ಈ 3 ರಾಶಿಯ ಜನ ತಮ್ಮ ಪ್ರೇಮವನ್ನು ಬಹಿರಂಗವಾಗಿ ನಿವೇದಿಸಲು ಹಿಂಜರಿಯುತ್ತಾರೆ! ನಿಮ್ಮ ರಾಶಿ ಯಾವುದು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿಯ ಅಷ್ಟೂ ಗುಣಾವಗುಣಗಳು ಗ್ರಹ ಗತಿ, ನಕ್ಷತ್ರ ಪ್ರಭಾವಗಳ ಆಧಾರದಲ್ಲಿ ಮೂಡಿಬಂದಿರುತ್ತವೆ. ಕೆಲವು ರಾಶಿಯ ಜನ ತುಂಬಾ ಸಬಲರಾಗಿರುತ್ತಾರೆ. ಅವರಲ್ಲಿ ಬಲಾಢ್ಯವಾಗಿ ಹೋರಾಡುವ ಮನೋ ಸ್ಥೈರ್ಯವಿರುತ್ತದೆ. ಆದರೆ ಕೆಲವರು ತಮ್ಮ ಪ್ರೇಮವನ್ನು ನಿವೇದಿಸಲು, ವ್ಯಕ್ತಪಡಿಸಲು ಹಿಂಜರಿಯುತ್ತಾರೆ! ಹಾಗಾದರೆ ಯಾರು ಆ ರಾಶಿಯವರು ತಿಳಿಯೋಣ ಬನ್ನಿ. ನಿರ್ದಿಷ್ಟವಾಗಿ ಮೂರು ಜಾತಕದವರು ತಮ್ಮ ಪ್ರೇಮವನ್ನು ಬಹಿರಂಗವಾಗಿ ನಿವೇದಿಸಲು ಹಿಂಜರಿಯುತ್ತಾರೆ! ಈ ಮೂರೂ ರಾಶಿಯ ಜನ ತಮ್ಮ ಹೃದಯದಲ್ಲಿರುವ ಬೆಚ್ಚಗೆ ಮನೆ ಮಾಡಿರುವ ಪ್ರೀತಿ ಪ್ರೇಮದ […]

ಈ 3 ರಾಶಿಯ ಜನ ತಮ್ಮ ಪ್ರೇಮವನ್ನು ಬಹಿರಂಗವಾಗಿ ನಿವೇದಿಸಲು ಹಿಂಜರಿಯುತ್ತಾರೆ! ನಿಮ್ಮ ರಾಶಿ ಯಾವುದು?
ಈ 3 ರಾಶಿಯ ಜನ ತಮ್ಮ ಪ್ರೇಮವನ್ನು ಬಹಿರಂಗವಾಗಿ ನಿವೇದಿಸಲು ಹಿಂಜರಿಯುತ್ತಾರೆ! ನಿಮ್ಮ ರಾಶಿ ಯಾವುದು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 10, 2021 | 6:13 AM

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾವುದೇ ವ್ಯಕ್ತಿಯ ಅಷ್ಟೂ ಗುಣಾವಗುಣಗಳು ಗ್ರಹ ಗತಿ, ನಕ್ಷತ್ರ ಪ್ರಭಾವಗಳ ಆಧಾರದಲ್ಲಿ ಮೂಡಿಬಂದಿರುತ್ತವೆ. ಕೆಲವು ರಾಶಿಯ ಜನ ತುಂಬಾ ಸಬಲರಾಗಿರುತ್ತಾರೆ. ಅವರಲ್ಲಿ ಬಲಾಢ್ಯವಾಗಿ ಹೋರಾಡುವ ಮನೋ ಸ್ಥೈರ್ಯವಿರುತ್ತದೆ. ಆದರೆ ಕೆಲವರು ತಮ್ಮ ಪ್ರೇಮವನ್ನು ನಿವೇದಿಸಲು, ವ್ಯಕ್ತಪಡಿಸಲು ಹಿಂಜರಿಯುತ್ತಾರೆ! ಹಾಗಾದರೆ ಯಾರು ಆ ರಾಶಿಯವರು ತಿಳಿಯೋಣ ಬನ್ನಿ.

ನಿರ್ದಿಷ್ಟವಾಗಿ ಮೂರು ಜಾತಕದವರು ತಮ್ಮ ಪ್ರೇಮವನ್ನು ಬಹಿರಂಗವಾಗಿ ನಿವೇದಿಸಲು ಹಿಂಜರಿಯುತ್ತಾರೆ! ಈ ಮೂರೂ ರಾಶಿಯ ಜನ ತಮ್ಮ ಹೃದಯದಲ್ಲಿರುವ ಬೆಚ್ಚಗೆ ಮನೆ ಮಾಡಿರುವ ಪ್ರೀತಿ ಪ್ರೇಮದ ಬುಗ್ಗೆಗಳನ್ನು ಹೊರಸೂಸಲು ಪ್ರಯಾಸಪಡುತ್ತಾರೆ. ಹಾಗಂತ ತಮ್ಮ ಪ್ರೇಮವನ್ನು ಮುಚ್ಚಿಕೊಂಡು ಕೊರಗುವುದು ಅವರಿಗೆ ಆಗಿಬರುವುದಿಲ್ಲ. ಆದರೆ ಎದುರುಗಡೆಯ ವ್ಯಕ್ತಿಯೇ ತನ್ನ ಪ್ರೇವನ್ನು ಅರಿಯಲಿ, ತನ್ನ ಪ್ರೇಮಕ್ಕೆ ಸ್ಪಂದಿಸಲಿ ಎಂದು ಬಯಸುತ್ತಾರೆ.

ಇವರು ತಮ್ಮ ಮನದಲ್ಲಿನ ಬೇರೆ ಮಾತುಗಳನ್ನು ಸುಲಭವಾಗಿ ಹೇಳಿಬಿಡುತ್ತಾರೆ. ಆದರೆ ಪ್ರೇಮದ ವಿಷಯವನ್ನು ಹೇಳುವುದೇ ಇಲ್ಲ. ತುಂಬಾ ನಾಚಿಕೆ ಪಡುತ್ತಾರೆ. ತನ್ಮೂಲಕ ತಮ್ಮ ಪ್ರೇಮವನ್ನು ದಕ್ಕಿಸಿಕೊಳ್ಳುವಲ್ಲಿ ವಿಫಲರಾಗುತ್ತಾರೆ. ಪ್ರೇಮದ ವಿಷಯ ಹೇಗಪ್ಪಾ ಹೇಳುವುದು ಎಂದು ಹಿಂದೆಮುಂದೆ ಯೋಚಿಸುತ್ತಾ ಕಾಲ ತಳ್ಳಿಬಿಡುತ್ತಾರೆ. ಅದೇ ಬೇರೆರಾಶಿಯ ಜನ ತಮ್ಮ ಮನದಾಳದ ಪ್ರೇಮವನ್ನು ನಿವೇದಿಸಿ, ಪ್ರೇಮವನ್ನು ದಕ್ಕಿಸಿಕೊಂಡುಬಿಡುತ್ತಾರೆ.

ಕುಂಡಲಿ ಪ್ರಕಾರ ಈ ಮೂರು ರಾಶಿಯ ಜನ ತಮ್ಮ ಪ್ರೀತಿ ಪ್ರೇಮವನ್ನು ಬಹಿರಂಗಪಡಿಸಲು ತುಂಬಾ ಅಸಹಜತೆ ವ್ಯಕ್ತಪಡಿಸುತ್ತಾರೆ. ಬನ್ನೀ ಆ ಮೂರು ರಾಶಿಯವರು ನೋಡೋಣ.

1. ವೃಶ್ಚಿಕ ರಾಶಿ Scorpio: ವೃಶ್ಚಿಕ ರಾಶಿಯ ಜನ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ತುಂಬಾ ಒದ್ದಾಟ ನಡೆಸುತ್ತಾರೆ. ಈ ರಾಶಿಯವರು ಅಪ್ಪಿತಪ್ಪಿಯೂ ತಮ್ಮ ಹೃದಯದ ಮಾತನ್ನು ಎದುರಿಗಿನ ವ್ಯಕ್ತಿಯ ಬಳಿ ತೋಡಿಕೊಳ್ಳುವುದಿಲ್ಲ. ಇದರಿಂದ ಎಷ್ಟೋ ಬಾರಿ ಇವರನ್ನು ಕಠೋರಿಗಳು, ಹೃದಯಹೀನರು ಎಂದೆಲ್ಲಾ ಪರಿಗಣಿಸುವುದು ಉಂಟು. ಈ ವೃಶ್ಚಿಕ ರಾಶಿಯವರು ಪ್ರೀತಿ ಪ್ರೇಮದ ವಿಷಯ ಬಂದಾಗ ಅದನ್ನು ನೇರ ಮಾತುಗಳಲ್ಲಿ ಹೇಳದೆ ನಿಗೂಢವಾಗಿ ಪ್ರೇಮ ಕಾವ್ಯಗಳಲ್ಲಿ, ಬರಹ ರೂಪದಲ್ಲಿ ತಮ್ಮ ಭಾವನೆಗಳನ್ನು ತುಂಬಿಸುತ್ತಾರೆ!

2. ಧನು ರಾಶಿ Sagittarius:

ಇನ್ನು ಧನು ರಾಶಿಯವರು ಪ್ರೇಮ ತುಂಬಿದ ಮಾತುಗಳನ್ನು ಎದುರಿಗಿನ ವ್ಯಕ್ತಿಗೆ ಹೇಳಿಕೊಳ್ಳಲು ತಿಣುಕಾಡುತ್ತಾರೆ, ತುಂಬಾ ಪ್ರಯಾಸಪಡುತ್ತಾರೆ. ಸಹಜವಾಗಿ ತಮ್ಮ ಪ್ರೇಮ ನಿವೇದನೆ ಮಾಡಿಕೊಳ್ಳಲು ಅವರಿಗೆ ಆಗಿಬರುವುದಿಲ್ಲ. ಬೆಚ್ಚಗಿನ ಪ್ರೇಮದ ಬದಲು ಒಂದೆಡೆ ನಾಚಿಕೆ ಮತ್ತೊಂದೆಡೆ ಚಿಂತೆ ಅವರ ಮನದಲ್ಲಿ ಮೂಡುತ್ತದೆ; ಕಾಡುತ್ತದೆ. ಧನು ರಾಶಿಯವರು ಸಕಾಲಕ್ಕೆ ತಮ್ಮ ಪ್ರೇಮವನ್ನು ವ್ಯಕ್ತಪಡಿಸಿದೆ ಸಂಬಂಧವನ್ನು ಅಲ್ಲಿಗೇ ಮುರಿದುಕೊಳ್ಳುತ್ತಾರೆ.

3. ಮೀನ ರಾಶಿ Pisces: ಮೀನ ರಾಶಿಯ ಜನರಿಗೆ ತಮ್ಮ ಉತ್ಕಟ ಪ್ರೇಮ ಭಾವನೆಗಳನ್ನು ಹೇಳುವುದಕ್ಕೆ ವಿಶ್ವಾಸವೇ ಇರುವುದಿಲ್ಲ. ಅದು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರಿಂದ ಮೊಳಕೆಯೊಡೆಯಬೇಕು; ಸಹಜವಾಗಿ ಪ್ರೀತಿ ಉಕ್ಕಬೇಕು. ಬರೀ ಮಾತಿನಲ್ಲಿ ನಿವೇದಿಸಿಕೊಂಡು ಪ್ರೀತಿ ಪ್ರೇಮ ಮಾಡಲಾಗದು, ಅದರ ಅವಶ್ಯಕತೆಯೂ ಬಾರದು ಎಂಬುದು ಇವರ ಖಚಿತ ಅಭಿಪ್ರಾಯ. ತಮ್ಮ ಪ್ರೀತಿ ಪ್ರೇಮವನ್ನು ನೇರವಾಗಿ ಹೇಳುವುದು ಅನುಚಿತ ಎಂಬ ನಿರ್ಧಾರಕ್ಕೆ ಇವರು ಬಂದಿರುತ್ತಾರೆ. ಹಾಗಾಗಿ ಇವರ ಪ್ರೇಮದ ಕುಡಿ ಒಡೆಯುವುದಿಲ್ಲ.

(these 3 zodiac signs Pisces Scorpio Sagittarius are not willing to express their love know why)

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ