AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marigold: ನಿತ್ಯ ದೇವರ ಪೂಜೆಯಲ್ಲಿ ಗೊಂಡೆ ಹೂವು ಬಳಸಿ, ಜತೆಗೆ ಅದರ ಮಹತ್ವ ತಿಳಿಯಿರಿ

ಮನೆಯಲ್ಲಿ ಯಾವುದೇ ಸಮಾರಂಭವಿರಲಿ ಅಲಂಕಾರಕ್ಕೆ ಚೆಂಡು ಹೂವಿದ್ದರೆ ಚೆಂದ. ಮಾರಿಗೋಲ್ಡ್ ಅಥವಾ ಚೆಂಡು ಹೂವಿನ ಪ್ರಾಮುಖ್ಯತೆಯ ಬಗ್ಗೆ ಮತ್ತು ಅದನ್ನು ಪೂಜೆಯಲ್ಲಿ ಏಕೆ ಹೆಚ್ಚು ಹೆಚ್ಚು ಬಳಸಲಾಗುತ್ತದೆ ಎಂಬುದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಅದರ ಧಾರ್ಮಿಕ ಪ್ರಾಮುಖ್ಯತೆಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Marigold: ನಿತ್ಯ ದೇವರ ಪೂಜೆಯಲ್ಲಿ ಗೊಂಡೆ ಹೂವು ಬಳಸಿ, ಜತೆಗೆ ಅದರ ಮಹತ್ವ ತಿಳಿಯಿರಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 02, 2024 | 4:03 PM

Share

ಹಿಂದೂ ಮನೆಗಳಲ್ಲಿ ದೇವರಿಗೆ ಹೂವು ಅರ್ಪಿಸದೆಯೇ ಪೂಜೆ ಮಾಡುವುದು ಕಡಿಮೆ. ಧರ್ಮ ಗ್ರಂಥಗಳ ಪ್ರಕಾರ, ಹೂವುಗಳು ಸಕಾರಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತವೆ. ಹಾಗಾಗಿ ಹಿಂದೂ ಧರ್ಮದಲ್ಲಿ ಹೂವಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಅದರಲ್ಲಿಯೂ ಚೆಂಡು ಹೂವು ಮತ್ತು ಅದರ ಹಾರಗಳನ್ನು ದೇವಾಲಯಗಳಲ್ಲಿ ಅಥವಾ ಪೂಜೆಯ ಸಮಯದಲ್ಲಿ ಬಳಸುವುದನ್ನು ನೀವು ನೋಡಿರಬಹುದು. ಮನೆಯಲ್ಲಿ ಯಾವುದೇ ಸಮಾರಂಭವಿರಲಿ ಅಲಂಕಾರಕ್ಕೆ ಚೆಂಡು ಹೂವಿದ್ದರೆ ಚೆಂದ. ಮಾರಿಗೋಲ್ಡ್ ಅಥವಾ ಚೆಂಡು ಹೂವಿನ ಪ್ರಾಮುಖ್ಯತೆಯ ಬಗ್ಗೆ ಮತ್ತು ಅದನ್ನು ಪೂಜೆಯಲ್ಲಿ ಏಕೆ ಹೆಚ್ಚು ಹೆಚ್ಚು ಬಳಸಲಾಗುತ್ತದೆ ಎಂಬುದರ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಅದರ ಧಾರ್ಮಿಕ ಪ್ರಾಮುಖ್ಯತೆಯ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಿಂದೂ ಧರ್ಮದಲ್ಲಿ, ಎಲ್ಲಾ ಹೂವುಗಳಿಗೆ ವಿಭಿನ್ನ ಪ್ರಾಮುಖ್ಯತೆ ಇದೆ. ಅಂತೆಯೇ, ಚೆಂಡು ಹೂವು ಸಹ ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಇದನ್ನು ಪೂಜೆ, ಮದುವೆ, ದೇವಸ್ಥಾನದ ಪ್ರತಿಷ್ಠೆ, ಗೃಹಪ್ರವೇಶ ಮುಂತಾದ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಇನ್ನು ಇದರಲ್ಲಿ ದುರ್ಗಾ ಮಾತೆಗೆ ಕೆಂಪು ಹೂವುಗಳನ್ನು, ಶಿವನಿಗೆ ಬಿಳಿ ಹೂವುಗಳನ್ನು ಮತ್ತು ವಿಷ್ಣುವಿಗೆ ಹಳದಿ ಹೂವುಗಳನ್ನು ಅರ್ಪಿಸುವುದು ಬಹಳ ಶುಭ ಎನ್ನಲಾಗುತ್ತದೆ.

ದೇವರಿಗೆ ಅರ್ಪಿಸುವುದರಿಂದ ಸಿಗುವ ಪ್ರಯೋಜನಗಳೇನು?

ಮಾರಿಗೋಲ್ಡ್ ಅಥವಾ ಚೆಂಡು ಹೂವುಗಳನ್ನು ದೇವರಿಗೆ ಅರ್ಪಿಸುವುದರಿಂದ ಒಬ್ಬ ವ್ಯಕ್ತಿಗೆ ಬುದ್ಧಿವಂತಿಕೆ, ಜ್ಞಾನ ಮತ್ತು ಸಂಪತ್ತು ಒಲಿಯುತ್ತದೆ ಎಂದು ಹೇಳಲಾಗುತ್ತದೆ. ಈ ಹೂವಿನ ಅತ್ಯಂತ ವಿಶೇಷ ಸಂಗತಿಯೆಂದರೆ ಇದರಲ್ಲಿ ಒಂದಲ್ಲ, ಎರಡಲ್ಲ ಅನೇಕ ದಳಗಳಿರುತ್ತವೆ ಹಾಗಾಗಿ ಈ ಹೂವುಗಳನ್ನು ಭಾಂದವ್ಯದ ಸಂಕೇತ ಎನ್ನಲಾಗುತ್ತದೆ. ಹೇಗೆ ಈ ಹೂವು ಎಲ್ಲಾ ದಳಗಳನ್ನು ಒಟ್ಟು ಗೂಡಿಸಿ ಇಟ್ಟುಕೊಂಡಿರುತ್ತದೆಯೋ ಹಾಗೆಯೇ ಸಂಬಂಧಗಳನ್ನು ಕೂಡ ಅಷ್ಟೇ ಚೆನ್ನಾಗಿ ಕಾಪಾಡಿಕೊಳ್ಳುತ್ತದೆ ಎನ್ನಲಾಗುತ್ತದೆ. ಹಾಗಾಗಿಯೇ ಈ ಹೂವುಗಳನ್ನು ಎಲ್ಲಾ ಶುಭ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಇನ್ನು ಈ ಹೂವುಗಳನ್ನು ಮಂಗಳಕರವೆಂದು ಭಾವಿಸುವುದರಿಂದ ಮನೆಯ ಬಾಗಿಲಲ್ಲಿ ಚೆಂಡು ಹೂವಿನ ಹಾರವನ್ನು ಸದಾ ಇಡಲಾಗುತ್ತದೆ.

ಇದನ್ನೂ ಓದಿ: ಮಾಸ ಶಿವರಾತ್ರಿ ಆಚರಿಸುವುದರಿಂದ ಸಿಗುತ್ತೆ ಹಲವಾರು ಪ್ರಯೋಜನ

ನಾವು ಯಾವ ದೇವರಿಗೆ ಚೆಂಡು ಹೂಗಳನ್ನು ಅರ್ಪಿಸಬೇಕು?

ವಿಷ್ಣುವಿಗೆ ಚೆಂಡು ಹೂಗಳನ್ನು ಅರ್ಪಿಸಬಹುದು. ಮಕ್ಕಳ ವಿಷಯದಲ್ಲಿ ತೊಂದರೆ ಅನುಭವಿಸುತ್ತಿರುವವರು ವಿಷ್ಣುವಿಗೆ ಚೆಂಡು ಹೂವನ್ನು ಅರ್ಪಿಸುವುದರಿಂದ ಸಂತೋಷದ ಸುದ್ದಿ ಸಿಗುತ್ತದೆ ಎಂಬ ಧಾರ್ಮಿಕ ನಂಬಿಕೆ ಇದೆ. ಮಾರಿಗೋಲ್ಡ್ ಹೂವುಗಳನ್ನು ಗಣಪತಿ ದೇವನ ಪೂಜೆಯಲ್ಲಿಯೂ ಬಳಸಲಾಗುತ್ತದೆ. ಈ ಹೂವಿನ ಪ್ರತಿಯೊಂದು ದಳದಲ್ಲಿ ವಿವಿಧ ದೇವರುಗಳು ಮತ್ತು ದೇವತೆಗಳು ವಾಸಿಸುತ್ತಾರೆ ಎಂದು ಹೇಳಲಾಗುತ್ತದೆ. ಈ ಕಾರಣಕ್ಕಾಗಿ, ಈ ಹೂವು ಹಿಂದೂ ಧರ್ಮದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಾಗಾಗಿ ಶ್ರೀ ಹರಿಗೆ ಚೆಂಡು ಹೂಗಳನ್ನು ಅರ್ಪಿಸುವ ಮೂಲಕ, ನಿಮ್ಮ ಎಲ್ಲಾ ಆಸೆಗಳನ್ನು ಈಡೇರಿಸಿಕೊಳ್ಳಿ. ಇನ್ನು ಈ ಹೂವನ್ನು ನೀವು ವಿಷ್ಣು, ಗಣೇಶ ಮತ್ತು ತಾಯಿ ಲಕ್ಷ್ಮೀಯ ಆರಾಧನೆಯಲ್ಲಿ ಹೆಚ್ಚಾಗಿ ಬಳಸಬಹುದಾಗಿದೆ. ಸಾಧ್ಯವಾದರೆ ಶುಭ ಸಮಾರಂಭಗಳಲ್ಲಿ ಮನೆಯ ಬಾಗಿಲಿಗೆ ಇದನ್ನು ಹಾಕಿ. ಇದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Follow Us
ಕೆನ್ನೆಗೆ ಬಾರಿಸಿದ ಟೀಚರ್; ಕುಸಿದುಬಿದ್ದು ಪ್ರಾಣಬಿಟ್ಟ 6 ವರ್ಷದ ಮಗು!
ಕೆನ್ನೆಗೆ ಬಾರಿಸಿದ ಟೀಚರ್; ಕುಸಿದುಬಿದ್ದು ಪ್ರಾಣಬಿಟ್ಟ 6 ವರ್ಷದ ಮಗು!
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ