ಗರುಡ ಪುರಾಣದಲ್ಲಿ ​ಸ್ವರ್ಗ-ನರಕ ಪ್ರಾಪ್ತಿಯ ವ್ಯಾಖ್ಯಾನ ಏನಿದೆ? ಮೋಕ್ಷ- ಶಿಕ್ಷೆಯ ಪರಿಧಿ ಏನಿದೆ?

| Updated By: ಸಾಧು ಶ್ರೀನಾಥ್​

Updated on: Sep 21, 2024 | 9:55 AM

Garuda Purana: ಗರುಡ ಪುರಾಣವನ್ನು ಸತ್ತವರಿಗಾಗಿ ಪಠಿಸಲಾಗುತ್ತದೆ. ಓರ್ವ ವ್ಯಕ್ತಿಯ ಮರಣಾನಂತರ ಗರುಡ ಪುರಾಣವನ್ನು ಓದಲಾಗುತ್ತದೆ. ಒಮ್ಮೆ, ಗರುಡನು ವಿಷ್ಣುವಿಗೆ ಜೀವಿಗಳ ಸಾವು, ಯಮ ಲೋಕದ ಪ್ರಯಾಣ, ನರಕ ಮತ್ತು ಮೋಕ್ಷದ ಬಗ್ಗೆ ಹಲವಾರು ನಿಗೂಢ ಮತ್ತು ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ವಿಷ್ಣು ಆ ಪ್ರಶ್ನೆಗಳಿಗೆ ವಿಸ್ತಾರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ಸರಣಿಯೇ ಗರುಡ ಪುರಾಣ.

ಗರುಡ ಪುರಾಣದಲ್ಲಿ ​ಸ್ವರ್ಗ-ನರಕ ಪ್ರಾಪ್ತಿಯ ವ್ಯಾಖ್ಯಾನ ಏನಿದೆ? ಮೋಕ್ಷ- ಶಿಕ್ಷೆಯ ಪರಿಧಿ ಏನಿದೆ?
ಗರುಡ ಪುರಾಣದಲ್ಲಿ ​ಸ್ವರ್ಗ-ನರಕ ಪ್ರಾಪ್ತಿಯ ವ್ಯಾಖ್ಯಾನ ಏನಿದೆ?
Follow us on

ಗರುಡ ಪುರಾಣವು ಹಿಂದೂ ಪುರಾಣಗಳಲ್ಲಿ ಒಂದು. ೧೯,೦೦೦ ಶ್ಲೋಕಗಳನ್ನು ಹೊಂದಿರುವ ಈ ಪುರಾಣವು ವಿಷ್ಣು ತನ್ನ ವಾಹನವಾದ ಗರುಡನಿಗೆ ನೀಡುವ ಉಪದೇಶದ ರೂಪದಲ್ಲಿದೆ. ಅಗಲಿದ ಆತ್ಮಕ್ಕೆ ತರ್ಪಣವನ್ನು ನೀಡಿದರೂ ಕೂಡ ಕೆಲವೊಮ್ಮೆ ಆತ್ಮಗಳು ಮುಕ್ತಿ ಸಿಗದೆ ಅಲೆದಾಡುತ್ತಿರುತ್ತದೆ. ಆದ್ದರಿಂದ ನಾವು ಅಗಲಿದ ಆತ್ಮಕ್ಕೆ ಮುಕ್ತಿ ಅಥವಾ ಮೋಕ್ಷವನ್ನು ನೀಡಲು ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಈ ಗರುಡ ಪುರಾಣ ಓದುವುದರ ಪ್ರಯೋಜನವೇನು..? ಗರುಡ ಪುರಾಣಕ್ಕೂ ಅಗಲಿದ ಆತ್ಮಕ್ಕೂ ಇರುವ ಸಂಬಂಧವೇನು..?

ಸಾವಿನ ನಂತರ ಗರುಡ ಪುರಾಣವನ್ನೇಕೇ ಪಠಿಸಬೇಕು..?
ಹಿಂದೂ ಧರ್ಮದ ಪ್ರಕಾರ ಕುಟುಂಬದಲ್ಲಿ ಒಬ್ಬ ವ್ಯಕ್ತಿಯು ಸತ್ತಾಗ ಗರುಡ ಪುರಾಣವನ್ನು 13 ದಿನಗಳವರೆಗೆ ಪಠಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಆತ್ಮವು ಮತ್ತೊಂದು ಜನ್ಮವನ್ನು ಪಡೆಯಲು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ ಕೆಲವು ಆತ್ಮಗಳು 10 ರಿಂದ 13 ದಿನಗಳನ್ನು ತೆಗೆದುಕೊಳ್ಳುತ್ತವೆ. ಒಂದು ತಿಂಗಳ ನಂತರ ಅದು ಮತ್ತೊಂದು ದೇಹವನ್ನು ಸೇರುತ್ತದೆ. ಆದರೆ, ಅಕಾಲಿಕ ಮರಣಹೊಂದಿದರೆ ಮತ್ತೊಂದು ಜನ್ಮ ಪಡೆಯಲು ಆತ್ಮವು ಕನಿಷ್ಠ ಒಂದು ವರ್ಷ ತೆಗೆದುಕೊಳ್ಳುತ್ತದೆ. ಸತ್ತವರ ಆತ್ಮಕ್ಕೆ ಮುಕ್ತಿ ನೀಡಲು ಕೊನೆಯ ತರ್ಪಣವನ್ನು ಮೂರನೇ ವರ್ಷದಲ್ಲಿ ನಡೆಸಲಾಗುತ್ತದೆ. ಆದರೂ ಅನೇಕ ಆತ್ಮಗಳು ಮುಕ್ತಿ ಸಿಗದೆ ಅಲೆದಾಡುತ್ತಿರುತ್ತವೆ. ಆದ್ದರಿಂದ ಅಗಲಿದ ಆತ್ಮಕ್ಕಾಗಿ ಗರುಡ ಪುರಾಣ ಪಠಿಸಲಾಗುತ್ತದೆ. ಈ ಗರುಡ ಪುರಾಣ ಪಠಣದಿಂದಾಗಿ ಏನೇನು ಪ್ರಯೋಜನ ಎಂಬುದನ್ನು ತಿಳಿಯೋಣ.

​ಗರುಡ ಪುರಾಣ ಓದುವ ಸಮಯ:
ಗರುಡ ಪುರಾಣದಲ್ಲಿ, ಸಾವಿನ ಮೊದಲು ಮತ್ತು ನಂತರದ ಪರಿಸ್ಥಿತಿಯನ್ನು ವಿವರಿಸಲಾಗಿದೆ. ಅದಕ್ಕಾಗಿಯೇ ಈ ಪುರಾಣವನ್ನು ಸತ್ತವರಿಗಾಗಿ ಪಠಿಸಲಾಗುತ್ತದೆ. ಓರ್ವ ವ್ಯಕ್ತಿಯ ಮರಣಾನಂತರ ಗರುಡ ಪುರಾಣವನ್ನು ಓದಲಾಗುತ್ತದೆ. ಒಮ್ಮೆ, ಗರುಡನು ವಿಷ್ಣುವಿಗೆ ಜೀವಿಗಳ ಸಾವು, ಯಮ ಲೋಕದ ಪ್ರಯಾಣ, ನರಕ ಮತ್ತು ಮೋಕ್ಷದ ಬಗ್ಗೆ ಹಲವಾರು ನಿಗೂಢ ಮತ್ತು ಅತೀಂದ್ರಿಯ ಪ್ರಶ್ನೆಗಳನ್ನು ಕೇಳಿದನು. ವಿಷ್ಣು ಆ ಪ್ರಶ್ನೆಗಳಿಗೆ ವಿಸ್ತಾರವಾದ ಉತ್ತರವನ್ನು ನೀಡಿದನು. ಈ ಪ್ರಶ್ನೆಗಳು ಮತ್ತು ಉತ್ತರಗಳ ಸರಣಿಯೇ ಗರುಡ ಪುರಾಣ.

​ಗರುಡ ಪುರಾಣವನ್ನೇಕೇ ಓದಬೇಕು..?
13 ದಿನಗಳವರೆಗೆ ಮೃತನು ಅವನ ಅಥವಾ ಅವಳ ಪ್ರೀತಿಪಾತ್ರರ ನಡುವೆ ಉಳಿದಿರುತ್ತಾರೆ. ಈ ಸಮಯದಲ್ಲಿ, ಗರುಡ ಪುರಾಣದ ಪಠ್ಯವನ್ನು ಪಠಿಸಿದರೆ ಸ್ವರ್ಗ ಮತ್ತು ನರಕ, ವೇಗ, ಮೋಕ್ಷ, ಪಾತಾಳ, ಅವನತಿ ಮುಂತಾದ ಚಲನೆಗಳ ಬಗ್ಗೆ ಮೃತರು ತಿಳಿದುಕೊಳ್ಳುತ್ತಾರೆ.

​ಆತ್ಮಗಳಿಗೆ ಮರುಜನ್ಮ ಪಡೆಯಲು ಮಾರ್ಗ:
ಗರುಡ ಪುರಾಣದ ಮೂಲಕ ಮುಂದಿನ ಪ್ರಯಾಣದಲ್ಲಿ ಅವನು/ಳು ಎದುರಿಸಬೇಕಾದ ವಿಷಯಗಳು ಯಾವುವು ಎಂಬುದನ್ನು ಕಲಿಯುತ್ತಾನೆ. ಈ ಪಠಣದ ಮೂಲಕ ಆತ್ಮವು ತಮ್ಮ ಕುಟುಂಬದವರ ಪ್ರೀತಿಯನ್ನು ಪಡೆಯುತ್ತದೆ.

​ಸ್ವರ್ಗ – ನರಕ ಪ್ರಾಪ್ತಿ:
ಸಾವಿನ ನಂತರ ಗರುಡ ಪುರಾಣ ಓದುವುದರಿಂದ ಆ ವ್ಯಕ್ತಿಯು ಬದುಕಿದ್ದಾಗ ಏನೆಲ್ಲಾ ಒಳ್ಳೆಯ ಕೆಲಸ ಮಾಡಿದ್ದ, ಏನೆಲ್ಲಾ ಕೆಟ್ಟ ಕೆಲಸ ಮಾಡಿದ್ದ ಎಂಬುದು ಅವರ ಸಂಬಂಧಿಕರಿಗೆ ತಿಳಿಯುತ್ತದೆ. ಆತ ಒಳ್ಳೆಯ ಕೆಲಸ ಮಾಡಿದ್ದಾನೆ ಎಂದು ಸಂಬಂಧಿಕರೆಲ್ಲರೂ ಅಂದುಕೊಂಡರೆ ಆತ್ಮಕ್ಕೆ ಮೋಕ್ಷ ಸಿಗುತ್ತದೆ. ಮುಂದಿನ ಪ್ರಯಾಣಕ್ಕೆ ದಾರಿ ಸಿಗುತ್ತದೆ.

ಮೋಕ್ಷ:
ಗರುಡ ಪುರಾಣವು ಸತ್ಕರ್ಮಕ್ಕೆ ಸ್ಫೂರ್ತಿ ನೀಡುತ್ತದೆ. ಮೋಕ್ಷ ಮತ್ತು ವಿಮೋಚನೆ ಸಾಧಿಸುವುದು ಒಳ್ಳೆಯ ಕಾರ್ಯಗಳು ಮತ್ತು ದಯೆಯಿಂದ ಮಾತ್ರ. ಮನುಷ್ಯನು ಜೀವಿತಾವಧಿಯಲ್ಲಿ ಮಾಡಿದ ಪಾಪ ಕರ್ಮಗಳಿಗೆ ಅನುಗುಣವಾಗಿ ಸ್ವರ್ಗ – ನರಕ ಎನ್ನುವಂತಹದ್ದು ನಿರ್ಧಾರವಾಗುತ್ತದೆ.

​ಗರುಡ ಪುರಾಣದಲ್ಲಿ ಶಿಕ್ಷೆ:
ಗರುಡ ಪುರಾಣದಲ್ಲಿ, ವ್ಯಕ್ತಿಯ ಕಾರ್ಯಗಳ ಆಧಾರದ ಮೇಲೆ ವಿವಿಧ ಶಿಕ್ಷೆಗಳು ಕಂಡುಬರುತ್ತವೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯು ಮೋಕ್ಷದ ಕಡೆಗೆ ಯಾವ ವಿಷಯಗಳನ್ನು ಕೊಂಡೊಯ್ಯುತ್ತಾನೆ ಎಂಬುದಕ್ಕೆ ಭಗವಾನ್ ವಿಷ್ಣು ಉತ್ತರವನ್ನು ನೀಡಿದ್ದಾನೆ. ಅವನು ಮೋಕ್ಷವನ್ನು ಪಡೆಯಬೇಕೆಂದರೆ ಜೀವಿತಾವಧಿಯಲ್ಲಿ ಉತ್ತಮ ಕಾರ್ಯಗಳನ್ನು ಮಾಡಬೇಕು.

​ಸ್ವಯಂ ಜ್ಞಾನವೇ ಗರುಡ ಪುರಾಣದ ಮುಖ್ಯ ವಿಷಯ:
ಗರುಡ ಪುರಾಣದಲ್ಲಿ ನಮ್ಮ ಜೀವನದ ಬಗ್ಗೆ ಅನೇಕ ನಿಗೂಢ ವಿಷಯಗಳನ್ನು ಹೇಳಲಾಗಿದೆ. ವ್ಯಕ್ತಿಯ ಬಗ್ಗೆ ತಿಳಿದಿರಬೇಕು. ಸ್ವಯಂ ಜ್ಞಾನದ ಪ್ರವಚನವು ಗರುಡ ಪುರಾಣದ ಮುಖ್ಯ ವಿಷಯವಾಗಿದೆ. ಗರುಡ ಪುರಾಣದ ಹತ್ತೊಂಬತ್ತು ಸಾವಿರ ವಚನಗಳ ಪೈಕಿ ಏಳು ಸಾವಿರ ವಚನಗಳಲ್ಲಿ ಜ್ಞಾನ, ಧರ್ಮ, ನೀತಿ, ರಹಸ್ಯ, ಪ್ರಾಯೋಗಿಕ ಜೀವನ, ಸ್ವಯಂ, ಸ್ವರ್ಗ, ನರಕ ಮತ್ತು ಇತರ ಲೋಕಗಳನ್ನು ವಿವರಿಸಲಾಗಿದೆ.

​ಸಂಪತ್ತಿನ ಬಗ್ಗೆ ಹೆಮ್ಮೆ ಪಡಬೇಡಿ:
ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಸಂಪತ್ತಿನ ಬಗ್ಗೆ ಹೆಮ್ಮೆ ಪಡಬಾರದು. ಇದನ್ನು ಮಾಡುವುದರಿಂದ, ಅವನಲ್ಲಿ ದುರಾಹಂಕಾರವು ಬೆಳೆಯುತ್ತದೆ. ಇದು ಅವನ ಬೌದ್ಧಿಕ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಮತ್ತು ಅವನು ಇತರರನ್ನು ಅವಮಾನಿಸಲು ಪ್ರಾರಂಭಿಸುತ್ತಾನೆ. ಯಾವುದೇ ವ್ಯಕ್ತಿಯನ್ನು ನಿರಾಕರಿಸುವುದು ಅಥವಾ ಅವಮಾನಿಸುವುದು ಗರುಡ ಪುರಾಣದಲ್ಲಿ ಪಾಪ ಎಂದು ವಿವರಿಸಲಾಗಿದೆ. ಗರುಡ ಪುರಾಣದ ಪ್ರಕಾರ, ಲಕ್ಷ್ಮಿ ಸಂಪತ್ತಿನ ಅಧಿದೇವತೆ. ಆದ್ದರಿಂದ ಯಾವ ವ್ಯಕ್ತಿಯು ತನ್ನ ಸಂಪತ್ತಿನ ಬಗ್ಗೆ ಹೆಮ್ಮೆಪಡುತ್ತಾನೋ ಆ ವ್ಯಕ್ತಿಯ ಮೇಲೆ ಲಕ್ಷ್ಮಿ ದೇವಿಯು ಕೋಪಿಸಿಕೊಳ್ಳುತ್ತಾಳೆ. ಮತ್ತು ಅಂತಹ ಜನರ ಸಂಪತ್ತು ನಾಶವಾಗಲು ಪ್ರಾರಂಭಿಸುತ್ತದೆ.

ದುರಾಸೆ:
ಗರುಡ ಪುರಾಣದ ಪ್ರಕಾರ, ದುರಾಸೆಯ ವ್ಯಕ್ತಿಯ ಜೀವನವು ಎಂದಿಗೂ ಬೆಳವಣಿಗೆಯನ್ನು ಹೊಂದಲು ಸಾಧ್ಯವಿಲ್ಲ. ದುರಾಸೆಯುಳ್ಳ ವ್ಯಕ್ತಿಯು ಇನ್ನೊಬ್ಬರ ಸಂಪತ್ತನ್ನು ನೋಡಿದ ನಂತರ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಹಣಕ್ಕಾಗಿ ದುರಾಸೆ ಅಥವಾ ಇತರರ ಸಂಪತ್ತನ್ನು ಪಡೆಯಲು ಪ್ರಯತ್ನಿಸುವುದು ಈ ಜೀವನದಲ್ಲಿ ಮಾತ್ರವಲ್ಲದೆ ಮುಂದಿನ ಜನ್ಮದಲ್ಲೂ ಕೂಡ ಆ ವ್ಯಕ್ತಿಯನ್ನು ತೃಪ್ತಿಪಡಿಸುವುದಿಲ್ಲ.

​ಇತರರನ್ನು ಅವಮಾನಿಸುವುದು:
ಇತರರನ್ನು ಅವಮಾನಿಸುವುದು ಮತ್ತು ಕೀಳಾಗಿ ನೋಡುವುದನ್ನು ದೊಡ್ಡ ಪಾಪ ಎಂದು ಗರುಡ ಪುರಾಣ ಹೇಳುತ್ತದೆ. ಇತರರನ್ನು ಖಂಡಿಸುವಾಗ ಅಥವಾ ಅವಮಾನಿಸುವಾಗ ಒಬ್ಬ ವ್ಯಕ್ತಿಯು ತುಂಬಾ ಸಂತೋಷವಾಗಿರುತ್ತಾನೆ ಎಂದು ಅದು ಹೇಳುತ್ತದೆ, ಆದರೆ ವಾಸ್ತವದಲ್ಲಿ ಅವನು ಇದನ್ನು ಮಾಡುವ ಮೂಲಕ ತನ್ನ ಘನತೆ/ಸಮಯವನ್ನು ವ್ಯರ್ಥಮಾಡುತ್ತಾನೆ. ಇತರರನ್ನು ಅವಮಾನಿಸುವ ವ್ಯಕ್ತಿಯು ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ ಎನ್ನುತ್ತೆ ಗರುಡ ಪುರಾಣ. (ಕೃಪೆ : Whatsapp)