House Warming Ceremony: ಹೊಸ ಮನೆ ಗೃಹಪ್ರವೇಶ ಸಮಯದಲ್ಲಿ ಹಾಲು ಏಕೆ ಉಕ್ಕಿಸುತ್ತಾರೆ ಗೊತ್ತಾ?
ಗೃಹ ಪ್ರವೇಶದ ಪೂಜಾ ಸಮಾರಂಭವು ಮನೆಯ ಪರಿಸರವನ್ನು ಶುದ್ಧೀಕರಿಸಲು.. ನಕಾರಾತ್ಮಕ ಶಕ್ತಿಗಳಿಂದ ಮನೆಯನ್ನು ರಕ್ಷಿಸಲು ಮೊದಲ ಬಾರಿಗೆ ಹೊಸ ಮನೆಗೆ ಹೋಗುವಾಗ ನಡೆಸುವ ಪೂಜಾ ಸಮಾರಂಭವಾಗಿದೆ. ಶುಭ ಮುಹೂರ್ತದಲ್ಲಿ ಹೊಸ ಮನೆಯನ್ನು ಪ್ರವೇಶಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ.
ಹೊಸ ಮನೆ ಕಟ್ಟಿ, ಅದರೊಳಕ್ಕೆ ವಿಜೃಂಭಣೆಯಿಂದ ಪ್ರವೇಶಿಸುವು ಪ್ರತಿಯೊಬ್ಬರ ಕನಸು. ಯಾರೇ ಆಗಲಿ ತಮ್ಮ ಸ್ವಂತ ಮನೆ ಹೊಂದಲು ಬಯಸುತ್ತಾರೆ ಅದು ದೊಡ್ಡದೇ ಇರಲಿ ಅಥವಾ ಚಿಕ್ಕದಾಗಿಯೇ ಇರಲಿ ಸ್ವಂತ ಗೂಡು ಅಂತಾದರೆ ಜೀವನ ಸಾರ್ಥಕ ಎಂಬ ಭಾವವಿದೆ. ಯಾರೇ ಆಗಲಿ ತಮ್ಮ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಸ್ವಂತ ಮನೆ ಕಟ್ಟಿಕೊಳ್ಳುತ್ತಾರೆ. ತಮ್ಮ ಕನಸಿನ ಮನೆಗೆ ಕಾಲಿಡುವುದು ಆ ಮನೆಯ ಮಾಲೀಕರಿಗೆ ವಿಶೇಷ ಅನುಭವವಾಗಿದೆ. ಇದು ಪ್ರತಿಯೊಬ್ಬರ ಜೀವನದಲ್ಲಿ ಹೊಸ ಆರಂಭವನ್ನು ಸಂಕೇತಿಸುತ್ತದೆ. ಮನೆ ಮಾಲೀಕರು ಸಾಮಾನ್ಯವಾಗಿ ಮನೆ ಖರೀದಿಸಲು ಅಥವಾ ಹೊಸ ಮನೆಯಲ್ಲಿ ಗೃಹಪ್ರವೇಶಕ್ಕಾಗಿ (House Warming Ceremony or Griha Pravesh) ಸುಮುಹೂರ್ತ ದಿನಾಂಕವನ್ನು ಆಯ್ಕೆ ಮಾಡುತ್ತಾರೆ. ಇದಕ್ಕಾಗಿ ವಿಶೇಷ ಕಾಳಜಿ ವಹಿಸುತ್ತಾರೆ. ಮನೆಯನ್ನು ಪ್ರವೇಶಿಸುವ ಮೊದಲು ಗೃಹ ಪ್ರವೇಶ ಪೂಜೆಯನ್ನು ಮಾಡಲಾಗುತ್ತದೆ. ಗೃಹ ಪ್ರವೇಶ ಎಂಬುದು ಎಲ್ಲ ಸಂಪ್ರದಾಯಯಗಳಲ್ಲೂ ಇದೆ. ಇಲ್ಲಿ ಒಬ್ಬ ವ್ಯಕ್ತಿಯು ಮೊದಲ ಬಾರಿಗೆ ಹೊಸ ಮನೆಗೆ ಹೋದಾಗ ಶುಭ ಮುಹೂರ್ತದಲ್ಲಿ ಪೂಜೆಯನ್ನು ಮಾಡಲಾಗುತ್ತದೆ. (Boiling Milk )
ಗೃಹ ಪ್ರವೇಶ ಪೂಜೆಯ ಮಹತ್ವ ಗೃಹ ಪ್ರವೇಶದ ಪೂಜಾ ಸಮಾರಂಭವು ಮನೆಯ ಪರಿಸರವನ್ನು ಶುದ್ಧೀಕರಿಸಲು.. ನಕಾರಾತ್ಮಕ ಶಕ್ತಿಗಳಿಂದ ಮನೆಯನ್ನು ರಕ್ಷಿಸಲು ಮೊದಲ ಬಾರಿಗೆ ಹೊಸ ಮನೆಗೆ ಹೋಗುವಾಗ ನಡೆಸುವ ಪೂಜಾ ಸಮಾರಂಭವಾಗಿದೆ. ಶುಭ ಮುಹೂರ್ತದಲ್ಲಿ ಹೊಸ ಮನೆಯನ್ನು ಪ್ರವೇಶಿಸುವುದರಿಂದ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಆ ಮನೆಗೆ ಪ್ರವೇಶಿಸಿದ ನಂತರ ಕುಟುಂಬ ಸದಸ್ಯರ ಸಮಸ್ಯೆಗಳು ತಾನಾಗಿಯೇ ಶಮನವಾಗುತ್ತವೆ ಎಂದು ನಂಬಲಾಗಿದೆ.
ಇದನ್ನು ಓದಿ: ಈ ಬಾರಿ ಮಹಾ ಶಿವರಾತ್ರಿ ಮಾರ್ಚ್ 8 ಅಥವಾ 9? ಶಿವ ಪೂಜೆಯ ಮಂಗಳಕರ ಸಮಯ ತಿಳಿಯಿರಿ
ಗೃಹ ಪ್ರವೇಶ ಪೂಜೆಯ ದಿನ ಹಾಲು ಉಕ್ಕಿಸುವುದು ಮಹಿಳೆಯರು ಹೊಸ ಮನೆಯ ಅಡುಗೆ ಮನೆಯಲ್ಲಿ ಪಾತ್ರೆಯಲ್ಲಿ ಹಾಲನ್ನು ಕುದಿಸಬೇಕು ಎಂಬುದು ಧಾರ್ಮಿಕ ನಂಬಿಕೆ. ನಂತರ ಈ ಕುದಿಯುವ ಹಾಲಿಗೆ ಅಕ್ಕಿ ಮತ್ತು ಬೆಲ್ಲವನ್ನು ಸೇರಿಸಿ, ಪ್ರಸಾದವಾಗಿ ತಯಾರಿಸಲಾಗುತ್ತದೆ. ಇದನ್ನು ಪೂಜೆಯ ಸಮಯದಲ್ಲಿ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ನಂತರ ಅದನ್ನು ಎಲ್ಲರಿಗೂ ಪ್ರಸಾದವಾಗಿ ಹಂಚಲಾಗುತ್ತದೆ. ಸಾಂಪ್ರದಾಯಿಕವಾಗಿ ಭಾರತೀಯರ ಮನೆಗಳಲ್ಲಿ ಗೃಹ ಪ್ರವೇಶ ಸಮಾರಂಭದಲ್ಲಿ ಹಾಲನ್ನು ಕುದಿಸುವುದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ. ಇದರ ಹಿಂದಿನ ನಂಬಿಕೆ ಮತ್ತು ಮಹತ್ವವನ್ನು ಈಗ ತಿಳಿಯೋಣ.
Also Read: ಗರುಡ ಪುರಾಣ – ಸಾವಿನ ರಹಸ್ಯದ ಬಗ್ಗೆ ಕೃಷ್ಣ ಪರಮಾತ್ಮ ಹೇಳಿದ ವೇದಾಂತ ಹೀಗಿದೆ
ಹೊಸ ಮನೆಗೆ ಪ್ರವೇಶಿಸುವ ಮೊದಲು ಹಾಲು ಏಕೆ ಉಕ್ಕಿಸಲಾಗುತ್ತದೆ? ಹೊಸ ಪಾತ್ರೆಯಲ್ಲಿ ಹಾಲನ್ನು ಸುರಿಯುವುದು ಹಿಂದೂ ಸಂಪ್ರದಾಯ ಮತ್ತು ಆಚರಣೆಯ ಅವಿಭಾಜ್ಯ ಅಂಗವೆಂದು ಪರಿಗಣಿಸಲಾಗಿದೆ. ನಂಬಿಕೆಯ ಪ್ರಕಾರ ಮನೆಗೆ ಪ್ರವೇಶಿಸುವ ಸಮಯದಲ್ಲಿ ಹಾಲು ಉಕ್ಕಿ ಹರಿದರೆ ಆ ಮನೆಯಲ್ಲಿ ಸಂತೋಷವೂ ಉಕ್ಕಿ ಹರಿಯುತ್ತದೆ ಎಂದು ನಂಬಲಾಗಿದೆ. ಹೊಸ ಮನೆಯಲ್ಲಿ ಹಾಲು ಉಕ್ಕಿದರೆ ಆ ಮನೆಗೆ ದೇವರ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಹೊಸ ಮನೆಯ ಅಡುಗೆಮನೆಯಲ್ಲಿ ಹಾಲನ್ನು ಕುದಿಸಬೇಕು.
ಹೊಸ ಮನೆಗೆ ಪ್ರವೇಶಿಸುವ ಸಮಯದಲ್ಲಿ ಹಾಲು ಉಕ್ಕಿ ಹರಿಯುವುದರಿಂದ ಮನೆಯಲ್ಲಿ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಸುತ್ತದೆ ಎಂದು ನಂಬಲಾಗಿದೆ. ಹಾಗೆಯೇ ಗೃಹಪ್ರವೇಶದ ಪೂಜೆಯ ದಿನ ಹೊಸ ಪಾಕಶಾಲೆಯಲ್ಲಿ ಹೊಸ ಪಾತ್ರೆಯಲ್ಲಿ ಹಾಲನ್ನು ಸುರಿದು ಮೊದಲು ಗ್ಯಾಸ್‌ಗೆ ಪೂಜೆ ಮಾಡಿ (ಅಗ್ನಿ ದೇವನಿಗೆ ಅರ್ಪಿಸಿ) ನಂತರ ಹಾಲನ್ನು ಕುದಿಸಬೇಕು. ಹಾಲು ಆವಿಯಾದ ನಂತರ ಸತ್ಯನಾರಣ ವ್ರತ ಕಥಾ ಪೂಜೆಯಲ್ಲಿ ಸಿಹಿ ಕ್ಷೀರಾನ್ನ ತಯಾರಿಸಿ ದೇವರಿಗೆ ಅರ್ಪಿಸಬೇಕು. ಹೋಮವನ್ನು ಮುಗಿಸಿದ ನಂತರ ಬ್ರಾಹ್ಮಣರಿಗೂ ಪ್ರಸಾದ ನೀಡಿ, ಅವರ ಆಶೀರ್ವಾದ ಪಡೆಯಬೇಕು.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:54 pm, Sat, 24 February 24