Vasant Panchami Vrat Rules: ವಸಂತ ಪಂಚಮಿ ವ್ರತದ ನಿಯಮಗಳೇನು? ವ್ರತದಲ್ಲಿ ಏನನ್ನು ತಿನ್ನಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 12, 2024 | 4:35 PM

ಧಾರ್ಮಿಕ ನಂಬಿಕೆಗಳ ಪ್ರಕಾರ, ವಸಂತ ಅಥವಾ ಬಸಂತ್ ಪಂಚಮಿಯ ದಿನದಂದು ತಾಯಿ ಸರಸ್ವತಿಯನ್ನು ಪೂಜಿಸುವುದರಿಂದ ಜ್ಞಾನ ಮತ್ತು ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಆದರೆ ಈ ದಿನದಂದು ಉಪವಾಸ ಮಾಡುವವರು ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗುತ್ತದೆ. ಈ ಪಂಚಮಿ ವ್ರತದಲ್ಲಿ ಏನನ್ನು ತಿನ್ನಬೇಕು ಮತ್ತು ಯಾವುದನ್ನು ತಪ್ಪಿಸಬೇಕು ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Vasant Panchami Vrat Rules: ವಸಂತ ಪಂಚಮಿ ವ್ರತದ ನಿಯಮಗಳೇನು? ವ್ರತದಲ್ಲಿ ಏನನ್ನು ತಿನ್ನಬೇಕು?
ಸಾಂದರ್ಭಿಕ ಚಿತ್ರ
Follow us on

ಹಿಂದೂ ಪಂಚಾಂಗದ ಪ್ರಕಾರ, ಮಾಘ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯು ಫೆ. 14 ರಂದು ಬರುತ್ತದೆ. ಈ ದಿನ ಬಸಂತ್ ಅಥವಾ ವಸಂತ ಪಂಚಮಿಯನ್ನು ಆಚರಿಸಲಾಗುತ್ತದೆ. ಹಾಗಾಗಿ ಈ ದಿನದಂದು ಜ್ಞಾನದ ದೇವತೆಯಾದ ತಾಯಿ ಸರಸ್ವತಿಯನ್ನು ಭಕ್ತಿಯಿಂದ ಪೂಜೆ ಮಾಡುವುದು ವಿಶೇಷ. ಮಾಘ ಮಾಸದ ಪಂಚಮಿಯಂದು ವ್ರತಾಚರಣೆ ಮಾಡುವುದರಿಂದ, ಶಾರದಾ ದೇವಿಯು ಸಂತುಷ್ಟಳಾಗಿ ಆಶೀರ್ವದಿಸುತ್ತಾಳೆ ಅಲ್ಲದೆ ಬೇಡಿದ ವರವನ್ನು ನೀಡುತ್ತಾಳೆ. ಹಾಗಾಗಿ ಈ ದಿನ ಜನರು, ತಮ್ಮ ಮನೆಗಳಲ್ಲಿ ರುಚಿಕರವಾದ ಆಹಾರ ಮತ್ತು ಸಿಹಿ ತಿಂಡಿಗಳನ್ನು ತಯಾರಿಸುತ್ತಾರೆ. ಕೆಲವು ಭಾಗಗಳಲ್ಲಿ ಈ ದಿನ ಮನೆಯವರೆಲ್ಲರೂ ಹಳದಿ ಬಟ್ಟೆಗಳನ್ನು ಧರಿಸಿ ಸಂಭ್ರಮಿಸುತ್ತಾರೆ. ಇನ್ನು ಈ ಹಬ್ಬದ ಸಂದರ್ಭದಲ್ಲಿ, ನೀವು ಸರಸ್ವತಿ ದೇವಿಯ ಪೂಜೆಗಾಗಿ ಉಪವಾಸ ಮಾಡಲು ಬಯಸಿದರೆ ಅದಕ್ಕಾಗಿ ಕೆಲವು ಪ್ರಮುಖ ನಿಯಮಗಳನ್ನು ತಿಳಿದಿರಬೇಕು ಜೊತೆಗೆ ಅದನ್ನು ಪಾಲನೆ ಮಾಡಬೇಕು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ವಸಂತ ಪಂಚಮಿ ವ್ರತದಲ್ಲಿ ಏನನ್ನು ತಿನ್ನಬೇಕು?

-ನೀವು ವಸಂತ ಪಂಚಮಿಯಂದು ಉಪವಾಸ ಮಾಡುತ್ತಿದ್ದರೆ ಸರಸ್ವತಿ ದೇವಿಯನ್ನು ಪೂಜಿಸದೆಯೇ ಏನನ್ನೂ ತಿನ್ನಬಾರದು.

-ಬಸಂತ್ ಅಥವಾ ವಸಂತ ಪಂಚಮಿಯ ಪೂರ್ತಿ ದಿನ ಉಪವಾಸವನ್ನು ಆಚರಿಸುವ ಅಗತ್ಯವಿಲ್ಲ. ಈ ದಿನದ ಶುಭ ಸಮಯದಲ್ಲಿ ತಾಯಿ ಸರಸ್ವತಿಯನ್ನು ಪೂಜಿಸಿದ ನಂತರ ನಿಮ್ಮ ಉಪವಾಸವನ್ನು ಮುರಿಯಬಹುದು.

-ಉಪವಾಸವನ್ನು ಮುರಿಯುವ ಮೊದಲು ತಾಯಿ ಸರಸ್ವತಿಯನ್ನು ಪೂಜಿಸಿ ಬಳಿಕ ಅವಳ ನೆಚ್ಚಿನ ಹಣ್ಣು, ಸಿಹಿ ತಿಂಡಿಗಳನ್ನು ತಿನ್ನುವ ಮೂಲಕ ಉಪವಾಸವನ್ನು ಮುರಿಯಬೇಕು.

-ತಾಯಿ ಸರಸ್ವತಿಗೆ ಅರ್ಪಿಸಿದ ಆಹಾರವನ್ನು ಎಲ್ಲರಿಗೂ ವಿತರಿಸಿ. ಇದು ನಿಮಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ.

-ಈ ದಿನ ಪ್ಲಮ್, ಬೆರ್ರಿ ಹಣ್ಣುಗಳನ್ನು ತಿನ್ನುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಇದರ ಹಿಂದೆ ಯಾವುದೇ ಧಾರ್ಮಿಕ ಕಾರಣಗಳಿಲ್ಲ. ಬದಲಾಗಿ ಇವು ಉಪವಾಸದ ಸಮಯದಲ್ಲಿ ನಿಮಗೆ ಶಕ್ತಿಯನ್ನು ನೀಡುತ್ತದೆ.

-ಹಳದಿ ಬಣ್ಣದ ಸಿಹಿ ತಿಂಡಿಗಳು ಮತ್ತು ಕೇಸರಿಯಿಂದ ತಯಾರಿಸಿದ ಪಾಯಸ, ಹಲ್ವಾ ಇವುಗಳನ್ನು ದೇವಿಯ ನೈವೇದ್ಯಕ್ಕೆ ಇಡಬಹುದು.

-ಇದರ ಹೊರತಾಗಿ ಸಿಹಿ ಅನ್ನ, ಮಾಲ್ ಪುವಾ, ಲಡ್ಡುಗಳು ಮತ್ತು ಕಾಲೋಚಿತ ಹಣ್ಣುಗಳನ್ನು ನೈವೇದ್ಯಕ್ಕಾಗಿ ಇಡಬಹುದು ಜೊತೆಗೆ ಪೂಜೆ ಮುಗಿದ ಬಳಿಕ ಇದನ್ನು ಸೇವನೆ ಮಾಡಬಹುದು.

ಇದನ್ನೂ ಓದಿ: ದೇವಾಲಯದಿಂದ ಹಿಂದಿರುಗುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ವಸಂತ ಪಂಚಮಿ ವ್ರತದಲ್ಲಿ ಏನನ್ನು ತಿನ್ನಬಾರದು?

-ಈ ದಿನ ತಾಮಸಿಕ್ ಆಹಾರಗಳನ್ನು ತಿನ್ನಬೇಡಿ ಮತ್ತು ಮಾಂಸ ಮತ್ತು ಮದ್ಯದಿಂದ ಕಡ್ಡಾಯವಾಗಿ ದೂರವಿರಿ.

-ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಆಹಾರದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು.

-ಈ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ. ಮಸಾಲೆಯುಕ್ತ ಆಹಾರವನ್ನು ಕೂಡ ತಪ್ಪಿಸಿ.

-ಹೊರಗಡೆ ಸಿಗುವ ಜಂಕ್ ಫುಡ್ ಗಳನ್ನು ಈ ದಿನ ತಿನ್ನಬೇಡಿ.

-ಹಿಂದಿನ ದಿನ ಮಾಡಿಟ್ಟ ಅನ್ನ ಅಥವಾ ಇತರೆ ಪದಾರ್ಥಗಳನ್ನು ಪಂಚಮಿಯ ದಿನ ಸೇವನೆ ಮಾಡಬೇಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

 

Published On - 6:10 pm, Fri, 9 February 24