AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tambula Prashna: ತಾಂಬೂಲ ಪ್ರಶ್ನೆ ಎಂದರೇನು? ಯಾರಿಗೂ ತಿಳಿಯದ ಸತ್ಯವನ್ನು ಇದರಿಂದ ಕೆದಕುವುದೇಗೆ?

ತಾಂಬೂಲ ಪ್ರಶ್ನೆಶಾಸ್ತ್ರವು ಫಲ ಜ್ಯೋತಿಷ್ಯದ ಒಂದು ಮಹತ್ವಪೂರ್ಣ ಅಂಗವಾಗಿದೆ. ಇದರಲ್ಲಿ ಜನ್ಮ ಪತ್ರಿಕೆಯಂಥ ಯಾವುದೇ ಪ್ರಯೋಗವಿಲ್ಲದೆಯೇ, ಪ್ರಶ್ನೆ ಮಾಡಿದ ಸಮಯ, ಪ್ರಶ್ನೆಕರ್ತನ ಸ್ವರೂಪ, ಅಂಗಚೇಷ್ಟೆ ಇತ್ಯಾದಿಗಳ ಆಧಾರದ ಮೇಲೆ ಸಮಸ್ತ ಪ್ರಶ್ನೆಗಳ ಯಥಾರ್ಥ ಫಲ ಹೇಳಲಾಗುತ್ತದೆ.

Tambula Prashna: ತಾಂಬೂಲ ಪ್ರಶ್ನೆ ಎಂದರೇನು? ಯಾರಿಗೂ ತಿಳಿಯದ ಸತ್ಯವನ್ನು ಇದರಿಂದ ಕೆದಕುವುದೇಗೆ?
ತಾಂಬೂಲ ಪ್ರಶ್ನೆ
TV9 Web
| Updated By: ಆಯೇಷಾ ಬಾನು|

Updated on: May 26, 2022 | 7:00 AM

Share

ಮಂಗಳೂರು ಹೊರವಲಯದಲ್ಲಿರೋ ಮಳಲಿ ಮಸೀದಿಯಲ್ಲಿ ದೇಗುಲದ ಕುರುಹುಗಳು ಪ್ರತ್ಯಕ್ಷವಾಗಿವೆ. ಹಿಂದೂ ಶೈಲಿಯ ಕಂಬಗಳು, ಕೆತ್ತನೆಗಳು, ಕಲಾಕೃತಿಗಳು, ಗೋಪುರ ಸ್ಪಷ್ಟವಾಗಿ ಗೋಚರವಾಗಿದೆ. ಈ ಹಿನ್ನೆಲೆ ದೇವಾಲಯವನ್ನು ಕೆಡವಿ ಮಸೀದಿ ಕಟ್ಟಲಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ ಹಿಂದೂ ಸಂಘಟನೆಗಳು, ಮಸೀದಿ ನವೀಕರಣ ಕೆಲಸಕ್ಕೆ ತಡೆ ತಂದಿದ್ದಾರೆ. ಮತ್ತೊಂದು ಕಡೆ ಹಿಂದೂ ಸಂಘಟನೆಗಳು ಧಾರ್ಮಿಕವಾಗಿ, ಶಾಸ್ತ್ರದ ಪ್ರಕಾರವಾಗಿ ತಾಂಬೂಲ ಪ್ರಶ್ನೆಯ ಮೊರೆ ಹೋಗಿದ್ದು ಕೇರಳದಿಂದ ಬಂದ ಖ್ಯಾತ ಜ್ಯೋತಿಷಿ ಪಣಿಕ್ಕರ್ ಮಳಲಿ ಮಸೀದಿಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಇದೆಲ್ಲ ಒಂದು ಕಡೆಯಾದ್ರೆ ತಾಂಬೂಲ ಪ್ರಶ್ನೆ ಶಾಸ್ತ್ರ ಎಂಬುವುದೇನು? ಅದು ಹೇಗೆ ಕೆಲಸ ಮಾಡುತ್ತೆ? ಯಾರಿಗೂ ತಿಳಿಯದ ಸತ್ಯವನ್ನು ಇದರಿಂದ ಕೆದಕುವುದೇಗೆ ಎಂಬ ಬಗ್ಗೆ ವೈದಿಕ ಜ್ಯೋತಿಷಿ ಡಾ.ಬಸವರಾಜ್ ಗುರೂಜಿ ಮಾಹಿತಿ ನೀಡಿದ್ದಾರೆ.

ತಾಂಬೂಲ ಪ್ರಶ್ನೆ ಶಾಸ್ತ್ರ ಎಂದರೇನು? ತಾಂಬೂಲ ಪ್ರಶ್ನೆಶಾಸ್ತ್ರವು ಫಲ ಜ್ಯೋತಿಷ್ಯದ ಒಂದು ಮಹತ್ವಪೂರ್ಣ ಅಂಗವಾಗಿದೆ. ಇದರಲ್ಲಿ ಜನ್ಮ ಪತ್ರಿಕೆಯಂಥ ಯಾವುದೇ ಪ್ರಯೋಗವಿಲ್ಲದೆಯೇ, ಪ್ರಶ್ನೆ ಮಾಡಿದ ಸಮಯ, ಪ್ರಶ್ನೆಕರ್ತನ ಸ್ವರೂಪ, ಅಂಗಚೇಷ್ಟೆ ಇತ್ಯಾದಿಗಳ ಆಧಾರದ ಮೇಲೆ ಸಮಸ್ತ ಪ್ರಶ್ನೆಗಳ ಯಥಾರ್ಥ ಫಲ ಹೇಳಲಾಗುತ್ತದೆ. ಪ್ರಶ್ನೆಶಾಸ್ತ್ರದಲ್ಲಿ ಚಕ್ರಗಳು, ಕವಡೆಗಳು, ತಾಂಬೂಲ ಇತ್ಯಾದಿಗಳನ್ನು ಉಪಯೋಗಿಸುವ ವಿಧಾನಗಳೂ ಪ್ರಚಲಿತದಲ್ಲಿರುತ್ತವೆ. ಅವುಗಳ ಸಂಖ್ಯೆ, ಸ್ವರೂಪ ಇತ್ಯಾದಿಗಳ ಆಧಾರದಿಂದ ಪ್ರಶ್ನೆಫಲ ಹೇಳಲಾಗುತ್ತದೆ. ಪ್ರಶ್ನೆಕರ್ತನು ಕೊಡುವ ತಾಂಬೂಲದ (ವೀಳ್ಯದೆಲೆ) ಸಹಾಯದಿಂದ ತನ್ವಾದಿ ದ್ವಾದಶ ಭಾವಗಳ ಸಮಸ್ತ ಶುಭಾ ಶುಭಫಲಗಳನ್ನು ಹೇಳಲಾಗುತ್ತದೆ. ಇದನ್ನೂ ಓದಿ: ಮಂಗಳೂರು ಮಳಲಿ ಮಸೀದಿ ವಿವಾದ; ತಾಂಬೂಲ ಪ್ರಶ್ನೆ ಪ್ರಕ್ರಿಯೆ ಹೇಗೆ ನಡೆಯುತ್ತೆ?

ಪೂರ್ವಾಹ್ನ ಮತ್ತು ಅಪರಾಹ್ನದ ಸಮಯದಲ್ಲಿ ಪ್ರಶ್ನೆಕರ್ತನಿಂದ ಕೊಡಲ್ಪಡುವ ವೀಳ್ಯದೆಲೆಗಳನ್ನು ಮೇಲಿನಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಎಣಿಸುವುದರ ಮೂಲಕ ಲಗ್ನಾದಿ ಹನ್ನೆರಡು ಭಾವಗಳ ಕಲ್ಪನೆ ಮಾಡಲಾಗುತ್ತದೆ. ಎಣಿಕೆ ಮಾಡುವಾಗ ಮೊದಲನೆಯ ಎಲೆ ಲಗ್ನ, ಎರಡನೆಯದು ಧನಭಾವ, ಮೂರನೆಯದು ಸಹಜ ಭಾವ ಹೀಗೆ ಹನ್ನೆರಡನೆಯ ಎಲೆಯ ವ್ಯಯ ಭಾವವಾಗುತ್ತದೆ. ಯಾವ ಭಾವದ ಸೂಚಕವಾದ ಎಲೆಯು ಬಾಡಿರುವುದೋ, ಹರಿದಿರುವುದೋ, ಛಿದ್ರವಾಗಿರುವುದೋ ಆ ಭಾವದ ಫಲಗಳು ಅನಿಷ್ಟವಾಗಿರುತ್ತವೆ. ಯಾವ ಭಾವ ಸಂಬಂಧಿ ಎಲೆಯು ವಿಶಾಲವಾಗಿದ್ದು, ನಿರ್ಮಲವಾಗಿದ್ದು ನಳನಳಿಸುವ ಕಾಂತಿಯುತವಾಗಿರುವುದೋ ಆ ಭಾವದ ಫಲವು ಶುಭ ಮತ್ತು ವೃದ್ಧಿಯಾಗುತ್ತದೆ ಎಂದು ತಿಳಿಯಬೇಕು.

ಪ್ರಶ್ನೆಕರ್ತನಿಂದ ಕೊಡಲ್ಪಟ್ಟ ವೀಳ್ಯದೆಲೆಗಳ ಸಂಖ್ಯೆಯನ್ನು ಎರಡುಪಟ್ಟು ಮಾಡಿ ಐದರಿಂದ ಭಾಗಾಕಾರ ಮಾಡಿ, ಗುಣನ ಫಲದಲ್ಲಿ 1 ಕೂಡಿಸಿ ಪುನಃ 7 ರಿಂದ ಭಾಗಾಕಾರ ಮಾಡಬೇಕು. ಇಲ್ಲಿ ಶೇಷವು 1 ಉಳಿದರೆ ಸೂರ್ಯ, ಎರಡು ಉಳಿದರೆ ಚಂದ್ರ, ಮೂರು ಉಳಿದರೆ ಶನಿ ಗ್ರಹವು ಉದಯವಾಗಿದೆ ಎಂದು ತಿಳಿಯಬೇಕು. ಈ ಪ್ರಕಾರ ಯಾವ ಗ್ರಹವು ಉದಯವಾಗಿರುವುದೋ ಅದು ಯಾವ ರಾಶಿಯಲ್ಲಿರುವುದೋ ಆ ರಾಶಿಯನ್ನು ಪ್ರಶ್ನೆ ಲಗ್ನವೆಂದು ತಿಳಿಯಬೇಕು. ಇದನ್ನೂ ಓದಿ: ಕನ್ನಡಾಂಬೆ ಭುವನೇಶ್ವರಿ ದೇವಸ್ಥಾನ ಹೇಗಿದೆ? ವಿಶೇಷ ವಿಡಿಯೋ ಮಾಡಿ ಪರಿಚಯಿಸಿದ ನಟಿ ರಂಜನಿ ರಾಘವನ್

ಸೂರ್ಯನು ಉದಯವಾದರೆ ದುಃಖದಾಯಕ, ಚಂದ್ರ ಉದಯವಾದರೆ ಸುಖದಾಯಕ, ಮಂಗಲ ಉದಯವಾದರೆ ಕಲಹಕಾರಕ. ಬುಧ-ಗುರು ಉದಯವಾದರೆ ಧನದಾಯಕ, ಶುಕ್ರ ಉದಯವಾದರೆ ಇಷ್ಟಾರ್ಥಸಿದ್ಧಿದಾಯಕ ಮತ್ತು ಶನಿ ಉದಯವಾದರೆ ಪ್ರಶ್ನೆಕರ್ತೃವಾಗಿ ಮೃತ್ಯುದಾಯಕವಾಗಿರುತ್ತದೆ. ಆಧುನಿಕ ತಂತ್ರಜ್ಞಾನದ ಈ ಯುಗದಲ್ಲಿ ಈ ವಿಧಾನಗಳು ನೇಪಥ್ಯಕ್ಕೆ ಹೋಗಿರುವುದಾದರೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಪ್ರಚಲಿತವಾಗಿರುವುದು ಕಂಡು ಬರುತ್ತದೆ.

ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕರ್ನಾಟಕದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಜಾರಿಯಲ್ಲಿವೆ: ಸಚಿವ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಕೀಟನಾಶಕ‌ ಮಿಶ್ರಿತ ನೀರು ಕುಡಿದು 12 ಮಂದಿ ಮಕ್ಕಳು ಅಸ್ವಸ್ಥ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ಬಿ. ಸರೋಜಾದೇವಿ ಬರೆದಿದ್ದ ವಿಲ್​ಗೆ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಸಹಿ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ವಿಷಸರ್ಪಗಳು ಏನೂ ಮಾಡೋದಿಲ್ಲ, ತಮ್ಮ ಪಾಡಿಗೆ ತಾವು ಸರಿದಾಡುತ್ತವೆ: ನೈನಾ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ನನ್ನ ಮದುವೆಯಾದಾಗ ನೀನೂ ಗೌಡ್ತಿಯಾದೆ ಅಂತ ಛೇಡಿಸುತ್ತಿದ್ದರು: ಮಾಲಾಶ್ರೀ
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ರಾಜಕಾರಣಿಯಾಗಿರದಿದ್ದರೆ ಪರಮೇಶ್ವರ್ ಹೋಟೆಲ್ ಉದ್ಯಮಿಯಾಗುತ್ತಿದ್ದರೇ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ಗೇಟ್​ ಹತ್ತಿ ಹಾರಿ ಜಮ್ಮು ಕಾಶ್ಮೀರದ ಸಿಎಂ ಒಮರ್ ಹೋಗಿದ್ದೆಲ್ಲಿಗೆ?
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?
ಕೆನಡಾದ ರಸ್ತೆಯ ಪಕ್ಕದಲ್ಲಿ ನಿಂತು ಕಸ ಎಸೆದರೇ ಭಾರತೀಯ ದಂಪತಿ?