ನವರಾತ್ರಿ 5ನೇ ದಿನ: ಇಂದು ಸ್ಕಂದಮಾತೆ ಪೂಜೆ; ಸಿಂಹಾಸನವೇರಲಿರುವ ಯದುವೀರ್ ಒಡೆಯರ್

ಅರಮನೆಯ ಆವರಣದಲ್ಲಿ ಜಂಬೂ ಸವಾರಿ ರಿಹರ್ಸಲ್ ನಡೆಯುತ್ತಿದೆ ಅ.15ರಂದು ನಡೆಯುವ ಜಂಬೂ ಸವಾರಿಗೆ ರಿಹರ್ಸಲ್ ನಡೆಯುತ್ತಿದೆ. ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ರಿಹರ್ಸಲ್ ಮಾಡಲಾಗುತ್ತಿದೆ.

ನವರಾತ್ರಿ 5ನೇ ದಿನ: ಇಂದು ಸ್ಕಂದಮಾತೆ ಪೂಜೆ; ಸಿಂಹಾಸನವೇರಲಿರುವ ಯದುವೀರ್ ಒಡೆಯರ್
ಮೈಸೂರು ದಸರಾ (ಸಂಗ್ರಹ ಚಿತ್ರ)
Follow us
TV9 Web
| Updated By: sandhya thejappa

Updated on:Oct 11, 2021 | 10:45 AM

ಮೈಸೂರು: ಇಂದು (ಅ.11) ನವರಾತ್ರಿ 5ನೇ ದಿನ. ನವರಾತ್ರಿಯ ಐದನೇ ದಿನವಾದ ಇಂದು ಸ್ಕಂದಮಾತೆ ಪೂಜೆ ನೆರವೇರಲಿದೆ. ಸಂಪತ್ತು, ಸಮೃದ್ಧಿಗಾಗಿ ಸ್ಕಂದಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ. ದುರ್ಗಾದೇವಿಯ 5ನೇ ಅವತಾರ ಸ್ಕಂದಮಾತೆ. ಕೋಡಿ ಸೋಮೇಶ್ವರ ದೇವಾಲಯದಿಂದ ಕಳಸ ತಂದು ಪೂಜಾ ವಿಧಿವಿಧಾನ ನೆರವೇರುತ್ತದೆ. ಪಟ್ಟದ ಆನೆ, ಕುದುರೆ, ಹಸು, ಒಂಟೆಗೆ ಪೂಜೆ ಸಲ್ಲಿಸಲಾಗುವುದು. ಪೂಜಾ ವಿಧಿವಿಧಾನದ ಬಳಿಕ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನವನ್ನು ಏರುತ್ತಾರೆ.

ಅರಮನೆಯ ಆವರಣದಲ್ಲಿ ಜಂಬೂ ಸವಾರಿ ರಿಹರ್ಸಲ್ ನಡೆಯುತ್ತಿದೆ ಅ.15ರಂದು ನಡೆಯುವ ಜಂಬೂ ಸವಾರಿಗೆ ರಿಹರ್ಸಲ್ ನಡೆಯುತ್ತಿದೆ. ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ರಿಹರ್ಸಲ್ ಮಾಡಲಾಗುತ್ತಿದೆ. ರಿಹರ್ಸಲ್ ವೇಳೆ ಎಸಿಪಿ ಚಂದ್ರಶೇಖರ್ ಪುಷ್ಪಾರ್ಚನೆ ಮಾಡಿದರು. ಅಭಿಮನ್ಯುಗೆ ಕುಮ್ಕಿ ಆನೆಗಳಾದ ಚೈತ್ರಾ, ಕಾವೇರಿ ಆನೆ ಸಾಥ್ ನೀಡಿವೆ. ಅಶ್ವತ್ಥಾಮ, ಲಕ್ಷ್ಮೀ ಆನೆಗಳು ಕೂಡ ರಿಹರ್ಸಲ್ನಲ್ಲಿ ಭಾಗಿಯಾಗಿವೆ.

ರಿಹರ್ಸಲ್ನಲ್ಲಿ ಗಜಪಡೆಯ ಜೊತೆ ಅಶ್ವದಳವೂ ಭಾಗಿಯಾಗಿವೆ. ಪೊಲೀಸ್ ಬ್ಯಾಂಡ್ನಿಂದ ಸಂಗೀತದ ಜೊತೆಗೆ ಪಥಸಂಚಲನ ನಡೆಯುತ್ತಿದೆ. ಶಸ್ತ್ರಧಾರಿ ಪೊಲೀಸರಿಂದಲೂ ಪಥಸಂಚಲನ ನಡೆಯುತ್ತಿದೆ.

ಇದನ್ನೂ ಓದಿ

ದಸರಾ ಕಳೆ ಹೆಚ್ಚಿಸಿದ ಹಂಸಲೇಖ ಸಂಗೀತ: ಗಾನದ ಮೋಡಿಯಲ್ಲಿ ತೇಲಿದ ಜನರು

Mysuru Dasara 2021: ದುರ್ಗಾ ಮಾತೆಯ 9 ದಿವ್ಯ ಅವತಾರ ಆಯುರ್ವೇದದಲ್ಲಿ 9 ದಿವ್ಯ ಔಷಧ ರೂಪದಲ್ಲಿದೆ; ವಿವರ ಇಲ್ಲಿದೆ

Published On - 10:16 am, Mon, 11 October 21