AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2024: ಕ್ರೋಧಿ ಸಂವತ್ಸರ ಆರಂಭ ಯಾವಾಗ? ಶುಭ ಸಮಯವೇನು?

ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಪೊಯಿಲಾ ಬೋಯಿಶಾಕ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾವನ್ನು ಆಚರಿಸಲಾಗುತ್ತದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಯುಗಾದಿಯನ್ನು ಆಚರಿಸಲಾಗುತ್ತದೆ. ಹಾಗಾದರೆ 2024 ರ ಯುಗಾದಿ ಹಬ್ಬದ ಸಂಪೂರ್ಣ ಮಾಹಿತಿ ಇಲ್ಲಿದೆ.

Ugadi 2024: ಕ್ರೋಧಿ ಸಂವತ್ಸರ ಆರಂಭ ಯಾವಾಗ? ಶುಭ ಸಮಯವೇನು?
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Apr 08, 2024 | 11:28 AM

Share

ಹಿಂದೂಗಳಿಗೆ ಯುಗಾದಿ ಹಬ್ಬವು ಹೊಸ ವರ್ಷದ ಜೊತೆಗೆ ಸುಗ್ಗಿ ಋತುವಿನ ಪ್ರಾರಂಭವಾಗಿದೆ. ಜೊತೆಗೆ ಹೊಸ ಭರವಸೆಗಳನ್ನು ಹೊತ್ತು ತರುತ್ತದೆ. ಈ ಸಮಯದಲ್ಲಿ, ಜನರು ತಮ್ಮ ಮನೆಗಳನ್ನು ಮದುವಣ ಗಿತ್ತಿಯಂತೆ ಸಿಂಗರಿಸಿ, ಚೆಂದದ ಬಟ್ಟೆ ತೊಟ್ಟು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಈ ಹಬ್ಬವನ್ನು ವಿವಿಧ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಲ್ಲಿ ಆಚರಿಸಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ಪೊಯಿಲಾ ಬೋಯಿಶಾಕ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ, ಮಹಾರಾಷ್ಟ್ರದಲ್ಲಿ ಗುಡಿ ಪಾಡ್ವಾವನ್ನು ಆಚರಿಸಲಾಗುತ್ತದೆ. ತೆಲಂಗಾಣ, ಆಂಧ್ರಪ್ರದೇಶ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಯುಗಾದಿಯನ್ನು ಆಚರಿಸಲಾಗುತ್ತದೆ. ಹಾಗಾದರೆ 2024 ರ ಯುಗಾದಿ ಹಬ್ಬದ ಸಂಪೂರ್ಣ ಮಾಹಿತಿ ಇಲ್ಲಿದೆ.

ಯುಗಾದಿಯ ಶುಭ ಸಮಯ ಯಾವಾಗ?

ಯುಗಾದಿ ಹಬ್ಬದಂದು ಹೊಸದಾದ ಸಂವತ್ಸರ ಪ್ರಾರಂಭವಾಗುತ್ತದೆ. ಈ ವರ್ಷ ಚಕ್ರದಲ್ಲಿ ಪ್ರತಿ ವರ್ಷವೂ ಹೊಸ ಹೆಸರನ್ನು ಹೊಂದಿದೆ. ಈ ಬಾರಿ ಶೋಭನ ನಾಮ ಸಂವತ್ಸರ ಮುಗಿದು ಕ್ರೋಧಿ ಸಂವತ್ಸರವು ಪ್ರಾರಂಭವಾಗುತ್ತದೆ. ಈ ದಿನವನ್ನು ಎ. 9 ರಂದು ಮಂಗಳವಾರ ಆಚರಿಸಲಾಗುತ್ತದೆ. ದೃಕ್ ಪಂಚಾಂಗದ ಪ್ರಕಾರ, ಪ್ರತಿಪಾದ ತಿಥಿ ಎ. 8 ರಂದು ಮಧ್ಯಾಹ್ನ 23:50 ಕ್ಕೆ ಪ್ರಾರಂಭವಾಗಿ ಎ. 9 ರಂದು ರಾತ್ರಿ 20:30 ಕ್ಕೆ ಕೊನೆಗೊಳ್ಳುತ್ತದೆ.

ಯುಗಾದಿ ಹಬ್ಬದ ಇತಿಹಾಸ ಮತ್ತು ಮಹತ್ವ;

ಯುಗಾದಿ ಎಂದರೆ ಹೊಸದು ಎಂದರ್ಥ. 12 ನೇ ಶತಮಾನದಲ್ಲಿ, ಭಾರತೀಯ ಗಣಿತಜ್ಞ ಭಾಸ್ಕರಾಚಾರ್ಯರು ಯುಗಾದಿಯನ್ನು ಹೊಸ ವರ್ಷದ ಪ್ರಾರಂಭವೆಂದು ಗುರುತಿಸಿದರು, ಏಕೆಂದರೆ ಈ ಸಮಯದಲ್ಲಿ ವಸಂತಕಾಲ ಪ್ರಾರಂಭವಾಗಿರುತ್ತದೆ. ಬಾಡಿದ ಮರ ಗಿಡಗಳು ಮತ್ತೆ ಪುನಃ ಚಿಗುರೊಡೆಯುತ್ತದೆ, ಪರಿಸರ ಹಚ್ಚ ಹಸುರಿನಿಂದ ಕೊಡಿದ್ದು ಹೂ, ಹಣ್ಣುಗಳಿಂದ ಸಮೃದ್ಧವಾಗಿರುತ್ತದೆ. ಇದು ನಮ್ಮ ಜೀವನದಲ್ಲಿಯೂ ಹೊಸ ಜೀವನ ಮತ್ತು ಹೊಸ ಆರಂಭವನ್ನು ಸೂಚಿಸುತ್ತದೆ. ಅಲ್ಲದೆ ಬ್ರಹ್ಮ ದೇವರು ಈ ದಿನದಂದು ಜಗತ್ತನ್ನು ಸೃಷ್ಟಿಸಿದನೆಂದು ನಂಬಲಾಗಿದೆ ಮತ್ತು ಅಂದಿನಿಂದ, ಹೊಸ ವರ್ಷವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ಸೂರ್ಯಗ್ರಹಣ ಸಮಯದಲ್ಲಿ ಏನು ಮಾಡಬೇಕು, ಏನು ಮಾಡಬಾರದು ? ತಿಳಿಯಲು ಈ ವಿಡಿಯೋ ನೋಡಿ

ಆಚರಣೆಗಳೇನು?

ಯುಗಾದಿಯನ್ನು ಹಬ್ಬವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನದಿಂದ ಪ್ರಾರಂಭಿಸುತ್ತಾರೆ. ಬಳಿಕ ಎಳ್ಳು ಬೆಲ್ಲವನ್ನು ಸೇವನೆ ಮಾಡುತ್ತಾರೆ. ಇದು ಜೀವನದ ಕಷ್ಟ- ಸುಖದ ಸಮ್ಮಿಶ್ರಣವನ್ನು ಸೂಚಿಸುತ್ತದೆ. ಬಳಿಕ ಪಂಚಾಂಗ ಶ್ರವಣ ಮಾಡುತ್ತಾರೆ. ಇದು ವರ್ಷದ ಭವಿಷ್ಯವನ್ನು ಹೇಳುವ ಮತ್ತು ಕೇಳುವ ಪರಿಪಾಠವಾಗಿದೆ. ಇದನ್ನು ಕುಟುಂಬದ ಹಿರಿಯ ವ್ಯಕ್ತಿಯು, ಪಂಚಾಂಗದ ಯುಗಾದಿ ಫಲವನ್ನು ನೀಡಿರುವ ಆಧಾರದ ಮೇಲೆ ಮುಂಬರುವ ವರ್ಷ ಹೇಗಿರಬಹುದು ಎಂದು ತಿಳಿಸುವ ಆಚರಣೆಯಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ