Healthy eating: ತ್ರಿವಿಧ ಆಹಾರ ಪದಾರ್ಥಗಳು – ಅದರಲ್ಲಿ ಸಾತ್ವಿಕ ಆಹಾರದಿಂದ ಸತ್ವ, ಸಾಮರ್ಥ್ಯ, ಸ್ಥಿರತೆ ಹೆಚ್ಚು!

ಸಾತ್ವಿಕ, ರಾಜಸ ಮತ್ತು ತಾಮಸ ಆಹಾರಗಳ ಲಕ್ಷಣ ಮತ್ತು ನಮ್ಮ ಶರೀರ ಹಾಗೂ ಸ್ವಭಾವಗಳ ಮೇಲೆ ಅವು ಉಂಟು ಮಾಡುವ ಪರಿಣಾಮಗಳ ವಿವರ ಇಲ್ಲಿ ತಿಳಿಸಲಾಗಿದೆ. ಘರಂಡ ಮುನಿಯ ಘರಂಡ ಸಂಹಿತಾ ಗ್ರಂಥದಲ್ಲಿ ಯೋಗಿಯು ಹೊಟ್ಟೆಯ ಅರ್ಧ ಭಾಗದಷ್ಟು ಘನ ಆಹಾರ, ಕಾಲು ಭಾಗ ನೀರು, ಉಳಿದ ಕಾಲುಭಾಗ ಖಾಲಿ (ಗಾಳಿಯ ಸಂಚಾರಕ್ಕೆ )ಬಿಡಬೇಕೆಂದು, ಭೋಜನ ಸಂದರ್ಭ ಪ್ರತಿ ಕ್ಷಣವನ್ನು ಇಷ್ಟ ದೇವರ ಧ್ಯಾನ ಮಾಡಿಯೇ ಆಹಾರ ಸ್ವೀಕರಿಸಬೇಕೆಂದು ಹೇಳಿದ್ದಾರೆ. ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯಗಳನ್ನು ಆಚರಿಸುವುದು […]

Healthy eating: ತ್ರಿವಿಧ ಆಹಾರ ಪದಾರ್ಥಗಳು - ಅದರಲ್ಲಿ ಸಾತ್ವಿಕ ಆಹಾರದಿಂದ ಸತ್ವ, ಸಾಮರ್ಥ್ಯ, ಸ್ಥಿರತೆ ಹೆಚ್ಚು!
ತ್ರಿವಿಧ ಆಹಾರ ಪದಾರ್ಥಗಳು ಅದರಲ್ಲಿ ಸಾತ್ವಿಕ ಆಹಾರದಿಂದ ಸತ್ವ, ಸ್ಥಿರತೆ ಹೆಚ್ಚು!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 22, 2022 | 6:58 AM

ಸಾತ್ವಿಕ, ರಾಜಸ ಮತ್ತು ತಾಮಸ ಆಹಾರಗಳ ಲಕ್ಷಣ ಮತ್ತು ನಮ್ಮ ಶರೀರ ಹಾಗೂ ಸ್ವಭಾವಗಳ ಮೇಲೆ ಅವು ಉಂಟು ಮಾಡುವ ಪರಿಣಾಮಗಳ ವಿವರ ಇಲ್ಲಿ ತಿಳಿಸಲಾಗಿದೆ. ಘರಂಡ ಮುನಿಯ ಘರಂಡ ಸಂಹಿತಾ ಗ್ರಂಥದಲ್ಲಿ ಯೋಗಿಯು ಹೊಟ್ಟೆಯ ಅರ್ಧ ಭಾಗದಷ್ಟು ಘನ ಆಹಾರ, ಕಾಲು ಭಾಗ ನೀರು, ಉಳಿದ ಕಾಲುಭಾಗ ಖಾಲಿ (ಗಾಳಿಯ ಸಂಚಾರಕ್ಕೆ )ಬಿಡಬೇಕೆಂದು, ಭೋಜನ ಸಂದರ್ಭ ಪ್ರತಿ ಕ್ಷಣವನ್ನು ಇಷ್ಟ ದೇವರ ಧ್ಯಾನ ಮಾಡಿಯೇ ಆಹಾರ ಸ್ವೀಕರಿಸಬೇಕೆಂದು ಹೇಳಿದ್ದಾರೆ. ನಮ್ಮ ಪೂರ್ವಜರು ಹೇಳಿಕೊಟ್ಟ ಸಂಪ್ರದಾಯಗಳನ್ನು ಆಚರಿಸುವುದು ಸೂಕ್ತ. ಆದರೂ ನೀವು ಏನಾಗಬೇಕು, ಏನು ಸ್ವೀಕರಿಸಬೇಕೆಂಬ ಆಯ್ಕೆ ನಿಮ್ಮದೇ (Healthy eating).

ಸಾತ್ವಿಕ ಆಹಾರ: ರಸದಿಂದಲೂ ಸ್ನಿಗ್ಧತೆ, ಸ್ಥಿರತೆ, ಅಪ್ಯಾಯತೆಯಿಂದ ಕೂಡಿರುವ ಆಹಾರವೇ ಸಾತ್ವಿಕ ಆಹಾರ. ಇದರ ಸೇವನೆಯಿಂದ ಆಯಸ್ಸು, ಬಲ, ಆರೋಗ್ಯ, ಸುಖ ಪ್ರೀತಿ ಹೆಚ್ಚುತ್ತದೆ. ಶೌಚ, ಬ್ರಹ್ಮಚರ್ಯ, ಅಹಿಂಸೆ, ಸತ್ಯಪ್ರಿಯತೆ, ಮಾನಸಿಕ ಪ್ರಸನ್ನತೆ, ಮೌನ ಹಾಗೂ ಭಾವಶುದ್ಧಿ- ಇವು ಸಾತ್ವಿಕತೆಯ ಲಕ್ಷಣಗಳು. ಸಾತ್ವಿಕ ಆಹಾರ ಆಹಾರ ಪದಾರ್ಥಗಳು ಯಾವುವು ಅಂದರೆ… ಹಸುವಿನ ಹಾಲು, ಕೆನೆ, ಬೆಣ್ಣೆ, ತುಪ್ಪ, ಸೇಬು, ಬಾಳೆಹಣ್ಣು, ದ್ರಾಕ್ಷಿ, ಮಾವು, ಕಿತ್ತಳೆ, ಬಟಾಣಿ, ತೆಂಗಿನಕಾಯಿ, ಆಲೂಗಡ್ಡೆ, ಕೋಸು, ಸೌತೆ, ಕುಂಬಳ, ಪೇರಲ, ಗೋಧಿ, ಅಕ್ಕಿ, ಜೇನು, ಕಲ್ಲುಸಕ್ಕರೆ, ಶುಂಠಿ, ಕಾಳುಮೆಣಸು, ದ್ವಿದಳ ಧಾನ್ಯ, ಅರಿಶಿನ ಇತ್ಯಾದಿ.

ರಾಜಸ ಆಹಾರ: ಕಹಿ, ಹುಳಿ, ಉಪ್ಪು, ಖಾರ ಇವು ಅತಿಯಾಗಿರುವ, ಒಣಗಿದ ದಾಹ ಉಂಟುಮಾಡುವ ಆಹಾರವೇ ರಾಜಸ ಆಹಾರ. ಇದರ ಸೇವನೆಯಿಂದ ದುಃಖ, ಶೋಕ ಮತ್ತು ರೋಗ ಉಂಟಾಗುತ್ತದೆ. ರಾಜಸ ಆಹಾರ ಪದಾರ್ಥಗಳು ಯಾವುವು ಅಂದರೆ… ಮೀನು, ಮೊಟ್ಟೆ, ಮೆಣಸಿನ ಕಾಯಿ, ಚಟ್ನಿ, ಹಿಂಗು, ಉಪ್ಪಿನಕಾಯಿ, ಸಾಸಿವೆ, ಹುಣಸೇಹಣ್ಣು, ಎಲ್ಲ ಹುಳಿ ಪದಾರ್ಥ, ಚಹ, ಕಾಫಿ, ಕೋಕೋ, ಮಸಾಲೆ ಪದಾರ್ಥ, ಅನಾನಸ್, ಎಳ್ಳು, ಮೊಸರು, ಈರುಳ್ಳಿ ಇತ್ಯಾದಿ.

ತಾಮಸ ಆಹಾರ: ಹಿಂದಿನ ದಿನ ತಯಾರಾದ, ಒಣಗಿದ, ದುರ್ಗಂಧದಿಂದ ಕೂಡಿದ, ಹಳಸಿದ, ತಂಗಳಾದ, ದೇಹ ಮತ್ತು ಮನಸ್ಸಿಗೆ ಜಡತ್ವ ಭಾವ ನೀಡುವ ಆಹಾರವೇ ತಾಮಸ ಆಹಾರ. ಇದರ ಸೇವನೆಯಿಂದ ಅಜ್ಞಾನ, ಅಶಿಸ್ತು, ದುಶ್ಚಟ ಮೊದಲಾದ ವಿನಾಶಕಾರಿ ನಡತೆ ಮೊಳಕೆಯೊಡೆಯುತ್ತದೆ. ತಾಮಸ ಆಹಾರ ಪದಾರ್ಥಗಳು ಯಾವುವು ಅಂದರೆ… ಮಾಂಸ, ಮದ್ಯ, ಬೆಳ್ಳುಳ್ಳಿ, ತಂಬಾಕು, ಕೊಳೆತ ಪದಾರ್ಥ, ಎರಡು ಬಾರಿ ಬೇಯಿಸಿದ ಪದಾರ್ಥ, ಅಮಲು ಪದಾರ್ಥ, ಹುರುಳಿಕಾಳು, ಹಿಂಡಿ, ಬೇಕರಿ ಉತ್ಪನ್ನ, ಉದ್ದು, ಬದನೇಕಾಯಿ, ಹಲಸಿನಹಣ್ಣು ಇತ್ಯಾದಿ.

ಘರಂಡ ಮುನಿಯ ಘರಂಡ ಸಂಹಿತಾ ಗ್ರಂಥದಲ್ಲಿ ಯೋಗಿಯು ಹೊಟ್ಟೆಯ ಅರ್ಧ ಭಾಗದಷ್ಟು ಘನ ಆಹಾರ, ಕಾಲು ಭಾಗ ನೀರು, ಉಳಿದ ಕಾಲುಭಾಗ ಖಾಲಿ (ಗಾಳಿಯ ಸಂಚಾರಕ್ಕೆ) ಬಿಡಬೇಕೆಂದು, ಭೋಜನ ಸಂದರ್ಭ ಪ್ರತಿ ಕ್ಷಣವನ್ನು ಇಷ್ಟ ದೇವರ ಧ್ಯಾನ ಮಾಡಿಯೇ ಆಹಾರ ಸ್ವೀಕರಿಸಬೇಕೆಂದು ಹೇಳಿದ್ದಾರೆ. ಅಂದರೆ ನೀವು ಏನಾಗಬೇಕು, ಏನು ಸ್ವೀಕರಿಸಬೇಕೆಂಬ ಆಯ್ಕೆ ನಿಮ್ಮದೇ. (ನಿತ್ಯಸತ್ಯ ಸತ್ಸಂಗ್ -ಸಂಗ್ರಹ)

Published On - 6:58 am, Sat, 22 January 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ