Pitru Paksha 2022: ಪಿತೃಪಕ್ಷದ ವೈಶಿಷ್ಟ್ಯ ವೇನು? ಈ ದಿನ ಶ್ರಾದ್ಧ ಮಾಡುವುದೇಕೆ?
ಮಾನವನ ಹುಟ್ಟಿನಿಂದ ಸಾವಿನವರೆಗೆ ಅವನಿಗೆ ಒಟ್ಟು 16 ಕರ್ಮಗಳನ್ನು ವಿಧಿಸಲಾಗಿದೆ. ಅವುಗಳಲ್ಲಿ ಮುಖ್ಯವಾದುವು ಜಾತಕ ಕರ್ಮ, ನಾಮಕರಣ, ಚೂಡಾ ಕರ್ಮ, ಉಪನಯನ, ಮದುವೆ ಮತ್ತು ಶ್ರಾದ್ಧ ಕರ್ಮ.
ಸೆಪ್ಟೆಂಬರ್ 10, 2022 ರಿಂದ ಪಿತೃ ಪಕ್ಷ(Pitru Paksha) ಆರಂಭಗೊಂಡಿದ್ದು 25ರಂದು ಕೊನೆಗೊಳ್ಳುತ್ತದೆ. ಸಾಮಾನ್ಯವಾಗಿ ಪಿತೃಪಕ್ಷ 15 ದಿನಗಳದ್ದಾಗಿರುತ್ತದೆ. ಹಿಂದೂ ಪಂಚಾಂಗದಲ್ಲಿ ಪ್ರತಿ ಮಾಸದಲ್ಲೂ ಎರಡು ಪಕ್ಷಗಳಿವೆ. ಒಂದು ಶುಕ್ಲ ಪಕ್ಷ ಇನ್ನೊಂದು ಕೃಷ್ಣ ಪಕ್ಷ. ಶುಕ್ಲಪಕ್ಷವು ಅಮಾವಾಸ್ಯೆಯ(Amavasya) ನಂತರ ಬಂದರೆ, ಎಗೆ ಹುಣ್ಣಿಮೆಯ ನಂತರ ಕೃಷ್ಣಪಕ್ಷ ಬರುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಬರುವ ಕೃಷ್ಣ ಪಕ್ಷವನ್ನು ಪಿತೃಪಕ್ಷ ಎಂದೂ ಕರೆಯುತ್ತೇವೆ. ಅಂದರೆ, ಪಾಡ್ಯ ತಿಥಿಯಿಂದ ಮಹಾಲಯ ಅಮಾವಾಸ್ಯೆಯ ದಿನದವರೆಗೆ. ಈ 15 ದಿನಗಳಲ್ಲಿ ಮದುವೆ, ಉಪನಯನ, ಚೂಡಾಕರ್ಮ ಮುಂತಾದ ದೇವತಾ ಕಾರ್ಯಗಳನ್ನು ಮಾಡುವುದಿಲ್ಲ. ಏಕೆಂದರೆ ಈ ದಿನ ಪಿತೃಗಳ ಕಾರ್ಯಕ್ಕಾಗಿ ಮೀಸಲಿಡಲಾಗಿದೆ.
ಮಾನವನ ಹುಟ್ಟಿನಿಂದ ಸಾವಿನವರೆಗೆ ಅವನಿಗೆ ಒಟ್ಟು 16 ಕರ್ಮಗಳನ್ನು ವಿಧಿಸಲಾಗಿದೆ. ಅವುಗಳಲ್ಲಿ ಮುಖ್ಯವಾದುವು ಜಾತಕ ಕರ್ಮ, ನಾಮಕರಣ, ಚೂಡಾ ಕರ್ಮ, ಉಪನಯನ, ಮದುವೆ ಮತ್ತು ಶ್ರಾದ್ಧ ಕರ್ಮ. ಈ ಶ್ರಾದ್ಧ ಕರ್ಮವನ್ನು ಹಿಂದೂಗಳಲ್ಲದೆ ದೇಶದ ಎಲ್ಲ ಧರ್ಮ, ಜಾತಿ, ಮತದವರೂ ಸಹ ಅವರವರ ಧರ್ಮಕ್ಕೆ ಅನುಗುಣವಾಗಿ ಆಚರಿಸುತ್ತಾರೆ. ಶ್ರದ್ಧೆಯಿಂದ ಮಾಡುವ ಮಾತಾ ಪಿತೃಗಳ ಆರಾಧನೆಯನ್ನು ಶ್ರಾದ್ಧ ಎನ್ನುವರು. ಈ ಶ್ರಾದ್ಧ ಸಾಧು, ಸನ್ಯಾಸಿಗಳಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಅವರು ಸನ್ಯಾಸ ಸ್ವೀಕರಿಸಿದಾಗ ತಾವೇ ಆತ್ಮ ಶ್ರಾದ್ಧ ಮಾಡಿಕೊಂಡಿರುತ್ತಾರೆ. ಬ್ರಹ್ಮಪುರಾಣದಲ್ಲಿ ಯೂ ಶ್ರಾದ್ಧದ ಬಗ್ಗೆ ಉಲ್ಲೇಖವಿದೆ. ಇದನ್ನೂ ಓದಿ: ಪಿತೃ ಪಕ್ಷ 2022: ಪೂರ್ವಜರ ಕೋಪ ನಿಮ್ಮ ಮನೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ಇಲ್ಲಿದೆ ನೋಡಿ
ಅರ್ಥ: ಒಬ್ಬ ವ್ಯಕ್ತಿಯು ತನ್ನ ಪಿತೃಗಳನ್ನು ಉದ್ದೇಶಿಸಿ ಯೋಗ್ಯವಾದ ದೇಶ, ಕಾಲ ಪಾತ್ರಗಳನ್ನು ಗಮನದಲ್ಲಿರಿಸಿಕೊಂಡು ಸದ್ಬ್ರಾಹ್ಮಣರಿಗೆ ಶ್ರದ್ಧೆಯಿಂದಲೂ ಶಾಸ್ತ್ರವಿಧಿಗೆ ಅನುಸಾರವಾಗಿಯೂ ಏನನ್ನು ದಾನವಾಗಿ ಕೊಡುತ್ತಾನೆಯೊ ಅದು ಶ್ರಾದ್ಧವಾಗುತ್ತದೆ.
ಋಣಗಳಲ್ಲಿ 3 ವಿಧಗಳಿವೆ. 1. ದೇವ ಋನ, 2. ಋಶಿ ಋಣ ಮತ್ತು 3. ಪಿತೃ ಋಣ. ದೇವ ಋಣ ಮತ್ತು ಋಶಿ ಋಣವನ್ನು ತೀರಿಸಬಹುದು. ಆದರೆ, ಮಾತಾ ಪಿತೃಋಣ ತೀರಿಸಲಾಗದು ಎನ್ನುತ್ತದೆ ಶಾಸ್ತ್ರ. ಏಕೆಂದರೆ ತಾಯಿಗೆ ಸಮನಾದ ವಸ್ತು ಬೇರೊಂದಿಲ್ಲ. ಆಕೆ ನಮ್ಮನ್ನು ನವಮಾಸಗಳು ಗರ್ಭದಲ್ಲಿ ಹೊತ್ತು ಸಾಕಿ ಹೆತ್ತವಳು. ತನ್ನ ರಕ್ತಮಾಂಸಗಳನ್ನೇ ಹಾಲಾಗಿಸಿ ಉಣಿಸಿರುವಳು. ಬೇಸರ ಮತ್ತು ಹೇಸಿಗೆ ಇಲ್ಲದೆ ನಮ್ಮನ್ನು ಸಾಕುತ್ತಾಳೆ. ತಂದೆಯು ಇಡೀ ಸಂಸಾರದ ಭಾರವನ್ನು ಜೀವಮಾನ ಹೊತ್ತು ಮಕ್ಕಳ ಹಿತ ಮತ್ತು ಅವರ ಭವಿಷ್ಯಕ್ಕಾಗಿ ತನ್ನ ಕಷ್ಟಗಳನ್ನೆಲ್ಲಾ ಮರೆತು ದುಡಿಯುತ್ತಾನೆ. ಇಂಥಹ ತಾಯಿ ತಂದೆಯ ಋಣವನ್ನು ತೀರಿಸಲು ನಾವು ಪಿತೃಪಕ್ಷದಲ್ಲಿ ಶ್ರಾದ್ಧವನ್ನು ಮಾಡಬೇಕು. ಮಾತಾಪಿತೃಗಳ ನಿಧನದ ನಂತರ ಅವರು ಪಿತೃದೇವತೆಗಳೆನಿಸುವ ಕಾರಣ ಶ್ರಾದ್ಧವನ್ನು ಮಾಡುತ್ತಾರೆ. ಹಿಂದೂ ಸಂಪ್ರದಾಯ ರೀತಿಯಲ್ಲಿ ಆತ್ಮಕ್ಕೆ ಹುಟ್ಟು ಸಾವುಗಳಿಲ್ಲ. ಈ ಕುರಿತ ಉಲ್ಲೇಖ ಶಂಕರಾಚಾರ್ಯರು ಭಜಗೋವಿಂದಂನಲ್ಲಿ ಇದೆ.
ಈ ಹುಟ್ಟು ಸಾವುಗಳು ನಮಗೆ ಮುಕ್ತಿ ಸಿಗುವವರೆಗೂ ನಿರಂತರ ನಡೆಯುತ್ತಿರುತ್ತವೆ. ಆದ್ದರಿಂದ ಮಾತಾಪಿತೃಗಳ ಆತ್ಮಕ್ಕೆ ಶಾಂತಿಸಿಗಲಿ ಎಂದು ಈ ಪಿತೃಪಕ್ಷವನ್ನು ಮಾಡಬೇಕು. ಮನುಷ್ಯ ಯಾವುದೇ ಪಾಪವನ್ನು ಮಾಡಿದರೂ ಪ್ರಾಯಶ್ಚಿತ್ತವಿರುವುದು. ಆದರೆ, ಪಿತೃದ್ರೋಹಿಗಳಿಗೆ ಮಾತ್ರ ಪ್ರಾಯಶಿತ್ತ ಇಲ್ಲ ಎಂದು ಶಾಸ್ತ್ರವು ಹೇಳುತ್ತದೆ. ಪಿತೃಪಕ್ಷದಲ್ಲಿ ಮಾಡುವ ಕಾರ್ಯವು ಮಾತಾಪಿತೃಗಳಿಗಲ್ಲದೆ ಅಜ್ಜ, ಅಜ್ಜಿ, ಮುತ್ತಜ್ಜ-ಮುತ್ತಜ್ಜಿ ಇವರಿಗೂ ಸಲ್ಲುತ್ತದೆ. ಹಾಗೂ ರಕ್ತಸಂಬಂಧ ಇರುವ ಎಲ್ಲರಿಗೂ ಸೇರುತ್ತದೆ. ಅವರುಗಳ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪಿತೃಪಕ್ಷ ಮಾಡುವುದರಿಂದ ಅವರ ಆಶಿರ್ವಾದವು ನಮ್ಮ ಸಂತಾನಕ್ಕೆ ಮತತು ಕುಟುಂಬಕ್ಕೆ ಶ್ರೇಯಸ್ಸು ತರುತ್ತದೆ. ಈ ಪಿತೃಪಕ್ಷದಲ್ಲಿ ಭಕ್ತಿ, ಶ್ರದ್ಧೆಯಿಂದ ಮಾತಾಪಿತೃಗಳ ಕಾರ್ಯವನ್ನು ಆಚರಿಸಿ ಋಣಮುಕ್ತರಾಗೋಣ.