ಚಾಣಕ್ಯ ನೀತಿ
ಆಚಾರ್ಯ ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಹಲವಾರು ಜೀವನೋಪಾಯ ವಿಷಯಗಳನ್ನು ಪ್ರಸ್ತಾಪಿಸಿದ್ದಾನೆ. ಯಾರಾದರೂ ನಿಮ್ಮನ್ನು ಟೀಕಿಸಿದರೆ.. ಹಾಗೆಯೇ ನಿಮ್ಮನ್ನು ಟೀಕಿಸುತ್ತಾ ಯಾವಾಗಲೂ ಅವಮಾನಿಸುತ್ತಾರೆ.. ಅಂತಹವರಿಗೆ ಸಮಪರ್ಕ ಗುಣಪಾಠ ಹೇಳಲು ಚಾಣಕ್ಯನ ಕೆಲವು ಸಲಹೆಗಳಿವೆ. ಈ ಸಲಹೆಗಳನ್ನು ಅನುಸರಿಸಿ, ನೀವು ಆ ವ್ಯಕ್ತಿಗೆ ತಕ್ಕ ಗುಣಪಾಠ ಹೇಳಬಹುದು.
- ಶಾಂತವಾಗಿರಿ – ಕೆಲವೊಮ್ಮೆ ಎದುರಿಗಿರುವ ವ್ಯಕ್ತಿ ನಿಮಗೆ ಕೋಪ ತರಿಸಲು ನಾನಾ ಮಾತುಗಳನ್ನು ಆಡುತ್ತಾರೆ. ಕೋಪದ ಕ್ಷಣಾರ್ಧದಲ್ಲಿ ನೀವು ಆ ವ್ಯಕ್ತಿಗೆ ಹೇಳುವ ವಿಷಯಗಳು ನಂತರ ನಿಮ್ಮನ್ನು ಪಶ್ಚಾತ್ತಾಪದ ಮಡುವಿಗೆ ತಳ್ಳುತ್ತದೆ. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ ಶಾಂತವಾಗಿರುವುದು ಒಳಿತು. ಬುದ್ಧಿವಂತಿಕೆಯಿಂದ ವರ್ತಿಸಿ. ನಿಮ್ಮನ್ನು ನೀವು ಶಾಂತವಾಗಿ ಇರಿಸಿಕೊಳ್ಳಿ.
- ಯಾರಾದರೂ ನಿಮ್ಮ ಲೋಪಗಳನ್ನು ಪದೇ ಪದೇ ಬಹಿರಂಗವಾಗಿಟ್ಟು, ನಿಮ್ಮನ್ನು ತಲೆತಗ್ಗಿಸುವಂತೆ ಮಾಡಲು ಬಯಸುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ಆ ಎದುರಿಗಿನ ವ್ಯಕ್ತಿಯನ್ನು ಉನ್ನತವಾಗಿ ಎತ್ತಿಹಿಡಿಯಿರಿ. ಆತನನ್ನು ಉನ್ನತವಾಗಿ, ಉತ್ತಮವಾಗಿ ತೋರಿಸಿ. ಇದರಿಂದ ಪರೋಕ್ಷವಾಗಿ ಆತನನ್ನು ನೀವು ಕಡಿಮೆ ಮಾಡಿದಂತೆ ತೋರಿಸಬಹುದು.
- ಎದುರಿಗಿನ ವ್ಯಕ್ತಿಯ ಜೊತೆ ಅಪ್ಪಿತಪ್ಪಿಯೂ ಯಾವತ್ತೂ ದುರ್ಭಾಷಿಕರಾಗಿ ಮಾತನಾಡಬೇಡಿ. ನಿಮ್ಮನ್ನು ನೀವು ಶಾಂತವಾಗಿಯೇ ಇರಿಸಿಕೊಳ್ಳಿ. ಸಮಾಧಾನದಿಂದ ಕೆಲಸ ಮಾಡಿ. ಎದುರಿಗೆ ಇರುವ ವ್ಯಕ್ತಿಯನ್ನು ಸಮಾಧಾನಪಡಿಸಬೇಕಿದ್ದರೆ, ಸಮಂಜಸವಾಗಿಯೇ ಉತ್ತರ ಕೊಡಿ.
- ನಿಮ್ಮ ಈ ವಿಭಿನ್ನ ನಡವಳಿಕೆಯ ಬಗ್ಗೆ ಇತರರಿಗೆ ತಿಳಿಯುವ ಹಾಗೆ ಮಾಡಿ. ಇತರರನ್ನು ಎಚ್ಚರಿಕೆಯಿಂದ ನೋಡಿಕೊಳ್ಳಿ. ಇತರರ ಬಗ್ಗೆ ನೀವು ಎಷ್ಟೂ ಅಂತ ಯೋಚಿಸುತ್ತೀರಿ ಅಲ್ಲವಾ? ನೀವು ಹೆಚ್ಚಾಗಿ ಎಷ್ಟುವರೆಗೆ ಸಪೋರ್ಟ್ ಮಾಡುತ್ತೀರಿ ಎಂಬ ವಿಷಯವನ್ನು ಅವಲಂಬಿಸಿ, ನಿಮಗೆ ಆ ಇತರರಿಂದ ಬೆಂಬಲ ಸಿಗಬಲ್ಲದು. ನೀವು ಮಾಡುವ ಕೆಲಸಗಳು ನಿಮ್ಮನ್ನು ಉನ್ನತವಾಗಿಡುತ್ತದೆ, ಇತರರಿಗೆ ಆ ಕೆಲಸಗಳನ್ನು ಎತ್ತಿ ತೋರಿಸುತ್ತದೆ.