ದೇವಾಲಯದಿಂದ ಹಿಂದಿರುಗುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ

ಹಿಂದೂ ಧರ್ಮದಲ್ಲಿ ಪೂಜೆಗೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಮನಸ್ಸಿನ ಶಾಂತಿ ಮತ್ತು ದೇವರ ಆಶೀರ್ವಾದ ಪಡೆಯಲು ಪೂಜೆ ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಒಬ್ಬ ವ್ಯಕ್ತಿಯು ಪೂಜೆಯ ಸಮಯದಲ್ಲಿ ಅಥವಾ ನಂತರ ಕೆಲವು ಸಣ್ಣ ತಪ್ಪುಗಳನ್ನು ಮಾಡುತ್ತಾನೆ. ಇದರಿಂದ ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹಾಗಾಗಿ ಆ ತಪ್ಪುಗಳು ಯಾವುದು? ಏಕೆ ಮಾಡಬಾರದು ಎಂಬುದನ್ನು ತಿಳಿದುಕೊಳ್ಳಿ.

ದೇವಾಲಯದಿಂದ ಹಿಂದಿರುಗುವಾಗ ಈ ತಪ್ಪುಗಳನ್ನು ಎಂದಿಗೂ ಮಾಡಬೇಡಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 09, 2024 | 4:46 PM

ಹಿಂದೂ ಧರ್ಮದಲ್ಲಿ, ದೇವರ ಆರಾಧನೆಯನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗುತ್ತದೆ, ಆದ್ದರಿಂದ ವ್ಯಕ್ತಿಯು ದೇವರನ್ನು ಪೂಜಿಸುವಾಗ ಯಾವುದೇ ತಪ್ಪನ್ನು ಮಾಡಲು ಬಯಸುವುದಿಲ್ಲ. ಏಕೆಂದರೆ ದೇವರ ಆರಾಧನೆಯಲ್ಲಿ ತಪ್ಪುಗಳಾದರೆ ವ್ಯಕ್ತಿಯ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವರ ಪೂಜೆ ಮಾಡುವಾಗ ಅಥವಾ ದೇವಸ್ಥಾನದಿಂದ ಹಿಂತಿರುಗುವಾಗ ಕೆಲವು ಕೆಲಸಗಳನ್ನು ನಾವು ಮಾಡಬಾರದು. ಹಾಗಾದರೆ ಅವು ಯಾವವು? ಏಕೆ ಮಾಡಬಾರದು ಎಂಬುದನ್ನು ತಿಳಿಯಿರಿ.

ದಾರಿಯಲ್ಲಿ ಪ್ರಸಾದ ತಿನ್ನಬಾರದೇ?

ಜ್ಯೋತಿಷಿ ಪಂಡಿತ್ ರಾಕೇಶ್ ಪಾಂಡೆ ಅವರು ಟಿವಿ 9 ಡಿಜಿಟಲ್ ಗೆ ತಿಳಿಸಿರುವ ಪ್ರಕಾರ ದೇವಾಲಯದಿಂದ ತೆಗೆದುಕೊಂಡ ಪ್ರಸಾದವನ್ನು ಎಂದಿಗೂ ದಾರಿಯಲ್ಲಿ ತಿನ್ನಬಾರದು. ಏಕೆಂದರೆ ಈ ರೀತಿ ಮಾಡುವುದರಿಂದ ನಿಮ್ಮ ಪೂಜೆ ಅಪೂರ್ಣ ಎನಿಸಿಕೊಳ್ಳುತ್ತದೆ. ನಂಬಿಕೆಯ ಪ್ರಕಾರ, ದೇವಾಲಯದಿಂದ ಪಡೆದ ಪ್ರಸಾದವನ್ನು ಮನೆಗೆ ತೆರಳಿ ಇಡೀ ಕುಟುಂಬಕ್ಕೆ ವಿತರಿಸಿ ಅವರ ಒಟ್ಟಿಗೆ ನಾವು ಕೂಡ ಸೇವಿಸಬೇಕು. ಕುಂಕಮ ಪ್ರಸಾದವಾಗಿದ್ದರೆ ಅದನ್ನು ಮನೆಯಲ್ಲಿರುವ ಭಂಡಾರ ಅಥವಾ ಕುಂಕುಮದ ಪಾತ್ರೆಗೆ ಹಾಕಿ, ದೇವರಿಗೆ ನಮಸ್ಕರಿಸಿ ಆ ಬಳಿಕ ಮನೆಯವರೆಲ್ಲಾ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಪ್ರಸಾದವನ್ನು ಆ ಮನೆಯ ಹಿರಿಯರು ತೆಗೆದುಕೊಂಡು ಅವರು ತಮ್ಮ ಕಿರಿಯರಿಗೆ ಕೊಡುವ ಮೂಲಕ ಆಶೀರ್ವದಿಸಬೇಕು. ಈ ಪದ್ದತಿ ಈಗಲೂ ಸಾಕಷ್ಟು ಮನೆಗಳಲ್ಲಿ ಚಾಲ್ತಿಯಲ್ಲಿದೆ.

ಖಾಲಿ ಮಡಕೆಯನ್ನು ಮನೆಗೆ ತರಬಾರದೇ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಾಲಯಕ್ಕೆ ಹೋಗುವಾಗ ಅಥವಾ ಬರುವಾಗ ಖಾಲಿ ಮಡಕೆಯನ್ನು ಖರೀದಿಸಿ ಎಂದಿಗೂ ಮನೆಗೆ ತರಬಾರದು. ಏಕೆಂದರೆ ಇದು ವ್ಯಕ್ತಿಯ ಜೀವನದಲ್ಲಿ ಆತ ಮಾಡುತ್ತಿರುವ ಕೆಲಸವನ್ನು ಹಾಳು ಮಾಡುತ್ತದೆ ಎಂದು ನಂಬಲಾಗಿದೆ. ನೀವು ದೇವರಿಗೆ ಮಡಿಕೆಯಲ್ಲಿಯೇ ನೀರನ್ನು ಅರ್ಪಿಸುವುದಾದರೆ ಆ ಸಮಯದಲ್ಲಿ ಅದನ್ನು ಪೂರ್ತಿ ಕಾಲಿ ಮಾಡದೆಯೇ ಸ್ವಲ್ಪ ನೀರನ್ನು ಅದರಲ್ಲಿಯೇ ಬಿಡಬೇಕು. ಅಥವಾ ನೀವು ದೇವಾಲಯದಿಂದ ಪಡೆದ ಪೂಜಾ ಹೂವುಗಳನ್ನು ಮಡಕೆಯಲ್ಲಿ ಇಟ್ಟುಕೊಂಡು ಬರಬಹುದು. ಇನ್ನು ದೇವಾಲಯದಿಂದ ತುಂಬಿದ ಮಡಕೆಯನ್ನು ತರುವುದು ಮನೆಗೆ ಸಂತೋಷ, ಶಾಂತಿ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಮಹಾ ಶಿವರಾತ್ರಿ ಯಾವಾಗ? ಈ ದಿನದ ಮಹತ್ವ ಏನು?

ದೇವಾಲಯದಲ್ಲಿ ಪೂಜೆ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ?

ಮಂದಿರಗಳಿಗೆ ಹೋದಾಗ ಉರಿಯುತ್ತಿರುವ ದೀಪದಿಂದ ಮತ್ತೊಂದು ದೀಪವನ್ನು ನಾವು ಎಂದಿಗೂ ಬೆಳಗಿಸಬಾರದು ಎಂದು ಜ್ಯೋತಿಷಿಗಳು ಹೇಳುತ್ತಾರೆ. ಇದು ನಿಮಗೆ ಪೂಜಾ ಫಲಗಳನ್ನು ನೀಡುವುದಿಲ್ಲ. ಪೂಜೆಯ ಸಮಯದಲ್ಲಿ ನೀವು ದೇವರಿಗೆ ಅರ್ಪಿಸುವ ಯಾವುದೇ ಪೂಜಾ ಸಾಮಗ್ರಿಗಳನ್ನು ನೆಲಕ್ಕೆ ಬಿಳಿಸಬಾರದು. ಒಂದೊಮ್ಮೆ ಬಿದ್ದಲ್ಲಿ ಆ ವಸ್ತುವನ್ನು ದೇವರಿಗೆ ಎಂದು ನೀಡಬಾರದು, ಇನ್ನು ದೇವಾಸ್ಥನಗಳಿಗೆ ಹೋದ ಬಳಿಕ ಪೂಜಾ ಸಾಮಗ್ರಿಗಳನ್ನು ಎಂದಿಗೂ ಸ್ವಚ್ಛಗೊಳಿಸಬಾರದು. ಇನ್ನು ದೇವಸ್ಥಾನಕ್ಕೆ ಹೋಗುವವರು ಮನೆಯಿಂದ ಒಂದೆರಡು ಹೂವುಗಳನ್ನಾದರೂ ತೆಗೆದುಕೊಂಡು ಹೋಗಿ ಬಳಿಕ ಬೇರೆ ಅಂಗಡಿಗಳಲ್ಲಿ ಹೂವು ತೆಗೆದುಕೊಳ್ಳಬಹುದು. ಏಕೆಂದರೆ ಮನೆಯಲ್ಲಿ ನೀವು ನೆಟ್ಟು ಬೆಳೆಸಿದ ಹೂವಿಗಿಂತ ಶ್ರೇಷ್ಠವಾದದ್ದು ಯಾವುದು ಇಲ್ಲ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ