ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿ ಯಶಸ್ಸು ಕಾಣಬೇಕಾದ್ರೆ ಮನೆಯ ವಾಸ್ತು ಶಾಸ್ತ್ರ ನೋಡಿ ಮನೆ ಕಟ್ಟುವುದು ಅತಿ ಮುಖ್ಯ. ಮುಖ್ಯದ್ವಾರ ಎಲ್ಲಿರಬೇಕು. ಅಡುಗೆ ಮನೆ, ಬೆಡ್ ರೂಂ, ಬಾತ್ ರೂಂ ಎಲ್ಲಿರಬೇಕು ಎಂಬುದನ್ನು ವಾಸ್ತು ಶಾಸ್ತ್ರ ಬದ್ಧವಾಗಿ ನೋಡಿ ಕಟ್ಟಿದರೆ ಮನೆಯಲ್ಲಿ ನೆಮ್ಮದಿ, ಶಾಂತಿ, ಸಂಪತ್ತು ನೆಲೆಸುತ್ತೆ. ಹೀಗಾಗಿ ನಾವು ನಿಮಗೆ ಇಂದು ಈ ಆರ್ಟಿಕಲ್ ಮುಖಾಂತರ ಯಾವ ಬಣ್ಣದ ಮಾರ್ಬಲ್ಸ್ ಬಳಸಿದರೆ ಯಶಸ್ಸು ಸಿಗುತ್ತೆ ಎಂಬುದನ್ನು ತಿಳಿಸಿಕೊಡಲಿದ್ದೇವೆ.
ವಾಸ್ತು ಶಾಸ್ತ್ರದ ಪ್ರಕಾರ ಈಶಾನ್ಯ ದಿಕ್ಕಿನಲ್ಲಿ ಮತ್ತು ಪಶ್ಚಿಮ ದಿಕ್ಕಿನಲ್ಲಿ ನೆಲಕ್ಕೆ ಬಿಳಿ ಬಣ್ಣದ ಮಾರ್ಬಲ್ ಅನ್ನು ಬಳಸುವುದು ಉತ್ತಮ ಆಯ್ಕೆಯಾಗಿದೆ. ಮನೆ ಅಥವಾ ಕಚೇರಿಯ ಈಶಾನ್ಯ ದಿಕ್ಕಿನಲ್ಲಿ ಬಿಳಿ ಬಣ್ಣದ ಮಾರ್ಬಲ್ ಅನ್ನು ಸ್ಥಾಪಿಸುವುದರಿಂದ ಆ ದಿಕ್ಕಿಗೆ ಸಂಬಂಧಿಸಿದ ವಾಸ್ತು ಪ್ರಯೋಜನಗಳು ಬರುತ್ತವೆ, ಅಲ್ಲದೆ ಜೀವನದಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಮನೆಯ ಸದಸ್ಯರು ನಿರಂತರವಾಗಿ ಪ್ರಗತಿಯ ಶಿಖರವನ್ನು ತಲುಪುತ್ತಾರೆ. ತಮ್ಮ ಸ್ವಂತ ಪರಿಶ್ರಮದ ಮೂಲಕ ಯಾವುದೇ ಸಹಾಯವಿಲ್ಲದೆ ತಮ್ಮ ಕೆಲಸವನ್ನು ಪೂರ್ಣಗೊಳಿಸುವ ಸಾಮರ್ಥ್ಯ ಬರುತ್ತದೆ.
ಇದರ ಹೊರತಾಗಿ, ಈಶಾನ್ಯ ದಿಕ್ಕಿನಲ್ಲಿ ಬಿಳಿ ಬಣ್ಣದ ಅಮೃತಶಿಲೆಯನ್ನು ಸ್ಥಾಪಿಸುವುದರಿಂದ, ಮನೆಯ ಕಿರಿಯ ಮಗನಿಗೆ ಹೆಚ್ಚಿನ ಲಾಭ ಮತ್ತು ಅವನಿಗೆ ಕೆಲಸ ಸಿಗುತ್ತದೆ. ಇನ್ನು ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಆಗ್ನೇಯ ಮೂಲೆಯಲ್ಲಿ ಹಸಿರು ಗಿಡಗಳನ್ನು ಇಡುವುದು ಸೂಕ್ತ. ಹಾಗೂ ದುಂಡಗಿನ ಪೀಠೋಪಕರಣಗಳನ್ನು ಇಡಬೇಡಿ. ಹೀಗೆ ಮಾಡುವುದರಿಂದ ಮನೆಯಲ್ಲಿರುವವರ ನಡುವಿನ ಸಂಬಂಧಗಳು ದರ್ಬಲಗೊಳ್ಳುತ್ತವೆ.
ಇದನ್ನೂ ಓದಿ: Vastu Tips: ನೀವು ಮಲಗುತ್ತಿರುವುದು ವಾಸ್ತು ಪ್ರಕಾರ ಸರಿ ಇದೆಯೇ? ಮನಸ್ಸಿಗೆ ಕಿರಿಕಿರಿ ಇದ್ದರೆ ಇವುಗಳನ್ನು ಪಾಲಿಸಿ ನೋಡಿ
Published On - 4:40 pm, Tue, 26 October 21