ಸ್ತ್ರೀ ಅಂದರೆ.. ಬರೀ ಅವಶ್ಯಕತೆ ಅಲ್ಲ! ಅದರಾಚೆಗೆ ಇರುವುದೇ ಬದುಕಿನ ಸೌಂದರ್ಯ. ಉದಾಹರಣೆಗೆ ತೇಜಸ್ಸಿಗೆ ತೇಜಸ್ವಿನಿ, ಚುಕ್ಕಿಗೆ ಬಿಂದು, ನಕ್ಷತ್ರ. ಗೆರೆಗೆ- ರೇಖಾ, ಶಶಿರೇಖಾ. ಮುತ್ತಿಗೆ- ಸ್ವಾತಿ, ಹರಳಿಗೆ-ರತ್ನ, ಮಾದರಿಗೆ- ಸ್ಪೂರ್ತಿ, ಪ್ರೇರಣಾ. ಎಲ್ಲೆಡೆ, ಎಲ್ಲರ ಬಾಳಲ್ಲಿ ಹೆಣ್ಣು ಇರುವಳು. ಆಕೆಗೆ ಒಂದು ನಮನ. ಸ್ತ್ರೀಯನ್ನು ಹೇಗೆಲ್ಲಾ, ಯಾವ ಗುಣ, ರೂಪದಲ್ಲಿ ಕಾಣಬಹುದು ಎಂಬ ಸೂಕ್ಷ್ಮವನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಒಮ್ಮೆ ಇದನ್ನು ಗಮನಿಸಿದರೆ ಹೆಣ್ಣಿನ ಬಗೆಗಿನ ಗೌರವ ಆದರಗಳು ಹೆಚ್ಚಾಗುವುದರಲ್ಲಿ ಯಾವುದೇ ಸಂದೇಹ ಇಲ್ಲ.
ರಾಮನಿಗೆ – ಸೀತೆ.
ಕೃಷ್ಣನಿಗೆ – ರಾಧೆ.
ಶಿವನಿಗೆ – ಪಾರ್ವತಿ.
ನಾರಾಯಣನಿಗೆ – ಲಕ್ಷ್ಮೀ.
ಮಂತ್ರ ಪಠಣದಲ್ಲಿ – ಗಾಯತ್ರಿ.
ಗ್ರಂಥ ಪಠಣದಲ್ಲಿ – ಗೀತಾ.
ದೇವರೆ ಎದುರಿಗೆ – ವಂದನಾ, ಅರ್ಚನಾ, ಪೂಜಾ, ಆರತಿ, ಆರಾಧನಾ.. ಜೊತೆಗೆ ಶ್ರದ್ಧಾ.
ನಮ್ಮ ದಿನಚರಿಯಲ್ಲಿ
ಉದಯಕ್ಕೆ – ಉಷಾ, ಅರುಣಾ.
ಸಂಜೆಗೆ – ಸಂಧ್ಯಾ.
ರಾತ್ರಿಗೆ – ನಿಶಾ.
ಬೆಳಕಿಗೆ – ಜ್ಯೋತಿ, ದೀಪ, ದೀಪಿಕಾ, ಪ್ರಭಾ.
ಬೆಳದಿಂಗಳಿಗೆ – ರಜನಿ.
ಸೂರ್ಯಕಿರಣಕ್ಕೆ – ರಶ್ಮಿ, ಕಿರಣ.
ಚಂದಿರನಿಗೆ – ಶಶಿ, ಶಶಿಕಲಾ, ಚಂದ್ರಕಲಾ.
ಹೆಸರಾಗುವುದಕ್ಕೆ – ಕೀರ್ತಿ.
ಕನಸಿಗೆ – ಸ್ವಪ್ನ.
ನೋಟಕ್ಕೆ – ನಯನಾ, ನೇತ್ರ.
ಕೇಳುವುದಕ್ಕೆ – ಶ್ರಾವ್ಯ, ಶ್ರಾವಣಿ.
ಮಾತನಾಡುವುದಕ್ಕೆ – ವಾಣಿ, ವಾಣಿಶ್ರೀ, ಸುಭಾಷಿಣಿ.
ಭೂಮಿಗೆ – ಅವನಿ, ವಸುಧಾ, ವಸುಂಧರಾ, ಭುವಿ, ಭುವನೇಶ್ವರಿ.
ಹಸು, ಆಕಳಿಗೆ – ನಂದಿನಿ.
ಜಗತ್ತಿಗೆ – ಜಗದೀಶ್ವರಿ, ಜಗದಾಂಬೆ.
ದೇಶಕ್ಕೆ – ಭಾರತಿ, ಭಾರತಾಂಬೆ.
ಕನ್ನಡ ನಾಡಿಗೆ – ಭುವನೇಶ್ವರಿ.
ಋತುಗಳಿಗೆ – ಚೈತ್ರ, ವಸಂತ, ಗ್ರೀಷ್ಮ.
ಸಮರ್ಪಣೆಗೆ – ಅರ್ಪಣಾ.
ಆಹಾರಕ್ಕೆ – ಅನ್ನಪೂರ್ಣ.
ನಡೆಯುವುದಕ್ಕೆ – ಹಂಸಾ.
ನಗುವಿಗೆ – ಸುಹಾಸಿನಿ.
ಚೆಲುವಿಕೆಗೆ – ಚೆಲುವಿ, ರೂಪಾ, ಸೌಂದರ್ಯ, ಸುಲಕ್ಷಣ, ಮನೋಹರಿ, ಲಲಿತೆ.
ಸುವಾಸನೆಗೆ – ಚಂದನ, ಪರಿಮಳ.
ಒಳ್ಳೆಯ ನುಡಿಗೆ – ಸುಭಾಷಿಣಿ.
ತೇಜಸ್ಸಿಗೆ – ತೇಜಸ್ವಿನಿ.
ಚುಕ್ಕಿಗೆ – ಬಿಂದು, ನಕ್ಷತ್ರ.
ಗೆರೆಗೆ – ರೇಖಾ, ಶಶಿರೇಖಾ.
ಮುತ್ತಿಗೆ – ಸ್ವಾತಿ.
ಹರಳಿಗೆ – ರತ್ನ.
ಮಾದರಿಗೆ – ಸ್ಪೂರ್ತಿ, ಪ್ರೇರಣಾ.
ಪ್ರತಿಕ್ರಿಯಿಸುವುದಕ್ಕೆ – ಸ್ಪದಂನಾ.
ಕೆಲಸಕ್ಕೆ – ಕೃತಿ, ಕೃತಿಕ.
ಇಷ್ಟಕ್ಕೆ – ಪ್ರೀತಿ.
ನೀರಿಗೆ – ಗಂಗಾ.
ಬಂಗಾರಕ್ಕೆ- ಸುವರ್ಣ, ಕನಕ, ಹೇಮಾ.
ಬೆಳ್ಳಿಗೆ – ರಜತ, ರಂಜಿತ.
ಚಿತ್ತಾರಕ್ಕೆ – ಚಿತ್ರ.
ಊಹೆಗೆ – ಕಲ್ಪನಾ.
ನಿಜ ಸಂಗತಿಗೆ – ಸತ್ಯವತಿ.
ಶುದ್ಧತೆಗೆ – ನಿರ್ಮಲ, ಪವಿತ್ರ.
ಆಲೋಚನೆಗೆ – ಭಾವನಾ.
ಕಣ್ಣುಗಳಿಗೆ – ನೇತ್ರಾ, ನಯನಾಕ್ಷಿ, ಮೀನಾಕ್ಷಿ, ಕಮಲಾಕ್ಷಿ, ಜಲಜಾಕ್ಷಿ, ಕಾಮಾಕ್ಷಿ.
ಶಿಕ್ಷಣ, ವಿದ್ಯಾಭ್ಯಾಸಕ್ಕೆ – ವಿದ್ಯಾ, ಸರಸ್ವತಿ, ಶಾರದಾ.
ಬುದ್ಧಿಗೆ, ಚತುರತೆಗೆ – ಪ್ರತಿಭಾ.
ಸಂತೋಷಕ್ಕೆ – ಖುಷಿ, ಆನಂದಿನಿ, ಹರ್ಷಲಾ.
ಕೋಪಕ್ಕೆ – ಭೈರವಿ, ಕಾಳಿ.
ಧೈರ್ಯಕ್ಕೆ – ದುರ್ಗೆ.
ಗೆಲುವಿಗೆ – ಜಯಲಕ್ಷ್ಮಿ, ವಿಜಯಲಕ್ಷ್ಮಿ.
ಹೆಸರಾಗುವುದಕ್ಕೆ – ಕೀರ್ತಿ.
ಹಾಡಿಗೆ – ಸಂಗೀತ.
ಗಾಯನಕ್ಕೆ – ಶೃತಿ, ಪಲ್ಲವಿ, ಕೋಕಿಲ.
ನಾಟ್ಯ – ಮಯೂರಿ.
ಸಾಹಿತ್ಯ – ಕವಿತಾ, ಕಾವ್ಯ.
ನಿಸರ್ಗಕ್ಕೆ – ಪ್ರಕೃತಿ.
ರಕ್ಷಣೆಗೆ – ಸುರಕ್ಷಾ.
ಸಂಪಾದನೆಗೆ – ಲಕ್ಷ್ಮೀ.
ಸ್ಪೂರ್ತಿಗೆ – ಪ್ರೇರಣಾ.
ಮೌನಕ್ಕೆ – ಶಾಂತಿ.
ಮಧುರತೆಗೆ – ಮಾಧುರಿ, ಮಂಜುಳ.
ಕನಿಕರಕ್ಕೆ – ಕರುಣಾ.
ಆಕ್ರೋಶಕ್ಕೆ – ಕಾಳಿ.
ವಾತ್ಸಲ್ಯಕ್ಕೆ – ಮಮತಾ.
ಆಯುಷ್ಯಕ್ಕೆ – ಜೀವಿತಾ.
ಮೋಡಗಳಿಗೆ – ಮೇಘ, ಮೇಘನಾ.
ಚಿಮುಕಿಸುವಿಕೆಗೆ – ಸಿಂಚನಾ.
ಬಿಳುಪಿಗೆ – ಶ್ವೇತಾ, ಗೌರಿ.
ಕಪ್ಪಿಗೆ – ಕೃಷ್ಣೆ.
ವಾಸನೆಗೆ – ಪರಿಮಳ.
ಹೂವಿಗೆ – ಪುಷ್ಪ, ಸುಮ, ಕುಸುಮ, ಪದ್ಮ, ಪದ್ಮಾವತಿ, ಕಮಲ, ಮಂದಾರ, ನೈದಿಲೆ, ಸೇವಂತಿ.
ಬಳ್ಳಿಗೆ – ಲತಾ.
ಶುಭಕರ – ಮಂಗಳ, ಸುಮಂಗಳ, ಶುಭಾಂಗಿನಿ.
ಒಳ್ಳೆಯ ಮನಸ್ಸಿಗೆ – ಸುಮನ.
ಶ್ರೀಮಂತಿಕೆಗೆ – ಐಶ್ವರ್ಯ, ಸಿರಿ.
ವಿಸ್ತಾರಕ್ಕೆ – ವಿಶಾಲ, ವೈಶಾಲಿ.
ಜೇನಿಗೆ – ಮಧು.
ಬಯಕೆಗೆ – ಆಶಾ, ಅಪೇಕ್ಷಾ.
ತೀರ್ಮಾನಕ್ಕೆ- ನಿಶ್ಚಿತ.
ಬರಹಕ್ಕೆ – ಲಿಖಿತ.
ನೆರಳಿಗೆ – ಛಾಯಾ.
ನಿಧಾನಕ್ಕೆ – ಮಂದಾಕಿನಿ.
ಹೂ ಗೊಂಚಲಿಗೆ – ಮಂಜರಿ.
ಗೌರವಕ್ಕೆ -ಮಾನ್ಯ, ಮಾನ್ಯತಾ.
ನದಿಗಳಿಗೆ – ಗಂಗಾ, ಯಮುನಾ, ಸರಸ್ವತಿ, ಭಾಗೀರಥಿ, ನರ್ಮದಾ, ಗೋದಾವರಿ, ಕಾವೇರಿ, ಹೇಮಾವತಿ, ನೇತ್ರಾವತಿ, ಶರಾವತಿ, ವೇದಾವತಿ, ಅರ್ಕಾವತಿ, ತುಂಗಾ, ಸೌಪರ್ಣಿಕಾ, ಗೌತಮಿ, ಕಪಿಲೆ, ಮಂದಾಕಿನಿ, ಕೃಷ್ಣೆ. (ನಿತ್ಯಸತ್ಯ ಸತ್ಸಂಗ್ -ಸಂಗ್ರಹ)
Published On - 6:23 am, Fri, 21 January 22