ಅನಂತ್ನಾಗ್: ಜಮ್ಮು ಮತ್ತು ಕಾಶ್ಮೀರವು ತನ್ನ ಸುಂದರವಾದ ಭೂಪ್ರದೇಶ, ಮೋಡಿ ಮಾಡುವ ದೃಶ್ಯಗಳು, ಶ್ರೀಮಂತ ಸಂಸ್ಕೃತಿ ಮತ್ತು ಧಾರ್ಮಿಕ ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ಕಾಶ್ಮೀರದಾದ್ಯಂತ ಹರಡಿರುವ ಅನೇಕ ಪವಿತ್ರ ಸ್ಥಳಗಳಲ್ಲಿ ಒಂದಾಗಿರುವ ಈ ದೇವಾಲಯವು ಹಿಂದೂ ನಂಬಿಕೆಯ ಭಕ್ತರಿಗೆ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಅನಂತನಾಗ್‌ನಲ್ಲಿರುವ ಉಮಾ ಭಗವತಿ ದೇವಾಲಯ ಬಹಳ ವಿಶೇಷವಾದ ದೇವಸ್ಥಾನವಾಗಿದೆ.
ಕಳೆದ 34 ವರ್ಷಗಳ ಕಾಲ ಮುಚ್ಚಲ್ಪಟ್ಟ ಈ ಪವಿತ್ರ ದೇವಾಲಯವು ಕೊನೆಗೂ ಭಕ್ತರಿಗೆ ತನ್ನ ಬಾಗಿಲುಗಳನ್ನು ತೆರೆದಿದೆ. ಈ ದೇವಾಲಯದ ಮಹತ್ವ ಮತ್ತು ಅದನ್ನು ತಲುಪುವುದು ಹೇಗೆ? ಎಂಬುದರ ಮಾಹಿತಿ ಇಲ್ಲಿದೆ.
ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶಾಂಗಾಸ್ ಗ್ರಾಮದಲ್ಲಿ ರಾಗ್ನ್ಯಾ ದೇವಿ ದೇವಸ್ಥಾನ ಎಂದೂ ಕರೆಯಲ್ಪಡುವ ಉಮಾ ಭಗವತಿ ದೇವಸ್ಥಾನವಿದೆ. ಇದು ಪಾರ್ವತಿ ದೇವಿಯ ಅವತಾರವಾದ ಉಮಾ ದೇವಿಗೆ ಸಮರ್ಪಿತವಾದ ದೇವಸ್ಥಾನವಾಗಿದೆ. ಈ ದೇವಾಲಯವು 500 ವರ್ಷಗಳಿಗಿಂತಲೂ ಹಳೆಯದಾಗಿದೆ. ಸ್ಥಳೀಯ ಸಮುದಾಯಕ್ಕೆ ಮತ್ತು ದೇಶಾದ್ಯಂತದ ಭಕ್ತರಿಗೆ ಈ ದೇಗುಲ ಹೆಚ್ಚಿನ ಮಹತ್ವವನ್ನು ಹೊಂದಿದೆ.
ಇದನ್ನೂ ಓದಿ: ಪುರಿ ಜಗನ್ನಾಥ ದೇವಸ್ಥಾನದಲ್ಲಿ ತಪ್ಪಿಯೂ ಈ ಮೆಟ್ಟಿಲ ಮೇಲೆ ಕಾಲಿಡಬೇಡಿ!
3 ದಶಕಗಳ ನಂತರ ಈ ದೇವಾಲಯವು ಪುನರಾರಂಭಗೊಂಡಿರುವುದು ಸ್ಥಳೀಯರು ಮತ್ತು ಭಕ್ತರಲ್ಲಿ ಅಪಾರ ಸಂತೋಷ ಮತ್ತು ಉತ್ಸಾಹವನ್ನು ತಂದಿದೆ. 1990ರಲ್ಲಿ ಈ ಪ್ರದೇಶದಲ್ಲಿ ಉಗ್ರಗಾಮಿಗಳ ಆಕ್ರಮಣದಿಂದಾಗಿ ದೇವಾಲಯವನ್ನು ಮುಚ್ಚಲಾಯಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕಣಿವೆಯಲ್ಲಿ ಶಾಂತಿಯನ್ನು ಪುನಃಸ್ಥಾಪಿಸಲು ಅಧಿಕಾರಿಗಳು ಈ ಪವಿತ್ರ ದೇಗುಲವನ್ನು ಪುನಃ ತೆರೆಯಲು ನಿರ್ಧರಿಸಿದರು. ಇದು ಭಕ್ತರ ಸಂತೋಷಕ್ಕೆ ಕಾರಣವಾಗಿದೆ. ದೇವಾಲಯದ ಪುನರಾರಂಭ ಸಮಾರಂಭದಲ್ಲಿ ಕೇಂದ್ರ ಸಚಿವ ನಿತ್ಯಾನಂದ ರೈ ಭಾಗವಹಿಸಿದ್ದರು.
#WATCH | J&K: Uma Bhagwati temple in Anantnag reopened after 34 years; a new idol of the Goddess was installed in the temple during the ceremony. pic.twitter.com/sWq3bvFmjG
— ANI (@ANI) July 15, 2024
ಉಮಾ ಭಗವತಿ ದೇವಸ್ಥಾನದ ಮಹತ್ವ:
ಉಮಾ ಭಗವತಿ ದೇವಸ್ಥಾನದ ಮಹತ್ವವು ಪ್ರಾಚೀನ ಕಾಲದಿಂದಲೂ ಗುರುತಿಸಿಕೊಂಡಿದೆ. ದಂತಕಥೆಯ ಪ್ರಕಾರ, ಶಿವನು ತನ್ನ ಪತ್ನಿ ಸತಿ ದೇವಿಯು ತನ್ನನ್ನು ತಾನೇ ಬೆಂಕಿ ಹಚ್ಚಿಕೊಂಡ ನಂತರ ಆಕೆಯ ಬಲಗೈ ದೇವಾಲಯವಿರುವ ಈ ಸ್ಥಳದಲ್ಲಿಯೇ ಬಿದ್ದಿತು. ಪಾರ್ವತಿ ದೇವಿಯು ತಮ್ಮ ವಿವಾಹದ ಮೊದಲು ಶಿವನ ಆಶೀರ್ವಾದವನ್ನು ಪಡೆಯಲು ಇಲ್ಲಿ ಧ್ಯಾನ ಮಾಡಿದ್ದಳು ಎಂದು ನಂಬಲಾಗಿದೆ.
ಇದನ್ನೂ ಓದಿ: Ratna Bhandar: 4 ದಶಕಗಳ ಬಳಿಕ ನಾಳೆ ಬಯಲಾಗುತ್ತಾ ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರದ ರಹಸ್ಯ
ಈ ದೇವಾಲಯವು ಬ್ರಹ್ಮ ಕುಂಡ, ವಿಷ್ಣು ಕುಂಡ, ರುದ್ರ ಕುಂಡ, ಮತ್ತು ಶಿವಶಕ್ತಿ ಕುಂಡ ಸೇರಿದಂತೆ 5 ಬುಗ್ಗೆಗಳ ನಡುವೆ ಇದೆ.
Uma Bhagwati temple reopens after 34 years in Anantnag
It was vandalised in 1990The murti of Maa Uma, which was brought from Rajasthan, was placed in the sanctum sanctorum amid the chanting of religious hymns
Har Har Mahadev pic.twitter.com/ZWgQwn2QTg
— Sheetal Chopra 🇮🇳 (@SheetalPronamo) July 15, 2024
ಇಲ್ಲಿಗೆ ಹೋಗುವುದು ಹೇಗೆ?:
ಅನಂತನಾಗ್‌ಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಶ್ರೀನಗರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ. ಇದು ಭಾರತದ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಶ್ರೀನಗರದಿಂದ ಈ ದೇವಸ್ಥಾನವನ್ನು ತಲುಪಲು ಕ್ಯಾಬ್ ಅಥವಾ ಬಸ್ ಅನ್ನು ಬಾಡಿಗೆಗೆ ಪಡೆಯಬಹುದು.
ರೈಲಿನಲ್ಲಿ ಪ್ರಯಾಣಿಸುವವರಿಗೆ ಹತ್ತಿರದ ರೈಲು ನಿಲ್ದಾಣವೆಂದರೆ ಜಮ್ಮು ತಾವಿ ರೈಲು ನಿಲ್ದಾಣ. ಇದು ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಂತಹ ಪ್ರಮುಖ ನಗರಗಳಿಗೆ ಉತ್ತಮ ಸಂಪರ್ಕವನ್ನು ಹೊಂದಿದೆ. ಜಮ್ಮುವಿನಿಂದ ಅನಂತನಾಗ್ ತಲುಪಲು ಟ್ಯಾಕ್ಸಿ ಅಥವಾ ಬಸ್ ಹತ್ತಬಹುದು.
ಇನ್ನಷ್ಟು ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ