ನವರಾತ್ರಿ 2021 ಆರನೇ ದಿನ: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಕಾತ್ಯಾಯಿನಿ ಆರಾಧನೆ ಹೇಗೆ ಮಾಡಬೇಕು?

Navratri 2021:ಈಕೆಯನ್ನು ಪೂಜಿಸಿದ್ರೆ ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಎಂದು ಕಾತ್ಯಾಯಿನಿ ದೇವಿಯನ್ನು ಹೇಳಲಾಗುತ್ತದೆ.

ನವರಾತ್ರಿ 2021 ಆರನೇ ದಿನ: ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಕಾತ್ಯಾಯಿನಿ ಆರಾಧನೆ ಹೇಗೆ ಮಾಡಬೇಕು?
ಕಾತ್ಯಾಯಿನಿ

ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಆರಾಧನೆ ವಿಶೇಷ. ನವದುರ್ಗೆಯರಲ್ಲಿ ಕಾತ್ಯಾಯಿನಿಯದ್ದು ಆರನೇ ರೂಪ. ತ್ರಿಮೂರ್ತಿಗಳ ಅಂಶವೇ ಈ ದೇವಿ. ಈಕೆಯನ್ನು ಮೊದಲು ಕಾತ್ಯಾಯನ ಋಷಿ ಪೂಜಿಸಿದ್ದರಿಂದ ಇವಳಿಗೆ ಕಾತ್ಯಾಯಿನಿ ಎಂಬ ಹೆಸರು ಬಂತು. ಕಾತ್ಯಾಯಿನಿ ಅಂದ್ರೆ ಪರೋಪಕಾರದ ಪ್ರತಿರೂಪ. ಈ ದೇವಿಯದ್ದು ಅತ್ಯಂತ ಭವ್ಯ ಸ್ವರೂಪ. ಈಕೆಯನ್ನು ಪೂಜಿಸಿದ್ರೆ ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಎಂದು ಕಾತ್ಯಾಯಿನಿ ದೇವಿಯನ್ನು ಹೇಳಲಾಗುತ್ತದೆ. ಇವಳು ಸದಾ ಬಂಗಾರದಂತೆ ಹೊಳೆಯುತ್ತಾಳೆ. ಈ ದೇವಿಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈ ಅಭಯ ಮುದ್ರೆಯಲ್ಲಿದೆ. ಬಲಗಡೆಯ ಕೆಳಗಿನ ಕೈ ವರಮುದ್ರೆಯಲ್ಲಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ. ಎಡಗಡೆಯ ಕೆಳಗಿನ ಕೈಯಲ್ಲಿ ಕಮಲವಿದೆ. ಕಾತ್ಯಾಯಿನಿ ದುಷ್ಟರನ್ನು ಸಂಹರಿಸುವ, ಶಿಷ್ಟರ ಉದ್ಧಾರ ಮಾಡುವ ಶಕ್ತಿದೇವತೆ. ಈಕೆಯನ್ನು ಮಂತ್ರ ಸಹಿತವಾಗಿ ಆರಾಧಿಸಿದ್ರೆ ದುಷ್ಟಶಕ್ತಿಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.

ಕಾತ್ಯಾಯಿನಿ ಪೂಜೆ ವಿಧಾನ
ಬೆಳಗ್ಗೆ ಬೇಗ ಎದ್ದು ದಿನ ನಿತ್ಯದ ಚಟುವಟಿಕೆಗಳನ್ನು ಮುಗಿಸಿಕೊಂಡು ಸ್ನಾನ ಮಾಡಿ ಮೊದಲು ಪ್ರಥಮ ಪೂಜಿತ ಗಣಪತಿಯನ್ನು ಪೂಜಿಸಬೇಕು. ನಂತರ ಚೌಕಿಯ ಮೇಲೆ ದೇವಿಯ ಮೂರ್ತಿ ಅಥವಾ ಫೋಟೋವನ್ನು ಇರಿಸಿ ಹೂವನ್ನು ತೆಗೆದುಕೊಂಡು ಯಾ ದೇವಿ ಸರ್ವಭೂತೇಷು ಶಕ್ತಿ ರೂಪೇಣ ಸಂಸ್ಥಿತಾ
ನಮಸ್ತ್ಯೈ ನಮಸ್ತ್ಯೈ ನಮಸ್ತ್ಯೈ ನಮೋ ನಮಃ ಎಂದು ಜಪಿಸಿ ತಾಯಿಯ ಪಾದಕ್ಕೆ ಅರ್ಪಿಸಬೇಕು. ಬಳಿಕ ಕೆಂಪು ಬಟ್ಟೆ, 3 ಉಂಡೆ ಅರಿಶಿಣ, ಹಳದಿ ಹೂವುಗಳು, ಹಣ್ಣುಗಳು, ನೈವೇದ್ಯವನ್ನು ಅರ್ಪಿಸಬೇಕು. ಬಳಿಕ ದುರ್ಗಾ ಚಾಲೀಸವನ್ನು ಪಠಿಸಿ ತಾಯಿಯ ಮಂತ್ರಗಳನ್ನು ಪಠಿಸಿ ಆರತಿ ಬೆಳಗಬೇಕು.

ಕಾತ್ಯಾಯಿನಿ ಮಂತ್ರ
ಚಂದ್ರಹಾಸೋಜ್ವಲಕರಾ ಶಾರ್ದೂಲವರವಾಹನಾ
ಕಾತ್ಯಾಯನೀ ಶುಭಂ ದದ್ಯಾದ್ದೇವಿ ದಾನವಘಾತಿನೀ
ಕಲಿಯುಗದಲ್ಲಿ ಕಾತ್ಯಾಯಿನಿ ಮೋಕ್ಷ ನೀಡ್ತಾಳೆ ಅಂತಾ ನಮ್ಮ ಪುರಾಣಗಳು ಹೇಳುತ್ತವೆ. ಶ್ರೀಕೃಷ್ಣ ಪರಮಾತ್ಮನನ್ನು ಪತಿಯಾಗಿ ಪಡೆಯಲು ಗೋಪಿಕೆಯರು ಈ ದೇವಿಯನ್ನು ಪೂಜಿಸಿದ್ರಂತೆ. ನವರಾತ್ರಿಯ ಆರನೇ ದಿನ ಈ ತಾಯಿಯನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದ್ರೆ ವಿಶೇಷ ಫಲಗಳನ್ನು ಪಡೆಯಬಹುದು ಎನ್ನಲಾಗುತ್ತೆ.

ಕಾತ್ಯಾಯಿನಿ ದೇವಿ ಪೂಜಾ ಫಲಗಳು
* ಅಮೋಘ ಫಲಗಳನ್ನು ಕರುಣಿಸ್ತಾಳೆ
* ಧರ್ಮ, ಅರ್ಥ, ಕಾಮ, ಮೋಕ್ಷ ಪ್ರಾಪ್ತಿ
* ರೋಗಗಳು ದೂರ
* ಶೋಕ ಪರಿಹಾರ
* ಭಯ ನಿವಾರಣೆ
* ಜನ್ಮ ಜನ್ಮಾಂತರದ ಪಾಪ ಪರಿಹಾರ
* ಉತ್ತಮ ಪದವಿ ಪ್ರಾಪ್ತಿ
* ಶತ್ರುಗಳ ಶತ್ರುತ್ವ ಗುಣ ಧ್ವಂಸ
* ಸುಖ-ಶಾಂತಿ, ನೆಮ್ಮದಿ ಪ್ರಾಪ್ತಿ

ಇದನ್ನೂ ಓದಿ: ನವರಾತ್ರಿ 5ನೇ ದಿನ: ಇಂದು ಸ್ಕಂದಮಾತೆ ಪೂಜೆ; ಸಿಂಹಾಸನವೇರಲಿರುವ ಯದುವೀರ್ ಒಡೆಯರ್

Read Full Article

Click on your DTH Provider to Add TV9 Kannada