ಪಿತೃ ಪಕ್ಷ 2022: ಪೂರ್ವಜರ ಕೋಪ ನಿಮ್ಮ ಮನೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಗೊತ್ತಾ? ಇಲ್ಲಿದೆ ನೋಡಿ
ಹಿಂದೂ ಧರ್ಮದಲ್ಲಿ ಪಿತ್ರ ಪಕ್ಷ ಅಥವಾ ಶ್ರಾದ್ಧಕ್ಕೆ ವಿಶೇಷ ಮಹತ್ವವಿದ್ದು, ಶ್ರದ್ಧಾ, ತರ್ಪಣ ಅಥವಾ ಪಿಂಡದಾನ ಇತ್ಯಾದಿಗಳನ್ನು ಮಾಡಲಾಗುತ್ತದೆ. ಪೂರ್ವಜರು ಕೋಪಗೊಂಡರೆ ಮನೆಯಲ್ಲಿ ಅಶಾಂತಿ ನಿರ್ಮಾಣವಾಗುತ್ತದೆ ಎಂದು ನಂಬಲಾಗಿದೆ.
Updated on: Sep 10, 2022 | 7:01 AM

Pitru Paksha 2022 Here are the signs of Ancestral Anger

Pitru Paksha 2022 Here are the signs of Ancestral Anger

ಕೆಲಸಕ್ಕೆ ಅಡ್ಡಿ: ನಿಮ್ಮ ಕೆಲಸದಲ್ಲಿ ಪದೇ ಪದೇ ಅಡಚಣೆಗಳು ಉಂಟಾಗುತ್ತಿದ್ದರೆ, ಮಾಡುವ ಕೆಲಸವು ಕೆಡುತ್ತಿದ್ದರೆ, ಮಾಡಿವ ಕೆಲಸ ಗುರಿ ತಲುಪದಿದ್ದರೆ ಅಥವಾ ನಿರಂತರ ಕಠಿಣ ಪರಿಶ್ರಮವಿದ್ದರೂ ಹಿಡಿದ ಕೆಲಸ ಯಶಸ್ವಿಯಾಗದಿದ್ದರೆ ನಿಮ್ಮ ಪೂರ್ವಜರು ಕೋಪಗೊಂಡಿದ್ದಾರೆ ಎಂದು ಅರ್ಥ.

ಮನೆಯಲ್ಲಿ ತೊಂದರೆಗಳು: ಯಾವುದೇ ಕಾರಣವಿಲ್ಲದೆ ಮನೆಯಲ್ಲಿ ಜಗಳಗಳು ನಡೆದರೆ ಕುಟುಂಬದ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿದ್ದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದು ಪಿತ್ರಾ ದೋಷಕ್ಕೂ ಕಾರಣವಿರಬಹುದು. ಸಂಸಾರದಲ್ಲಿ ಏನಾದರೂ ಸರಿ ಹೋಗದಿದ್ದರೆ, ಕೆಲಸದಲ್ಲಿ ದಿಢೀರ್ ನಷ್ಟ ಉಂಟಾದರೆ ಅಥವಾ ಮನೆಯ ಸದಸ್ಯರು ಪದೇ ಪದೇ ಅಪಘಾತಗಳನ್ನು ಎದುರಿಸುತ್ತಿದ್ದರೆ ಪೂರ್ವಜರು ಕೋಪಗೊಂಡಿದ್ದಾರೆ ಎಂದರ್ಥ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪಿತೃ ದೋಷವನ್ನು ತೊಡೆದುಹಾಕಲು ಪಿತೃಪಕ್ಷಕ್ಕೆ ಸಂಬಂಧಿಸಿದಂತೆ ನಿಮ್ಮ ಪೂರ್ವಜರ ತರ್ಪಣ ಮತ್ತು ಶ್ರಾದ್ಧ ಕಾರ್ಯವನ್ನು ಮಾಡಿ. ಪಿತ್ರ ಪಕ್ಷ ಮಾತ್ರವಲ್ಲದೆ ಯಾವುದೇ ತಿಂಗಳ ಅಮವಾಸ್ಯೆ, ಪೂರ್ಣಿಮೆ ಮತ್ತು ಚತುರ್ದಶಿ ತಿಥಿಗಳಂದು ನಿಮ್ಮ ಮನೆಯ ಮೂಲೆ ಮೂಲೆಯಲ್ಲಿ ತುಪ್ಪ ಮತ್ತು ಬೆಲ್ಲದ ಧೂಪವನ್ನು ಅರ್ಪಿಸಬಹುದು.

ಮದುವೆಯಲ್ಲಿ ಅಡೆತಡೆ: ಕುಟುಂಬದ ಮಗ ಅಥವಾ ಮಗಳು ಮದುವೆಗೆ ಅರ್ಹರಾಗಿದ್ದರೂ ಅವರ ಮದುವೆಗೆ ಅಡ್ಡಿಯುಂಟಾದರೆ ಅಥವಾ ಮದುವೆಯ ಸಂಬಂಧವು ಹಾಳಾಗಿದ್ದರೆ ಅಥವಾ ವೈವಾಹಿಕ ಜೀವನದಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದರೆ ಪೂರ್ವಜರು ನಿಮ್ಮೊಂದಿಗೆ ಇದ್ದಾರೆ ಎಂದರ್ಥ.



















