ಪೂಜಾ ಸಮಯದಲ್ಲಿ ದೀಪ ಬೆಳಗುವವರು ಈ ನಿಯಮಗಳ ಪಾಲನೆ ಮಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 02, 2024 | 5:22 PM

ಹಿಂದೂ ಮನೆಗಳಲ್ಲಿ ಪೂಜೆಯ ಸಮಯದಲ್ಲಿ ದೀಪಗಳನ್ನು ಬೆಳಗಿಸುವ ಸಂಪ್ರದಾಯ ಈಗಲೂ ಇದೆ. ಆದರೆ ದೀಪಗಳನ್ನು ಬೆಳಗಿಸಲು ಕೆಲವು ನಿಯಮಗಳಿವೆ, ಹೆಚ್ಚಿನ ಜನರು ಆ ನಿಯಮಗಳನ್ನು ಅನುಸರಿಸುವುದಿಲ್ಲ, ಇದರಿಂದಾಗಿ ಅವರು ಪೂಜೆಯ ಶುಭ ಫಲಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಮಾಡಿದ ಪೂಜೆಯ ಪೂರ್ಣ ಫಲಿತಾಂಶ ಪಡೆಯಲು, ದೀಪವನ್ನು ಬೆಳಗಿಸುವಾಗ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಹೇಗೆ? ನಿಯಮಗಳೇನು? ಇಲ್ಲಿದೆ ಮಾಹಿತಿ.

ಪೂಜಾ ಸಮಯದಲ್ಲಿ ದೀಪ ಬೆಳಗುವವರು ಈ ನಿಯಮಗಳ ಪಾಲನೆ ಮಾಡಿ
Follow us on

ಸನಾತನ ಸಂಸ್ಕ್ರತಿಯಲ್ಲಿ ದೀಪವನ್ನು ಬೆಳಗಿಸಲು ವಿಶೇಷ ಮಹತ್ವವಿದೆ. ಹಿಂದೂ ಧರ್ಮದಲ್ಲಿ, ಪ್ರಾಚೀನ ಕಾಲದಿಂದಲೂ ಪೂಜೆಯ ಸಮಯದಲ್ಲಿ ದೀಪಗಳನ್ನು ಬೆಳಗಿಸುವ ಸಂಪ್ರದಾಯವಿದೆ. ದೀಪಗಳನ್ನು ಬೆಳಗಿಸುವುದರೊಂದಿಗೆ ಪೂಜೆ ಪ್ರಾರಂಭವಾಗುತ್ತದೆ. ಪೂಜೆ ಯಾವುದೇ ಇರಲಿ, ಮೊದಲು ದೀಪವನ್ನು ಬೆಳಗಿಸಲಾಗುತ್ತದೆ ಮತ್ತು ನಂತರವೇ ಪೂಜೆ ಪ್ರಾರಂಭವಾಗುತ್ತದೆ. ದೀಪವನ್ನು ಬೆಳಗಿಸದ ಪೂಜೆಯು ಅಪೂರ್ಣ ಎನಿಸಿಕೊಳ್ಳುತ್ತದೆ. ಹಾಗಾಗಿ ಹಿಂದೂ ಮನೆಗಳಲ್ಲಿ ಪೂಜೆಯ ಸಮಯದಲ್ಲಿ ದೀಪಗಳನ್ನು ಬೆಳಗಿಸುವ ಸಂಪ್ರದಾಯ ಈಗಲೂ ಇದೆ. ಆದರೆ ದೀಪಗಳನ್ನು ಬೆಳಗಿಸಲು ಕೆಲವು ನಿಯಮಗಳಿವೆ, ಹೆಚ್ಚಿನ ಜನರು ಆ ನಿಯಮಗಳನ್ನು ಅನುಸರಿಸುವುದಿಲ್ಲ, ಇದರಿಂದಾಗಿ ಅವರು ಪೂಜೆಯ ಶುಭ ಫಲಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಮಾಡಿದ ಪೂಜೆಯ ಪೂರ್ಣ ಫಲಿತಾಂಶ ಪಡೆಯಲು, ದೀಪವನ್ನು ಬೆಳಗಿಸುವಾಗ ಅನುಸರಿಸಬೇಕಾದ ಕೆಲವು ನಿಯಮಗಳನ್ನು ಕೂಡ ಪಾಲನೆ ಮಾಡಬೇಕಾಗುತ್ತದೆ. ಹೇಗೆ? ನಿಯಮಗಳೇನು? ಇಲ್ಲಿದೆ ಮಾಹಿತಿ.

ದೀಪ ಬೆಳಗಿಸುವ ನಿಯಮಗಳನ್ನು ತಿಳಿದುಕೊಳ್ಳಿ;

ಪೂಜೆಯ ಸಮಯದಲ್ಲಿ ಬೆಳಗುವ ದೀಪವು ಸ್ವಚ್ಛ ಮತ್ತು ಅಚ್ಚುಕಟ್ಟಾಗಿರಬೇಕು. ಏಕೆಂದರೆ ಕೆಲವರು ಮುರಿದ ಹಣತೆಗಳನ್ನು ದೀಪ ಹಚ್ಚಲು ಬಳಸುತ್ತಾರೆ. ಇದು ಶುಭವಲ್ಲ. ಪೂಜೆಯಲ್ಲಿ ಮುರಿದ ದೀಪವನ್ನು ಬಳಸುವುದು ಅಶುಭ ಪರಿಣಾಮಗಳನ್ನು ಬೀರುತ್ತದೆ. ಹಾಗಾಗಿ ಈ ನಿಯಮವನ್ನು ಮರೆಯಬೇಡಿ. ಪೂಜೆಯ ಆರಂಭದಲ್ಲಿ ನೀವು ದೀಪವನ್ನು ಬೆಳಗಿಸಿದಾಗ, ದೀಪದಲ್ಲಿ ಸೂಕ್ತ ಪ್ರಮಾಣದ ತುಪ್ಪ ಅಥವಾ ಎಣ್ಣೆ ಇರುವಂತೆ ವಿಶೇಷ ಕಾಳಜಿ ವಹಿಸಿ, ಇದರಿಂದ ಪೂಜೆ ಮುಗಿಯುವ ಮೊದಲು ದೀಪವು ಆರಿ ಹೋಗುವುದಿಲ್ಲ. ಪೂಜೆಯ ಮಧ್ಯದಲ್ಲಿ ದೀಪವನ್ನು ಆರಿಸುವುದು ಕೆಟ್ಟ ಶಕುನ ಹಾಗಾಗಿ ತುಪ್ಪವಿರಲಿ ಅಥವಾ ಎಣ್ಣೆಯಿರಲಿ ಬೇಕಾಗುವಷ್ಟು ಪ್ರಮಾಣದಲ್ಲಿ ತೆಗೆದುಕೊಂಡು ದೀಪ ಹಚ್ಚಿ.

ಪೂಜಾ ದೀಪದ ಹೊರತಾಗಿ ಬೇರೆ ಯಾವುದೇ ದೀಪ ಅಥವಾ ಧೂಪವನ್ನು ಬೆಳಗಿಸಬಾರದು ಎಂದು ನಂಬಲಾಗಿದೆ. ಅಲ್ಲದೆ ಪೂಜೆಯ ಸಮಯದಲ್ಲಿ ತುಪ್ಪದ ದೀಪವನ್ನು ಬೆಳಗಿಸಿದ ನಂತರ, ತಕ್ಷಣವೇ ಮತ್ತೊಂದು ಎಣ್ಣೆ ದೀಪವನ್ನು ಬೆಳಗಿಸಬೇಡಿ. ದೀಪವನ್ನು ಯಾವಾಗಲೂ ಪೂಜಾ ಸ್ಥಳದ ಮಧ್ಯದಲ್ಲಿ ಅಥವಾ ದೇವರ ವಿಗ್ರಹದ ಮುಂದೆ ಇಡಬೇಕು.

ಇದನ್ನೂ ಓದಿ: ನಿತ್ಯ ದೇವರ ಪೂಜೆಯಲ್ಲಿ ಗೊಂಡೆ ಹೂವು ಬಳಸಿ, ಜತೆಗೆ ಅದರ ಮಹತ್ವ ತಿಳಿಯಿರಿ

ನೀವು ತುಪ್ಪದ ದೀಪವನ್ನು ಬೆಳಗಿಸಿದರೆ, ಅದನ್ನು ನಿಮ್ಮ ಎಡಭಾಗದಲ್ಲಿ ಇರಿಸಿ ಅಥವಾ ನೀವು ಎಣ್ಣೆ ದೀಪವನ್ನು ಬೆಳಗಿಸಿದರೆ, ಅದನ್ನು ನಿಮ್ಮ ಬಲಭಾಗದಲ್ಲಿ ಇರಿಸಿ. ಏಕೆಂದರೆ ಇದರಿಂದ ನಿಮಗೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಇನ್ನು ಎಣ್ಣೆ ದೀಪದಲ್ಲಿ ಕೆಂಪು ಬತ್ತಿಯನ್ನು ಬಳಸುವುದು ಶುಭವೆಂದು ಪರಿಗಣಿಸಲಾಗಿದೆ ಹಾಗೂ ಮನೆಯಲ್ಲಿ ಬಳಸುವ ದೀಪಕ್ಕೆ ಹತ್ತಿಯ ಬತ್ತಿ ಸೂಕ್ತ ಎಂದು ಹೇಳಲಾಗುತ್ತದೆ. ಆದರೆ ಪೂಜಾ ಸ್ಥಳದಲ್ಲಿ ದೀಪವನ್ನು ಎಂದಿಗೂ ಪಶ್ಚಿಮ ದಿಕ್ಕಿನಲ್ಲಿ ಇಡಬಾರದು ಇದನ್ನು ಮರೆಯಬೇಡಿ. ಹಾಗೆ ಮಾಡುವುದರಿಂದ ಆರ್ಥಿಕ ನಷ್ಟವಾಗಬಹುದು ಎಂದು ಹೇಳಲಾಗುತ್ತದೆ. ಹಾಗಾಗಿ ಮೇಲೆ ಹೇಳಿರುವ ನಿಯಮಗಳನ್ನು ಸರಿಯಾಗಿ ಪಾಲಿಸಿ ನಿಮ್ಮ ಪೂಜಾ ಫಲವನ್ನು ಸಂಪೂರ್ಣವಾಗಿ ಪಡೆಯಿರಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Published On - 5:19 pm, Fri, 2 February 24