Mahashivratri 2022: ಈ ರಾಶಿಯವರಿಗೆ ಶಿವನ ಅನುಗ್ರಹ ದೊರೆಯಲಿದೆ

ಕುಂಭ ರಾಶಿಗೂ ಕೂಡ ಶನಿ ಅಧಿಪತಿ. ಹೀಗಾಗಿ ಕುಂಭ ರಾಶಿಯವರು ಶಿವನನ್ನು ಆರಾಧಿಸಿದರೆ ಹೆಚ್ಚು ಉನ್ನತಿ ಪಡೆಯಬಹುದು

Mahashivratri 2022: ಈ ರಾಶಿಯವರಿಗೆ ಶಿವನ ಅನುಗ್ರಹ ದೊರೆಯಲಿದೆ
ಶಿವ (ಪ್ರಾತಿನಿಧಿಕ ಚಿತ್ರ)
Edited By:

Updated on: Feb 25, 2022 | 11:04 AM

ಭಾರತೀಯರಲ್ಲಿ ಹಬ್ಬಗಳ ಆಚರಣೆಗೆ ವಿಶೇಷ ಮಹತ್ವಿದೆ. ಹಿಂದೂ ಹಬ್ಬಗಳಲ್ಲಿ ಪ್ರಮುಖ ಹಬ್ಬ ಶಿವರಾತ್ರಿ ಕೂಡ ಒಂದು.  ಮೂರು ಲೋಕಕ್ಕೂ ಅಧಿಪತಿಯಾದ ಶಿವ, ಮಹಾದೇವ, ನಟರಾಜ, ಬೈರವ, ಪಶುಪತಿ ಹೀಗೆ ಹಲವು ನಾಮಗಳಿಂದ ಕರೆಸಿಕೊಳ್ಳುವ ಮಹಾಯೋಗಿಯನ್ನು ಆರಾಧಿಸುವ ದಿನ. ಪ್ರತೀ ವರ್ಷ ಮಾಘ ಮಾಸದ ಬಹುಳ ಚತುರ್ದಶಿಯಂದು ಆಚರಿಸಲಾಗುತ್ತದೆ. ಈ ವರ್ಷ ಮಾರ್ಚ್​ 1ರಂದು ಶಿವರಾತ್ರಿಯನ್ನು ಆಚರಿಸಲಾಗುತ್ತಿದೆ. ಶಿವನಿಗೆ ಅತ್ಯಂತ ಶ್ರೇಷ್ಠವಾದ ಬಿಲ್ವಪತ್ರೆಯನ್ನು ಅರ್ಪಿಸಿ ಮನಃಪೂರ್ವಕವಾಗಿ ಬೇಡಿಕೊಂಡರೆ ಸಕಲ ಇಷ್ಟಾರ್ಥಗಳನ್ನು ಸಿದ್ಧಿಸಿ, ಕಷ್ಟ ಕಾರ್ಪಣ್ಯಗಳನ್ನು ದೂರಮಾಡುತ್ತಾನೆ ಎನ್ನುವ ನಂಬಿಕೆಯಿದೆ.  ಇಡೀ ರಾತ್ರಿ ಅಖಂಡ ಜಾಗರಣೆ ಮಾಡಿ, ಭಕ್ರಿಯಿಂದ ರುದ್ರನನ್ನು ಆರಾಧಿಸಲಾಗುತ್ತದೆ.  ಶಿವ ಕಷ್ಟನಿವಾರಕ. ಹೀಗಿದ್ದಾಗ ಈ ಬಾರಿ ಶಿವರಾತ್ರಿಯಂದು ಯಾವೆಲ್ಲ ರಾಶಿಯ ಜನರಿಗೆ ಶಿವನ ಅನುಗ್ರಹ ದೊರೆಯಲಿದೆ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕು. ಆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಮೇಷ:
ಶಿವನು ರಾಶಿ ಚಕ್ರದ ಮೊದಲ ರಾಶಿಯಾಗಿರುವ ಮೇಷ ರಾಶಿಯ ಜನರನ್ನು ಅನುಗ್ರಹಿಸುತ್ತಾನ್. ಶಿವ ಮಂಗಳನ ಅಧಿಪತಿ. ಹೀಗಾಗಿ ಶಿವರಾತ್ರಿಯಂದು ಮೇಷ ರಾಶಿಯ ಜನರು ಹಾಲು ಮತ್ತು ಗಂಗಾಜಲವನ್ನು ಶಿವನಿಗೆ ಅರ್ಪಿಸಿದರೆ ಜೀವನದಲ್ಲಿ ಕಷ್ಟಗಳನ್ನು ಕಳೆದು, ಇಷ್ಟಾರ್ಥಗಳನ್ನು ಸಿದ್ದಯಾಗಲಿವೆ.

ವೃಶ್ಚಿಕ :
ವೃಶ್ಚಿಕ ರಾಶಿಯ ಮೇಲೆ ಈ ಶಿವರಾತ್ರಿಯಂದು ಶಿವನ ಅನುಗ್ರಹ ಇರಿಲಿದೆ. ಈ ದಿನ ವೃಶ್ಚಿಕ ರಾಶಿಯ ಜನರು ಶಿವನಿಗೆ ನೀರಿನ ಅಭಿಷೇಕ ಮಾಡಿದರೆ ಉದ್ಯೋಗ ಮತ್ತು ವೃತ್ತಿ ಜೀವನದಲ್ಲಿ ಯಶಸ್ಸುಗಳಿಸುತ್ತಾರೆ.

ಮಕರ:
ಶನಿ ಮಕರ ರಾಶಿಯ ಅಧಿಪತಿ. ಶನಿ ಮತ್ತು ಮಹಾದೇವ  ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹೀಗಾಗಿ  ಮಕರ ರಾಶಿಯ ಜನರು ಶಿವರಾತ್ರಿಯಂದು ಶಿವನ ಆರಾಧನೆ ಮಾಡಿದರೆ, ಶನಿ ಮತ್ತು ಮಹಾದೇವ ಇಬ್ಬರ ಅನುಗ್ರಹವೂ ದೊರೆಯಲಿದೆ.

ಕುಂಭ:
ಕುಂಭ ರಾಶಿಗೂ ಕೂಡ ಶನಿ ಅಧಿಪತಿ. ಹೀಗಾಗಿ ಕುಂಭ ರಾಶಿಯವರು ಶಿವನನ್ನು ಆರಾಧಿಸಿದರೆ ಹೆಚ್ಚು ಉನ್ನತಿ ಪಡೆಯಬಹುದು. ಈ ಶಿವರಾತ್ರಿಯಂದು ಶಿವನಿಗೆ ಹಾಲು, ಬಿಲ್ವಪತ್ರೆ, ಗಂಗಾಜಲವನ್ನು ಅರ್ಪಿಸಿ ಆಶೀರ್ವಾದವನ್ನು ಪಡೆಯಿರಿ.

ಇದನ್ನೂ ಓದಿ:

ದೇವರಿಗೆ ಘಂಟೆ ಹರಕೆ! ಆ ದೇವಸ್ಥಾನದ ಸುತ್ತಲೂ ಹತ್ತಲ್ಲ- ನೂರಲ್ಲ ಸಹಸ್ರಾರು ಘಂಟೆಗಳು ಇವೆ

TV9 Web

TV9 Kannada

Read More
Follow Us