Vastu Tips: ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆಯಾ? ಮನೆಯಂಗಳದಲ್ಲಿ ತುಳಸಿ ಗಿಡ ನೆಡುವುದರಿಂದ ಲಕ್ಷ್ಮಿಕಟಾಕ್ಷ ಖಚಿತ

Tulsi plant: ತುಳಸಿ ಗಿಡ ಮನೆಯೊಳಕ್ಕೆ ಅದೃಷ್ಟವನ್ನು ಹೊತ್ತುತರುತ್ತದೆ. ಧನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತುಳಸಿ ಗಿಡವು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತದೆ. ಕುಟುಂಬದಲ್ಲಿ ಸಂಬಂಧಗಳನ್ನು ಬಲಪಡಿಸುತ್ತದೆ.

Vastu Tips: ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆಯಾ? ಮನೆಯಂಗಳದಲ್ಲಿ ತುಳಸಿ ಗಿಡ ನೆಡುವುದರಿಂದ ಲಕ್ಷ್ಮಿಕಟಾಕ್ಷ ಖಚಿತ
ಮನೆಯಲ್ಲಿ ಆರ್ಥಿಕ ಸಮಸ್ಯೆ ಇದೆಯಾ? ಮನೆಯಂಗಳದಲ್ಲಿ ತುಳಸಿ ಗಿಡ ನೆಡುವುದರಿಂದ ಲಕ್ಷ್ಮಿಕಟಾಕ್ಷ ಖಚಿತ
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 13, 2022 | 6:06 AM

Vastu Tips: ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ಭಾರೀ ಮಹತ್ವ ಇದೆ. ಇದು ನಿತ್ಯನೂತನ, ನಿತ್ಯಪೂಜಿತ. ಈ ಗಿಡವನ್ನು ತುಂಬಾ ಪವಿತ್ರ ಎಂದು ಪರಿಗಣಿಸಲಾಗುತ್ತದೆ. ತುಳಸಿ ಮಹಾವಿಷ್ಣುವಿಗೆ ತುಂಬಾ ಪ್ರೀತಿಪಾತ್ರ. ತುಳಸಿ ಗಿಡ (Basil Plant) ಎಲ್ಲ ಹಿಂದೂಗಳ ಮನೆಯಲ್ಲಿ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಇಂತಹ ತುಳಸಿ ಗಿಡ ಅನೇಕ ಔಷಧೀಯ ಗುಣಗಳನ್ನೂ ಹೊಂದಿರುತ್ತದೆ. ಸಾಧಾರಣ ಜ್ವರ, ಫ್ಲೂ, ಕೆಮ್ಮು ಬಾಧೆಗಳಿಂದ ಉಪಶನ ಪಡೆಯಲು ಇದನ್ನು ಬಳಸುತ್ತಾರೆ. ಅಷ್ಟೇ ಅಲ್ಲ ಋತುಮಾನಗಳಲ್ಲಿ ಕಾಣಬರುವ ರೋಗರುಜಿನಗಳಿಂದಲೂ ಮುಕ್ತಿ ಪಡೆಯಬಹುದು. ಹಾಗಾಗಿ ಹಿಂದೂಗಳ ಮೈ-ಮನ-ಮನೆಗಳಲ್ಲಿ ಇದು ಕಾಯಂ ಸ್ಥಾನ ಪಡೆದಿದೆ. ಆದರೆ ಮನೆಯಂಗಳದಲ್ಲಿ ತುಳಸಿಯ (tulsi plant) ಸ್ಥಾನಮಾನ ಆಯಕಟ್ಟಿನ ಜಾಗದಲ್ಲಿ ಇರಬೇಕು. ಎಲ್ಲೆಂದರಲ್ಲಿ ಗಿಡ ನೆಡುವುದು ಸಂಜಸವಲ್ಲ. ಅದಕ್ಕೆ ವಾಸ್ತು ಪ್ರಕಾರವೇ ಆಗಬೇಕು (spiritual).

ವಾಸ್ತು ಪ್ರಕಾರ ಮನೆಯಂಗಳದಲ್ಲಿ ತುಳಸಿ ನೆಲೆಸಿದರೆ ಮನೆಯಲ್ಲಿ ಕುಟುಂಬದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲಿದೆ. ಅಷ್ಟೇ ಅಲ್ಲ, ಆರ್ಥಿಕ ಪರಿಸ್ಥಿತಿಯನ್ನೂ ಅದು ಸಮೃದ್ಧಗೊಳಿಸುತ್ತದೆ. ವಾಸ್ತು ಪ್ರಕಾರದ ತುಳಸಿ ಗಿಡದಿಂದ ಯಾವೆಲ್ಲ ಪ್ರಯಫಜನಗಳು ಪ್ರಾಪ್ತಿಯಾಗಲಿವೆ… ಯಾವ ದಿಕ್ಕಿನಲ್ಲಿ ಗಿಡ ನೆಟ್ಟರೆ ಶ್ರೇಯಸ್ಕರ ಎಂಬುದನ್ನು ಈಗ ತಿಳಿಯೋಣ.

ಸ್ವಚ್ಛವಾದ ವಾತಾವರಣದಲ್ಲಿ ಮನೆಯಂಗಳದಲ್ಲಿ ತುಳಸಿ ಗಿಡವನ್ನು ಪೋಷಿಸುವುದರಿಂದ ಉತ್ತಮ, ಆರೋಗ್ಯಕರ ಗಾಳಿ ಸೂಸಲಿದೆ. ತುಳಸಿ ಎಲೆಗಳು ಗಾಳಿಯಲ್ಲಿನ ವಿಷ ರಾಸಾಯನಿಕಗಳನ್ನು ಹೀರಿಕೊಳ್ಳುತ್ತದೆ ಎಂಬ ನಂಬಿಕೆಯಿದೆ. ಇದು ತನ್ನ ಸುವಾಸನೆಯನ್ನು ನಾಲ್ಕೂ ದಿಕ್ಕುಗಳಿಗೆ ಹರಡುತ್ತದೆ.

ದುರಾದೃಷ್ಟ ತಡೆಯುತ್ತದೆ – ಅದೃಷ್ಟ ತರುತ್ತದೆ: ಋಣಾತ್ಮಕ ಶಕ್ತಿಯನ್ನು ಹೀರಿಕೊಂಡು ವಾತಾವರಣದಲ್ಲಿ ಧನಾತ್ಮಕೆತೆಯನ್ನು ಹೆಚ್ಚಿಸುತ್ತದೆ. ಇದು ಔಷಧೀಯ ಗುಣ ಬೀರುವುದರ ಜೊತೆಗೆ ಮನೆ ಮಂದಿಯ ಒತ್ತಡವನ್ನು ತಗ್ಗಿಸುತ್ತದೆ. ದುರಾದೃಷ್ಟ ಮನೆಯೊಳಕ್ಕೆ ಪ್ರವೇಶಿಸದಂತೆ ಇದು ತಡೆಯುತ್ತದೆ. ತುಳಸಿ ಗಿಡ ಮನೆಯೊಳಕ್ಕೆ ಅದೃಷ್ಟವನ್ನು ಹೊತ್ತುತರುತ್ತದೆ. ಧನ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ತುಳಸಿ ಗಿಡವು ಕೆಟ್ಟ ದೃಷ್ಟಿಯಿಂದ ರಕ್ಷಣೆ ನೀಡುತ್ತದೆ. ಕುಟುಂಬದಲ್ಲಿ ಸಂಬಂಧಗಳನ್ನು ಬಲಪಡಿಸುತ್ತದೆ. (Source)

ಆಧ್ಯಾತ್ಮ ಕುರಿತು ಹೆಚ್ಚು ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ