ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಮಂದಿ ತಮ್ಮ ಉದ್ದೇಶಗಳಲ್ಲಿ, ಅನಿಸಿಕೆಗಳಲ್ಲಿ ಸ್ಪಷ್ಟತೆ ಹೊಂದಿರುತ್ತಾರೆ. ಪರಿಸ್ಥಿತಿಗಳು ವಿಕೋಪಕ್ಕೆ ಹೋದರೂ ಗಾಬರಿ ಬೀಳುವುದಿಲ್ಲ. ಯಾವುದೇ ಗಂಡಾಂತರ ಎದುರಿಸಲು ಸರ್ವಸಿದ್ಧತೆ ನಡೆಸುತ್ತಾರೆ. ಹಾಗಾಗಿಯೇ ಜೀವನದಲ್ಲಿ ತುಂಬಾ ಮುಂದಕ್ಕೆ ಬರುತ್ತಾರೆ.
ವಾಸ್ತವವಾಗಿ ಯಾವುದೇ ವ್ಯಕ್ತಿಯ ಅಷ್ಟೂ ಗುಣಾವಗುಣಗಳು ಅವರ ಜಾತಕದಲ್ಲಿನ ಗ್ರಹ ಗತಿ, ನಕ್ಷತ್ರ ಪ್ರಭಾವಗಳ ಆಧಾರದಲ್ಲಿ ಮೂಡಿಬಂದಿರುತ್ತವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯ ಜನ ತುಂಬಾ ಸಬಲರಾಗಿರುತ್ತಾರೆ. ಅವರಲ್ಲಿ ಬಲಾಢ್ಯರಾಗಿ ಹೋರಾಡುವ ಮನೋ ಸ್ಥೈರ್ಯವಿರುತ್ತದೆ. ಹಾಗಾಗಿಯೇ ಯಾವುದೇ ದೊಡ್ಡ ಅಪಾಯ ಎದುರಿಸಲು ಹೆದರುವುದಿಲ್ಲ. ಅದನ್ನು ಕಲಿಕೆಯ ಒಂದು ಭಾಗ ಎಂದು ತಿಳಿದುಕೊಳ್ಳುತ್ತಾರೆ. ಜೀವನಪರ್ಯಂತ ಒಂದಲ್ಲಾ ಒಂದು ಕಲಿಯುತ್ತಾ ಇರುತ್ತಾರೆ. ಈ ಗುಣಗಳೇ ಅವರನ್ನು ಒಂದು ಬಲಿಷ್ಠ ವ್ಯಕ್ತಿಯನ್ನಾಗಿ ಕೆತ್ತನೆ ಮಾಡಿರುತ್ತವೆ. ಹಾಗಾದರೆ ಯಾರು ಆ ರಾಶಿಯವರು ತಿಳಿಯೋಣ ಬನ್ನಿ.
1. ಮೇಷ ರಾಶಿ Aries:
ಮೇಷ ರಾಶಿಯವರು ಅಗ್ನಿ ತತ್ತ್ವ ಹೊಂದಿರುತ್ತಾರೆ. ಅಗ್ನಿಯಂತೆ ಜ್ವಲಿಸುತ್ತಿರುತ್ತಾರೆ. ತುಂಬಾ ಆತ್ಮವಿಶ್ವಾಸಿಗಳು. ಯಾವುದೇ ಕಠಿಣ ಪರಿಸ್ಥಿತಿಯಲ್ಲೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ. ಕೊನೆಯ ಘಳಿಗೆಯವರಿಗೂ ತಮ್ಮ ಪ್ರಯತ್ನವನ್ನು ಮುಂದುವರಿಸಿರುತ್ತಾರೆ. ಓಈ ಪ್ರಯತ್ನಶೀಲ ಗುಣಗಳಿಂದಲೇ ಅವರು ಅಗಾಧವಾದುದನ್ನು ಸಾಧಿಸಿಬಿಡುತ್ತಾರೆ. ಅದನ್ನು ಎದುರಿಗೆ ನೋಡುತ್ತಿರುವವರಿಗೆ ಬೆವರು ಇಳಿದುಬಿಡುತ್ತದೆ.
2. ವೃಷಭ ರಾಶಿ Taurus:
ವೃಷಭ ರಾಶಿಯವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ. ಯಾವುದಾದರೂ ಒಂದು ಕೆಲಸ ಹಿಡಿದರೆ ಅದನ್ನು ಮುಗಿಸುವವರೆಗೂ ವಿಶ್ರಮಿಸುವುದಿಲ್ಲ. ಅದನ್ನು ಕಲಿತು ಸಾಧಿಸುವುದರಲ್ಲಿ ತಮ್ಮ ಜೀವನ ಸವೆಸುತ್ತಾರೆ. ಅಂದುಕೊಂಡಿದ್ದ ಕೆಲಸ ಆದ ಮೇಲಷ್ಟೇ ನಿಟ್ಟುಸಿರು ಬಿಡುವುದು. ಯಾವುದೇ ಕೆಲಸ ಕಾರ್ಯ ಕೈಗೆತ್ತಿಕೊಳ್ಳುವ ಮೊದಲು ಅದರ ಬಗ್ಗೆ ಆಳವಾಗಿ ಆಲೋಚಿಸಿರುತ್ತಾರೆ. ಅಪಾಯ ಎದುರಿಸಲು ಸಿದ್ಧತೆ ನಡೆಸಿಯೇ ರಣಾಂಗಣಕ್ಕೆ ಇಳಿದುಬಿಡುತ್ತಾರೆ. ಆದರೂ ಶ್ರಮಜೀವಿ ವೃಷಭ ರಾಶಿಯವವರಿಗೆ ಮಾರ್ಗದರ್ಶನದ ಅಗತ್ಯವಿರುತ್ತದೆ, ಸೂಕ್ತ ಮಾರ್ಗದರ್ಶನ ಸಿಕ್ಕಿದರೆ ಇವರ ರಣೋತ್ಸಾಹಕ್ಕೆ ಸರಿಯಾದ ದಿಕ್ಕು ಸಿಕ್ಕಿ, ಹೆಚ್ಚು ಸಾಫಲ್ಯತೆ ಗಳಿಸುತ್ತಾರೆ.
3. ಸಿಂಹ ರಾಶಿ Leo:
ಸಿಂಹ ರಾಶಿಯವರು ರಾಶಿಗೆ ತಕ್ಕಂತೆ ಸಿಂಹ ಸ್ವಭಾವದವರಾಗಿರುತ್ತಾರೆ. ಅವರಿಗೆ ಭಯದ ಪರಿಚಯವೇ ಇರುವುದಿಲ್ಲ. ಸಣ್ಣಪುಟ್ಟ ತಪ್ಪು ಮಾಡಿದರೂ ಅದರಿಂದ ಕಲಿತು ಅಪಾರ ಸಾಧನೆ ಮಾಡುತ್ತಾರೆ. ಅಪಾಯ ಎದುರಿಸುವುದೆಂದರೆ ಇವರಿಗೆ ಇಷ್ಟ. ಕೆಲಸ ಸಾಧಿಸುವಾಗ ಅಪಾಯಗಳನ್ನು ಎದುರಿಸುವಾಗ ಕಲಿಕೆಗೆ ಮಣೆ ಹಾಕುತ್ತಾರೆ. ಅದರಿಂದ ಒಳ್ಳೆಯ ಜೀವನಾನುಭವ ಸಿಗುತ್ತದೆ. ಆದ್ದರಿಂದ ಎಲ್ಲವನ್ನೂ ಸಕಾರಾತ್ಮಕವಾಗಿ ತೆಗೆದುಕೊಂಡು ಗುರಿ ಸಾಧಿಸುತ್ತಾರೆ.
4. ವೃಶ್ಚಿಕ ರಾಶಿ Scorpio:
ವೃಶ್ಚಿಕ ರಾಶಿಯವರ ಮೇಲೆ ಮಂಗಳ ಗ್ರಹದ ವಿಶೇಷ ಕೃಪೆ ಇರುತ್ತದೆ. ಇವರು ರಿಸ್ಕ್ ತೆಗೆದಯಕೊಳ್ಳುವುದರಲ್ಲಿ ಮಾಸ್ಟರ್ ಆಗಿರುತ್ತಾರೆ. ಬೇರೆಯವರ ವಿಚಾರಗಳ ಬಗ್ಗೆ, ಬೇರೆಯವರ ಅನಿಸಿಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅವರ ಕೆಲಸವನ್ನಷ್ಟೇ ಅವರು ಧೇನಿಸುತ್ತಾರೆ. ಅದರಿಂದಲೇ ಅಲ್ಲವಾ ಅವರು ಅಪಾರವಾದುದನ್ನು ಸಾಧಿಸಿ ತೋರಿಸುವುದು.
5. ಧನಸ್ಸು ರಾಶಿ Sagittarius:
ಧನು ರಾಶಿಯವರು ಸಹ ರಿಸ್ಕ್ ತೆಗೆದುಕೊಳ್ಳುವುದರಲ್ಲಿ ಸಿದ್ಧಹಸ್ತರು. ಸಾಧನೆ ಮಾಡಿ ಎದುರಿಗಿರುವವರನ್ನು ದಿಗ್ಭ್ರಮೆಗೊಳಿಸುತ್ತಾರೆ. ಜೀವನದಲ್ಲಿ ಮುಂದೆ ಬರಲು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಇವರಿಗೆ ಇಷ್ಟವಿರುತ್ತದೆ. ಒಂದು ವೇಳೆ ಸೋತರೂ, ನಷ್ಟ ಅನುಭವಿಸಿದರೂ ಚಿಂತಿಸುವುದಿಲ್ಲ. ಹೊಸ ಪ್ರಯತ್ನ ನಡೆಸುತ್ತಾರೆ. ಮತ್ತೆ ಮತ್ತೆ ರಿಸ್ಕ್ ತೆಗೆದುಕೊಂಡರೂ ಸಫಲರಾಗುತ್ತಾರೆ. ಯಾವುದೇ ಪರಿಸ್ಥಿತಿಯೂ ಇವರನ್ನು ದುರ್ಬಲಗೊಳಿಸದು.
ಇದನ್ನೂ ಓದಿ:
ಈ 4 ರಾಶಿಯ ಜನರಿಗೆ ಮದುವೆ ಅಂದರೆ ಇಷ್ಟವೇ ಇರುವುದಿಲ್ಲ! ಹಾಗಾದರೆ, ನಿಮ್ಮ ರಾಶಿ ಯಾವುದು?
(these 5 zodiac sign people are masters in taking risks and have tremendous fighting spirit)