Swapna Shastra: ಕನಸಿನಲ್ಲಿ ಮಳೆ ಬರುವುದನ್ನು ನೋಡಿದರೆ ನಿಮ್ಮ ಹಣೆಬರಹ ಬದಲಾಗಬಹುದು!

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 05, 2024 | 4:12 PM

ಹಿಂದೂ ಧರ್ಮದಲ್ಲಿ ಕನಸಿನಲ್ಲಿ ಕಾಣುವ ವಿಷಯಗಳಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಇವು ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಘಟನೆಗಳಿಗೆ ನೇರವಾಗಿ ಸಂಬಂಧಿಸಿರುತ್ತದೆ ಅಂದರೆ ಕೆಲವು ವಿಷಯಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಮಳೆ ಬೀಳುತ್ತಿರುವುದನ್ನು, ನೋಡುವುದು ಸಹ ವಿಭಿನ್ನ ಅರ್ಥಗಳನ್ನು ನೀಡುತ್ತದೆ. ಹಾಗಾದರೆ ಇದರ ಅರ್ಥವೇನು? ಇಲ್ಲಿದೆ ಮಾಹಿತಿ.

Swapna Shastra: ಕನಸಿನಲ್ಲಿ ಮಳೆ ಬರುವುದನ್ನು ನೋಡಿದರೆ ನಿಮ್ಮ ಹಣೆಬರಹ ಬದಲಾಗಬಹುದು!
ಸಾಂದರ್ಭಿಕ ಚಿತ್ರ
Follow us on

ರಾತ್ರಿ ಮಲಗಿದ್ದಾಗ ಕನಸು ಕಾಣುವುದು ಸಾಮಾನ್ಯ. ಇವುಗಳಲ್ಲಿ ಕೆಲವು ಒಳ್ಳೆಯ ಅನುಭವವನ್ನು ಕೊಟ್ಟರೆ, ಇನ್ನು ಕೆಲವು ನಮ್ಮನ್ನು ಹೆದರಿಸುತ್ತವೆ. ಕನಸಿನಲ್ಲಿ ಕಂಡು ಬರುವ ವಿಷಯಗಳು ಕೆಲವು ಸೂಚನೆಗಳನ್ನು ನೀಡುತ್ತದೆ ಜೊತೆಗೆ ಇವು ನಮ್ಮ ನಿಜ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಹಿಂದೂ ಧರ್ಮದಲ್ಲಿ ಕನಸಿನಲ್ಲಿ ಕಾಣುವ ವಿಷಯಗಳಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಇವು ವ್ಯಕ್ತಿಯ ಜೀವನಕ್ಕೆ ಸಂಬಂಧಿಸಿದ ಘಟನೆಗಳಿಗೆ ನೇರವಾಗಿ ಸಂಬಂಧಿಸಿರುತ್ತದೆ ಅಂದರೆ ಕೆಲವು ವಿಷಯಗಳು ಭವಿಷ್ಯದ ಘಟನೆಗಳನ್ನು ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಮಳೆ ಬೀಳುತ್ತಿರುವುದನ್ನು, ನೋಡುವುದು ಸಹ ವಿಭಿನ್ನ ಅರ್ಥಗಳನ್ನು ನೀಡುತ್ತದೆ. ಹಾಗಾದರೆ ಇದರ ಅರ್ಥವೇನು? ಇಲ್ಲಿದೆ ಮಾಹಿತಿ.

ಕನಸಿನ ಶಾಸ್ತ್ರದ ಪ್ರಕಾರ, ಕನಸಿನಲ್ಲಿ ಮಳೆ ಬೀಳುತ್ತಿರುವುದನ್ನು ನೋಡುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ. ನೀವು ಕನಸಿನಲ್ಲಿ ಮಳೆ ಬರುವುದನ್ನು ನೋಡಿದರೆ, ಅದು ನಿಮಗೆ ಒಳ್ಳೆಯ ಸುದ್ದಿ ಕೊಡುತ್ತದೆ. ಇದಲ್ಲದೆ, ಜೀವನದಲ್ಲಿ ದೊಡ್ಡ ಬದಲಾವಣೆಯ ಸಾಧ್ಯತೆ ಇದೆ. ಈ ರೀತಿಯ ಕನಸು ಕಂಡರೆ ವ್ಯಕ್ತಿಯ ಬಹುದೊಡ್ಡ ಆಸೆ ಈಡೇರುತ್ತದೆ ಎಂದು ನಂಬಲಾಗಿದೆ.

ಇದನ್ನೂ ಓದಿ: ಈ ವರ್ಷದ ಅಕ್ಷಯ ತೃತೀಯ ಯಾವಾಗ? ಈ ದಿನದಂದು ಏನನ್ನು ತಿನ್ನಬಾರದು

ಕನಸಿನಲ್ಲಿ ಭಾರಿ ಮಳೆಯಾಗುವುದನ್ನು ಕಾಣುವುದು!

ನಿಮ್ಮ ಕನಸಿನಲ್ಲಿ ಭಾರಿ ಅಥವಾ ನಿಧಾನಗತಿಯಲ್ಲಿ ಮಳೆಯಾಗುತ್ತಿರುವುದು ಕಂಡರೆ ಅದು ಒಳ್ಳೆಯ ಸಂಕೇತ. ಇದರರ್ಥ ಸಂಪತ್ತಿನ ದೇವತೆಯಾದ ಲಕ್ಷ್ಮೀ ನಿಮ್ಮನ್ನು ಯಾವ ಪರಿಸ್ಥಿತಿಯಲ್ಲಿಯೂ ಕೈ ಬಿಡುವುದಿಲ್ಲ. ಜೊತೆಗೆ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆ ಇದೆ.

ನೀವು ಮಳೆಯಲ್ಲಿ ನೆನೆದಿರುವ ರೀತಿ ಕನಸು ಕಂಡರೆ ಅದರ ಅರ್ಥವೇನು?

ಕನಸಿನಲ್ಲಿ ನೀವು ಮಳೆಯಲ್ಲಿ ಒದ್ದೆಯಾಗುವುದನ್ನು ನೋಡಿದರೆ, ನೀವು ಶೀಘ್ರದಲ್ಲೇ ಕೆಲವು ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ ಎಂದರ್ಥ. ಉದ್ಯೋಗಸ್ಥರ ಸಮಸ್ಯೆಗಳು ಪರಿಹಾರ ಕಾಣಬಹುದು ಅಥವಾ ಉದ್ಯೋಗದಲ್ಲಿ ಬಡ್ತಿ ಸಿಗಬಹುದು. ಒಟ್ಟಿನಲ್ಲಿ ಕನಸಿನಲ್ಲಿ ಮಳೆಯನ್ನು ಕಾಣುವುದು ನಿಮಗೆ ಜೀವನದಲ್ಲಿ ಎಲ್ಲಾ ರೀತಿಯಿಂದಲೂ ಯಶಸ್ಸನ್ನು ತಂದುಕೊಡುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ