವಿರುವುದಿಲ್ಲ. ಹಾಗಾಗಿಯೇ ಯಾವುದೇ ಜೀವಮಾನ ಸಂಬಂಧದಲ್ಲಿ ಸಿಕ್ಕಿಹಾಕಿಕೊಳ್ಳಲು ಹೋಗುವುದಿಲ್ಲ. ಈ ರಾಶಿಯವರ ಮೇಲೆ ಮದುವೆಯ ಒತ್ತಡ ಹಾಕಿದಾಗ ಅರೇಂಜ್ಡ್​​ ಮ್ಯಾರೇಜ್​ ಆಯ್ಕೆ ಮಾಡಿಕೊಳ್ಳುತ್ತಾರೆ. ಮತ್ತು ತಮ್ಮಿಚ್ಛೆಗೆ ಅನುಸಾರವಾಗಿ ನಡೆದುಕೊಳ್ಳಬಹುದಾದ ವ್ಯಕ್ತಿಯ ಆಯ್ಕೆಯಲ್ಲಿ ತೊಡಗುತ್ತಾರೆ. ಅಂತಹ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದ್ದಾಗ ಯಾರಾದರೂ ಸಿಕ್ಕಿಬಿಟ್ಟರೆ ಅವರನ್ನೇ ಒಪ್ಪಿ, ಅಪ್ಪಿಬಿಡುತ್ತಾರೆ, ಅದು ಜೀವನ ಪರ್ಯತ ಎಂಬುದು ಗಮನಾರ್ಹವಾಗಿರುತ್ತದೆ.

2. ಕನ್ಯಾ ರಾಶಿ Virgo: ಕನ್ಯಾ ರಾಶಿ ಜನ ತುಂಬಾ ತಿಳಿವಳಿಕೆಯುಳ್ಳವರು. ಬೇರೆಯವರ ಅನುಭವಗಳನ್ನು ನೋಡುತ್ತಾ, ಜೀವನ ಪಾಠ ಕಲಿಯುತ್ತಾ ಜೀವನದಲ್ಲಿ ಮುಂದೆಬರುತ್ತಾರೆ. ಆದರೆ ಮದುವೆ ವಿಷಯ ಬಂದಾಗ ಇವರಿಗೆ ಇದು ಸರಿಹೊಂದುವುದಿಲ್ಲ. ಅಕ್ಕಪಕ್ಕದವರ ಸಂಬಂಧಗಳು ಬಿಗಡಾಯಿಸಿರುವುದನ್ನು ನೋಡಿ, ಮುರಿದುಬಿದ್ದಿರುವುದನ್ನು ನೋಡಿ ಇವರ ಮನದಲ್ಲಿ ಅಪನಂಬಿಕೆ ಮೊಳಕೆ ಒಡೆಯುತ್ತದೆ. ಮದುವೆಯ ಬಗ್ಗೆ ಇವರಲ್ಲಿ ತಪ್ಪು ತಿಳಿವಳಿಕೆ ಮೂಡುತ್ತದೆ. ಎಲ್ಲಿ ತಮಗೂ ಮೋಸ ಆಗುತ್ತದೋ ಎಂಬ ಆತಂಕ ಮನೆ ಮಾಡುತ್ತದೆ ಇವರಲ್ಲಿ. ಹಾಗಾಗಿಯೇ ಇವರು ವಿವಾಹ ಜೀವನದಲ್ಲಿ ಯಾವುದೇ ರಿಸ್ಕ್​​ ತೆಗೆದುಕೊಳ್ಳಲು ಹೋಗುವುದಿಲ್ಲ. ಸೈಲೆಂಟಾಗಿ ಅರೇಂಜ್ಡ್​​ ಮ್ಯಾರೇಜ್​ ಆಯ್ಕೆ ಓಕೆ ಅಂದುಬಿಡುತ್ತಾರೆ.

3. ಧನು ರಾಶಿ Sagittarius: ಧನು ರಾಶಿ ಜನ ಸಾಹಸಿಗಳಾಗಿರುತ್ತಾರೆ. ಆದರೆ ಪ್ರೀತಿ ಪ್ರೇಮದಲ್ಲಿ ಯಾವುದೇ ರಿಸ್ಕ್​ ತೆಗೆದುಕೊಳ್ಳುವುದಿಲ್ಲ. ಜೀವನದಲ್ಲಿ ಒಮ್ಮೆ ಯಾರ ಜೊತೆಯಾದರೂ ಅಟ್ಯಾಚ್​​ಮೆಂಟ್​​ ಬೆಳೆಸಿಕೊಂಡುಬಿಟ್ಟರೆ ಅವರೊಟ್ಟಿಗೆ ಇಡೀ ಜೀವನ ನಡೆಸಲು ನಿರ್ಧರಿಸಿಬಿಡುತ್ತಾರೆ. ಯಾರೊಂದಿಗಾದರೂ ಅಟ್ಯಾಚ್​​ಮೆಂಟ್​​ ಬೆಳೆಸಿಕೊಂಡ ಮೇಲೆ ಅಕಸ್ಮಾತ್​ ಅವರು ತಮಗೆ ದಕ್ಕದೇ ಹೋಗಿಬಿಟ್ಟರೆ ಎಂಬ ಭೀತಿ ಅವರನ್ನು ಕಾಡುತ್ತದೆ. ಹಾಗಾಗಿಯೇ ಆ ಅಟ್ಯಾಚ್​​ಮೆಂಟ್​ಗೆ ಜೀವನಪೂರ್ತಿ ಅಟ್ಯಾಚ್ ಆಗಿಬಿಡುತ್ತಾರೆ. ಅದರಾಚೆಗೆ ಜೀವನದಲ್ಲಿ ಯಾವುದೇ ರಿಸ್ಕ್​ ತೆಗೆದುಕೊಳ್ಳುವುದಿಲ್ಲ.

(people of these 3 zodiac signs scared of love but always opt for arranged marriage)

ಇದನ್ನೂ ಓದಿ: Popular Zodiac Signs: 12 ರಾಶಿಗಳವರ ಪೈಕಿ ಈ 5 ರಾಶಿಯವರು ಅತ್ಯಂತ ಜನಪ್ರಿಯರು

ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್