AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Devotional: ಮನೆಗೆ ಲಕ್ಷ್ಮಿ ಚೇಳು ಬಂದರೆ ಏನರ್ಥ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಮನೆಯಲ್ಲಿ ಜರಿ (ಶತಪದಿ ಅಥವಾ ಲಕ್ಷ್ಮಿ ಚೇಳು) ಕಾಣಿಸಿಕೊಳ್ಳುವುದು ಸಾಮಾನ್ಯವಾಗಿ ಶುಭ ಸೂಚಕ ಎಂದು ನಂಬಲಾಗುತ್ತದೆ. ಆದರೆ ಸ್ನಾನದ ಕೋಣೆಯಲ್ಲಿ ಜರಿ ಕಂಡರೆ ಅಶುಭ ಎನ್ನಲಾಗುತ್ತದೆ. ಯಾವ ದಿನ ಜರಿ ಕಂಡರೆ ಏನು ಫಲ ಎಂಬ ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಪ್ರತಿದಿನಕ್ಕೂ ತನ್ನದೇ ಆದ ವೈಶಿಷ್ಟ್ಯವಿದೆ. ಈ ಬಗ್ಗೆ ಡಾ. ಬಸವರಾಜ್ ಗುರೂಜಿಯವರು ನೀಡಿರುವ ಮಾಹಿತಿ ಇಲ್ಲಿದೆ.

Daily Devotional: ಮನೆಗೆ ಲಕ್ಷ್ಮಿ ಚೇಳು ಬಂದರೆ ಏನರ್ಥ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಲಕ್ಷ್ಮಿ ಚೇಳು
ಅಕ್ಷತಾ ವರ್ಕಾಡಿ
|

Updated on: Oct 19, 2025 | 11:14 AM

Share

ಮನೆಯಲ್ಲಿ ಜರಿ, ಶತಪದಿ ಅಥವಾ ಲಕ್ಷ್ಮಿ ಚೇಳು ಎಂದೂ ಕರೆಯಲ್ಪಡುವ ಈ ಜೀವಿ ಕಂಡರೆ ಶುಭವೇ ಅಶುಭವೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಉದ್ಭವಿಸುತ್ತದೆ. ಸಂಪ್ರದಾಯದ ಪ್ರಕಾರ, ಜರಿ ಕಾಣಿಸಿಕೊಳ್ಳುವುದು ಸಿರಿಯನ್ನು (ಸಂಪತ್ತು) ಸೂಚಿಸುತ್ತದೆ ಎಂಬ ನಂಬಿಕೆ ವ್ಯಾಪಕವಾಗಿದೆ, “ಜರಿ ಕಂಡರೆ ಸಿರಿ ಬರುತ್ತೆ” ಎಂಬ ಮಾತು ಅನೇಕ ಮನೆಗಳಲ್ಲಿ ಚಾಲ್ತಿಯಲ್ಲಿದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಒಟ್ಟಾರೆಯಾಗಿ ಜರಿ ಶುಭ ಸೂಚಕವಾಗಿದೆ. ಮನೆಯ ಗೇಟ್, ಬಾಗಿಲು, ಅಡುಗೆಮನೆ, ದೇವರ ಕೋಣೆ, ಮಲಗುವ ಕೋಣೆ ಅಥವಾ ಹಾಲ್ ಸೇರಿದಂತೆ ಎಲ್ಲೆಡೆ ಜರಿ ಕಂಡರೆ ಶುಭ. ಆದರೆ, ಸ್ನಾನದ ಕೋಣೆಯಲ್ಲಿ ಜರಿ ಕಾಣಿಸಿಕೊಳ್ಳುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ನಂಬಿಕೆಗಳು ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿವೆ.

ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ದೀಪಾವಳಿಯ ಮುಂದಿನ 6 ತಿಂಗಳು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ

ಜರಿ ಕಾಣಿಸಿಕೊಳ್ಳುವ ದಿನದ ಆಧಾರದ ಮೇಲೆ ವಿಭಿನ್ನ ಫಲಗಳನ್ನು ತಿಳಿಯಿರಿ:

  • ಸೋಮವಾರ: ಜರಿ ಕಂಡರೆ ದೈವಾನುಗ್ರಹ ಪ್ರಾಪ್ತಿಯಾಗುತ್ತದೆ. ಇದಕ್ಕೆ ರಾಹುಕಾಲ ಅಥವಾ ಗುಳಿಕಕಾಲದಂತಹ ಸಮಯದ ನಿರ್ಬಂಧಗಳಿಲ್ಲ.
  • ಮಂಗಳವಾರ: ವಾಹನ ಯೋಗ, ಆರೋಗ್ಯದಲ್ಲಿ ಚೇತರಿಕೆ, ವಿವಾಹ ವಿಚಾರಗಳಲ್ಲಿ ಶುಭ ಫಲ ಹಾಗೂ ಭೂಮಿ ಸಂಬಂಧಿ ವಿಷಯಗಳಲ್ಲಿ ಅನುಕೂಲವಾಗುತ್ತದೆ. ಆರ್ಥಿಕ ಲಾಭಗಳು ಅಥವಾ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳದ ಸೂಚನೆ ಇರಬಹುದು.
  • ಬುಧವಾರ: ಉದ್ಯೋಗದಲ್ಲಿ ಬದಲಾವಣೆ, ಜ್ಞಾನಕ್ಕೆ ತಕ್ಕ ಮನ್ನಣೆ ಸಿಗುತ್ತದೆ. ಆಕಸ್ಮಿಕ ಪ್ರಯಾಣ ಯೋಗ ಅಥವಾ ಹೊಸ ವಸ್ತುಗಳ ಆಗಮನದ ಸಾಧ್ಯತೆ ಇರುತ್ತದೆ.
  • ಗುರುವಾರ: ಕಳೆದುಕೊಂಡ ಹಣ ವಾಪಸ್ ಸಿಗುತ್ತದೆ, ಆಕಸ್ಮಿಕ ಧನಲಾಭ, ಉದ್ಯೋಗದಲ್ಲಿ ಬಡ್ತಿ ಮತ್ತು ವ್ಯಾಪಾರದಲ್ಲಿ ಲಾಭವಾಗುತ್ತದೆ. ಬ್ಯಾಂಕ್ ಸಾಲಗಳಂತಹ ಆರ್ಥಿಕ ಪ್ರಯತ್ನಗಳು ಸಫಲವಾಗುತ್ತವೆ.
  • ಶುಕ್ರವಾರ: ಅತಿ ಉತ್ತಮ ದೈವಾನುಗ್ರಹ ಪ್ರಾಪ್ತಿ, ದೇವಿ, ಮನೆದೇವರು ಮತ್ತು ಇಷ್ಟದೇವರ ಕೃಪೆ ಸಿಗುತ್ತದೆ. ಉಡುಗೊರೆಗಳು, ಬಂಗಾರ ಖರೀದಿಯ ಯೋಗ, ಅಥವಾ ದೊಡ್ಡ ಹೂಡಿಕೆ ಮಾಡುವ ಅವಕಾಶಗಳು ಉಂಟಾಗಬಹುದು.
  • ಶನಿವಾರ: ಕಾನೂನು ವಿಷಯಗಳಲ್ಲಿ ಅನುಕೂಲ, ಭೂ ವ್ಯಾಜ್ಯಗಳು ಇತ್ಯರ್ಥವಾಗುತ್ತವೆ. “ಸತ್ಯಮೇವ ಜಯತೆ” ಎಂಬಂತೆ ನ್ಯಾಯ ಗೆಲ್ಲುವ ಸೂಚನೆ ಇರುತ್ತದೆ.
  • ಭಾನುವಾರ: ಆರೋಗ್ಯದಲ್ಲಿ ಚೇತರಿಕೆ, ಆತ್ಮಸ್ಥೈರ್ಯ ವೃದ್ಧಿ, ಕಷ್ಟಗಳನ್ನು ಎದುರಿಸಲು ಸಿದ್ಧತೆ ಮತ್ತು ಇತರರಿಂದ ಬೆಂಬಲ ದೊರೆಯುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ