- Kannada News Spiritual Udupi Sri Krishna Mutt Krishna Temple Paryaya Krishnapura Mutt Krishna Alankara Photos
Udupi Krishna: ಉಡುಪಿ ಕೃಷ್ಣನಿಗೆ ಸುಂದರ ಅಲಂಕಾರ; ಮಹಾಪೂಜೆಯ ಫೋಟೊಗಳು ಇಲ್ಲಿದೆ
Udupi Krishna Mutt: ಉಡುಪಿ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ಮಹೋತ್ಸವ ಜನವರಿ 18ರಂದು ನಡೆದಿದೆ. ಪ್ರಸ್ತುತ ಕೃಷ್ಣಾಪುರ ಮಠದ ಯತಿಗಳು ಪೀಠಾರೋಹಣ ಮಾಡಿದ್ದಾರೆ. ಕೃಷ್ಣಾಪುರ ಪರ್ಯಾಯದ ಶ್ರೀಕೃಷ್ಣನ ಅಲಂಕಾರದ ಸುಂದರ ಚಿತ್ರಗಳು ಇಲ್ಲಿವೆ.
Updated on: Jan 21, 2022 | 8:42 AM

Udupi Sri Krishna Mutt Krishna Temple Paryaya Krishnapura Mutt Krishna Alankara Photos

ಕೃಷ್ಣ ಮಠದ ಪೂಜೆ, ಅನುಷ್ಠಾನ ಹಾಗೂ ಆಡಳಿತಕ್ಕೆ ಸಂಬಂಧಿಸಿ ನಡೆಯುವ ದ್ವೈವಾರ್ಷಿಕ ಉತ್ಸವವೇ ಈ ಪರ್ಯಾಯ. ಶ್ರೀಕೃಷ್ಣ ಮಠದ ಪೂಜೆ ಮತ್ತಿತರ ಕಾರ್ಯಗಳನ್ನು ಒಬ್ಬರ ನಂತರ ಮತ್ತೊಬ್ಬರು ಯತಿಗಳಿಗೆ ವಹಿಸಿಕೊಡುವುದು. ಈಗಿನ ಪರ್ಯಾಯ ಮಠಾಧೀಶರು ಮುಂದೆ ಪರ್ಯಾಯ ಪೀಠಾರೋಹಣ ಮಾಡಲಿರುವ ಸ್ವಾಮೀಜಿಗಳಿಗೆ ಪೂಜಾ ಅಧಿಕಾರವನ್ನು, ಮಠದ ನಿರ್ವಹಣೆಯನ್ನು ಹಸ್ತಾಂತರಿಸುವುದು. ಈ ದಿನವನ್ನು ಪರ್ಯಾಯ ಎಂದು ಕರೆಯುತ್ತಾರೆ. ಸಂಭ್ರಮದಿಂದ ಆಚರಿಸಲಾಗುತ್ತದೆ.ಈ ಬಾರಿ ಪರ್ಯಾಯ ಪೀಠಾರೋಹಣ ಮಾಡಿರುವ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥರು ಕೃಷ್ಣನ ಪೂಜೆ ಮಾಡುತ್ತಿರುವುದು.

ಕಾಣಿಯೂರು ಮಠ, ಸೋದೆ ಮಠ, ಪುತ್ತಿಗೆ ಮಠ, ಅದಮಾರು ಮಠ, ಪೇಜಾವರ ಮಠ, ಪಲಿಮಾರು ಮಠ, ಕೃಷ್ಣಾಪುರ ಮಠ, ಶೀರೂರು ಮಠ. ಇವು ಉಡುಪಿಯ ಕೃಷ್ಣ ಮಠದ ಸುತ್ತಿನಲ್ಲಿ ಇರುವ ಎಂಟು ಮಠಗಳು. ಈ ಅಷ್ಟಮಠದ ಯತಿಗಳು ಕೃಷ್ಣನ ಪೂಜೆ ಮಾಡುತ್ತಾರೆ. ಇದು ಮಠದ ಗರುಡ ಹಾಗೂ ಮುಖ್ಯಪ್ರಾಣ (ಹನುಮಂತ) ದೇವರು.

ಶ್ರೀಮಧ್ವಾಚಾರ್ಯರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ನಂತರ ಅದರ ಪೂಜೆಯ ಅಧಿಕಾರವನ್ನು ಕೂಡ ತಮ್ಮ ಪರಂಪರೆಯ ಯತಿಗಳಿಗೆ ನೀಡಿದರು. ಕೃಷ್ಣ ಮಠದ ಪೂಜಾನುಷ್ಠಾನಗಳನ್ನು ಮಧ್ವ ಪರಂಪರೆಯ ಯತಿಗಳು ನಡೆಸಿಕೊಂಡು ಬರುತ್ತಿದ್ದಾರೆ. ಉಡುಪಿಯ ಅಷ್ಟಮಠಗಳ ಯತಿಗಳಿಗೆ ಪರ್ಯಾಯ ಪೂಜೆಯ ಅಧಿಕಾರವನ್ನು ನೀಡಿ ಹರಸಿದವರು ಮಧ್ವಾಚಾರ್ಯರು. ಇದು ಮಠದಲ್ಲಿ ಭೋಜನಶಾಲೆ ಸಮೀಪ ಇರುವ ಮುಖ್ಯಪ್ರಾಣ ಹಾಗೂ ನಾಗ ದೇವರು.

ನೂತನ ಹಾಗೂ ತಮ್ಮ ಚತುರ್ಥ ಪರ್ಯಾಯ ಅವಧಿಯನ್ನು ವಹಿಸಿಕೊಂಡ ಶ್ರೀಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು ಶ್ರೀಕೃಷ್ಣನಿಗೆ ಪೂಜೆ ನೆರವೇರಿಸಿದರು. ಮಂಗಳಾರತಿ ಬೆಳಗುತ್ತಿರುವ ಚಿತ್ರ ಇಲ್ಲಿದೆ.




