ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮೊಂದಿಗಿರಲು ಏನು ಮಾಡಬೇಕು? ಇಲ್ಲಿದೆ ಸರಳ ಟಿಪ್ಸ್

“ದುಡಿಮೆಯೇ ದುಡ್ಡಿನ ದೇವರು” ಎನ್ನುವುದು ಮೂಲ ಸತ್ಯವಾದರೂ ನಮ್ಮ ದೈನಂದಿನ ಬದುಕಿನ ಆಚರಣೆಗಳಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡು ಅನುಸರಿಸಿದ್ದೇ ಆದರೆ ನಮಗೆ ”ಲಕ್ಷ್ಮಿ ಕಟಾಕ್ಷ”ವಾಗುತ್ತದೆ. ಲಕ್ಷ್ಮಿಯು ನಮ್ಮನ್ನರಸಿ ಬರುತ್ತಾಳೆ. ನಮ್ಮಲ್ಲಿ ನೆಲೆಸುತ್ತಾಳೆ.

ಲಕ್ಷ್ಮಿ ದೇವಿಯ ಕೃಪೆ ಸದಾ ನಿಮ್ಮೊಂದಿಗಿರಲು ಏನು ಮಾಡಬೇಕು? ಇಲ್ಲಿದೆ ಸರಳ ಟಿಪ್ಸ್
ಲಕ್ಷ್ಮೀ ದೇವಿ
Follow us
TV9 Web
| Updated By: ಆಯೇಷಾ ಬಾನು

Updated on: Aug 03, 2022 | 6:30 AM

ಹುಟ್ಟಿದಾಗಿನಿಂದ ಮಣ್ಣಿಗೆ ಹೋಗುವ ತನಕ ಮನುಷ್ಯನನ್ನು ಬೆಳಕು-ನೆರಳಿನಂತೆ ಹಿಂಬಾಲಿಸುವುದೇ ಈ ಹಣ. ಬೆಳಗ್ಗೆ ಹಾಸಿಗೆಯಿಂದ ಎದ್ದಾಗಿಂದ ಮರಳಿ ಹಾಸಿಗೆಗೆ ಮರಳುವ ತನಕ ಹಣವಿಲ್ಲದೇ ಬದುಕು ತೂಗುವುದು ಖಂಡಿತ ಅಸಾಧ್ಯ. ಅನ್ನದಿಂದ ಹಿಡಿದು ಚಿನ್ನಕೊಳ್ಳುವ ತನಕ ಹಣ ಬೇಕೇ ಬೇಕು. ಈಚಿನ ದಿನಗಳಲ್ಲಂತೂ “ಹಣ” ಮನುಷ್ಯನಿಗೆ ಆಮ್ಲಜನಕದಷ್ಟೇ ಅತ್ಯವಶ್ಯವಾಗಿದೆ. ಹಾಗಾಗಿ ಈಗ ಭೂಮಿಯು ಸೂರ್ಯನನ್ನು ಸುತ್ತುವ ಹಾಗೆ ಮನುಷ್ಯ ಹಣವನ್ನು ಸುತ್ತಿಸುತ್ತಿ ಬರುತ್ತಿದ್ದಾನೆ. ಪ್ರತಿಕ್ಷಣವೂ ಹಣದ ಜಪವನ್ನೇ ಮಾಡುತ್ತಿರುತ್ತಾನೆ. ಆದರೆ ಈ ಹಣ ಮಾಯಾಜಿಂಕೆಯಂಥದ್ದು. ಏನೇ ಹಗಲಿರುಳು ದುಡಿದರೂ, ಎಷ್ಟೇ ಭಗೀರಥ ಪ್ರಯತ್ನ ಮಾಡಿದರೂ ಹಣ ಎನ್ನುವುದು ಕೆಲವರಿಗೆ ಕೈ ಹತ್ತುವುದೇ ಇಲ್ಲ. ಮುನ್ನೂರರವತ್ತೈದು ದಿನಗಳು ದುಡಿದರೂ ಮೂರು ಹೊತ್ತು ಹೊಟ್ಟೆ ತುಂಬಾ ತಿನ್ನಲಾರದ ಸ್ಥಿತಿ. ಅಷ್ಟರ ಮಟ್ಟಿಗೆ ದಾರಿದ್ರ್ಯ ಎನ್ನುವುದು ಜೊತೆಯಲ್ಲೇ ಅಂಟಿಕೊಂಡಿರುತ್ತದೆ. ಇಂಥಾ ದಾರಿದ್ರ್ಯಗಳನ್ನು ದೂರ ಮಾಡಿಕೊಳ್ಳುವುದು ಹೇಗೆ? ಆದಾಯವನ್ನು ಹೆಚ್ಚಿಸಿಕೊಳ್ಳುವುದು ಹೇಗೆ? ಹಣವನ್ನು ಉಳಿಸಿಕೊಳ್ಳುವುದು ಹೇಗೆ? ಮುಖ್ಯವಾಗಿ “ವರ ಮಹಾಲಕ್ಷ್ಮಿ”ಯನ್ನು ಒಲಿಸಿಕೊಳ್ಳುವುದು ಹೇಗೆ? ಎಂಬ ವಿವರ ಇಲ್ಲಿದೆ.

ಹಣವನ್ನು ಗಳಿಸಲು, ಉಳಿಸಲು ಹಣ ನಮ್ಮಲ್ಲೇ ನೆಲೆಸಲು ನಮಗೆ ಲಕ್ಷ್ಮಿ ಅನುಗ್ರಹವಾಗಬೇಕು. ಏಕೆಂದರೆ “ಲಕ್ಷ್ಮಿಯೇ” ಕನಕ, ಕಾಂಚಾಣಗಳಿಗೆಲ್ಲ ಅಧಿಪತಿ ಸಾಮ್ರಾಜ್ಞಿ. ”ಲಕ್ಷ್ಮಿ ಅನುಗ್ರಹ”ವೊಂದಿದ್ದರೆ ಸಾಕು. ನಮ್ಮ ದಾರಿದ್ರ್ಯ ದೂರಾಗಿ ಸದಾಕಾಲ ಹಣದ ಝಣಝಣದ ಸದ್ದು ನಮ್ಮನ್ನು ಸುತ್ತುವರೆದಿರುತ್ತದೆ.

ಈ ಕಾಂಚಾಣ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ?

“ದುಡಿಮೆಯೇ ದುಡ್ಡಿನ ದೇವರು” ಎನ್ನುವುದು ಮೂಲ ಸತ್ಯವಾದರೂ ನಮ್ಮ ದೈನಂದಿನ ಬದುಕಿನ ಆಚರಣೆಗಳಲ್ಲಿ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಂಡು ಅನುಸರಿಸಿದ್ದೇ ಆದರೆ ನಮಗೆ ”ಲಕ್ಷ್ಮಿ ಕಟಾಕ್ಷ”ವಾಗುತ್ತದೆ. ಲಕ್ಷ್ಮಿಯು ನಮ್ಮನ್ನರಸಿ ಬರುತ್ತಾಳೆ. ನಮ್ಮಲ್ಲಿ ನೆಲೆಸುತ್ತಾಳೆ.

“ಲಕ್ಷ್ಮಿ ಕಟಾಕ್ಷ”ಕ್ಕಾಗಿ ನಾವು ಮಾಡಬೇಕಾದದ್ದೇನು?

  1. ಸಮುದ್ರರಾಜನ ಮಗಳಾದ ಲಕ್ಷ್ಮಿದೇವಿಯನ್ನು ಶ್ರೀಮನ್ನಾರಾಯಣನು ಆಕರ್ಷಿಸಿದ್ದರಿಂದ ಲಕ್ಷ್ಮಿಯು ನಾರಾಯಣನ ವಕ್ಷಸ್ಥಳವನ್ನು ಸೇರಿ ಲಕ್ಷೀನಾರಾಯಣರಾದರು. ಈ ಲಕ್ಷ್ಮೀನಾರಾಯಣರ ಆರಾಧನೆಯನ್ನು ಸದಾಕಾಲ ಮಾಡುವುದರಿಂದ ನಿಮಗೆ ಲಕ್ಷ್ಮಿಕಟಾಕ್ಷವಾಗುತ್ತದೆ.\
  2. ಶ್ರೀಮನ್ನಾರಾಯಣನ ಸೇವೆಯನ್ನು ಪೂಜೆಯ ಮೂಲಕ ಅಥವಾ ಜಪದ ಮೂಲಕ ನೀವು ಮಾಡಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಸದಾ ಲಕ್ಷ್ಮಿ ತಾಂಡವವಾಡುತ್ತಾಳೆ.
  3. “ಓಂ ಓಂ ನಮೋ ನಾರಾಯಣಾಯ” ಈ ಮಂತ್ರವನ್ನು ಸದಾಕಾಲ ನೀವು ಜಪಿಸಿದ್ದೇ ಆದಲ್ಲಿ ನಿಮ್ಮ ಮನೆಯಲ್ಲಿ ಲಕ್ಷ್ಮಿಕಟಾಕ್ಷವಾಗುತ್ತದೆ.
  4. “ಓಂ ಓಂ ನಮೋ ನಾರಾಯಣಾಯ” ಈ ಅಷ್ಟಾಕ್ಷರಿ ನಾರಾಯಣ ಜಪವನ್ನು ಅಕ್ಷರ ಲಕ್ಷ ಸಂಖ್ಯೆಯಲ್ಲಿ ಜಪಿಸುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮಿಯು ಸದಾ ಕಾಲ ನಿಲ್ಲುವಳು.
  5. ಈ ನಾರಾಯಣ ಜಪವನ್ನು ಲಕ್ಷ ಸಂಖ್ಯೆಯಲ್ಲಿ ಮಾಡಿ ತರ್ಪಣ, ಹೋಮ, ಅರ್ಚನೆ, ನಮಸ್ಕಾರ ಹಾಗೂ ಬ್ರಾಹ್ಮಣ ಭೋಜನ ಕ್ರಮದಲ್ಲಿ ಅನುಷ್ಠಾನ ಮಾಡಿದಾಗ ನಿಮಗೆ ಸದಾಕಾಲ ತಾಯಿ ಲಕ್ಷ್ಮಿ ಪ್ರಾಪ್ತಿಯಾಗುತ್ತಾಳೆ.
  6. “ಓಂ ನಮೋ ಭಗವತೇ ವಾಸುದೇವಾಯ” ಈ ಕೃಷ್ಣನ ಮಂತ್ರವನ್ನು ಒಂದು ಲಕ್ಷ ಸಾರಿ ಜಪಿಸಿದರೂ ಮಹಾಲಕ್ಷ್ಮಿಯ ಅನುಗ್ರಹವಾಗುತ್ತದೆ.
  7. “ಶ್ರೀಲಕ್ಷ್ಮೀನಾರಾಯಣ ಪಾರಾಯಣ”ವನ್ನು ಗುರುಮುಖದಿಂದ ಉಪದೇಶ ಪಡೆದು 108 ಬಾರಿ ಜಪಿಸುವುದರಿಂದ ಲಕ್ಷಿ ಪ್ರಾಪ್ತಿಯಾಗುತ್ತದೆ.
  8. “ಲಕ್ಷ್ಮೀನಾರಾಯಣ ಪಾರಾಯಣ”ವನ್ನು ಏಕೋತ್ತರವಾರ ಕ್ರಮದಲ್ಲಿ ಅಂದರೆ ಮೊದಲನೆಯ ದಿನ ಒಂದು ಪಾರಾಯಣ, ಎರಡನೆಯ ದಿನ ಎರಡು ಪಾರಾಯಣ, ಮೂರನೆಯ ದಿನ ನಾಲ್ಕು ಪಾರಾಯಣ, ನಾಲ್ಕನೆಯ ದಿನ ಎಂಟು ಪಾರಾಯಣ, ಐದನೆಯ ದಿನ ಹದಿನಾರು ಪಾರಾಯಣ, ಆರನೆಯ ದಿನ ಮುವ್ವತ್ತೆರಡು ಪಾರಾಯಣ, ಏಳನೆಯ ದಿನ ಅರವತ್ತನಾಲ್ಕು ಪಾರಾಯಣ, ಎಂಟನೆಯದಿನ ನೂರಾ ಇಪ್ಪತ್ತೆಂಟು ಪಾರಾಯಣ, ಒಂಬತ್ತನೆಯ ದಿನ ಎರಡು ನೂರಾ ಐವತ್ತಾರು ಪಾರಾಯಣ] ಮಾಡುವುದರಿಂದ ಸದಾಕಾಲ ಲಕ್ಷ್ಮಿ ಪ್ರಾಪ್ತಿಯಾಗುತ್ತಾಳೆ.
  9. “ನಾರಾಯಣ ಹೃದಯ”ವನ್ನು ಒಂದು ಸಾವಿರದ ಎಂಟು ಸಲ ಪಠಿಸುವುದರಿಂದಲೂ ಲಕ್ಷ್ಮಿ ಅನುಗ್ರಹವಾಗುತ್ತಾಳೆ.
  10. “ಮಹಾಲಕ್ಷ್ಮಿ ಹೃದಯ”ವನ್ನು ಒಂದು ಸಾವಿರದ ಎಂಟು ಬಾರಿ ಪಠಿಸುವುದರಿಂದ ಲಕ್ಷ್ಮಿ ಅನುಗ್ರಹವಾಗುತ್ತದೆ.

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ